ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್

By Bharath Kumar

Recommended Video

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ...!! | Filmibeat Kannada

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳಿಗಿಂತ ಹೆಚ್ಚು ಜನಸಾಮಾನ್ಯರೇ ಭಾಗವಹಿಸುತ್ತಿದ್ದಾರೆ. ಇದುವರೆಗೂ ಸುಜಾತ ಎಂಬುವವರು 25 ಲಕ್ಷ ಗೆದ್ದಿದ್ದು ಬಿಟ್ಟರೇ ಬೇರೆ ಯಾರೂ ಅಷ್ಟು ದೊಡ್ಡ ಮೊತ್ತ ಗೆದ್ದಿಲ್ಲ.

ಹೀಗಿದ್ದರೂ ಕೋಟ್ಯಧಿಪತಿಯ ಆಟ ದಿನದಿಂದ ದಿನಕ್ಕೆ ರೋಚಕತೆಯನ್ನ ಕಾಪಾಡಿಕೊಂಡು ಬರುತ್ತಿದೆ. ಸೋಮವಾರ 11 ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟು ಆಟ ಕಾಯ್ದುಕೊಂಡಿದ್ದ ಪಾರ್ವತಿ ಎಂಬುವವರು ಮಂಗಳವಾರ ಒಂದೇ ಪ್ರಶ್ನೆಗೆ ತಮ್ಮ ಆಟವನ್ನ ಮುಗಿಸಿದರು.

6.40 ಲಕ್ಷದ ಪ್ರಶ್ನೆಗೆ ಕಂಗಲಾದ ಪಾರ್ವತಿ ಉತ್ತರಿಸಲು ಕಷ್ಟವಾಗಿ ಅವರ ಬಳಿಯಿದ್ದ ಒಂದು ಲೈಫ್ ಲೈನ್ ಕೂಡ ಬಳಸಿಕೊಂಡರು. ಆದ್ರೆ, ಆಟವನ್ನ ಮಾತ್ರ ಮುಂದುವರೆಸಿಲಿಲ್ಲ. ಆಟವನ್ನ ಕ್ವಿಟ್ ಮಾಡಿದ್ರು. ಗೇಮ್ ಮುಗಿಸಿದ ಬಳಿಕ ಅವರಿಗೆ ಆಶ್ಚರ್ಯ ಎದುರಾಯಿತು. ಯಾಕೆ.? ಮುಂದೆ ಓದಿ....

12ನೇ ಪ್ರಶ್ನೆ ಇದು

12ನೇ ಪ್ರಶ್ನೆ ಇದು

ಯಾವ ಗ್ರಹದ ಮೇಲಿರುವ ಕುಳಿಗಳಿಗೆ ಭಾರತೀಯ ಪಟ್ಟಣಗಳಾದ ಕಾಕೋರಿ, ಲೋನಾರ್ ಮತ್ತು ಪೂನಾ ಎನ್ನುವ ಹೆಸರುಗಳನ್ನು ಇಡಲಾಗಿದೆ.?

A ಬುಧ

B ಶುಕ್ರ

C ಮಂಗಳ

D ಗುರು

ಕೈಕೊಟ್ಟ 'ಫೋನ್-ಎ-ಫ್ರೆಂಡ್'

ಕೈಕೊಟ್ಟ 'ಫೋನ್-ಎ-ಫ್ರೆಂಡ್'

ಪಾರ್ವತಿ ಅವರ ಬಳಿ 'ಫೋನ್ ಎ ಫ್ರೆಂಡ್' ಲೈಫ್ ಲೈನ್ ಇತ್ತು. ಸ್ನೇಹಿತ ಶರಣ್ ಅವರಿಗೆ ಫೋನ್ ಮಾಡಿದ್ದ ಪಾರ್ವತಿಗೆ ಅವರು ಕೂಡ ಸರಿ ಉತ್ತರ ಕೊಡಿಲಿಲ್ಲ. ಇದರಿಂದ ಕಂಗಲಾದ ಪಾರ್ವತಿ ಅವರು ಆಟವನ್ನ ಕ್ವಿಟ್ ಮಾಡಿದರು.

ಊಹಿಸಿದ್ದ ಉತ್ತರ ಸರಿಯಿತ್ತು

ಊಹಿಸಿದ್ದ ಉತ್ತರ ಸರಿಯಿತ್ತು

12ನೇ ಪ್ರಶ್ನೆಗೆ ನಿಖರವಾದ ಉತ್ತರ ಗೊತ್ತಿಲ್ಲದೇ ಗೊಂದಲ್ಲಕ್ಕೆ ಸಿಲುಕಿದ ಪಾರ್ವತಿ ಅವರು ಮನೆಯವರು ನೀಡಿದ ಸೂಚನೆಯಿಂದ ಗೇಮ್ ಕ್ವಿಟ್ ಮಾಡಿದರು. ಆದ್ರೆ, ರಮೇಶ್ ಅರವಿಂದ್ ಅವರು, ಪಾರ್ವತಿಗೆ ಇನ್ನೊಂದು ಅವಕಾಶ ಕೊಟ್ಟು ಸುಮ್ಮನೆ ಊಹೆ ಮಾಡಿದ್ದರೇ ಯಾವ ಉತ್ತರ ಕೊಡುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ಪಾರ್ವತಿ 'C-ಮಂಗಳ' ಎಂದಿದ್ದರು.

ಉತ್ತರ ಸರಿಯಾಗಿತ್ತು

ಉತ್ತರ ಸರಿಯಾಗಿತ್ತು

ಹಾಟ್ ಸೀಟ್ ನಲ್ಲಿ ಕೂತಿದ್ದ ಪಾರ್ವತಿ ಅವರು ಆಟವನ್ನ ಕ್ವಿಟ್ ಮಾಡಿದ ಬಳಿಕ ಊಹಿಸಿದ್ದ ಉತ್ತರ ಸರಿಯಾಗಿತ್ತು. ಇದನ್ನ ಕಂಡ ಸ್ವತಃ ಪಾರ್ವತಿಗೂ ಮತ್ತು ಫ್ಯಾಮಿಲಿಯ ಸದಸ್ಯರಿಗೂ ಒಂದು ಕ್ಷಣ ಅಚ್ಚರಿಯಾಯಿತು.

6.40 ಗೆದ್ದುಕೊಂಡ ಹೋದ ಸ್ಪರ್ಧಿ

6.40 ಗೆದ್ದುಕೊಂಡ ಹೋದ ಸ್ಪರ್ಧಿ

ಒಂದು ವೇಳೆ 12ನೇ ಪ್ರಶ್ನೆಗೆ ಉತ್ತರ ಕೊಡಲು ಮುಂದಾಗಿ ತಪ್ಪು ಉತ್ತರ ಕೊಟ್ಟಿದ್ದರೇ 3.20 ಲಕ್ಷಕ್ಕೆ ಜಾರುತ್ತಿದ್ದರು. ಆದ್ರೆ, ಕ್ವಿಟ್ ಮಾಡಿದ ಕಾರಣ 6.40 ಲಕ್ಷ ತೆಗೆದುಕೊಂಡು ಮನೆಗೆ ಹೋದರು. ಆದ್ರೆ, ಸರಿ ಉತ್ತರವನ್ನ ಊಹೆ ಮಾಡಿದ್ದರು ಎಂಬ ಹತಾಶೆ ಅವರ ಮುಖದಲ್ಲಿ ಕಾಣುತ್ತಿತ್ತು.

More from Filmibeat

English summary
'Kannadada Kotyadhipathi season 3' contestant parvathi has won 6.40 lakhs rupees and quit the game.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X