'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?

By Bharath Kumar

Recommended Video

Kannadada Kotyadipathi season 5 : ಇಷ್ಟೆನಾ ರೆಹಮಾನ್ ಗೆದ್ದಿದ್ದು..? | Filmibeat Kannada

ಈ ವಾರ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಕಿರುತೆರೆ ಕಲಾವಿದರ ಶೋ ಎನ್ನಬಹುದು. ವಾರ ಪೂರ್ತಿ ಧಾರಾವಾಹಿ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಾರದ ಮೊದಲ ಸ್ಪರ್ಧಿಯಾಗಿ ಟಿವಿ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ರೆಹಮಾನ್ ಹಾಟ್ ಸೀಟ್ ನಲ್ಲಿ ಕೂತಿದ್ದರು.

ರೆಹಮಾನ್ ಅವರ ಮೇಲೆ ನಿರೀಕ್ಷೆ ಹೆಚ್ಚಿತ್ತು. ಯಾಕಂದ್ರೆ, ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದರಿಂದ ಸಾಮಾನ್ಯ ಜ್ಞಾನ ಬೇರೆಯವರಿಗಿಂತ ಹೆಚ್ಚಿರುತ್ತೆ. ಹೀಗಾಗಿ, ಹೆಚ್ಚು ಪ್ರಶ್ನಿಗಳಿಗೆ ಉತ್ತರ ಕೊಡಬಹುದು. ದೊಡ್ಡ ಮೊತ್ತವನ್ನೇ ಗೆಲ್ಲಬಹುದು ಎಂಬ ಭರವಸೆ ಇತ್ತು.

ಆದ್ರೆ, ರೆಹಮಾನ್ ಅವರ ಆಟ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಬಹುಬೇಗವೇ ಆಟದಿಂದ ನಿರ್ಗಮಿಸಿದರು. ಅಥ್ಲೇಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದ ರೆಹಮಾನ್ ಅವರು ಆಟವನ್ನ ಕ್ವಿಟ್ ಮಾಡಿದರು. ಹಾಗಿದ್ರೆ, ಕನ್ನಡದ ಕೋಟ್ಯಧಿಪತಿಯಲ್ಲಿ ರೆಹಮಾನ್ ಗಳಿಸಿದೆಷ್ಟು.? ಮುಂದೆ ಓದಿ....

9 ಪ್ರಶ್ನೆಗೆ ಉತ್ತರ ಕೊಟ್ಟಿದ್ದ ರೆಹಮಾನ್

9 ಪ್ರಶ್ನೆಗೆ ಉತ್ತರ ಕೊಟ್ಟಿದ್ದ ರೆಹಮಾನ್

ಕನ್ನಡದ ಕೋಟ್ಯಧಿಪತಿಯಲ್ಲಿ ಕೇಳಲಾದ 9 ಪ್ರಶ್ನೆಗಳಿಗೆ ರೆಹಮಾನ್ ಸರಿಯಾದ ಉತ್ತರ ನೀಡಿದ್ದರು. ಆದ್ರೆ, ಹತ್ತನೇ ಪ್ರಶ್ನೆಗೆ ತಮ್ಮ ಆಟವನ್ನ ಮುಗಿಸಿದರು. ಹತ್ತನೇ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿದ್ದರೂ ಅದರಲ್ಲಿ ಗೊಂದಲ ಉಂಟಾದ ಕಾರಣ ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿ, ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಂಡರು.

ಯಾವುದು ಹತ್ತನೇ ಪ್ರಶ್ನೆ.?

ಯಾವುದು ಹತ್ತನೇ ಪ್ರಶ್ನೆ.?

2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತೂಕ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದವರು ಯಾರು.?
A ವಿಕಾಸ್ ಠಾಕೂರ್
B ದೀಪಕ್ ಲಾಥರ್
C ಸತೀಶ್ ಕುಮಾರ್ ಶಿವಲಿಂಗಂ
D ಗುರುರಾಜ ಪೂಜಾರಿ

ಊಹೆ ಸರಿಯಾಗಿತ್ತು, ಆದ್ರೆ, ಗೊಂದಲ

ಊಹೆ ಸರಿಯಾಗಿತ್ತು, ಆದ್ರೆ, ಗೊಂದಲ

ಹತ್ತನೇ ಪ್ರಶ್ನೆಗೆ ಉತ್ತರ ಕೊಡಲು ಕೇವಲ 60 ಸೆಕೆಂಡ್ ಮಾತ್ರ ಸಮಯ ಇತ್ತು. ರೆಹಮಾನ್ ಅವರು ಆಯ್ಕೆ D ಗುರುರಾಜ ಪೂಜಾರಿ ಎಂದು ಊಹೆ ಮಾಡಿದ್ದರು. ಆದ್ರೆ, ರಿಸ್ಕ್ ತೆಗೆದುಕೊಳ್ಳಲು ಇಷ್ಟವಾಗದೇ ಆಟ ಕ್ವಿಟ್ ಮಾಡಿದರು. ಅಂತಿಮವಾಗಿ ಅದೇ ಉತ್ತರ ಸರಿಯಾಗಿತ್ತು ಎನ್ನುವುದು ಅಚ್ಚರಿ.

1.60 ಲಕ್ಷ ಗೆದ್ದ ರೆಹಮಾನ್

1.60 ಲಕ್ಷ ಗೆದ್ದ ರೆಹಮಾನ್

ಅಲ್ಲಿಗೆ ಒಂಭತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದ ರೆಹಮಾನ್ ಅವರಿಗೆ 1.60 ಲಕ್ಷ ಹಣ ಬಹುಮಾನವಾಗಿ ಸಿಕ್ತು. ನಿರಾಸೆಯಾದರೂ ಬಹಳ ಖುಷಿಯಿಂದ ರೆಹಮಾನ್ ಆಟವನ್ನ ಅಂತ್ಯಗೊಳಿಸಿದರು.

ಮುಂದಿನ ಸ್ಪರ್ಧಿ ಪುಟ್ಟಗೌರಿ ಮಹೇಶ್

ಮುಂದಿನ ಸ್ಪರ್ಧಿ ಪುಟ್ಟಗೌರಿ ಮಹೇಶ್

ಇನ್ನು ರೆಹಮಾನ್ ಅವರ ಕನ್ನಡ ಕೋಟ್ಯಧಿಪತಿಯಿಂದ ನಿರ್ಗಮಿಸಿದ ನಂತರ 'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಗೆ ಉತ್ತರ ನೀಡಿ, ಪುಟ್ಟಗೌರಿ ಖ್ಯಾತಿಯ ಮಹೇಶ್ (ರಕ್ಷಿತ್) ಅವರು ಹಾಟ್ ಸೀಟ್ ನಲ್ಲಿ ಕೂತಿದ್ದಾರೆ. ಇವರು ಎಷ್ಟು ಗೆದ್ದರು ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
'Kannadada Kotyadhipathi season 3' contestant Anchor Rehman has won 1.60 lakhs rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X