Sara Annaiah: 'ಕನ್ನಡತಿ'ಯ ವರೂಧಿನಿ ಈಗ 'ನಮ್ಮ ಲಚ್ಚಿ' ಜೊತೆ ಪ್ರತ್ಯಕ್ಷ.. ಏನಿದು ಹೊಸ ಸುದ್ದಿ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ' ಮುಕ್ತಾಯವಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದಿದ್ದ 'ಕನ್ನಡತಿ' ಧಾರಾವಾಹಿಯು ಫೆಬ್ರವರಿ ತಿಂಗಳಿನಲ್ಲಿ ತನ್ನ ಪ್ರಸಾರ ನಿಲ್ಲಿಸಲಿದೆ ಎಂಬ ವಿಚಾರವೂ ಕೇಳಿ ಬರುತ್ತಿದೆ.

ಉತ್ತಮ ಪಾತ್ರವರ್ಗ ಹಾಗೂ ಪಾತ್ರಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ 'ಕನ್ನಡತಿ' ಧಾರಾವಾಹಿಯು ಇದ್ದಕ್ಕಿದ್ದಂತೆ ಮುಕ್ತಾಯವಾಗುತ್ತಿರೋ ಸುದ್ದಿ ವೀಕ್ಷಕರಿಗೆ ಬೇಸರ ತರಿಸಿರೋದಂತೂ ನಿಜ. ಆದರೆ ಇದರ ನಡುವೆ ಸಂತಸದ ಸುದ್ದಿಯೊಂದಿದೆ.

'ಲಚ್ಚಿ' ಜೊತೆ ವೆಡ್ಡಿಂಗ್ ಪ್ಲಾನರ್ ಎಂಟ್ರಿ

'ಲಚ್ಚಿ' ಜೊತೆ ವೆಡ್ಡಿಂಗ್ ಪ್ಲಾನರ್ ಎಂಟ್ರಿ

'ಕನ್ನಡತಿ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ವರೂಧಿನಿ ಆಗಿ ನಟಿಸುತ್ತಿರೋ ಸಾರಾ ಅಣ್ಣಯ್ಯ ಇದೀಗ ಮಗದೊಂದು ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇನ್ನು ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ನಮ್ಮ ಲಚ್ಚಿ' ಧಾರಾವಾಹಿಯ ಕಾಣಿಸಿಕೊಳ್ಳಲಿದ್ದಾರೆ ಎಂಬ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಆ ಮೂಲಕ ಒಂದು ಧಾರಾವಾಹಿ ಮುಗಿಯುವ ಮೊದಲೇ ಮಗದೊಂದು ಧಾರಾವಾಹಿಯ ಭಾಗವಾಗುವ ಅವಕಾಶ ಪಡೆದುಕೊಂಡಿದ್ದಾರೆ ಸಾರಾ ಅಣ್ಣಯ್ಯ.

ನಟಿಯಾಗಿ ಸಾರಾ ಮೋಡಿ

ನಟಿಯಾಗಿ ಸಾರಾ ಮೋಡಿ

ಮಾಡೆಲಿಂಗ್ ಆಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ಸಾರಾ ಅಣ್ಣಯ್ಯ ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿ ಸೈ ಎನಿಸಿಕೊಂಡ ಬೆಡಗಿ‌. ತದ ನಂತರ ಬೆಳ್ಳಿತೆರೆಯಲ್ಲಿ ಮಿಂಚುವ ಅದೃಷ್ಟ ಪಡೆದುಕೊಂಡ ಸಾರಾ ಅಣ್ಣಯ್ಯ 'ನಮ್ಮೂರ ಹೈಕ್ಳು' ಸಿನಿಮಾದಲ್ಲಿ ನಟಿಸಿದರು. ಮುಂದೆ ತಮಿಳು ಧಾರಾವಾಹಿಯಲ್ಲಿ ಅಭಿನಯಿಸಿದ್ದ ಈಕೆ ನಂತರ ಬದಲಾಗಿದ್ದು ವರೂಧಿನಿಯಾಗಿ.

