twitter
    For Quick Alerts
    ALLOW NOTIFICATIONS  
    For Daily Alerts

    'ಲೈಫ್ ಲೈನ್' ಇದ್ರೂ 50 ಲಕ್ಷದ ಪ್ರಶ್ನೆಗೆ ಆಟ 'ಕ್ವಿಟ್' ಮಾಡಿದ ಸುಜಾತ, ಯಾಕೆ.?

    By Bharath Kumar
    |

    Recommended Video

    Kannadada Kotyadhipathi season 3: ಕೋಟ್ಯಾಧಿಪತಿಯಲ್ಲಿ ಅಂದುಕೊಂಡಷ್ಟು ಗೆಲ್ಲಲಿಲ್ಲ ಸುಜಾತ..!!

    'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಮೊದಲ ಕೋಟ್ಯಧಿಪತಿಯಾಗಬಹುದು ಎಂಬ ಭರವಸೆ ಮೂಡಿಸಿದ್ದ ಸುಜಾತ ತಮ್ಮ ಆಟವನ್ನ ಕ್ವಿಟ್ ಮಾಡುವ ಮೂಲಕ ಮುಗಿಸಿದ್ದಾರೆ.

    25 ಲಕ್ಷ ಗೆದ್ದು ಆಟವನ್ನ ಕಾಯ್ದುಕೊಂಡಿದ್ದ ಸುಜಾತ ಅವರು ನಿನ್ನೆ (ಗುರುವಾರ) ಆಟ ಮುಂದುವರಿಸಿದ್ದರು. ಅವರ ಮುಂದೆ ಕೇವಲ ಎರಡು ಪ್ರಶ್ನೆಗಳು ಮಾತ್ರವಿತ್ತು. ಒಂದು 50 ಲಕ್ಷಕ್ಕೆ, ಇನ್ನೊಂದು 1 ಕೋಟಿಗೆ. ಹದಿಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದ ಅವರು ಖಂಡಿತಾ ಕೋಟಿ ಗೆಲ್ತಾರೆ ಎನ್ನಲಾಗುತ್ತಿತ್ತು.

    'ಕನ್ನಡದ ಕೋಟ್ಯಧಿಪತಿ'ಯಲ್ಲಿ ಇತಿಹಾಸ ಸೃಷ್ಟಿಸಿದ ಸುಜಾತ'ಕನ್ನಡದ ಕೋಟ್ಯಧಿಪತಿ'ಯಲ್ಲಿ ಇತಿಹಾಸ ಸೃಷ್ಟಿಸಿದ ಸುಜಾತ

    ಜೊತೆಗೆ 'ಡಬ್ಬಲ್ ಡಿಪ್' ಲೈಫ್ ಲೈನ್ ಬೇರೆ ಇತ್ತು. ಬಟ್, ಅಂದುಕೊಂಡಂತೆ ಆಗಲಿಲ್ಲ. 50 ಲಕ್ಷದ ಪ್ರಶ್ನೆ ನೋಡಿದ ಸುಜಾತ ಅವರು ತಮ್ಮ ಆಟವನ್ನ ಕ್ವಿಟ್ ಮಾಡಿಯೇ ಬಿಟ್ಟರು. ಅಷ್ಟಕ್ಕೂ, 50 ಲಕ್ಷದ ಪ್ರಶ್ನೆ ಏನಾಗಿತ್ತು.? ಮುಂದೆ ಓದಿ.....

    50 ಲಕ್ಷದ ಪ್ರಶ್ನೆ ಇದು

    50 ಲಕ್ಷದ ಪ್ರಶ್ನೆ ಇದು

    ಇವುಗಳಲ್ಲಿ ಯಾವುದು 1947ರಲ್ಲಿ ಸ್ವತಂತ್ರ ಭಾರತ ಪರಿಚಯಿಸಿದ 'ಸ್ವಾತಂತ್ರ್ಯ ಸರಣಿ'ಯ ಮೂರು ಅಂಚೆ ಚೀಟಿಗಳ ಭಾಗವಾಗಿಲ್ಲ.?
    A ಅಶೋಕ ಸ್ಥಂಭ
    B ಚರಕ
    C ರಾಷ್ಟ್ರ ಧ್ವಜ
    D ಡಗ್ಲಸ್ ಡಿಸಿ 4 ವಿಮಾನ

