For Quick Alerts
ALLOW NOTIFICATIONS  
For Daily Alerts

12.5 ಲಕ್ಷ ಗೆದ್ದ ಮೀನುಗಾರ್ತಿ ದೀಪಾ ಎದುರಿಸಿದ ಹದಿಮೂರು ಪ್ರಶ್ನೆಗಳಿವೆ.!

|

ಕನ್ನಡದ ಕೋಟ್ಯಧಿತಿಪತಿ ಶೋ ಒಳ್ಳೆಯ ಮನರಂಜನೆ ಕಾರ್ಯಕ್ರಮ. ಇದರಿಂದ ಕೇವಲ ಮನರಂಜನೆ ಮಾತ್ರವಲ್ಲದೇ, ಜ್ಞಾನದ ಬೆಳವಣಿಗೆಗೂ ಸಹಕಾರಿಯಾಗುತ್ತೆ. ಸಾಮಾನ್ಯ ಜ್ಞಾನ, ವಿಜ್ಞಾನ, ಇತಿಹಾಸ, ರಾಜಕೀಯ, ಸಮಾಜ, ಸಿನಿಮಾ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರದ ಬಗ್ಗೆಯೂ ಮಾಹಿತಿ ಸಿಗುತ್ತೆ.

ಕನ್ನಡದ ಕೋಟ್ಯಧಿಪತಿಯಲ್ಲಿ ಪ್ರಶ್ನೆಗಳು ಬರುತ್ತಿದ್ದಂತೆ ಹಾಟ್ ಸೀಟ್ ನಲ್ಲಿ ಕೂತವರಿಗಿಂತ ಮುಂಚೆ ಟಿವಿ ನೋಡುತ್ತಿರುವ ಪ್ರೇಕ್ಷಕರು ಉತ್ತರಿಸುವ ಉದಾಹರಣೆಗಳು ನಿಮ್ಮ ಮನೆಯಲ್ಲಿ ಕಂಡಿರಬಹುದು. ಸೋ ಅದಕ್ಕೆ ಕೋಟ್ಯಧಿಪತಿಯ ಪ್ರಶ್ನೆಗಳ ಬಗ್ಗೆ ಸಾಮಾನ್ಯ ಪ್ರೇಕ್ಷಕರಿಗೂ ಕುತೂಹಲ ಹೆಚ್ಚು.

ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ

ಹಾಗಾದ್ರೆ, ಕನ್ನಡದ ಕೋಟ್ಯಧಿಪತಿಯ ಮೊದಲ ಸಂಚಿಕೆ, ಮೊದಲ ಸ್ಪರ್ಧಿಗೆ ಕೇಳಲಾದ ಪ್ರಶ್ನೆಗಳು ಯಾವುದು, ಎಷ್ಟು ಪ್ರಶ್ನೆಗೆ ಮೊದಲ ಸ್ಪರ್ಧಿ ಉತ್ತರಿಸಿದರು. ಮೊದಲ ದಿನ ಶೋನಲ್ಲಿ ನೀವು ಮಿಸ್ ಮಾಡಿಕೊಂಡಿದ್ದರೇ, ಆ ಪ್ರಶ್ನೆಗಳು ನಿಮಗೆ ಇಲ್ಲಿ ಸಿಗುತ್ತೆ ಓದಿ....

ಒಂದು ಸಾವಿರ ರೂಪಾಯಿ ಪ್ರಶ್ನೆ

ಒಂದು ಸಾವಿರ ರೂಪಾಯಿ ಪ್ರಶ್ನೆ

ಇವುಗಳಲ್ಲಿ ಯಾವ ಪದ ಅಪ್ರಯೋಜಕ ಎಂಬ ಅರ್ಥವನ್ನ ನೀಡುತ್ತದೆ?

A ನಿಪುಣ

B ಬುದ್ಧಿವಂತ

C ತಿಂಡಿಪೋತ

D ದಂಡಪಿಂಡ

ಸರಿಯಾದ ಉತ್ತರ : D ದಂಡಪಿಂಡ

ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!

