ಸೋಮವಾರದಿಂದ 'ಕನ್ನಡದ ಕೋಟ್ಯಾಧಿಪತಿ' ಶುರು
Recommended Video

ಇಂದಿನಿಂದ ಕನ್ನಡದ ಕೋಟ್ಯಾಧಿಪತಿ ನೋಡೋದನ್ನು ಮಿಸ್ ಮಾಡ್ಬೇಡಿ..! | Filmibeat Kannada
ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಾರ್ಯಕ್ರಮ 'ಕನ್ನಡದ ಕೋಟ್ಯಾಧಿಪತಿ' ಮೂರನೇ ಆವೃತ್ತಿ ಇದೇ ತಿಂಗಳಲ್ಲಿ ಆರಂಭವಾಗಲಿದೆ. ಜೂನ್ 25ರಿಂದ (ಸೋಮವಾರದಿಂದ -ಶುಕ್ರವಾರ) ಪ್ರತಿದಿನ ರಾತ್ರಿ 8 ಗಂಟೆಗೆ ಮೂಡಿ ಬರಲಿದೆ.
ರಮೇಶ್ ಅರವಿಂದ್ ಈ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಕುರಿತು ಹಲವು ಪ್ರೋಮೋಗಳು ಪ್ರಸಾರವಾಗುತ್ತಿದ್ದು, ಈ ಸೀಸನ್ ಮೇಲೆ ನಿರೀಕ್ಷೆ ಹೆಚ್ಚಿದೆ.
ಇದಕ್ಕೂ ಮುಂಚೆ ಎರಡು ಆವೃತ್ತಿಗಳು ಟೆಲಿಕಾಸ್ಟ್ ಆಗಿದ್ದು, ನಟ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿದ್ದರು. ಇದೀಗ, ಸುಮಾರು ನಾಲ್ಕು ವರ್ಷದ ನಂತರ ಕನ್ನಡದ ಕೋಟ್ಯಾಧಿಪತಿ ಮತ್ತೆ ಬರ್ತಿದೆ.

ಮೊದಲ ದಿನ ಯಾರು ಸ್ಪರ್ಧಿ ಆಗಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಆದ್ರೆ, ಜನಸಾಮಾನ್ಯರೇ ಅತಿಥಿಗಳಾಗಲಿದ್ದಾರೆ ಎಂಬ ಪ್ರೋಮೋ ರಿಲೀಸ್ ಆಗಿದೆ.
ಅಂದ್ಹಾಗೆ, ನೀವು ಕೂಡ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಬಹುದು. ಪ್ರೇಕ್ಷಕರಿಗಾಗಿ ರಮೇಶ್ ಅರವಿಂದ್ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟರೇ, ಹಾಟ್ ಸೀಟ್ ನಲ್ಲಿ ನೀವು ಕೂರಬಹುದು.
More from Filmibeat
English summary
Star Suvarna Channel popular show 'Kannadada Kotyadhipathi season 3' will start from 25th june monday. Kannada actor Ramesh Aravind will host 'Kannadada Kotyadhipathi 3'
ramesh aravind kannadada kotyadhipathi season 3 suvarna channel tv ರಮೇಶ್ ಅರವಿಂದ್ ಕನ್ನಡದ ಕೋಟ್ಯಾಧಿಪತಿ 3 ಸುವರ್ಣ ವಾಹಿನಿ ಟಿವಿ


Click it and Unblock the Notifications