    ಸರಳ ಪ್ರಶ್ನೆಗೆ ಕನ್ ಪ್ಯೂಸ್ ಮಾಡಿಕೊಂಡು ಆಟದಿಂದ ಹೊರಬಿದ್ದ ಸ್ಪರ್ಧಿಸರಳ ಪ್ರಶ್ನೆಗೆ ಕನ್ ಪ್ಯೂಸ್ ಮಾಡಿಕೊಂಡು ಆಟದಿಂದ ಹೊರಬಿದ್ದ ಸ್ಪರ್ಧಿ

    ಕ್ವಿಟ್ ಮಾಡಿದ ಸುಜಾತ

    ಕ್ವಿಟ್ ಮಾಡಿದ ಸುಜಾತ

    ಪ್ರಶ್ನೆಗೆ ಉತ್ತರ ನೀಡಲು ಸುಜಾತ ಅವರು ಮನಸ್ಸು ಮಾಡಿದ್ದರು. ಆದ್ರೆ, ಒಂದು ವೇಳೆ ತಪ್ಪಾದರೇ ಕೈಗೆ ಬಂದಿದ್ದು ಬಾಯಿಗೆ ಬರುವುದಿಲ್ಲ ಎಂಬುದರ ಅರಿವಾಗಿ ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು. ಹೆಚ್ಚು ಕಾಲ ಯೋಚನೆಯೆ ಮಾಡಿಲ್ಲ. ಪ್ರಶ್ನೆ ನೋಡಿ ಕೆಲವೇ ಕ್ಷಣಗಳಲ್ಲಿ ಆಟ ನಿಲ್ಲಿಸಲು ಘೋಷಿಸಿದರು.

    ಉತ್ತರ ತಪ್ಪಾಗಿದ್ದರೇ ಏನಾಗ್ತಿತ್ತು.?

    ಉತ್ತರ ತಪ್ಪಾಗಿದ್ದರೇ ಏನಾಗ್ತಿತ್ತು.?

    ಒಂದು ವೇಳೆ ಸುಜಾತ ಅವರು 50 ಲಕ್ಷದ ಪ್ರಶ್ನೆಗೆ ಉತ್ತರ ಕೊಡಲು ಮುಂದಾಗಿದ್ದರೇ ಸರಿ ಉತ್ತರವೇ ಕೊಡಬೇಕಿತ್ತು. ಅದೇನಾದ್ರೂ, ತಪ್ಪಾಗಿದ್ದರೇ ಈಗಾಗಲೇ ಗೆದ್ದಿದ್ದ 25 ಲಕ್ಷವನ್ನ ಕೂಡ ಕಳೆದುಕೊಂಡು ಕೇವಲ 3.20 ಲಕ್ಷ ಪಡೆದುಕೊಳ್ಳಬೇಕಿತ್ತು. ಹೀಗಾಗಿ, ರಿಸ್ಕ್ ತೆಗೆದುಕೊಳ್ಳಲು ಸುಜಾತ ಅವರು ಹೋಗಿಲ್ಲ.

    ಒಂದೇ ಒಂದು 'ಲೈಫ್ ಲೈನ್' ಬಳಸದೇ ಹಿಮಾನಿ ಗಳಿಸಿದ್ದೆಷ್ಟು.?ಒಂದೇ ಒಂದು 'ಲೈಫ್ ಲೈನ್' ಬಳಸದೇ ಹಿಮಾನಿ ಗಳಿಸಿದ್ದೆಷ್ಟು.?

    'ಡಬ್ಬಲ್ ಡಿಪ್' ಬಳಸಬಹುದಿತ್ತು ಅಲ್ವಾ.?

    'ಡಬ್ಬಲ್ ಡಿಪ್' ಬಳಸಬಹುದಿತ್ತು ಅಲ್ವಾ.?

