twitter
    For Quick Alerts
    ALLOW NOTIFICATIONS  
    For Daily Alerts

    ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!

    |

    Recommended Video

    Kannadada Kotyadhipathi 2019 : ಈ ಪ್ರಶ್ನೆಗೆ ನಿಮಗಾದ್ರು ಉತ್ತರ ಗೊತ್ತಾ..? | FILMIBEAT KANNADA

    ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯ ಮೊದಲ ಸ್ಪರ್ಧಿಯಾಗಿ ಕುಮುಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ಅವರು ಭಾಗಿಯಾಗಿದ್ದರು. ಫಾಸ್ಟೆಸ್ಟ್ ಫಿಂಗರ್ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಅತಿ ವೇಗವಾಗಿ ಉತ್ತರಿಸುವ ಮೂಲಕ ಉಳಿದ ಐದು ಸ್ಪರ್ಧಿಗಳನ್ನ ಹಿಂದಿಕ್ಕಿ ಹಾಟ್ ಸೀಟ್ ನಲ್ಲಿ ಕೂರುವ ಅವಕಾಶ ಪಡೆದುಕೊಂಡರು.

    ಆರಂಭದಿಂದಲೂ ಒಳ್ಳೆಯ ಆಟವಾಡಿದ ದೀಪಾ ಮೊದಲ ಎರಡು ಹಂತವನ್ನ ಕಾನ್ಫಿಡೆಂಟ್ ಆಗಿ ಮುಗಿಸಿ 3.20 ಲಕ್ಷವನ್ನ ತಮ್ಮ ಖಾತೆಗೆ ಹಾಕಿಕೊಂಡರು. ನಂತರ ಆಟ ಮುಂದುವರಿಸಿದ ದೀಪಾ 6.40 ಲಕ್ಷ ಪ್ರಶ್ನೆ ಹಾಗೂ 12.50 ಲಕ್ಷದ ಯಶಸ್ವಿಯಾಗಿ ಉತ್ತರಿಸಿ 25 ಲಕ್ಷದ ಪ್ರಶ್ನೆ ಎದುರಿಸಿದರು.

    ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಅಭ್ಯರ್ಥಿಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಅಭ್ಯರ್ಥಿ

    ಆದರೆ, 25 ಲಕ್ಷದ ಪ್ರಶ್ನೆಗೆ ಉತ್ತರಿಸಿಲು ದೀಪಾ ಅವರಿಂದ ಸಾಧ್ಯವಾಗಲಿಲ್ಲ. ಕೈಯಲ್ಲಿ ಯಾವ ಲೈಫ್ ಲೈನ್ ಕೂಡ ಉಳಿದಿರಲಿಲ್ಲ. ಗೊಂದಲಕ್ಕೆ ಒಳಗಾದ ದೀಪಾ ಆಟವನ್ನ ಕ್ವಿಟ್ ಮಾಡಿ 12.50 ಲಕ್ಷ ಮನೆಗೆ ತೆಗೆದುಕೊಂಡು ಹೋದರು. ಅಷ್ಟಕ್ಕೂ, ದೀಪಾ ಅವರಿಗೆ ಕೈ ಕೊಟ್ಟ 25 ಲಕ್ಷದ ಪ್ರಶ್ನೆ ಯಾವುದು? ಮುಂದೆ ಓದಿ....

    ದೀಪಾ ಎದುರಿಸಿದ ಮೊದಲ ಪ್ರಶ್ನೆ

    ದೀಪಾ ಎದುರಿಸಿದ ಮೊದಲ ಪ್ರಶ್ನೆ

    ಒಂದು ಸಾವಿರ ರೂಪಾಯಿಗೆ ದೀಪಾ ಮೊದಲ ಪ್ರಶ್ನೆ ಎದುರಿಸಿದರು. ಪ್ರಶ್ನೆ ಹೀಗಿತ್ತು...

    ಇವುಗಳಲ್ಲಿ ಯಾವ ಪದ 'ಅಪ್ರಯೋಜಕ' ಎಂಬ ಅರ್ಥವನ್ನ ನೀಡುತ್ತದೆ?

    A ನಿಪುಣ

    B ಬುದ್ಧಿವಂತ

    C ತಿಂಡಿಪೋತ

    D ದಂಡಪಿಂಡ

    ಸರಿಯಾದ ಉತ್ತರ : D ದಂಡಪಿಂಡ

    ಪುನೀತ್ ಶೋಗೆ ಸವಾಲು ಆಗಲಿದ್ಯಾ ಇನ್ನೊಂದು ವಾಹಿನಿಯ ಈ ಶೋ?ಪುನೀತ್ ಶೋಗೆ ಸವಾಲು ಆಗಲಿದ್ಯಾ ಇನ್ನೊಂದು ವಾಹಿನಿಯ ಈ ಶೋ?