ಎರಡು ಸಾವಿರ ರೂಪಾಯಿ ಪ್ರಶ್ನೆ

ಎರಡು ಸಾವಿರ ರೂಪಾಯಿ ಪ್ರಶ್ನೆ

ಅಕ್ಕಿ ಪಾಯಸ ಮಾಡುವಾಗ ಸಾಮಾನ್ಯವಾಗಿ ಇವುಗಳಲ್ಲಿ ಯಾವುದನ್ನು ಬಳಸುವುದಿಲ್ಲ

A ಹಾಲು

B ಬೆಳ್ಳುಳ್ಳಿ

C ಸಕ್ಕರೆ

D ಏಲಕ್ಕಿ

ಸರಿಯಾದ ಉತ್ತರ: B ಬೆಳ್ಳುಳ್ಳಿ

ಮೂರು ಸಾವಿರ ರೂಪಾಯಿ ಪ್ರಶ್ನೆ

ಮೂರು ಸಾವಿರ ರೂಪಾಯಿ ಪ್ರಶ್ನೆ

ಇವರಲ್ಲಿ ಯಾರು ಸುತ್ತಿಗೆಯನ್ನ ಮೇಜಿಗೆ ಬಡಿಯುತ್ತಾ ಆರ್ಡರ್ ಆರ್ಡರ್ ಎಂದು ಹೇಳುವುದನ್ನು ನೀವು ಕಾಣಬಹುದು?

A ಆರಕ್ಷಕ

B ನ್ಯಾಯಾಧೀಶ

C ಶಿಕ್ಷಕ

D ವೈದ್ಯ

ಸರಿಯಾದ ಉತ್ತರ: B ನ್ಯಾಯಾಧೀಶ

ನಿರಾಸೆ ಅನುಭವಿಸಿದ ಕೋಟ್ಯಧಿಪತಿಯ ಎರಡನೇ ಸ್ಪರ್ಧಿ ವಸಂತ್

ಐದು ಸಾವಿರ ರೂಪಾಯಿ ಪ್ರಶ್ನೆ

ಐದು ಸಾವಿರ ರೂಪಾಯಿ ಪ್ರಶ್ನೆ

ಇವುಗಳಲ್ಲಿ ಯಾವುದು ಸಂಖ್ಯೆಯನ್ನ ಸೂಚಿಸುವ ಪದವಲ್ಲ?

A ದಶಲಕ್ಷ

B ಮುಕ್ಕೋಟಿ

C ನವನೀತ

D ನವರಾತ್ರಿ

ಸರಿಯಾದ ಉತ್ತರ: C ನವನೀತ

ಹತ್ತು ಸಾವಿರ ರೂಪಾಯಿ ಪ್ರಶ್ನೆ

ಹತ್ತು ಸಾವಿರ ರೂಪಾಯಿ ಪ್ರಶ್ನೆ

'ಅನುರಾಗ ಅರಳಿತು' ಈ ಚಿತ್ರದ ಧ್ವನಿ ತುಣುಕನ್ನು ಕೇಳಿ, ಡಾ ರಾಜ್ ಕುಮಾರ್ ಅವರ ಜೊತೆ ಮಾತನಾಡುತ್ತಿರುವ ಸಹ ಕಲಾವಿದರನ್ನ ಗುರುತಿಸಿ

A ಕೆ ಎಸ್ ಅಶ್ವಥ್

B ಸಂಪತ್

C ಲೋಕನಾಥ್

D ಬಾಲಕೃಷ್ಣ

ಸರಿಯಾದ ಉತ್ತರ : A ಕೆ ಎಸ್ ಅಶ್ವಥ್

ಇಪತ್ತು ಸಾವಿರ ರೂಪಾಯಿ ಪ್ರಶ್ನೆ

ಇಪತ್ತು ಸಾವಿರ ರೂಪಾಯಿ ಪ್ರಶ್ನೆ

ಹಿಂದೂ ಪುರಾಣದ ಪ್ರಕಾರ ಹನುಮಂತನ ತಾಯಿಯ ಹೆಸರೇನು?

A ಅಂಜನ

B ತಾರಾ

C ಶಬರಿ

D ರುಮೆ

ಸರಿಯಾದ ಉತ್ತರ : A ಅಂಜನ

ನಲವತ್ತು ಸಾವಿರ ರೂಪಾಯಿ ಪ್ರಶ್ನೆ

ನಲವತ್ತು ಸಾವಿರ ರೂಪಾಯಿ ಪ್ರಶ್ನೆ

ಕರ್ನಾಟಕದ ಇಲ್ಲಿನ ಯಾವ ಊರಿನಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು?

A ಶಿವಪುರ

B ಅಂಕೋಲಾ

C ಬೆಳಗಾವಿ

D ಗದಗ

ಸರಿಯಾದ ಉತ್ತರ: B ಅಂಕೋಲಾ

ಎಂಬತ್ತು ಸಾವಿರ ರೂಪಾಯಿ ಪ್ರಶ್ನೆ

ಎಂಬತ್ತು ಸಾವಿರ ರೂಪಾಯಿ ಪ್ರಶ್ನೆ

ಅಧಿಕಾರದಲ್ಲಿದ್ದಾಗಲೇ ನಿಧನ ಹೊಂದಿದ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?

