For Quick Alerts
  ALLOW NOTIFICATIONS  
  For Daily Alerts

  ಸ್ವಲ್ಪ ಯಾಮಾರಿದ್ರೆ 'ಕೋಟ್ಯಧಿಪತಿ'ಯಲ್ಲಿ 9 ಲಕ್ಷ ಕಳೆದುಕೊಳ್ಳುತ್ತಿದ್ದ ಆಶಾಬಾಯಿ

  By Bharath Kumar
  |

  'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕೇಳಲಾಗುವ ಸುಲಭವಾದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಆಟದಿಂದ ಹೊರಹೋದವರು ತುಂಬಾ ಜನ ಇದ್ದಾರೆ. ಇನ್ನು ಕೆಲವರು ಉತ್ತರ ಗೊತ್ತಿದ್ದರೂ ಕನ್ ಫ್ಯೂಸ್ ಮಾಡ್ಕೊಂಡು ತಪ್ಪು ಉತ್ತರ ಕೊಟ್ಟವರು ಇದ್ದಾರೆ.

  ತುಂಬಾ ಚಾಣಕ್ಷತನದಿಂದ, ಬುದ್ದಿವಂತಿಕೆಯಿಂದ ಈ ಆಟವನ್ನ ಆಡಬೇಕಿದೆ. ಹೀಗೆ ಆಲೋಚನೆ ಮಾಡಿ ಆಟ ಆಡಿದವರು ದೊಡ್ಡ ಮೊತ್ತವನ್ನ ತೆಗೆದುಕೊಂಡು ಹೋಗಿದ್ದಾರೆ.

  ಆಶಾಬಾಯಿ ಎಂಬುವರು ಕನ್ನಡದ ಕೋಟ್ಯಧಿಪತಿ ಮೂರನೆ ಆವೃತ್ತಿಯ ಹಾಟ್ ಸೀಟ್ ನಲ್ಲಿ ಕೂತಿದ್ದರು. ಎಲ್ಲ ಪ್ರಶ್ನೆಗಳಿಗೂ ಯೋಚಿಸಿ ಉತ್ತರ ಕೊಡುತ್ತಿದ್ದ ಇವರು ಒಂದು ಹಂತದವರೆಗೂ ಸೂಪರ್ ಆಗಿ ಆಡಿದ್ರು. ಆದ್ರೆ, ಕೊನೆಯಲ್ಲಿ ಗೊಂದಲಕ್ಕೆ ಸಿಲುಕಿದರು. ಇನ್ನೇನೂ ಕೈಯಲ್ಲಿದ್ದ 12.50 ಸೋಲ್ತಾರೆ ಎನ್ನುವಷ್ಟರಲ್ಲಿ ಹುಷಾರ್ ಆದ್ರು. ಅದರ ಪರಿಣಾಮ 12.50 ಲಕ್ಷ ತೆದ್ದುಕೊಂಡು ಹೋದರು. ಅಷ್ಟಕ್ಕೂ, ನಿನ್ನೆಯ ಎಪಿಸೋಡ್ ನಲ್ಲಿ ಆಗಿದ್ದೇನು.? ಮುಂದೆ ಓದಿ....

  ಮೂರು ಲೈಫ್ ಮುಗಿದುಹೋಗಿತ್ತು

  ಮೂರು ಲೈಫ್ ಮುಗಿದುಹೋಗಿತ್ತು

  ಹನ್ನೆರೆಡು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದ ಆಶಾಬಾಯಿ 12.50 ಲಕ್ಷ ಗೆದ್ದಿದ್ದರು. ಮೂರು ಲೈಫ್ ಲೈನ್ ಮುಗಿದು ಹೋಗಿತ್ತು. ಧೃತಿಗೆಡದ ಆಶಾಬಾಯಿ ಅವರು 25 ಲಕ್ಷದ ಪ್ರಶ್ನೆಯನ್ನ ಎದುರಿಸಿದರು. ಇಲ್ಲಿ ಗೊಂದಲಕ್ಕೆ ಸಿಲುಕಿದ ಆಶಾಬಾಯಿ ಮಹತ್ವದ ನಿರ್ಧಾರ ಕೈಗೊಂಡರು.

  25 ಲಕ್ಷದ ಪ್ರಶ್ನೆ ಇದಾಗಿತ್ತು

  25 ಲಕ್ಷದ ಪ್ರಶ್ನೆ ಇದಾಗಿತ್ತು

  ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯ ಸಾಂಸ್ಕೃತಿಕ ಮತ್ತು ನೈಸರ್ಗಿಕ ಎರಡೂ ವರ್ಗಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸ್ಥಳ ಯಾವುದು.?

