ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ

ಭಾರಿ ನಿರೀಕ್ಷೆ ಹುಟ್ಟಿಸಿದ್ದ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿ ಶನಿವಾರ ಆರಂಭವಾಗಿದೆ. ಕೋಟ್ಯಧಿಪತಿ ಹಾಟ್ ಸೀಟ್ ಗೆ ಯಾರು ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗ್ತಾರೆ ಮತ್ತು ಅವರು ಎಷ್ಟು ಹಣ ಹೆಲ್ತಾರೆ ಎಂಬ ಕುತೂಹಲ ಕಾಡ್ತಿತ್ತು.

ಒಟ್ಟು ಆರು ಜನರು ಮೊದಲ ದಿನ ಭಾಗವಹಿಸಿದ್ದರು. ಫಾಸ್ಟೆಸ್ಟ್ ಫಿಂಗರ್ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಅತಿ ವೇಗವಾಗಿ ಉತ್ತರಿಸಿದ ಕುಮುಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯ ಮೊದಲ ಸ್ಪರ್ಧಿಯಾಗಿ ಆಯ್ಕೆಯಾದರು.

ಬಹಳ ಜೋಶ್ ನಿಂದ ಆಟ ಆರಂಭಿಸಿದ ದೀಪಾ ಅವರ ಉತ್ತಮವಾದ ಆಟವನ್ನ ಆಡಿದರು. ಅವರ ಆಡ ಗಮನಿಸುತ್ತಿದ್ದ ಪ್ರೇಕ್ಷಕರಿಗೆ ಇವರು ಖಂಡಿತಾ ದೊಡ್ಡ ಮೊತ್ತವನ್ನೇ ಗೆಲ್ಲುತ್ತಾರೆ ಎಂಬ ಸುಳಿವು ಸಿಕ್ಕಿತ್ತು. ಅದರಂತೆ ಮೊದಲ ದಿನ, ಮೊದಲ ಸ್ಪರ್ಧಿಯಾಗಿದ್ದ ದೀಪಾ ಭರ್ಜರಿ ಹಣವನ್ನೇ ಗೆದ್ದುಕೊಂಡಿದ್ದಾರೆ. ಅಷ್ಟಕ್ಕೂ, ದೀಪಾ ಗೆದ್ದ ಹಣವೆಷ್ಟು? ಮುಂದೆ ಓದಿ.....

ಫಾಸ್ಟೆಸ್ಟ ಫಿಂಗರ್ ಪ್ರಶ್ನೆ ಯಾವುದು

ಫಾಸ್ಟೆಸ್ಟ ಫಿಂಗರ್ ಪ್ರಶ್ನೆ ಯಾವುದು

ಈ ಚಲನಚಿತ್ರಗಳನ್ನು ಅವುಗಳ ಹೆಸರಿನಲ್ಲಿರುವ ಅಂಕಿಗಳಿಗೆ ಅನುಸಾರವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ?

A ರಥ ಸಪ್ತಮಿ
B ಒಂಟಿ ಸಲಗ
C ಸಾವಿರ ಮೆಟ್ಟಿಲು
D ಮೂರು ಜನ್ಮ

ಸರಿಯಾದ ಉತ್ತರ

B ಒಂಟಿ ಸಲಗ
D ಮೂರು ಜನ್ಮ
A ರಥ ಸಪ್ತಮಿ
C ಸಾವಿರ ಮೆಟ್ಟಿಲು

ಐದು ಪ್ರಶ್ನೆಗೆ ಉತ್ತರಿಸಿ ಮೊದಲ ಹಂತ ಕ್ರಾಸ್

ಐದು ಪ್ರಶ್ನೆಗೆ ಉತ್ತರಿಸಿ ಮೊದಲ ಹಂತ ಕ್ರಾಸ್

ಕೋಟ್ಯಧಿಪತಿ ಶೋನಲ್ಲಿ ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೇ ಮೊದಲ ಸೇಫ್ ಝೋನ್ ದಾಟಬಹುದು. ಅದರಂತೆ ದೀಪಾ ಅವರು ಮೊದಲ ಐದು ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ ಹತ್ತು ಸಾವಿರ ಪಡೆದು ಸೇಫ್ ಝೋನ್ ತಲುಪಿದರು.

3.25 ಲಕ್ಷ ಗೆದ್ದು ಮತ್ತೆ ಸೇಫ್ ಆದ ದೀಪಾ

3.25 ಲಕ್ಷ ಗೆದ್ದು ಮತ್ತೆ ಸೇಫ್ ಆದ ದೀಪಾ

ಮೊದಲ ಹಂತ ಗೆದ್ದು ಸರಾಗವಾಗಿ ಆಡುತ್ತಿದ್ದ ದೀಪಾ ಅವರು ಆಟದ ಎರಡನೇ ಸೇಫ್ ಝೋನ್ ಕೂಡ ಕ್ರಾಸ್ ಮಾಡಿದರು. ಅಂದ್ರೆ, ಹತ್ತನೇ ಪ್ರಶ್ನೆಗೂ ಸರಿಯಾಗಿ ಉತ್ತರಿಸಿ 3.20 ಲಕ್ಷ ತಮ್ಮದಾಗಿಸಿಕೊಂಡರು. ಅಲ್ಲಿಗೆ ಎರಡನೇ ಹಂತೂ ಸೇಫ್ ಆದ ಕಾರಣ 3.20 ಲಕ್ಷ ತನ್ನ ಖಾತೆಯಲ್ಲಿ ಸೇಫ್ ಆಗಿತ್ತು.

