For Quick Alerts
  ALLOW NOTIFICATIONS  
  For Daily Alerts

  5 ನಿಮಿಷ ಕಾರ್ಯಕ್ರಮ ನೀಡಲು ಈ ನಟನಿಗೆ 5 ಲಕ್ಷ ಸಂಭಾವನೆ!

  |

  ಹಿಂದಿ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಬಹಳ ಯಶಸ್ವಿ ಶೋ ಅಂದ್ರೆ ಕಪಿಲ್ ಶರ್ಮಾ ಶೋ. ಬರಿ ವೀಕ್ಷಕರಿಂದ ಮಾತ್ರವಲ್ಲ, ಬಾಲಿವುಡ್ ತಾರೆಯರು ಹೆಚ್ಚು ಇಷ್ಟ ಪಡುವ ಕಾರ್ಯಕ್ರಮ ಇದು.

  ಸ್ಟಾರ್ ನಟರ ಹೊಸ ಚಿತ್ರಗಳನ್ನು ಪ್ರಚಾರ ಮಾಡುವುದಕ್ಕೆ ಕಪಿಲ್ ಶರ್ಮಾ ಶೋ ಉತ್ತಮ ವೇದಿಕೆ. ಹಾಗಾಗಿ ಟಿ ಆರ್ ಪಿ ಪಟ್ಟಿಯಲ್ಲಿ ಟಾಪ್ 10ರ ಒಳಗಿದೆ. ಇತ್ತೀಚಿಗಷ್ಟೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 100 ಎಪಿಸೋಡ್ ಗೆ ಅತಿಥಿಯಾಗಿ ಆಗಮಿಸಿದ್ದರು.

  ನನ್ನ ಮತ್ತು ಕಪಿಲ್ ಶರ್ಮಾ ನಡುವೆ ಯಾವುದು ಮುನಿಸು ಇಲ್ಲ ಎಂದ ಕೃಷ್ಣ ಅಭಿಷೇಕ್ನನ್ನ ಮತ್ತು ಕಪಿಲ್ ಶರ್ಮಾ ನಡುವೆ ಯಾವುದು ಮುನಿಸು ಇಲ್ಲ ಎಂದ ಕೃಷ್ಣ ಅಭಿಷೇಕ್

  ಆ ವೇಳೆ ಕಾರ್ಯಕ್ರಮದಲ್ಲಿ ನಟಿಸುವ ಕಲಾವಿದನೊಬ್ಬನ ಸಂಭಾವನೆ ವಿಚಾರ ಬಹಿರಂಗವಾಗಿದೆ. ಈ ಕಲಾವಿದನ ಸಂಭಾವನೆ ನೋಡಿ ಹಿಂದಿಯ ಕಿರುತೆರೆ ಲೋಕವನ್ನು ಅಚ್ಚರಿಯಿಂದ ನೋಡುವಂತಾಗಿದೆ.

  ಹೌದು, ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳುವ ಚಂದನ್ ಗೆ 5 ನಿಮಿಷದ ಕಾರ್ಯಕ್ರಮ ನೀಡಲು 5 ಲಕ್ಷ ಸಂಭಾವನೆ ಕೊಡಲಾಗುತ್ತಿದೆಯಂತೆ. ಅಂದ್ರೆ ಒಂದು ನಿಮಿಷಕ್ಕೆ ಒಂದು ಲಕ್ಷ. ಇದನ್ನು ಖುದ್ದು ಅಕ್ಷಯ್ ಕುಮಾರ್ ಅವರೇ ಚಂದನ್ ಅವರ ಕಾಂಟ್ರ್ಯಾಕ್ಟ್ ಪೇಪರ್ ನೋಡಿ ಹೇಳಿದ್ದಾರೆ.

  ಈ ಹಿಂದೆ ಉದಿತ್ ನಾರಾಯಣ್ ಈ ಶೋಗೆ ಬಂದಿದ್ದ ವೇಳೆ ಕಪಿಲ್ ಶರ್ಮಾ ಸಂಭಾವನೆ ಬಗ್ಗೆ ಬಹಿರಂಗಪಡಿಸಿದ್ದರು. ಕಪಿಲ್ ಶರ್ಮಾ ಒಂದು ಎಪಿಸೋಡ್ ಗೆ 1 ಕೋಟಿ ಚಾರ್ಜ್ ಮಾಡ್ತಾರಂತೆ.

  English summary
  Kapil Sharma show fame Chandan charges 5 lakh per 5 min performance in the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X