ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಸು ಪಾತ್ರಧಾರಿ ಬದಲಾವಣೆ; ಸೌಮ್ಯ ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬಂದಿದ್ದಾರು?

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ಇದೀಗ ಕಂಠಿ ಅಕ್ಕನ ಪಾತ್ರ ಬದಲಾವಣೆ ಆಗಿದೆ. ಕಂಠಿ ಅಕ್ಕನ ಪಾತ್ರ ಮೊದಲ ಬಾರಿಗೆ ಬದಲಾವಣೆ ಏನು ಆಗುತ್ತಿಲ್ಲ. ಇದು ಎರಡನೇ ಬಾರಿಗೆ ಕಂಠಿ ಅಕ್ಕನ ಪಾತ್ರಧಾರಿಯ ಬದಲಾವಣೆಯಾಗುತ್ತಿದೆ.

ಹೌದು ಬಂಗಾರಮ್ಮನ ಮಗಳ ಪಾತ್ರದಲ್ಲಿ ಸೌಮ್ಯ ನಟಿಸುತ್ತಿದ್ದರು. ಇವರ ನಟನೆ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿತ್ತು. ಆದರೆ ಇದೀಗ ವಸು ಪಾತ್ರ ನಿರ್ವಹಿಸಲು ಬೇರೆ ನಟಿಯ ಆಗಮನ ಆಗಿದೆ . ಸೀರಿಯಲ್ ನಲ್ಲಿ ಕಂಠಿಯ ಅಕ್ಕನಾಗಿ ಚಂದ್ರು ಹೆಂಡತಿ ಆಗಿ ಉತ್ತಮವಾಗಿ ನಟನೆ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು.

 Kannadathi fame Deepashree to replace Sowmyas Vasu character in Puttakkana Makkalu serial

ಆದರೆ ಆ ನಟಿ ಮಾತ್ರ ಇದೀಗ ಇದ್ದಕ್ಕಿದ್ದ ಹಾಗೆ ಸೀರಿಯಲ್‌ನಲ್ಲಿ ಕಾಣಿಸದೆ ಇರುವುದನ್ನು ನೋಡಿದ ಸೌಮ್ಯ ಅಭಿಮಾನಿಗಳ ಮನದಲ್ಲಿ ಬೇಸರ ಮೂಡಿದೆ. ಇದೀಗ ಆ ಪಾತ್ರ ನಿರ್ವಹಿಸಲು ಕನ್ನಡತಿ ಧಾರವಾಹಿ ನಟಿ ದೀಪಾ ಶ್ರೀ ಎಂಟ್ರಿ ನೀಡಿದ್ದಾರೆ.

ಹೌದು ಇದೀಗ ಕನ್ನಡತಿ ಧಾರಾವಾಹಿಯ ದೀಪ ಶ್ರೀಯನ್ನು ವಸು ಪಾತ್ರದಲ್ಲಿ ನೋಡಿದ ಜನರು ನಮ್ಮ ಸೌಮ್ಯ ಎಲ್ಲಿ ಹೋದರು ಎಂದು ಕೇಳುತ್ತಿದ್ದಾರೆ. ಯಾಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ನಡೆದರು ಎಂಬುವುದು ಯಕ್ಷ ಪ್ರಶ್ನೆ ಆಗಿದೆ.

ಇದೀಗ ವಸು ಪಾತ್ರದಲ್ಲಿ ಕನ್ನಡತಿ ಧಾರಾವಾಹಿಯಲ್ಲಿ ನಟನೆ ಮಾಡಿದ ದೀಪಾ ಶ್ರೀ ನಟನೆ ಮಾಡುತ್ತಾ ಇದ್ದಾರೆ. ಕಂಠಿ ಜೊತೆಯಲ್ಲಿ ಇದೀಗ ತೆರೆ ಮೇಲೆ ದೀಪ ಶ್ರೀ ಬಂದಿದ್ದು ಆಯಿತು. ದೀಪ ಶ್ರೀ ನೋಡಿದ ಜನರು ಖುಷಿಯಾಗಿದ್ದಾರೆ. ಸೌಮ್ಯ ಅವರ ಅಭಿನಯ ನೋಡಿದ ಜನರು ಆಕೆಯ ಅಭಿನಯವನ್ನು ಬಹಳ ಮೆಚ್ಚಿಕೊಂಡಿದ್ದರು.

ಸೌಮ್ಯ 'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿಯಲ್ಲಿ ನಟನೆ ಮಾಡಿ ಜನರ ಮನ ಗೆದ್ದಿದ್ದರು. ಆ ಬಳಿಕ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಸು ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ದೀಪಾ ಶ್ರೀ ಅವರು ಕನ್ನಡತಿ ಧಾರವಾಹಿ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿದ್ದರು. ಕನ್ನಡತಿ ಧಾರವಾಹಿ ಆದ ಬಳಿಕ ಅವರು ಸ್ವಲ್ಪ ಸಮಯ ಬಿಡುವು ತೆಗೆದುಕೊಂಡು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ.

ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿ ಇತ್ತೀಚಿನ ದಿನಗಳಲ್ಲಿ ಬಹಳ ಕುತೂಹಲ ಮೂಡಿಸಿದೆ. ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿದ್ದಾರೆ. ಗೋಪಾಲ ನನಗೆ ಮೂವರು ಹೆಣ್ಣು ಮಕ್ಕಳು ಎಂದು ರಾಜಿ ಎಂಬವರನ್ನು ಮದುವೆ ಆಗುತ್ತಾನೆ . ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ಇನ್ನು ಸಹನಾ ಸ್ನೇಹಾ ಸುಮಾ ಅಮ್ಮನಿಗೆ ಸಾಥ್ ನೀಡುತ್ತಿದ್ದಾರೆ. ಇದೀಗ ಸ್ನೇಹಾ ಮದುವೆಗೆ ಭರದ ಸಿದ್ಧತೆ ನಡೆಯುತ್ತಿದೆ. ಒಂದೇ ಜಾಗದ ಎರಡು ಮಂಟಪದಲ್ಲಿ ಮದುವೆ ನಡೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕಂಠಿ ಹಾಗೂ ಸ್ನೇಹಾ ಮದುವೆ ಆಗುತ್ತಾರ ಎನ್ನುವುದು ಎಲ್ಲರ ಪ್ರಶ್ನೆ ಆಗಿದೆ.

More from Filmibeat

English summary
Kannadathi fame Deepashree to replace Sowmya's Vasu character in Puttakkana Makkalu serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X