'ಕನ್ನಡದ ಕೋಟ್ಯಾಧಿಪತಿ'ಯ ಮೊದಲ ಸ್ಪರ್ಧಿ ಸೋಲಲು ಕಾರಣ ಈ ಪ್ರಶ್ನೆ
'ಕನ್ನಡದ ಕೋಟ್ಯಾಧಿಪತಿ' ಮೂರನೇ ಆವೃತ್ತಿ ನಿರೀಕ್ಷೆಯಂತೆ ಸೋಮವಾರ ಆರಂಭವಾಗಿದೆ. ಈ ಕಾರ್ಯಕ್ರಮದ ಮೊದಲ ಸ್ಪರ್ಧಿ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಬೆಳಗಾವಿ ಮೂಲದ ಲಕ್ಷ್ಮಿ ಮೆಂಡಿಗೇರಿ ಮೂರನೇ ಆವೃತ್ತಿಯ ಮೊದಲ ಸ್ಫರ್ಧಿಯಾಗಿ ಆಯ್ಕೆಯಾದರು. ಆದ್ರೆ, ಅವರ ಆಟ ಕೇವಲ ನಾಲ್ಕು ಪ್ರಶ್ನೆಗಳಿಗೆ ಮಾತ್ರ ಅಂತ್ಯವಾಯಿತು. ಈ ಮೂಲಕ ಯಾವುದೇ ಬಹುಮಾನವನ್ನ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.
ಮೊದಲ ಮೂರು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಲಕ್ಷ್ಮಿ ಮೆಂಡಿಗೇರಿ ನಾಲ್ಕನೇ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲವಾದರು. ಲೈಫ್ ಲೈನ್ ಬಳಿಸಿಕೊಂಡರು ಕೂಡ ತುಂಬಾ ಸರಳವಾಗಿದ್ದ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಹಾಗಿದ್ರೆ, ಕನ್ನಡದ ಕೋಟ್ಯಾಧಿಪತಿಯ ಮೊದಲ ಪ್ರಶ್ನೆ ಯಾವುದು.? ಲಕ್ಷ್ಮಿಯ ಸೋಲಿಗೆ ಕಾರಣವಾದ ಆ ಪ್ರಶ್ನೆ ಯಾವುದು.? ಮುಂದೆ ಓದಿ.....

'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆ
ಒಟ್ಟು ಹತ್ತು ಜನ 'ಕನ್ನಡದ ಕೋಟ್ಯಾಧಿಪತಿ'ಯ ಮೊದಲ ದಿನ ಭಾಗವಹಿಸಲು ಆಯ್ಕೆಯಾಗಿದ್ದರು. ಅವರಲ್ಲಿ 'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಗೆ ಯಾರು ಬೇಗ ಸರಿಯಾಗಿ ಮತ್ತು ವೇಗವಾಗಿ ಉತ್ತರ ಕೊಡ್ತಾರೋ ಅವರು ಆಯ್ಕೆಯಾಗ್ತಾರೆ. ಹಾಗೆ, ಆಯ್ಕೆಯಾದ ಮೊದಲ ಸ್ಪರ್ಧಿ ಬೆಳಗಾವಿಯ ಲಕ್ಷ್ಮಿ ಮೆಂಡಿಗೇರಿ. ಈ ಕರ್ನಾಟಕದ ನದಿಗಳನ್ನು, ಕರ್ನಾಟಕದ ನಾಡಗೀತೆಯಲ್ಲಿ ಬರುವ ಅನುಕ್ರಮದಲ್ಲಿ ಜೋಡಿಸಿ A. ಕೃಷ್ಣ, B. ತುಂಗಾ C. ಶರಾವತಿ D. ಕಾವೇರಿ ಆಯ್ಕೆ ನೀಡಲಾಗಿತ್ತು. ಈ ಉತ್ತರ ಸರಿಯಾಗಿ ಕೊಟ್ಟಿದ್ದು, ಒಬ್ಬರೇ. ಅದು ಲಕ್ಷ್ಮಿ ಮಾತ್ರ.
ಸರಿಯಾದ ಉತ್ತರ: A. ಕೃಷ್ಣ C. ಶರಾವತಿ B. ತುಂಗಾ D ಕಾವೇರಿ

