ಕನ್ನಡದ ಕೋಟ್ಯಧಿಪತಿಯಲ್ಲಿ ಸಿಕ್ಕ ಅವಕಾಶ ಕೈ ಚೆಲ್ಲಿದ ವಿಕಾಸ್

ಕನ್ನಡದ ಕೋಟ್ಯಧಿಪತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಬೇಕು ಎಂದು ಸಾವಿರಾರು ಜನ ಕಾಯ್ತಿದ್ದಾರೆ. ಹೇಗಾದರೂ ಮಾಡಿ ಹಾಟ್ ಸೀಟ್ ನಲ್ಲಿ ಕೂರಬೇಕು ಎಂಬ ಆಸೆಯಿಂದ ಪ್ರಯತ್ನ ಮಾಡ್ತಾರೆ. ಆದರೆ, ಅದರಲ್ಲಿ ಕೆಲವರಿಗೆ ಮಾತ್ರ ಅದೃಷ್ಟದ ಬಾಗಿಲು ತೆಗೆಯುತ್ತೆ.

ಹೀಗೆ ಅದೃಷ್ಟದ ಬಾಗಿಲು ತೆಗೆದು ಕೋಟ್ಯಧಿಪತಿ ಶೋಗೆ ಬಂದ ಸ್ಪರ್ಧಿ ವಿಕಾಸ್. ಆಟವನ್ನ ಬಹಳ ಜೋಶ್ ನಿಂದ ಕಾನ್ಫಿಡೆಂಟ್ ಆಗಿ ಆರಂಭಿಸಿದ ವಿಕಾಸ್ ನಿರಾಸೆ ಮೂಡಿಸಿ ಹೊರನಡೆದರು.

ಕೋಟ್ಯಧಿಪತಿಯಲ್ಲಿ ಸಿಕ್ಕ ಅವಕಾಶವನ್ನ ತನ್ನ ಕೈಯಾರೆ ಕೈಚೆಲ್ಲಿದರು. ತಾನು ಕಂಡಿದ್ದ ಕನಸನ್ನ ನನಸು ಮಾಡಿಕೊಳ್ಳಲು ಆಗಲಿಲ್ಲ. ಹೌದು, ವಿಕಾಸ್ ಆಟ ಅರಂಭಿಸಿದ ಕೆಲವೇ ಪ್ರಶ್ನೆಗಳಲ್ಲಿ ತನ್ನ ಆಟ ಮುಗಿಸಿದರು. ವಿಕಾಸ್ ಗೆ ಪಾಲಿಗೆ ಶತ್ರುವಾದ ಪ್ರಶ್ನೆ ವೀಕ್ಷಕರ ಪಾಲಿಗೆ ತುಂಬಾ ಸಿಂಪಲ್ ಆಗಿತ್ತು ಎನ್ನಬಹುದು. ಅಷ್ಟಕ್ಕೂ, ವಿಕಾಸ್ ಗೆ ಕೈಕೊಟ್ಟ ಆ ಪ್ರಶ್ನೆ ಯಾವುದು? ಮುಂದೆ ಓದಿ.....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಇದಾಗಿತ್ತು

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಇದಾಗಿತ್ತು

ಈ ಕ್ರಿಕೆಟಿಗರನ್ನು ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ವರ್ಷಕ್ಕೆ ಅನುಗುಣವಾಗಿ ಕಾಲಾನುಕ್ರಮದಲ್ಲಿ ಜೋಡಿಸಿ?