  A ಸುಂದರಬನ ರಾಷ್ಟ್ರೀಯ ಉದ್ಯಾನವನ

  B ಕಾಂಚನಜಂಗಾ ರಾಷ್ಟ್ರೀಯ ಉದ್ಯಾನವನ

  C ಭೀಮ್ ಬೇಟ್ಕಾದ ಶಿಲಾಗುಹೆಗಳು

  D ಎಲ್ಲೋರಾ ಗುಹೆಗಳು

  ಕೋಡ್ ರೆಡ್ ಪ್ರೆಸ್ ಮಾಡಿದ ಪತಿ

  ಕೋಡ್ ರೆಡ್ ಪ್ರೆಸ್ ಮಾಡಿದ ಪತಿ

  ನಿಖರವಾದ ಉತ್ತರ ಗೊತ್ತಿಲ್ಲದ ಆಶಾಬಾಯಿ ಅವರು ಊಹಿಸಲು ಮುಂದಾದರು. ಅವರ ಪ್ರಕಾರ ಮೂರನೇ ಆಯ್ಕೆ ಎಲ್ಲೋರಾ ಗುಹೆಗಳು ಸರಿ ಇರಬಹುದು ಎಂದು ಹೇಳುತ್ತಿದ್ದರು. ಅಷ್ಟೊತ್ತಿಗೆ ಆಶಾಬಾಯಿ ಅವರ ಪತಿ ಕೋಡ್ ರೆಡ್ ಪ್ರೆಸ್ ಮಾಡಿ ಸೂಚನೆ ನೀಡಿದರು. ಆದ್ರೆ, ಇದನ್ನ ಲೆಕ್ಕಿಸದ ಆಶಾಬಾಯಿ ಮತ್ತೆ ಊಹೆ ಮಾಡಲು ನಿರ್ಧರಿಸಿದರು. ಈ ನಿರ್ಧಾರ ನೋಡುಗರಿಗೆ ಇವರು 12.50 ಲಕ್ಷವನ್ನ ಕಳೆದುಕೊಂಡು 3.20 ಲಕ್ಷಕ್ಕೆ ಜಾರ್ತಾರೆ ಎಂದುಕೊಂಡಿದ್ದರು.

  ಅಂತಿಮವಾಗಿ ಮಾಡಿದ್ದೇನು.?

  ಅಂತಿಮವಾಗಿ ಮಾಡಿದ್ದೇನು.?

  ಲಾಕ್ ಮಾಡಿದ್ದ ಕೋಡ್ ರೆಡ್ ಸೂಚನೆಯನ್ನ ರಿಲೀಸ್ ಮಾಡಿ ಆಟವನ್ನ ಮುಂದುವರಿಸುವ ಪ್ರಯತ್ನ ಮಾಡಿದರು. ಆದ್ರೆ, ನಿಖರವಾದ ಉತ್ತರ ಗೊತ್ತಿಲ್ಲದ ಕಾರಣ ಅಂತಿಮವಾಗಿ ಆಟವಬ್ನ ಕ್ವಿಟ್ ಮಾಡಿದರು. ಅಲ್ಲಿಗೆ ತಾನು ಗೆದ್ದುಕೊಂಡಿದ್ದ 12.50 ಲಕ್ಷವನ್ನ ತನ್ನಲ್ಲಿಯೇ ಉಳಿಸಿಕೊಂಡರು.

  ಸ್ವಲ್ಪ ಯಾಮಾರಿದ್ರೆ ದೊಡ್ಡ ಮೊತ್ತ ಮಿಸ್

  ಸ್ವಲ್ಪ ಯಾಮಾರಿದ್ರೆ ದೊಡ್ಡ ಮೊತ್ತ ಮಿಸ್

  ಆಶಾಬಾಯಿ ಊಹೆ ಮಾಡಿದ್ದ ಎರಡು ಉತ್ತರವೂ ತಪ್ಪಾಗಿತ್ತು. ಒಂದು ವೇಳೆ 25 ಲಕ್ಷದ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಹೋಗಿ ತಪ್ಪು ಉತ್ತರ ನೀಡಿದ್ದರೇ, ಗೆದ್ದಿದ್ದ 12.50 ಲಕ್ಷವೂ ಸಿಗುತ್ತಿರಲಿಲ್ಲ. ಎರಡನೇ ಜಗಲಿಕಟ್ಟೆಗೆ ಜಾರಿ 3.20 ಲಕ್ಷ ಪಡೆಯಬೇಕಾಗಿತ್ತು. ಆದ್ರೆ, ಬುದ್ದಿ ಉಪಯೋಗಿಸಿದ ಆಶಾಬಾಯಿ ಅವರು 12.50 ಲಕ್ಷ ತೆಗೆದುಕೊಂಡು ಹೋದರು. ಸರಿ ಉತ್ತರ B ಕಾಂಚನಜಂಗಾ ರಾಷ್ಟ್ರೀಯ ಉದ್ಯಾನವನ

  English summary
  'Kannadada Kotyadhipathi season 3' contestant Asha bhai has won 12.50 lakhs rupees and quit the game.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X