'ಕನ್ನಡದ ಕೋಟ್ಯಾಧಿಪತಿ'ಯ ಮೊದಲ ಪ್ರಶ್ನೆ ಇಂದಿನಿಂದ ಶುರು

By Naveen

Recommended Video

ಕನ್ನಡದ ಕೋಟ್ಯಧಿಪತಿ ಸೀಸನ್ 3 ಆಡಿಷನ್ ಪ್ರಶ್ನೆಗಳು ಇಂದಿನಿಂದ ಶುರು

ಇಂದು ಎಸ್.ಎಸ್.ಎಲ್.ಸಿ ಪಲಿತಾಂಶ ಬಂದಿದೆ. ಆದರೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಾಯುತ್ತಿದ್ದ ವೀಕ್ಷಕರಿಗೆ ಇಂದಿನಿಂದ ಪರೀಕ್ಷೆ ಶುರು ಆಗಲಿದೆ. ಕೋಟ್ಯಾಧಿಪತಿಯ ಹಾಟ್ ಸೀಟ್ ಮೇಲೆ ಕೂರಲು ಬಯಸುವವರು ಇಂದಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಮತ್ತೊಂದು ವಿಶೇಷ ಅಂದರೆ ಈ ಪ್ರಶ್ನೆಗಳನ್ನು ನೀವು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಸಹ ಪಡೆಯಬಹುದಾಗಿದೆ.

ಹಾಟ್ ಸೀಟ್ ಮೇಲೆ ಕೂರಲು ಬಯಸುವವರಿಗೆ ಮೊದಲ ಹಂತ ಇದಾಗಿದೆ. ಇಂದಿನಿಂದ (ಮೇ 7 ) ಸ್ಟಾರ್‌ ಸುವರ್ಣ ವಾಹಿನಿಯಲ್ಲಿ 10 ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಪ್ರತಿ ದಿನ ರಾತ್ರಿ 7.30ಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಹತ್ತು ದಿನಗಳ ಕಾಲ ಈ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕೋಟ್ಯಾಧಿಪತಿಯ ಮೊದಲ ಹಂತವನ್ನು ನೀವು ಪೂರ್ಣ ಮಾಡಿದಂತೆ.

Kannadada Kotyadhipathi audition questions

ಎಸ್ ಎಂ ಎಸ್ ಮತ್ತು ಕರೆ ಮಾಡಬೇಕಾದ ವಿವರಗಳು :

KKನಿಮ್ಮ ಉತ್ತರ (ಅ/ಆ/ಇ/ಈ) ಗಂಡು/ಹೆಣ್ಣು/ಇತರ(M/F/O) ವಯಸ್ಸನ್ನು 57827ಗೆ ಎಸ್ ಎಂ ಎಸ್ ಮಾಡಬೇಕು. ಅಥವಾ ನಿಮ್ಮ ಉತ್ತರ option A 5057827-61 option B 5057827-62 option C 5057827-63 option D 5057827-64 ಗೆ ಕರೆ ಮಾಡಿ ಉತ್ತರ ನೀಡಬಹುದಾಗಿದೆ.

ಅಂದಹಾಗೆ, ಹತ್ತು ದಿನವೂ ಸರಿಯಾಗಿ ಉತ್ತರ ನೀಡಿ ಈ ಸುತ್ತನ್ನು ಮುಗಿಸಿ ದ ಸ್ಪರ್ಧಿಗಳಲ್ಲಿ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರನ್ನು ಆಡಿಷನ್ ಕರೆಯಲಾಗುತ್ತದೆ. ಇದು ಆಯ್ಕೆ ಪ್ರಕ್ರಿಯೆಯ ಎರಡನೇ ಹಂತವಾಗಿರುತ್ತದೆ .

More from Filmibeat

English summary
Star Suvarna Channel popular show 'Kannadada Kotyadhipathi' audition questions will begin from today. Kannada actor Ramesh Aravind will host 'Kannadada Kotyadhipathi 3'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X