'ಕೋಟ್ಯಾಧಿಪತಿ-3'ಯ ಮೊದಲ ಪ್ರಶ್ನೆ
''ಏನೂ ಕೆಲಸ ಮಾಡದೇ, ಅಲ್ಲಿ ಇಲ್ಲಿ ಸಿಕ್ಕಷ್ಟನ್ನ ಉಂಡು ಊರಲೆಲ್ಲ ತಿರುಗಾಡಿಕೊಂಡು ಇರುವ ಸೋಮಾರಿಯನ್ನ ಏನೆಂದು ಕರೆಯುತ್ತಾರೆ...?''
A ಉಂಡೆ ಗಡುಬು
B ಉಂಡಾಡಿ ಗುಂಡ
C ಉಂಡಿಗೆ
D ಉಂಡಲಿಗೆ
ಸರಿ ಉತ್ತರ : ಉಂಡಾಡಿ ಗುಂಡ

2000 ಸಾವಿರ ರೂಪಾಯಿ ಪ್ರಶ್ನೆ
ಕ್ಯಾಬೇಜ್ ನ ಯಾವ ಭಾಗವನ್ನ ತಿನ್ನಲು ಬಳಸುತ್ತಾರೆ.?
ಈ ಪ್ರಶ್ನೆಗೆ ಆಡಿಯೆನ್ಸ್ ಫೋಲ್ 'ಲೈಫ್ ಲೈನ್' ಬಳಸಿ ಲಕ್ಷ್ಮಿ ಉತ್ತರ ನೀಡಿದರು.
A ಎಲೆ
B ಹೂವು
C ಕಾಂಡ
D ಬೇರು
ಸರಿಯಾದ ಉತ್ತರ : A ಎಲೆ

3000 ಸಾವಿರ ರೂಪಾಯಿ ಪ್ರಶ್ನೆ
ಸಾಮಾನ್ಯವಾಗಿ ಗರಡಿಮನೆಯಲ್ಲಿ ಈ ಕೆಳಗಿನ ಚಟುವಟಿಕೆಗಳನ್ನ ನಡೆಸಲಾಗುತ್ತದೆ.?
A ಅಡುಗೆ
B ವ್ಯಾಯಾಮ
C ಓದುವಿಕೆ
D ಹಾಡುವಿಕೆ
ಸರಿ ಉತ್ತರ : B ವ್ಯಾಯಾಮ

5000 ಸಾವಿರ ರೂಪಾಯಿ
''ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಈ ಧ್ವನಿಸುರುಳಿಯಲ್ಲಿರುವ ನಟನ ಧ್ವನಿಯನ್ನ ಗುರುತಿಸಿ..?'' ಈ ಪ್ರಶ್ನೆಗೆ ಉತ್ತರಿಸಲು 'ಫೋನ್-ಎ-ಫ್ರೆಂಡ್' ಲೈಫ್ ಲೈನ್ ಬಳಸಿಕೊಂಡರು. ಆದ್ರೆ, ಸರಿ ಉತ್ತರ ಕೊಡಲಿಲ್ಲ.
A ವಸಿಷ್ಠ ಸಿಂಹ
B ರಕ್ಷಿತ್ ಶೆಟ್ಟಿ
C ಅನಂತ್ ನಾಗ್
D ಅಚ್ಯುತ್ ಕುಮಾರ್
ಸರಿ ಉತ್ತರ: ಅನಂತ್ ನಾಗ್

ಮೊದಲ ಸ್ಪರ್ಧಿ ಗಳಿಸಿದ್ದು ಎಷ್ಟು.?
ಕನ್ನಡದ ಕೋಟ್ಯಾಧಿಪತಿ ಮೂರನೇ ಆವೃತ್ತಿಯಲ್ಲಿ ಮೊದಲ ಸ್ಫರ್ಧಿಯಾಗಿದ್ದ ಲಕ್ಷ್ಮಿ ಅವರು ಮೊದಲ ಹಂತವನ್ನ ದಾಟುವಲ್ಲಿ ವಿಫಲವಾದರು. ಹೀಗಾಗಿ ಯಾವುದೇ ಹಣವನ್ನ ಗೆಲ್ಲಲಿಲ್ಲ. ಎರಡನೇ ಅಭ್ಯರ್ಥಿ ಎಷ್ಟು ಗೆಲ್ತಾರೆ ಎಂದು ಕಾದು ನೋಡೋಣ.


Click it and Unblock the Notifications