    ಸುಜಾತ ಅವರ ಬಳಿ ಇನ್ನು ಒಂದು ಲೈಫ್ ಲೈನ್ ಇತ್ತು. ಡಬ್ಬಲ್ ಡಿಪ್, ಮೊದಲ ಉತ್ತರ ತಪ್ಪಿದ್ದರೇ ಇನ್ನೊಂದು ಉತ್ತರ ಕೊಡುವ ಅವಕಾಶ ಇತ್ತು. ಆದ್ರೆ, ಈ ಲೈಫ್ ಲೈನ್ ಬಳಸಿದ್ರೆ ಆಟವನ್ನ ಕ್ವಿಟ್ ಮಾಡುವಂತಿಲ್ಲ. ಹೀಗಾಗಿ, ಲೈಫ್ ಲೈನ್ ಬಳಸಲು ಸುಜಾತ ಅವರು ಹಿಂದೇಟು ಹಾಕಿದರು.

    ಸರಿ ಉತ್ತರ ಏನಾಗಿತ್ತು.?

    ಸರಿ ಉತ್ತರ ಏನಾಗಿತ್ತು.?

    ಇದೇ ಮೊದಲ ಬಾರಿಗೆ ಮೂರನೇ ಆವೃತ್ತಿಯಲ್ಲಿ ಸ್ಪರ್ಧಿಯೊಬ್ಬರು 50 ಲಕ್ಷದ ಪ್ರಶ್ನೆ ಎದುರಿಸಿದ್ದರು. ಆದ್ರೆ, ಉತ್ತರ ಕೊಟ್ಟಿಲ್ಲ.

    ಸರಿಯಾದ ಉತ್ತರ B: ಚರಕ

    25 ಲಕ್ಷಕ್ಕೆ ತೃಪ್ತಿಯಾದ ಸುಜಾತ

    25 ಲಕ್ಷಕ್ಕೆ ತೃಪ್ತಿಯಾದ ಸುಜಾತ

    ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸುಜಾತ ಅವರು ಕೇವಲ 25 ಲಕ್ಷಕ್ಕೆ ತೃಪ್ತಿಪಟ್ಟುಕೊಂಡು ತಮ್ಮ ಆಟವನ್ನ ಮುಗಿಸಿದರು. ಅಲ್ಲಿಗೆ ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯಲ್ಲಿ 25 ಲಕ್ಷ ಗೆದ್ದ ಮೊದಲ ಸ್ಪರ್ಧಿ ಸುಜಾತ.

    'ಕೋಟ್ಯಧಿಪತಿ'ಗೆ ಹೋಗುವ ಮುಂಚೆ ರಾಕಿಂಗ್ ಸ್ಟಾರ್ ಏನಂದ್ರು.?'ಕೋಟ್ಯಧಿಪತಿ'ಗೆ ಹೋಗುವ ಮುಂಚೆ ರಾಕಿಂಗ್ ಸ್ಟಾರ್ ಏನಂದ್ರು.?

    25 ಲಕ್ಷದ ಪ್ರಶ್ನೆ ಏನಾಗಿತ್ತು.?

    25 ಲಕ್ಷದ ಪ್ರಶ್ನೆ ಏನಾಗಿತ್ತು.?

    ಭಾರತದ ಕಾಡುಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ಏಕೈಕ ವಾನರ ಪ್ರಭೇದ 'ಹುಲಕ್ ಗಿಬ್ಬನ್' ಅನ್ನು ಯಾವ ಪ್ರದೇಶದಲ್ಲಿ ಕಾಣಬಹುದು.?
    A ಕರ್ನಾಟಕದ ಮಲೆನಾಡು
    B ಅರಾವಳಿ ಪರ್ವತಗಳು
    C ಪೂರ್ವ ಘಟ್ಟಗಳು
    D ಈಶಾನ್ಯ ಭಾರತದ ಅರಣ್ಯಗಳು
    ಆಡಿಯೆನ್ಸ್ ಪೋಲ್ ಸಹಾಯದಿಂದ ಸರಿಯಾದ ಉತ್ತರ ನೀಡಿದ್ದರು.
    ಸರಿಯಾದ ಉತ್ತರ : D ಈಶಾನ್ಯ ಭಾರತದ ಅರಣ್ಯಗಳು

    English summary
    'Kannadada Kotyadhipathi season 3' contestant sujatha has won 25 lakhs rupees and quit the game.
    Friday, July 13, 2018, 11:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X