A ಗುಂಡಪ್ಪ ವಿಶ್ವನಾಥ್

B ಸೌರವ್ ಗಂಗೂಲಿ

C ಕೆಎಲ್ ರಾಹುಲ್

D ಅನಿಲ್ ಕುಂಬ್ಳೆ

ಸರಿಯಾದ ಉತ್ತರ: A ಗುಂಡಪ್ಪ ವಿಶ್ವನಾಥ್, D ಅನಿಲ್ ಕುಂಬ್ಳೆ, B ಸೌರವ್ ಗಂಗೂಲಿ, C ಕೆಎಲ್ ರಾಹುಲ್

ಮೊದಲನೇ ಸೇಫ್ ಝೋನ್ ದಾಟಿದ್ರು

ಮೊದಲನೇ ಸೇಫ್ ಝೋನ್ ದಾಟಿದ್ರು

ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ವಿಕಾಸ್ ಕ್ರಿಕೆಟ್ ಬಗ್ಗೆ ಕೇಳಿದ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ವೇಗವಾಗಿ ಉತ್ತರ ನೀಡಿ ಆಟ ಆರಂಭಿಸಿದರು. ಮೊದಲ ಐದು ಪ್ರಶ್ನೆಗಳಲ್ಲಿ ಉತ್ತರಿಸಿದ ವಿಕಾಸ್ ಅವರು ಹತ್ತು ಸಾವಿರ ರೂಪಾಯಿ ಗೆದ್ದು ಮೊದಲ ಸೇಫ್ ಝೋನ್ ಕ್ರಾಸ್ ಮಾಡಿದ್ರು.

ಆರನೇ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ

ಆರನೇ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ

ಮೊದಲ ಐದು ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದ ವಿಕಾಸ್ ಆರನೇ ಪ್ರಶ್ನೆಯಲ್ಲಿ ಯಡವಿದರು. ಕರ್ನಾಟಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ವಿಕಾಸ್ ಕನ್ ಫ್ಯೂಸ್ ಮಾಡಿದಕೊಂಡು ಉತ್ತರಿಸಿದರು. ಆದರೆ, ಅವರು ಕೊಟ್ಟ ಉತ್ತರ ತಪ್ಪಾಗಿತ್ತು.

ಯಾವುದು ಆ ಪ್ರಶ್ನೆ?

ಯಾವುದು ಆ ಪ್ರಶ್ನೆ?

ಕರ್ನಾಟಕದ ಈ ಜಿಲ್ಲೆಗಳಲ್ಲಿ ಕೇವಲ ಭೂಮಿಯಿಂದ ಸುತ್ತುವರಿದಿದೆ?

A ಉತ್ತರ ಕನ್ನಡ

B ದಕ್ಷಿಣ ಕನ್ನಡ

C ಕೊಡಗು

D ಉಡುಪಿ

ಸರಿಯಾದ ಉತ್ತರ ಯಾವುದು?

ಸರಿಯಾದ ಉತ್ತರ ಯಾವುದು?

ಯಾವ ಜಿಲ್ಲೆ ಕೇವಲ ಭೂಮಿಯಿಂದ ಸುತ್ತುವರಿದಿದೆ ಎಂದು ಪ್ರಶ್ನೆ ಕೇಳಲಾಗಿತ್ತು. ಅಂದ್ರೆ, ನೆರೆಯಲ್ಲಿ ಸಮುದ್ರ ಇಲ್ಲದ ಜಿಲ್ಲೆ ಯಾವುದು ಎಂದು ಅರ್ಥ. ಆದರೆ, ಗೊಂದಲಕ್ಕೆ ಒಳಗಾದ ವಿಕಾಸ್ ಉತ್ತರ ಕನ್ನಡ ಜಿಲ್ಲೆ ಸರಿಯಾದ ಉತ್ತರ ಎಂದರು. ದುರಾದೃಷ್ಟವಶಾತ್ ಕೊಡಗು ಸರಿ ಉತ್ತರ ಆಗಿತ್ತು. ಈ ಮೂಲಕ ಬಹಳ ಕನಸು ಹೊಂದಿದ್ದ ವಿಕಾಸ್ ನಿರಾಸೆಯಿಂದ ಹೊರಹೋದರು. ಕೇವಲ ಹತ್ತು ಸಾವಿರ ಮಾತ್ರ ಗೆದ್ದು ಸಿಕ್ಕ ಅವಕಾಶವನ್ನ ಕೈಚೆಲ್ಲಿದರು.

More from Filmibeat

English summary
Kannadada kotyadhipathi sesson 4th contestant Vikas lost the game. unfortunately he miss the opportunity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X