A ಜಾನಕಿ ರಾಮಚಂದ್ರನ್

B ಜೆ ಜಯಲಲಿತಾ

C ನಂದಿನಿ ಸತ್ಪಥಿ

D ಸುಚೇತಾ ಕೃಪಲಾನಿ

ಸರಿಯಾದ ಉತ್ತರ : B ಜೆ ಜಯಲಲಿತಾ

1.60 ಲಕ್ಷ ರೂಪಾಯಿ ಪ್ರಶ್ನೆ

1.60 ಲಕ್ಷ ರೂಪಾಯಿ ಪ್ರಶ್ನೆ

2016ರ ಒಲಂಪಿಕ್ಸ್ ನಲ್ಲಿ ಕ್ಯಾರೋಲಿನಾ ಮ್ಯಾರೀನ್ ಗೆ ಸೋತು ಯಾವ ಭಾರತೀಯ ಕ್ರೀಡಾಪಟು ಬ್ಯಾಡ್ಮಿಂಟನ್ ಆಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದು?

A ಪಿ ವಿ ಸಿಂಧು

B ಪಿ ಕಶ್ಯಪ್

C ಡಿ ಹರಿಕಾ

D ಜ್ವಾಲಾ ಗುಟ್ಟಾ

ಸರಿಯಾದ ಉತ್ತರ : A ಪಿ ವಿ ಸಿಂಧು

3.20 ಲಕ್ಷದ ಪ್ರಶ್ನೆ

3.20 ಲಕ್ಷದ ಪ್ರಶ್ನೆ

ಭಾರತದ ಮನೆಗಳಲ್ಲಿ ಬಳಸುವ ಅಡಿಗೆ ಸಿಲಿಂಡರ್ ಒಳಗಿರುವ ಎಲ್.ಪಿ.ಜಿಯ ಅಂದಾಜು ತೂಕ ಎಷ್ಟು? A

A 47.5 ಕೆಜಿ

B 19 ಕೆಜಿ

C 30 ಕೆಜಿ

D 14.2 ಕೆಜಿ

ಸರಿಯಾದ ಉತ್ತರ : D 14.2 ಕೆಜಿ

6.40 ಲಕ್ಷ ಪ್ರಶ್ನೆ

6.40 ಲಕ್ಷ ಪ್ರಶ್ನೆ

ಮೇ 2019ರಲ್ಲಿ ಒಡಿಶಾವನ್ನು ಅಪ್ಪಳಿಸಿದ ಚಂಡಮಾರುತ ಯಾವುದು?

A ಗಜ

B ಫೋನಿ

C ವಿಯಾರು

D ನರ್ಗಿಸ್

ಸರಿಯಾದ ಉತ್ತರ : B ಫೋನಿ

12.50 ಲಕ್ಷದ ಪ್ರಶ್ನೆ

12.50 ಲಕ್ಷದ ಪ್ರಶ್ನೆ

ಭಾರತ ಮತ್ತು ಯಾವ ದೇಶದ ನಡುವೆ ಇರುವ ಗಡಿಯನ್ನ ದಿ ಲೈನ್ ಆಫ್ ಅಕ್ಚುಯಲ್ ಕಂಟ್ರೋಲ್ ಎಂದು ಕರೆಯುತ್ತಾರೆ?

A ಅಫ್ಗಾನಿಸ್ತಾನ್

B ಬಾಂಗ್ಲಾದೇಶ

C ಚೈನಾ

D ಪಾಕಿಸ್ತಾನ

ಸರಿಯಾದ ಉತ್ತರ: C ಚೈನಾ

25 ಲಕ್ಷದ ಪ್ರಶ್ನೆ

25 ಲಕ್ಷದ ಪ್ರಶ್ನೆ

ಭಾರತ ರತ್ನ ಪುರಸ್ಕಾರದ ಪದಕಗಳನ್ನು ತಯಾರಿಸುವ ಭಾರತದ ಸರ್ಕಾರ ಠಂಕಸಾಲೆ ಯಾವ ಊರಿನಲ್ಲಿ ಇದೆ?

A ಮುಂಬೈ

B ಕೊಲ್ಕತ್ತಾ

C ಹೈದರಾಬಾದ್

D ನವ ದೆಹಲಿ

ಸರಿಯಾದ ಉತ್ತರ: B ಕೊಲ್ಕತ್ತಾ

ಈ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಆಟವನ್ನ ಕ್ವಿಟ್ ಮಾಡಿದ್ರು

English summary
Kannadada kotyadhipathi session 4 starts from june 22. deepa srinivas is the first contestant of the new session. here is the questions list of first episode.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more