twitter
    For Quick Alerts
    ALLOW NOTIFICATIONS  
    For Daily Alerts

    'ಮುಟ್ಟಾಳ ಅಲ್ಲ' ಅಂತ ತಂದೆಗೆ ಸಾಬೀತು ಪಡಿಸಿದ ಮನೋಜ್ ಗೆದ್ದ ಮೊತ್ತ ಎಷ್ಟು.?

    |

    ಕುಟುಂಬದ ಆರ್ಥಿಕ ಸಂಕಷ್ಟವನ್ನು ತೀರಿಸಿಕೊಳ್ಳಲು ಕೆಲವರು 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮಕ್ಕೆ ಬರುತ್ತಾರೆ. ಸಮಾಜಕ್ಕೆ ಏನಾದರೂ ಒಳಿತು ಮಾಡುವ ಉದ್ದೇಶದಿಂದ ಕೆಲವರು ಹಾಟ್ ಸೀಟ್ ಮೇಲೆ ಕೂರುತ್ತಾರೆ. ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದೂ ಕೆಲವರು ಪುನೀತ್ ರಾಜ್ ಕುಮಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂಥದ್ರಲ್ಲಿ, ಇವರೆಲ್ಲರಿಗಿಂತಲೂ ಕೊಂಚ ವಿಭಿನ್ನವಾಗಿ ಕಂಡಿದ್ದು ಮನೋಜ್ ಎಂಬ ಯುವಕ.

    'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಂದೆಗೆ ಸಹಾಯ ಮಾಡಬೇಕು ಎಂಬ ಇಚ್ಛೆ ಏನೋ ಮನೋಜ್ ಗಿದೆ. ಆದ್ರೆ, ಅದಕ್ಕಿಂತ ಹೆಚ್ಚಾಗಿ ತಾನು ಮುಟ್ಟಾಳ ಅಲ್ಲ ಎಂಬುದನ್ನ ತನ್ನ ತಂದೆಗೆ ಮನೋಜ್ ಸಾಬೀತು ಪಡಿಸಬೇಕಂತೆ. ಅದಕ್ಕಾಗಿ, ಕೋಟಿ ಗೆಲ್ಲುವ ಈ ಕಾರ್ಯಕ್ರಮಕ್ಕೆ ಮನೋಜ್ ಬಂದಿದ್ದಾನೆ.

    ಹಲವು ಬಾರಿ 'ಮುಟ್ಟಾಳ' ಅಂತ ಮನೋಜ್ ಗೆ ಆತನ ತಂದೆ ತಿವಿದಿದ್ದಾರಂತೆ. 'ತಾನು ಮುಟ್ಟಾಳ ಅಲ್ಲ.. ಬುದ್ಧಿವಂತ' ಎಂದು ಕರುನಾಡಿಗೆ ಸಾರುವ ಉದ್ದೇಶ ಮನೋಜ್ ಗಿತ್ತು. ಹಾಗಾದ್ರೆ, 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಮನೋಜ್ ಗೆದ್ದ ಮೊತ್ತವೆಷ್ಟು.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

    ಯಾರು ಈ ಮನೋಜ್.?

    ಯಾರು ಈ ಮನೋಜ್.?

    ತಿಪಟೂರು ಪಕ್ಕದ ಜೂಗನಹಳ್ಳಿಯ ಯುವಕ ಮನೋಜ್. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಈ ಮನೋಜ್. ಕಾಸ್ ಲೀಡರ್ ಆಗಿರುವ ಮನೋಜ್ ಆಟ ಮತ್ತು ಪಾಠ.. ಎರಡರಲ್ಲೂ ಸದಾ ಮುಂದು. ಇಂತಿಪ್ಪ ಮನೋಜ್ ಗೆ ಐಎಎಸ್ ಆಗುವ ಬಯಕೆ ಇದೆ. 'ಕನ್ನಡದ ಕೋಟ್ಯಧಿಪತಿ' ವೇದಿಕೆಯಲ್ಲಿ ಕೋಟಿ ಗೆದ್ದು ಇತಿಹಾಸ ಸೃಷ್ಟಿಸಬೇಕು ಎಂಬುದು ಮನೋಜ್ ಆಸೆಯಾಗಿತ್ತು.

    ನುಡಿದಂತೆ ನಡೆದ ತೇಜಸ್: 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ.!ನುಡಿದಂತೆ ನಡೆದ ತೇಜಸ್: 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ.!

    ಮುಟ್ಟಾಳ ಅಂತ ತಂದೆ ಕರೆಯೋದು ಯಾಕೆ.?

    ಮುಟ್ಟಾಳ ಅಂತ ತಂದೆ ಕರೆಯೋದು ಯಾಕೆ.?

