ಮನೆಯಲ್ಲೇ ಕೂತು 'ಬಹುಮಾನ' ಗೆಲ್ಲಬಹುದು, 'ಕೋಟ್ಯಧಿಪತಿ'ಯಿಂದ ಆಫರ್

By Bharath Kumar

Recommended Video

ಕನ್ನಡದ ಕೋಟ್ಯಧಿಪತಿಯ ಹೊಸ ಆಫರ್ ಕೇಳಿ..! | Filmibeat Kannada

'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಹಾಟ್ ಸೀಟ್ ನಲ್ಲಿ ಕೂತವರಿಗೆ ಮಾತ್ರ ಕೋಟಿ ಗೆಲ್ಲುವ ಅವಕಾಶ ಎಂದು ಬೇಸರ ಮಾಡಿಕೊಂಡಿದ್ದವರಿಗೆ, ಈಗ ಸ್ಟಾರ್ ಸುವರ್ಣ ವಾಹಿನಿ ಸಿಹಿ ಸುದ್ದಿ ಕೊಟ್ಟಿದೆ.

ಅದೇನ್ ಅಂದ್ರೆ, 'ಕನ್ನಡದ ಕೋಟ್ಯಧಿಪತಿ' ಶೋಗೆ ಭಾಗಿಯಾಗದೆ ನೀವು ಬಹುಮಾನ ಗೆಲ್ಲಬಹುದು. ಅಂತಹ ಅವಕಾಶ ನಿಮಗೆ ಈಗ ಸಿಗುತ್ತಿದೆ.

ಹೌದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದ್ರೆ, ಇದೇ ಸೋಮವಾರದಿಂದ ಕಾರ್ಯಕ್ರಮ ಪ್ರಸಾರವಾಗುವ ಸಮಯದಲ್ಲೇ, ಹಾಟ್ ಸೀಟ್ ನಲ್ಲಿ ಕುಳಿತವರಿಗೆ ಕೇಳಲಾಗುವ ಪ್ರಶ್ನೆಗಳು ಹಾಟ್ ಸ್ಟಾರ್ App ನಲ್ಲೂ ಸಿಗಲಿವೆ.

Kannadada kotyadhipati New plan

ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಪಾಯಿಂಟ್ಸ್ ಗಳಿಕೆಯಾಗುತ್ತೆ, ಸರಿ ಉತ್ತರ ಕೊಡುವವರಿಗೆ ಬಹುಮಾನ ಕೂಡ ಸಿಗಲಿದೆ. ಜುಲೈ 30ರಿಂದ 'ಹಾಟ್ ಸ್ಟಾರ್'ನಲ್ಲಿ ಕನ್ನಡದ ಕೋಟ್ಯಧಿಪತಿಯ ಪ್ರಶ್ನೆಗಳಿಗೆ ಯಾರೂ ಬೇಕಾದರು ಉತ್ತರಿಸಬಹುದು.

ಮೊದಲ 5 ಪ್ರಶ್ನೆಗಳಿಗೆ ಉತ್ತರಿಸಲು 30 ಸೆಕೆಂಡ್ ಕಲಾವಕಾಶ ಇರಲಿದೆ. 6-10 ಪ್ರಶ್ನೆಗಳಿಗೆ ಉತ್ತರಿಸಲು 60 ಸೆಕೆಂಡ್ ಕಾಲಾವಕಾಶ ಸಿಗಲಿದೆ. 11-15 ಪ್ರಶ್ನೆಗಳಿಗೆ ಉತ್ತರಿಸಲು ಯಾವುದೆ ಟೈಂ ಲಿಮಿಟ್ ಇಲ್ಲ. ಒಂದು ವೇಳೆ ಹಾಟ್ ಸೀಟ್ ನಲ್ಲಿ ಕುಳಿತಿರುವ ಸ್ಪರ್ಧಿ ನೀಡುವ ಉತ್ತರ ಸರಿಯಿದ್ದು ಮುಂದಿನ ಪ್ರಶ್ನೆಗೆ ಹೋದರೆ, App ನಲ್ಲಿ ಕಾಲಾವಕಾಶ ಕೊನೆಗೊಳ್ಳುತ್ತದೆ. ಪ್ರಶ್ನೆಗಳು ಕನ್ನಡದಲ್ಲಿ ಇರಲಿದ್ದು, ಉತ್ತರಿಸುವವರಿಗೆ ಯಾವುದೇ ವಯೋಮಿತಿ ಇರುವುದಿಲ್ಲ.

More from Filmibeat

English summary
kannadada kotyadhipathi season 3 has given New opportunity to viewers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X