ಕಾಡಿನಲ್ಲಿ ಸೊಪ್ಪು ಹುಡುಕಿದ್ದ ನಟ ಕಿರುತೆರೆಗೆ ಎಂಟ್ರಿ:'ಕಾಂತಾರ'ದ ದೀಪಕ್ ರೈ ಈಗ 'ಗಟ್ಟಿಮೇಳ'ದ ಪೋಸ್ಟ್ ಮಾಸ್ಟರ್!
ಕನ್ನಡದ ಬ್ಲಾಕ್ ಬಾಸ್ಟರ್ ಸಿನಿಮಾ ಕಾಂತಾರ ಯಾರಿಗೆ ಗೊತ್ತಿಲ್ಲ ಹೇಳಿ? ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಅದ್ಭುತ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವವರು ನಟ ದೀಪಕ್ ರೈ ಪಾಣಜೆ. ಕನ್ನಡದಲ್ಲಿ ಬಿಡುಗಡೆಯಾಗಿ ಕೊನೆಗೆ ಪಾನ್ ಇಂಡಿಯಾ ಮೂವಿ ಆಗಿ ತೆರೆ ಕಂಡ ಕಾಂತರ ಸಿನಿಮಾದಲ್ಲಿ ಒಂದು ಫನ್ನಿ ರೋಲ್ ನಲ್ಲಿ ಕಾಣಿಸಿಕೊಂಡಿರುವ ನಟ ದೀಪಕ್ ರೈ ಪಾಣಾಜೆ ಅವರು ಇದೀಗ ಧಾರಾವಾಹಿಗೆ ಕಾಲಿಡುತ್ತಿದ್ದಾರೆ.
ಹೌದು! ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ'ಗಟ್ಟಿಮೇಳ'ದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ ದೀಪಕ್ ರೈ ಪಾಣಾಜೆ.ಪಾತ್ರ ಬಹಳ ದೊಡ್ಡದಲ್ಲದಿದ್ದರೂ ಬಹಳಷ್ಟು ಟ್ವಿಸ್ಟ್ ಗಳನ್ನು ಹೊಂದಿರುವ ಈ ಪಾತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಒಬ್ಬ ಪೋಸ್ಟ್ ಮಾಸ್ಟರ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟ ತಮ್ಮ ಅಭಿನಯ ಹಾಗೂ ಪಾತ್ರದ ಪ್ರಾಮುಖ್ಯತೆಯ ಮೂಲಕ ಧಾರಾವಾಹಿ ಹೊಸ ಟ್ವಿಸ್ಟ್‌ಗಳನ್ನು ಕೊಡಲಿದ್ದಾರೆ.
ಧಾರಾವಾಹಿ ಕಥೆಯಲ್ಲಿ ಈಗಾಗಲೇ ಬಹಳಷ್ಟು ವಿಚಾರಗಳು ನಡೆದಿದ್ದು ಇದೀಗ ಧಾರಾವಾಹಿ ಕಥಾನಾಯಕ ವೇದಾಂತ್ ತನ್ನ ಕಳೆದು ಹೋಗಿರುವ ತಂದೆಯ ಹುಡುಕಾಟದಲ್ಲಿದ್ದಾನೆ. ಪತ್ನಿ ಅಮೂಲ್ಯಳ ಸಹಾಯದಿಂದ ತಂದೆಯನ್ನು ಬೇರೆ ಬೇರೆ ರೀತಿಯಲ್ಲಿ ಹುಡುಕುವ ಪ್ರಯತ್ನ ಮಾಡುತ್ತಿರುವ ವೇದಾಂತನಿಗೆ ಪೋಸ್ಟ್ ಮಾಸ್ಟರ್ ಆಗಿ ಬರುವ ನಟ ದೀಪಕ್ ರೈ ಪಾಣಾಜೆ ಸಹಾಯ ಮಾಡಲಿದ್ದಾರೆ.

ಇದು ಇಷ್ಟೇ ಅಲ್ಲದೆ ಇವರ ಪಾತ್ರಕ್ಕೆ ಬೇರೆ ಒಂದಷ್ಟು ಪ್ರಾಮುಖ್ಯತೆಗಳು ಇದ್ದು ಇದು ಕಥೆಯಲ್ಲಿ ಬಹಳಷ್ಟು ಹೊಸ ತಿರುವುಗಳನ್ನು ನೀಡುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಕಳೆದು ಹೋಗಿರುವ ಸೂರ್ಯನಾರಾಯಣ ಅಂದರೆ ವೇದಾಂತನ ತಂದೆಯನ್ನು ಹುಡುಕಲು ನಿವೃತ್ತಿ ಹೊಂದಿರುವ ಪೋಸ್ಟ್ ಮಾಸ್ಟರ್ ಸಂಪಿಗೆಪುರದಲ್ಲಿ ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ ಹಾಗೂ ಅದರಿಂದ ಮುಂದೆ ಏನೆಲ್ಲ ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯಕ್ಕಂತೂ ಕನ್ನಡ ಕಿರುತೆರೆ ಪ್ರೇಕ್ಷಕರು ಅದರಲ್ಲೂ ಗಟ್ಟಿಮೇಳ ಧಾರಾವಾಹಿ ವೀಕ್ಷಕರು ಬಹಳಷ್ಟು ಕುತೂಹಲದಿಂದ ಈ ಎಲ್ಲ ತಿರುವುಗಳಿಗೆ ಕಾಯುತ್ತಿದ್ದಾರೆ. ಮಾತ್ರವಲ್ಲ ಇನ್ನು ಸೂರ್ಯನಾರಾಯಣ ಆಗಿ ಅದು ಯಾರು ಕಿರುತೆರೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲವೂ ಕೂಡಾ ಕಿರುತೆರೆ ವೀಕ್ಷಕರಿಗಿದೆ.


Click it and Unblock the Notifications