    ಐದನೇ ಪ್ರಶ್ನೆ - 10 ಸಾವಿರ ರೂಪಾಯಿ

    ಐದನೇ ಪ್ರಶ್ನೆ - 10 ಸಾವಿರ ರೂಪಾಯಿ

    'ಅನುರಾಗ ಅರಳಿತು' ಈ ಚಿತ್ರದ ಧ್ವನಿ ತುಣುಕನ್ನು ಕೇಳಿ, ಡಾ ರಾಜ್ ಕುಮಾರ್ ಅವರ ಜೊತೆ ಮಾತನಾಡುತ್ತಿರುವ ಸಹ ಕಲಾವಿದರನ್ನ ಗುರುತಿಸಿ

    A ಕೆ ಎಸ್ ಅಶ್ವಥ್

    B ಸಂಪತ್

    C ಲೋಕನಾಥ್

    D ಬಾಲಕೃಷ್ಣ

    ಸರಿಯಾದ ಉತ್ತರ : A ಕೆ ಎಸ್ ಅಶ್ವಥ್

    ಕೋಟ್ಯಧಿಪತಿ ಶೋನಲ್ಲಿ 1 ಕೋಟಿ ಗೆಲ್ಲುವ ವಿಜೇತರ ಕೈಗೆ ಸಿಗುವ ಹಣವೆಷ್ಟು?ಕೋಟ್ಯಧಿಪತಿ ಶೋನಲ್ಲಿ 1 ಕೋಟಿ ಗೆಲ್ಲುವ ವಿಜೇತರ ಕೈಗೆ ಸಿಗುವ ಹಣವೆಷ್ಟು?

    ಹತ್ತನೇ ಪ್ರಶ್ನೆ - 3.20 ಲಕ್ಷದ ಪ್ರಶ್ನೆ

    ಹತ್ತನೇ ಪ್ರಶ್ನೆ - 3.20 ಲಕ್ಷದ ಪ್ರಶ್ನೆ

    ಭಾರತದ ಮನೆಗಳಲ್ಲಿ ಬಳಸುವ ಅಡಿಗೆ ಸಿಲಿಂಡರ್ ಒಳಗಿರುವ ಎಲ್.ಪಿ.ಜಿಯ ಅಂದಾಜು ತೂಕ ಎಷ್ಟು?

    A 47.5 ಕೆಜಿ

    B 19 ಕೆಜಿ

    C 30 ಕೆಜಿ

    D 14.2 ಕೆಜಿ

    ಸರಿಯಾದ : D 14.2 ಕೆಜಿ

    ದೀಪಾಗೆ ಕೈಕೊಟ್ಟ ಪ್ರಶ್ನೆ ಇದೇ

    ದೀಪಾಗೆ ಕೈಕೊಟ್ಟ ಪ್ರಶ್ನೆ ಇದೇ

    ಭಾರತ ರತ್ನ ಪುರಸ್ಕಾರದ ಪದಕಗಳನ್ನು ತಯಾರಿಸುವ ಭಾರತದ ಸರ್ಕಾರ ಠಂಕಸಾಲೆ ಯಾವ ಊರಿನಲ್ಲಿ ಇದೆ?

    A ಮುಂಬೈ

    B ಕೊಲ್ಕತ್ತಾ

    C ಹೈದರಾಬಾದ್

    D ನವ ದೆಹಲಿ

    ಉತ್ತರ ಕೊಟ್ಟಿಲ್ಲ ದೀಪಾ

    ಉತ್ತರ ಕೊಟ್ಟಿಲ್ಲ ದೀಪಾ

    25 ಲಕ್ಷದ ಪ್ರಶ್ನೆ ಎದುರಿಸಿದ ದೀಪಾ ಉತ್ತರ ಕೊಡಲಿಲ್ಲ. ಯಾಕಂದ್ರೆ ದೀಪಾ ಅವರಿಗೆ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ, 12.50 ಲಕ್ಷ ಹಣವನ್ನ ಪಡೆದುಕೊಂಡು ಆಟವನ್ನ ಕ್ವಿಟ್ ಮಾಡಲು ತೀರ್ಮಾನಿಸಿದರು. ಹಾಗಾದ್ರೆ, ಸರಿಯಾದ ಉತ್ತರ B ಕೊಲ್ಕತ್ತಾ ಆಗಿತ್ತು. ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ ಆಟ ಕ್ವಿಟ್ ಮಾಡಿದ ದೀಪಾ, ನಂತರ ಸುಮ್ಮನೆ ಗೆಸ್ ಮಾಡಿ ಎಂದಾಗ ಇದೇ ಉತ್ತರವನ್ನ ನೀಡಿ ಅಚ್ಚರಿಯಾದರು. ದುರಾದೃಷ್ಟವಶಾತ್ ಗೇಮ್ ಕ್ವಿಟ್ ಮಾಡಿದ್ದರು.

    English summary
    Colors kannada Channel popular show 'Kannadada Kotyadhipathi season 4' start from saturday (22th june). season 4 first contestant deepa faced 25 lakh quetion, but she lost.
    Monday, June 24, 2019, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X