ಧಾರಾವಾಹಿಯಿಂದ ಹೊರನಡೆದಿದ್ದ ನಿತ್ಯಾ ಗೌಡ: 'ಜೇನುಗೂಡು ಸೇರಿದ 'ಕನ್ನಡತಿ'ಯ ಅಮೃತಾ ಮೂರ್ತಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಧಾರಾವಾಹಿ ಉತ್ತಾರ ಕರ್ನಾಟಕ ಮಂದಿಯನ್ನು ಸೆಳೆಯುತ್ತಿದೆ. ಇದರಲ್ಲಿ ದಿಯಾ ಪಾತ್ರದಲ್ಲಿ ನಟಿಸುತ್ತಿದ್ದ ನಿತ್ಯಾ ಗೌಡ ಕಾರಣಾಂತರಗಳಿಂದ ದಿಢೀರನೇ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ವಿಷಯ ಕಿರುತೆರೆ ವೀಕ್ಷಕರಿಗೆ ಗೊತ್ತೇ ಇದೆ.
ಇದೀಗ ನಿತ್ಯಾ ಗೌಡ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷನ ಚಿಕ್ಕಪ್ಪನ ಮಗಳು ಸುಚಿ ಆಗಿ ನಟಿಸುತ್ತಿದ್ದ ಅಮೃತಾ ಮೂರ್ತಿ ಇದೀಗ ದಿಯಾ ಪಾತ್ರದಲ್ಲಿ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ.

ದಿಯಾ ಪಾತ್ರದಲ್ಲಿ ಅಮೃತಾ ಮೂರ್ತಿ
ನಿತ್ಯಾ ಗೌಡ ಜಾಗಕ್ಕೆ ಯಾರ ಬರುತ್ತಾರೋ ಅನ್ನೋ ಗೊಂದಲವಿತ್ತು. ಅದು ಈಗ ನಿವಾರಣೆಯಾಗಿದೆ. ಇಂದಿನಿಂದ (ಮೇ 19) 'ಜೇನುಗೂಡು' ಧಾರಾವಾಹಿಯಲ್ಲಿ ನಿತ್ಯಾ ಗೌಡ ಪಾತ್ರದಲ್ಲಿ ಅಮೃತಾ ಮೂರ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಆಫರ್ ಬಂದ ಮೂರು ದಿನಗಳಲ್ಲೇ ಫೈನಲ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಒಂದು ಧಾರಾವಾಹಿ ಮುಗಿದ ತಕ್ಷಣವೇ ಮತ್ತೊಂದು ಧಾರಾವಾಹಿ ಸಿಕ್ಕಿರುವುದು ಅದೃಷ್ಟ ಎಂದು ಭಾವಿಸಿದ್ದಾರೆ. ಇದೀಗ 'ಜೇನುಗೂಡು' ಧಾರಾವಾಹಿಯಲ್ಲಿ ದಿಯಾ ಪಾತ್ರದಲ್ಲಿ ನಟಿಸುವ ಉತ್ಸಾಹದಲ್ಲಿ ಇರುವುದಕ್ಕಾಗಿ ಅಮೃತಾ ಹೇಳಿಕೊಂಡಿದ್ದಾರೆ.
ಜೇನು ಶುರುವಾದಾಗಲೇ ಟ್ಯಾಗ್ ಮಾಡಿದ್ದ ವೀಕ್ಷಕರು
'ಜೇನುಗೂಡು' ಪ್ರಸಾರ ಆಗುವುದಕ್ಕೂ ಮುನ್ನ ಪ್ರೋಮೋವನ್ನು ಆರಂಭ ಮಾಡಿತ್ತು. ಆ ವೇಳೆ 'ಕನ್ನಡತಿ' ಧಾರಾವಾಹಿ ನೋಡುತ್ತಿದ್ದವರು ಸೋಶಿಯಲ್ ಮೀಡಿಯಾದಲ್ಲಿ 'ಜೇನುಗೂಡು' ಪಾತ್ರಕ್ಕೆ ಟ್ಯಾಗ್ ಮಾಡಿದ್ದರು. ಆ ವೇಳೆ ಇವರೇ ನಟಿಸುತ್ತಿದ್ದಾರೆಂದು ಭಾವಿಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರಂತೆ. ಆದರೆ, ಆ ವೇಳೆ ಯಾರೂ ಕಮೆಂಟ್ ಮಾಡುವುದಕ್ಕೆ ಹೋಗಿರಲಿಲ್ಲ.
ಅಮೃತಾ ಹಾಗೂ ದಿಯಾ ನಡುವೆ ಸಾಮ್ಯತೆ
ಈಗ ಅಮೃತಾ ನಿಜವಾಗಿಯೂ ದಿಯಾ ಪಾತ್ರದಲ್ಲಿ ತೆರೆಯ ಮೇಲೆ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕು ಅನ್ನೋದು ಇವರ ಆಸೆಯಾಗಿತ್ತು. ಅದರಂತೆ ಈಗ 'ಜೇನುಗೂಡು' ಧಾರಾವಾಹಿಯ ದಿಯಾ ಪಾತ್ರಕ್ಕೆ ಆಫರ್ ಬಂದಿದೆ. ಅಮೃತಾ ಮೂರ್ತಿ ಮತ್ತು ದಿಯಾ ಪಾತ್ರದ ನಡುವೆ ಅನೇಕ ಸಾಮ್ಯತೆಗಳಿವೆ. ವಿಶೇಷವಾಗಿ, ದಿಯಾಳ ತುಂಟಾಟದ ನಡವಳಿಕೆಯ ಪಾತ್ರ ಅಮೃತಾ ಮೂರ್ತಿಗೆ ಹೊಂದಾಣಿಕೆಯಾಗಿದೆ. ಏಕೆಂದರೆ, ನಿಜ ಜೀವನದಲ್ಲಿಯೂ ಅಮೃತಾ ಮೂರ್ತಿ ಸ್ವಭಾಗ ಹೀಗೆ ಇದೆಯಂತೆ.

ಅಮೃತಾ ಒಪ್ಪಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು
ಆರಂಭದಲ್ಲಿ, ವೀಕ್ಷಕರು ಅಮೃತಾರನ್ನು ಹೊಸದಾಗಿ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ, ಅವರಿಗೆ ಈ ಪಾತ್ರವನ್ನು ಚೆನ್ನಾಗಿ ಮಾಡುತ್ತಾರೆಂಬ ಅಚಲವಾದ ನಂಬಿಕೆಯಿದೆ. ಹೊಸ ಪಾತ್ರ ಎಂಟ್ರಿ ಕೊಟ್ಟಿರುವುದರಿದ ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆಂಬ ಆತಂಕ ತಂಡದಲ್ಲೂ ಇದೆ.


Click it and Unblock the Notifications











