For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿ ಕಾರ್ ಡಿಸೈನರ್ ವಿರುದ್ಧ 5.7ಕೋಟಿ ರೂ.ವಂಚನೆ ಆರೋಪ ಮಾಡಿದ ಕಪಿಲ್ ಶರ್ಮಾ

  By ಫಿಲ್ಮ್ ಡೆಸ್ಕ್
  |

  ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಸೆಲೆಬ್ರಿಟಿ ಕಾರ್ ಡಿಸೈನರ್ ಮತ್ತು ತಯಾರಕ ದಿಲೀಪ್ ಛಾಬ್ರಿಯಾ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಈ ಸಂಬಂಧ ನಿನ್ನೆ (ಜನವರಿ 07) ಮುಂಬೈ ಕ್ರೈಂ ಬ್ರ್ಯಾಂಚ್ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

  ವಿಚಾರಣೆ ಬಳಿಕ ದಿಲೀಪ್ ವಿರುದ್ಧ ಹೊಸ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಕಪಿಲ್ ಶರ್ಮಾ, ದಿಲೀಪ್ ಛಾಬ್ರಿಯಾ 5.7 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಸ್ಟಮೈಸ್ ಮಾಡಿದ ಹೊಸ ವ್ಯಾನಿಟಿ ವ್ಯಾನ್ ನೀಡುವುದಾಗಿ ಹೇಳಿದ್ದ ದಿಲೀಪ್ ಗೆ 5.7ಕೋಟಿ ರೂ. ಕೊಟ್ಟಿರುವುದಾಗಿ ಕಪಿಲ್ ಶರ್ಮಾ ದೂರಿದ್ದಾರೆ.

  ವಂಚನೆ ಪ್ರಕರಣ: ಕಪಿಲ್ ಶರ್ಮಾಗೆ ಮುಂಬೈ ಪೊಲೀಸರ ಸಮನ್ಸ್ವಂಚನೆ ಪ್ರಕರಣ: ಕಪಿಲ್ ಶರ್ಮಾಗೆ ಮುಂಬೈ ಪೊಲೀಸರ ಸಮನ್ಸ್

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪರಾದ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್, ' ಪ್ರಾಥಮಿಕ ವಿಚಾರಣೆಯಲ್ಲಿ ವಂಚನೆ ಮತ್ತು ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಗೊತ್ತಾಗುತ್ತಿದೆ. ನಾವು ಎಫ್ ಐ ಆರ್ ದಾಖಲಿಸುತ್ತೇವೆ' ಎಂದು ಹೇಳಿದ್ದಾರೆ.

  2017ರಲ್ಲಿ ಹೊಸ ವ್ಯಾನಿಟಿ ವ್ಯಾನ್ ನೀಡುವುದಾಗಿ ಮಾತುಕತೆ ನಡೆದಿತ್ತು. ಆ ಸಮಯದಲ್ಲಿ 5.7 ಕೋಟಿ ರೂ. ಆದರೆ ಇದುವರೆಗೂ ವ್ಯಾನಿಟಿ ವ್ಯಾನ್ ಇನ್ನೂ ತಲುಪಿಸಿಲ್ಲ. ಅಲ್ಲದೇ ಪಾರ್ಕಿಂಗ್ ಶುಲ್ಕವಾಗಿ ಹೆಚ್ಚಿನ ಹಣವನ್ನು ಪಡೆದಿದ್ದಾರೆ ಎಂದು ದಿಲೀಪ್ ವಿರುದ್ಧ ಕಪಿಲ್ ಆರೋಪಿಸಿದ್ದಾರೆ.

  2020ರಲ್ಲಿ ಸೆಲೆಬ್ರಿಟಿ ಡಿಸೈನರ್ ದಿಲೀಪ್ ಅವರನ್ನು ಖೋಟಾ ಮತ್ತು ವಂಚನೆ ಪ್ರಕರಣದಲ್ಲಿ ಬಂಧಸಲಾಗಿದೆ. ಬಂಧನಕ್ಕೊಳಗಾದ ದಿಲೀಪ್ ನಿಂದ ಮುಂಬೈ ಪೊಲೀಸರು ಕೆಲವು ಕಾರುಗಳನ್ನು ವಶಪಡಿಸಿಕೊಂಡಿದ್ದು, ಆತ ಕಾರುಗಳ ನೋಂದಾವಣಿಯಲ್ಲಿ ಸಹ ವಂಚನೆ ಎಸಗಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.

  English summary
  Comedian Kapil Sharma alleges dilip chhabria cheated him of Rs 5.7 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X