    ''ಇನ್ನೊಬ್ಬರ ಮೇಲೆ ಅವಲಂಬಿತನಾಗದೆ, ಸ್ವಂತ ಕಾಲ ಮೇಲೆ ನಿಲ್ಲಲಿ, ಕಷ್ಟ ಗೊತ್ತಾಗಲಿ ಎಂಬ ಕಾರಣಕ್ಕೆ 'ಮುಟ್ಟಾಳ' ಅಂತ ಕರೆದಿದ್ದೆ'' ಎನ್ನುತ್ತಾರೆ ಮನೋಜ್ ತಂದೆ. ಅಂದ್ಹಾಗೆ, ಮನೋಜ್ ತಂದೆ ಹಿಂದಿ ಶಿಕ್ಷಕರು. ಈ ಕಾರ್ಯಕ್ರಮದಲ್ಲಿ ಮನೋಜ್ ಗೆಲ್ಲುವ ಹಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸದುದ್ದೇಶ ಮನೋಜ್ ತಂದೆಗಿತ್ತು.

    ಟೀಚರ್ ಮಾಡಿದ ಎಡವಟ್ಟು: ಈಡೇರಲಿಲ್ಲ ವಿದ್ಯಾರ್ಥಿನಿ ವರಲಕ್ಷ್ಮಿ ಕನಸು.!ಟೀಚರ್ ಮಾಡಿದ ಎಡವಟ್ಟು: ಈಡೇರಲಿಲ್ಲ ವಿದ್ಯಾರ್ಥಿನಿ ವರಲಕ್ಷ್ಮಿ ಕನಸು.!

    ತಂದೆಗೆ ಸಹಾಯ ಮಾಡುವಾಸೆ

    ತಂದೆಗೆ ಸಹಾಯ ಮಾಡುವಾಸೆ

    ಕುಟುಂಬದಲ್ಲಿ ಕೊಂಚ ಸಾಲ ಇರುವುದರಿಂದ.. ಈ ಕಾರ್ಯಕ್ರಮದಿಂದ ಬರುವ ಹಣದಲ್ಲಿ ತಂದೆಗೆ ಸಹಾಯ ಮಾಡುವೆ ಎಂದು ಮನೋಜ್ ಹೇಳಿದ್ದ. ಅದರಂತೆ ಹೆಚ್ಚು ಹಣ ಗಳಿಸಲು ಬುದ್ಧಿವಂತಿಕೆಯಿಂದ ಆಟ ಆಡಿದ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಸೆಕೆಂಡ್ ಕೂಡ ವ್ಯರ್ಥ ಮಾಡದೆ ಲೈಫ್ ಲೈನ್ ಬಳಸಿದ. ''ತಪ್ಪು ಉತ್ತರ ಕೊಟ್ಟುಬಿಟ್ಟರೆ, ಮತ್ತೆ ಮುಟ್ಟಾಳ ಅಂತಾರೆ'' ಅಂತ ಮನೋಜ್ ಗೆ ಭಯ ಇದ್ದರೂ, ಕೆಲವು ಕಡೆ ರಿಸ್ಕ್ ತೆಗೆದುಕೊಂಡು ಗೆಸ್ ಮಾಡಿದ. ಅಚ್ಚರಿ ಅಂದ್ರೆ ಆ ಗೆಸ್ ಗಳು ವರ್ಕ್ ಆಯ್ತು.

    640,000 ರೂಪಾಯಿ ಗೆದ್ದ ಮನೋಜ್

    640,000 ರೂಪಾಯಿ ಗೆದ್ದ ಮನೋಜ್

    ತನ್ನ ಬಳಿ ಇದ್ದ ಎಲ್ಲಾ ಲೈಫ್ ಲೈನ್ ಗಳನ್ನೂ ಬಳಸಿ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ 640,000 ರೂಪಾಯಿಗಳನ್ನು ಗೆಲ್ಲುವಲ್ಲಿ ಮನೋಜ್ ಯಶಸ್ವಿಯಾದ. 12,50,000 ರೂಪಾಯಿ ಪ್ರಶ್ನೆ ನೋಡಿ ಮನೋಜ್ ಆಟ ಕ್ವಿಟ್ ಮಾಡಿದ. ಮನೋಜ್ ಆಟಕ್ಕೆ ಬೆರಗಾದ ತಂದೆ ''ನನ್ನ ಮಗ ಮುಟ್ಟಾಳ ಅಲ್ಲ.. ಬುದ್ಧಿವಂತ'' ಎಂದು ಒಪ್ಪಿಕೊಂಡರು.

    English summary
    Kannadada Kotyadhipathi 4: Manoj proved that he is genius.
    Wednesday, November 6, 2019, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X