ರಮೇಶ್ ಹುಟ್ಟುಹಬ್ಬಕ್ಕೆ 'ಕೋಟ್ಯಧಿಪತಿ' ಕಡೆಯಿಂದ ಸರ್ಪ್ರೈಸ್ ಗಿಫ್ಟ್
Recommended Video

ಕನ್ನಡ ಚಿತ್ರರಂಗದ ಸುಂದರಾಂಗ ಜಾಣ, ಅಪರೂಪದ ಸೂಪರ್ ಸ್ಟಾರ್ ರಮೇಶ್ ಅರವಿಂದ್ ಗೆ ಇಂದು (ಸೆಪ್ಟೆಂಬರ್ 10) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಿಂದ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಕನ್ನಡದ ಸವ್ಯಸಾಚಿ ನಟನಿಗೆ ಸ್ಪೆಷಲ್ ವಿಶ್ ಮಾಡಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ನಿರೂಪಣೆ ಮಾಡ್ತಿರುವ ರಮೇಶ್ ಅವರಿಗೆ ನಟ ಶಿವರಾಜ್ ಕುಮಾರ್, ಸುಧಾರಣಿ, ನಾಗತಿಹಳ್ಳಿ ಚಂದ್ರಶೇಖರ್, ಅವರು ಕೋಟ್ಯಧಿಪತಿ ಟೆಂಟ್ ನಲ್ಲಿ ರಮೇಶ್ ಅವರಿಗೆ ಶುಭ ಕೋರಿದ್ದಾರೆ. ಈ ಎಪಿಸೋಡ್ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
ಸದ್ಯ, ಹಿಂದಿಯ 'ಕ್ವೀನ್' ಚಿತ್ರದ ಕನ್ನಡ ರೀಮೆಕ್ ಸಿನಿಮಾ 'ಬಟರ್ ಫ್ಲೈ'ಗೆ ರಮೇಶ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದಲ್ಲಿ ಸೆಂಚುರಿ ಸಿನಿಮಾ ಮಾಡಿರುವ ರಮೇಶ್ ಅರವಿಂದ್ ಅವರು ಬಗ್ಗೆ ಒಂದು ಸಣ್ಣ ಪರಿಚಯ. ಮುಂದೆ ಓದಿ...

ರಮೇಶ್ ಅರವಿಂದ್ ಖಾಸಗಿ ಜೀವನ
ನಟ-ನಿರ್ದೇಶಕ-ನಿರ್ಮಾಪಕ-ಬರಹಗಾರ-ಟಿವಿ ನಿರೂಪಕರಾಗಿರುವ ರಮೇಶ್ ಅವರು ಹುಟ್ಟಿದ್ದು ಸೆಪ್ಟೆಂಬರ್ 10, 1964. ಇಂಜಿನಿಯರಿಂಗ್ ಮುಗಿಸಿದ್ದ ಅವರು ಯಶಸ್ಸು ಕಂಡಿದ್ದು ಚಿತ್ರರಂಗದಲ್ಲಿ. ಪತ್ನಿ: ಅರ್ಚನಾ ಮತ್ತು ಇಬ್ಬರು ಮಕ್ಕಳು: ಅರ್ಜುನ್ ಮತ್ತು ನಿಹಾರಿಕ

ಸಿನಿಮಾ ಜರ್ನಿ ಆರಂಭ
ಮೊದಲ ಚಿತ್ರ: ಸುಂದರ ಸ್ವಪ್ನಗಳು (1986)
140ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ನಟನೆ.
'ಪುಷ್ಪಕ ವಿಮಾನ' ಕನ್ನಡದಲ್ಲಿ 100ನೇ ಸಿನಿಮಾ.

ದಿಗ್ಗಜ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯ
ಕೆ ಬಾಲಚಂದಿರ್, ಗೀತಪ್ರಿಯ, ಭಾರ್ಗವ, ಸುನಿಲ್ ಕುಮಾರ್ ದೇಸಾಯಿ, ಡಿ ರಾಜೇಂದ್ರ ಬಾಬು, ರಾಜೇಂದ್ರ ಸಿಂಗ್ ಬಾಬು ಅಂತಹ ನಿರ್ದೇಶಕರ ಚಿತ್ರಗಳಲ್ಲಿ ರಮೇಶ್ ಅರವಿಂದ್ ಅವರು ನಟಿಸಿದ್ದಾರೆ.

ನಿರ್ದೇಶಕರಾಗಿ ರಮೇಶ್
ರಾಮ ಶಾಮ ಭಾಮ ಚಿತ್ರದ ಮೂಲಕ ನಿರ್ದೇಶಕರಾದ ರಮೇಶ್, ಸತ್ಯವನ್ ಸಾವಿತ್ರಿ, ಆಕ್ಷಿಡೆಂಟ್, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್, ಉತ್ತಮ ವಿಲನ್, ಸುಂದರಾಂಗ ಜಾಣ, ಈಗ ಬಟರ್ ಫ್ಲೈ ಸಿನಿಮಾ ಡೈರೆಕ್ಟ್ ಮಾಡ್ತಿದ್ದಾರೆ.

ರಾಜ್ಯ ಪ್ರಶಸ್ತಿ ಲಭಿಸಿದೆ
ರಮೇಶ್ ಅವರ ಅಭಿನಯಕ್ಕೆ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ. ಅಮೆರಿಕಾ ಅಮೆರಿಕಾ (1996-97), ಹೂಮಳೆ (98-99). ತೆಲುಗಿನ ಲಿಟ್ಲ್ ಸೋಲ್ಜರ್ (1997) ಚಿತ್ರಕ್ಕಾಗಿ ಆಂಧ್ರ ಪ್ರದೇಶದ ರಾಜ್ಯ ನಂದಿ ಪ್ರಶಸ್ತಿ ಲಭಿಸಿದೆ. ಅಮೃತವರ್ಷಿಣಿ, ಹೂಮಳೆ ಚಿತ್ರಕ್ಕಾಗಿ ಫಿಲ್ಮಫೇರ್ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಚಿತ್ರಗಳು
ಪಂಚಮವೇದ, ಕೆಂಪು ಗುಲಾಬಿ, ಕರ್ಪೂರದ ಗೊಂಬೆ, ಅಮೆರಿಕಾ ಅಮೆರಿಕಾ, ಅಮೃತವರ್ಷಿಣಿ, ತುತ್ತಾ ಮುತ್ತಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ರಾಮ ಶಾಮ ಭಾಮ, ಪುಷ್ಪಕ ವಿಮಾನ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