ವರೂಧಿನಿ ಪಾತ್ರ ಫೇಮಸ್

ವರೂಧಿನಿ ಪಾತ್ರ ಫೇಮಸ್

"ವರೂಧಿನಿ ಪಾತ್ರ ನನಗೆ ನೀಡಿರುವಂತಹ ಜನಪ್ರಿಯತೆ ಅಷ್ಟಿಷ್ಟಲ್ಲ. ಇಂದು ಎಲ್ಲರೂ ನನ್ನನ್ನು ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ. ನಾನು ಈ ಪಾತ್ರವನ್ನು ಒಪ್ಪಿಕೊಂಡಾಗಲಂತೂ ಈ ಪಾತ್ರ ನನಗೆ ಹೆಸರು ತಂದುಕೊಡಬಹುದು ಎಂದು ಅಂದುಕೊಂಡಿರಲಿಲ್ಲ. ತುಂಬಾ ಖುಷಿಯಾಗುತ್ತಿದೆ" ಎಂದು ಸಾರಾ ಅಣ್ಣಯ್ಯ ಹೇಳಿಕೊಂಡಿದ್ದೂ ಇದೆ.

ಸಾರಾಗೂ ವರೂಧಿನಿಗೂ ಸಾಮ್ಯತೆ

ಸಾರಾಗೂ ವರೂಧಿನಿಗೂ ಸಾಮ್ಯತೆ

ವರೂಧಿನಿ ಪಾತ್ರಕ್ಕೂ ನನ್ನ ನಿಜ ಜೀವನಕ್ಕೂ ಕೆಲವು ವಿಚಾರಗಳಲ್ಲಿ ಹೋಲಿಕೆಯಿದೆ ಎಂದು ಹೇಳಬಹುದು. ವರೂಧಿನಿಯಂತೆ ನಾನು ಕೂಡಾ ಸ್ಟ್ರೈಟ್ ಫಾರ್ವರ್ಡ್ ಮಾತ್ರವಲ್ಲದೇ ಧೈರ್ಯವಂತೆ ಕೂಡಾ. ಜೊತೆಗೆ ವರೂಧಿನಿಯಂತೆ ನನಗೂ ವೃತ್ತಿ ಬದ್ಧತೆಯಿದೆ. ಬಹುಶಃ ಅದೇ ಕಾರಣದಿಂದ ನನಗೆ ವರೂಧಿನಿ ಪಾತ್ರದಲ್ಲಿ ಅಭಿನಯಿಸಲು ಕಷ್ಟವಾಗಲಿಲ್ಲ ಎನ್ನುತ್ತಾರೆ ಸಾರಾ ಅಣ್ಣಯ್ಯ.

ಧಾರಾವಾಹಿಯಲ್ಲಿ ನಟಿಸುತ್ತಿರೋ ಖುಷಿ

ಧಾರಾವಾಹಿಯಲ್ಲಿ ನಟಿಸುತ್ತಿರೋ ಖುಷಿ

'ನಮ್ಮೂರ ಹೈಕ್ಳು'ದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಾರಾ ಅಣ್ಣಯ್ಯ ಕಿರುತೆರೆ ಪಯಣವನ್ನು ಕೂಡಾ ಕನ್ನಡ ಧಾರಾವಾಹಿಯ ಮೂಲಕ ಮಾಡಬೇಕೆಂದು ಬಯಸಿದ್ದರು. ಆದರೆ ಸಾರಾ ಅವರ ಕಿರುತೆರೆ ಪಯಣ ಶುರುವಾಗಿದ್ದು ತಮಿಳು ಧಾರಾವಾಹಿಯ ಮೂಲಕ. ಮುಂದೆ ಕನ್ನಡ ಕಿರುತೆರೆಯಲ್ಲಿ ನಟಿಸುವ ಅವಕಾಶ ದೊರೆತಾಗ ಒಂದು ಕ್ಷಣ ಆಲೋಚನೆ ಮಾಡದೇ ಒಪ್ಪಿದ ಆಕೆ ವರೂಧಿನಿಯಾಗಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ತಡವಾಗಿ ಆದರೂ ಪರವಾಗಿಲ್ಲ, ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ ಖುಷಿಯಿದೆ" ಎನ್ನುತ್ತಾರೆ ಸಾರಾ ಅಣ್ಣಯ್ಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ನಮ್ಮ ಲಚ್ಚಿ' ಯಲ್ಲಿ ಸಾರಾ ಅಣ್ಣಯ್ಯ ನಟಿಸಲಿದ್ದು ಯಾವ ಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

More from Filmibeat

English summary
Kannadati Varudhini Fame Actress Sara Annaiah Will Act In Namma Lachchi Kannada Serial,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X