6.40 ಲಕ್ಷ ಗೆದ್ದು ಹೆಜ್ಜೆ ಮುಂದಿಟ್ಟ ದೀಪಾ

6.40 ಲಕ್ಷ ಗೆದ್ದು ಹೆಜ್ಜೆ ಮುಂದಿಟ್ಟ ದೀಪಾ

3.20 ಲಕ್ಷ ಗೆದ್ದು ಸೇಫ್ ಝೋನ್ ನಲ್ಲಿದ್ದ ದೀಪಾ ಅವರು ಮುಂದಿನ ಪ್ರಶ್ನೆ 6.40 ಲಕ್ಷ ರೂಪಾಯಿಗೆ ಆಡಿದರು. ಅದಕ್ಕೂ ಸರಿಯಾದ ಉತ್ತರ ನೀಡಿ ಸರ್ಪ್ರೈಸ್ ಕೊಟ್ಟರು. ಅಲ್ಲಿಗೆ ದೀಪಾ ಅವರ ಟಾರ್ಗೆಟ್ ದೊಡ್ಡದಿದೆ ಎಂಬುದು ಖಾತ್ರಿಯಾಯಿತು.

12.50 ಲಕ್ಷ ಗೆದ್ದು ದಾಖಲೆ

12.50 ಲಕ್ಷ ಗೆದ್ದು ದಾಖಲೆ

6.40 ಲಕ್ಷ ಗೆದ್ದು ಸರ್ಪ್ರೈಸ್ ಕೊಟ್ಟ ದೀಪಾ 12ನೇ ಪ್ರಶ್ನೆಗೂ ಉತ್ತರ ಕೊಟ್ಟು ಎಲ್ಲರಿಗೂ ಅಚ್ಚರಿ ನೀಡಿದರು. 6.40 ಲಕ್ಷದಿಂದ 12.50 ಲಕ್ಷಕ್ಕೆ ಹೆಚ್ಚಿಸಿಕೊಂಡರು. ಮೊದಲ ಅಭ್ಯರ್ಥಿ ದೀಪಾ ಅವರು ಒಂದು ಕೋಟಿ ಗೆಲ್ಲುವುದಕ್ಕೆ ಕೇವಲ ಮೂರು ಪ್ರಶ್ನೆ ಮಾತ್ರ ಬಾಕಿ ಇತ್ತು. ಒಂದು ಕೋಟಿ ಗೆಲ್ಲುತ್ತಾರಾ ಎಂಬ ಕುತೂಹಲ ಕಾಡ್ತಿತ್ತು.

25 ಲಕ್ಷ ಪ್ರಶ್ನೆ ಎದುರಿಸಿದ ದೀಪಾಗೆ ಶಾಕ್

25 ಲಕ್ಷ ಪ್ರಶ್ನೆ ಎದುರಿಸಿದ ದೀಪಾಗೆ ಶಾಕ್

ಕನ್ನಡದ ಕೋಟ್ಯಧಿಪತಿಯ ಮೊದಲ ಅಭ್ಯರ್ಥಿಯೇ 25 ಲಕ್ಷದ ಪ್ರಶ್ನೆ ಎದುರಿಸುವ ಮೂಲಕ ಅಚ್ಚರಿ ಮೂಡಿಸಿದರು. ತಮ್ಮ ಬಳಿ ಇದ್ದ ಎಲ್ಲ ಲೈಫ್ ಲೈನ್ ಮುಗಿದಿತ್ತು. ಗೆದ್ದರೇ 25 ಲಕ್ಷ, ಸೋತರೆ 3.20 ಲಕ್ಷ. ತಲೆ ಉಪಯೋಗಿಸಿ ಆಟ ಕ್ವಿಟ್ ಮಾಡಿದರೇ 12.50 ಲಕ್ಷ. ಅಂತಿಮವಾಗಿ 12 ಪ್ರಶ್ನೆಗೆ ದೀಪಾ ಉತ್ತರಿಸಲಿಲ್ಲ. ಆಟವನ್ನ ಕ್ವಿಟ್ ಮಾಡಿ 12.50 ಲಕ್ಷ ಗೆದ್ದು ತೃಪ್ತಿಪಟ್ಟುಕೊಳ್ಳಬೇಕಾಯಿತು.

More from Filmibeat

English summary
Colors kannada Channel popular show 'Kannadada Kotyadhipathi season 4' start from saturday (22th june). season 4 first contestant deepa played good game and won huge amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X