ಕನ್ನಡದ ಚಾನೆಲ್‌ನಲ್ಲಿ ಕಾಂತಾರ ತುಳು ವರ್ಷನ್ ಪ್ರೀಮಿಯರ್; ದಿನಾಂಕ, ಸಮಯ ಪ್ರಕಟ

ಕಾಂತಾರ. ಮೊದಲಿಗೆ ಕನ್ನಡದಲ್ಲಿ ಮಾತ್ರ ತಯಾರಾಗಿ ಬಳಿಕ ಬೇಡಿಕೆ ಹೆಚ್ಚಿದ ಕಾರಣ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಗೊಂಡ ಚಿತ್ರ. ಹೌದು, ಕನ್ನಡದಲ್ಲಿ ದೊಡ್ಡ ಹಿಟ್ ಟಾಕ್ ಕೇಳಿಬಂದ ಕೂಡಲೇ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು.

ಇನ್ನು ಈ ಭಾಷೆಗಳಲ್ಲಿ ಮಾತ್ರವಲ್ಲದೆ ಇಟ್ಯಾಲಿಯನ್ ಹಾಗೂ ಸ್ಪಾನಿಷ್ ಭಾಷೆಗಳಿಗೂ ಸಹ ಕಾಂತಾರ ಚಿತ್ರವನ್ನು ಡಬ್ ಮಾಡಲಾಯಿತು. ಹೀಗೆ ಹಲವು ಭಾಷೆಗಳಿಗೆ ಡಬ್ ಆಗುತ್ತಿದ್ದ ತುಳು ಭಾಷೆ ಮಾತನಾಡುವ ನೆಲದ ಆಚರಣೆಯ ಅಂಶವನ್ನು ಒಳಗೊಂಡಿದ್ದ ಕಾಂತಾರ ಚಿತ್ರವನ್ನು ತುಳು ಭಾಷೆಗೂ ಸಹ ಡಬ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಅದರಂತೆ ತುಳು ಭಾಷೆಗೆ ಕಾಂತಾರ ಚಿತ್ರವನ್ನು ಡಬ್ ಮಾಡಲಾಯಿತು.

Kantara tulu version television premiere in Star Suvarna on April 15

ಇಷ್ಟು ದಿನಗಳ ಕಾಲ ಕಾಂತಾರ ತುಳು ವರ್ಷನ್ ಚಿತ್ರವನ್ನು ವೀಕ್ಷಿಸಬೇಕೆಂದರೆ ಚಿತ್ರ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಲಭ್ಯವಿತ್ತು. ಆದರೆ ಈಗ ಈ ಚಿತ್ರದ ಟಿವಿ ಪ್ರೀಮಿಯರ್‌ಗೆ ತಯಾರಿಯನ್ನು ನಡೆಸಲಾಗಿದ್ದು, ಯಾವ ಚಾನೆಲ್‌ನಲ್ಲಿ ಯಾವ ದಿನದಂದು ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ಸಹ ಬಹಿರಂಗಪಡಿಸಲಾಗಿದೆ.

ಹೌದು, ಕನ್ನಡದ ಚಾನೆಲ್ ಆದ ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಇದೇ ಏಪ್ರಿಲ್ 15ಕ್ಕೆ ಮಧ್ಯಾಹ್ನ 1 ಗಂಟೆಗೆ ತುಳು ಜನರ ಹೊಸ ವರ್ಷವಾದ ಬಿಸು ಪರ್ಬದ ಪ್ರಯುಕ್ತ ಪ್ರಸಾರ ಮಾಡಲಾಗುವುದು ಎಂಬ ಈಗಾಗಲೇ ಪ್ರೋಮೊ ಹರಿದಾಡುತ್ತಿದೆ. ಸದ್ಯ ಈ ಸುದ್ದಿ ತುಳು ಭಾಷೆ ಮಾತನಾಡುವ ಜನರಿಗೆ ಖುಷಿ ತಂದಿದೆ.

ಕೆಲ ನೆಟ್ಟಿಗರು ಈ ಕುರಿತು ವಿರೋಧವನ್ನೂ ಸಹ ವ್ಯಕ್ತಪಡಿಸಿದ್ದಾರೆ. ಕನ್ನಡದ ಚಾನೆಲ್‌ನಲ್ಲಿ ಏಕೆ ತುಳು ವರ್ಷನ್ ಚಿತ್ರವನ್ನು ಪ್ರಸಾರ ಮಾಡಬೇಕು, ತುಳುವಿಗೆಂದೇ ಪ್ರತ್ಯೇಕ ಚಾನೆಲ್‌ಗಳಿವೆ ಅಲ್ಲಿ ಈ ಚಿತ್ರವನ್ನು ಪ್ರಸಾರ ಮಾಡಬಹುದಲ್ಲಾ ಎಂದು ಕಾಮೆಂಟ್ ಮಾಡಿ ಕಾಂತಾರ ತುಳು ಪ್ರದರ್ಶನಕ್ಕೆ ಕಿಡಿಕಾರಿದ್ದಾರೆ.

ಇನ್ನೂ ಕೆಲವರು ಇದರ ಪರ ಬ್ಯಾಟ್ ಬೀಸಿದ್ದು, ತುಳು ನಮ್ಮದೇ ರಾಜ್ಯದ ಒಂದು ಭಾಷೆ. ಹೀಗಿರುವಾಗ ಆ ಭಾಷೆಯ ವರ್ಷನ್‌ನ ಚಿತ್ರವೊಂದನ್ನು ಕನ್ನಡದ ಚಾನೆಲ್‌ನಲ್ಲಿ ಪ್ರಸಾರ ಮಾಡಿದರೆ ತಪ್ಪೇನು ಎಂದು ಕಾಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆ ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ಕಾಂತಾರ ತುಳು ವರ್ಷನ್‌ಗೆ ವ್ಯಕ್ತವಾಗಿದೆ.

ಇನ್ನು ಕಾಂತಾರ ಚಿತ್ರ ಕಳೆದ ವರ್ಷ ಅತಿಹೆಚ್ಚು ಲಾಭ ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. ಕೇವಲ 16 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಚಿತ್ರ 410 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್‌ನಲ್ಲಿ ಮಾಡಿತ್ತು. ಇನ್ನು ಕಾಂತಾರ ಚಿತ್ರ ಬೆಂಗಳೂರಿನ ಏಳು ಪಿವಿಆರ್ ಸೇರಿದಂತೆ ರಾಜ್ಯದ ಬರೋಬ್ಬರಿ 37 ಚಿತ್ರಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿತ್ತು ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದರು. 170 ಚಿತ್ರಮಂದಿರಗಳಲ್ಲಿ ಕಾಂತಾರ 75 ದಿನಗಳನ್ನು ಪೂರೈಸಿತ್ತು ಎಂದೂ ಸಹ ತಿಳಿಸಲಾಗಿತ್ತು. ಅಷ್ಟೇ ಅಲ್ಲದೇ ಬಿಡುಗಡೆಗೊಂಡ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ 49 ದಿನಗಳನ್ನು ಪೂರೈಸಿದ್ದ ಕಾಂತಾರ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿತ್ತು.

More from Filmibeat

English summary
Kantara tulu version television premiere in Star Suvarna on April 15. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X