Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದು ಟ್ವೀಟ್‌ನಿಂದ ಲಕ್ಷಾಂತರ ಹಣ ಕಳೆದುಕೊಂಡ ಕತೆ ಹೇಳಿದ ಕಪಿಲ್ ಶರ್ಮಾ
ಕಪಿಲ್ ಶರ್ಮಾ ಹಿಂದಿ ಟಿವಿ ಜಗತ್ತಿನ ದೊಡ್ಡ ಸೆಲೆಬ್ರಿಟಿ. ಅವರ ಟಾಕ್ ಶೋ ಬಹಳ ದೊಡ್ಡ ಜನಪ್ರಿಯತೆ ಗಳಿಸಿದ್ದು, ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಸಹ ತಮ್ಮ ಸಿನಿಮಾದ ಪ್ರಚಾರಕ್ಕೆ ಕಪಿಲ್ ಶರ್ಮಾರ ಟಾಕ್ ಶೋಗೆ ಅತಿಥಿಗಳಾಗಿ ಹೋಗಿದ್ದಿದೆ.
ಇಂದು ಕಪಿಲ್ ಒಂದೊಂದು ಶೋಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರು ಈ ಹಂತಕ್ಕೆ ಏರಲು ಸಾಕಷ್ಟು ಶ್ರಮಪಟ್ಟಿದ್ದಾರೆ ಸಹ. ಖ್ಯಾತಿಯ ಉತ್ತುಂಗಕ್ಕೇರಿದ ಕಪಿಲ್ ಶರ್ಮಾ ಮೇಲೆ ಬಿಜೆಪಿ ಬೆಂಬಲಿಗರು ಒಮ್ಮೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಒಂದು ಟ್ವೀಟ್ ಅಷ್ಟೆ.
ಕಪಿಲ್ ಶರ್ಮಾ ಮಾಡಿದ ಒಂದು ಟ್ವೀಟ್‌ನಿಂದಾಗಿ ದೊಡ್ಡ ವಿವಾದವೇ ಆಗಿತ್ತು. ಕಪಿಲ್ ಶರ್ಮಾ ಮೇಲೆ ಬಿಜೆಪಿ ಬೆಂಬಲಿಗರು ಮಾತ್ರವಲ್ಲ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮುಗಿಬಿದ್ದಿದ್ದರು. ಒಂದು ಟ್ವೀಟ್‌ನಿಂದ ಲಕ್ಷಾಂತರ ರುಪಾಯಿ ಹಣವನ್ನೂ ಕಪಿಲ್ ಕಳೆದುಕೊಂಡಿದ್ದರು. ಇದೀಗ ನೆಟ್‌ಫ್ಲಿಕ್ಸ್‌ಗಾಗಿ 'ಐ ಆಮ್ ನಾಟ್ ಡನ್ ಯೆಟ್' ಹೆಸರಿನ ಹೊಸ ಶೋ ನಡೆಸಿಕೊಡುತ್ತಿರುವ ಕಪಿಲ್ ಶರ್ಮಾ, ತಮ್ಮ ಆ ಟ್ವೀಟ್ ಬಗ್ಗೆ ಮಾತನಾಡಿದ್ದಾರೆ.

ಮೋದಿಗೆ ಟ್ವೀಟ್ ಮಾಡಿದ್ದ ಕಪಿಲ್
ಕಪಿಲ್ ಶರ್ಮಾ ಮುಂಬೈನಲ್ಲಿ ಕಚೇರಿ ನಿರ್ಮಾಣಕ್ಕೆ ಯತ್ನಿಸುತ್ತಿದ್ದರು, ಮುಂಬೈ ಮಹಾನಗರ ಪಾಲಿಕೆಯವರು ಲಂಚ ಕೇಳಿದರೆಂದು ನೇರವಾಗಿ ಮೋದಿಗೆ ಟ್ವೀಟ್ ಮಾಡಿದ್ದರು ಕಪಿಲ್. ಮಧ್ಯ ರಾತ್ರಿ ಕುಡಿದ ಮತ್ತಿನಲ್ಲಿ ಕಪಿಲ್ ಮಾಡಿದ್ದ ಟ್ವೀಟ್‌ಗಳು ಬೆಳಗಾಗುವಷ್ಟರಲ್ಲಿ ವೈರಲ್ ಆಗಿದ್ದವು. ''ನಾನು ಕಳೆದ ಐದು ವರ್ಷದಿಂದ 15 ಕೋಟಿ ತೆರಿಗೆ ಕಟ್ಟಿದ್ದೀನಿ. ಹಾಗಿದ್ದರೂ ಮುಂಬೈ ಮಹಾನಗರ ಪಾಲಿಕೆಗೆ 5 ಲಕ್ಷ ಲಂಚ ಕೊಡಬೇಕಾಗಿ ಬಂದಿದೆ'' ಎಂದು ಟ್ವೀಟ್ ಮಾಡಿ ಅದನ್ನು ಮೋದಿಗೆ ಟ್ಯಾಗ್ ಮಾಡಿದ್ದರು. ಕಪಿಲ್ ಟ್ವೀಟ್ ಮಾಡಿದಾಗ ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿತ್ತು. ಇದರಿಂದ ಬಿಜೆಪಿಗರು ಕಪಿಲ್ ವಿರುದ್ಧ ತಿರುಗಿ ಬಿದ್ದರು, ಬಿಎಂಸಿ ಸಹ ಕಪಿಲ್ ಶರ್ಮಾ ಕಟ್ಟಲು ಹೊರಟಿದ್ದ ಕಚೇರಿಗೆ ಅಡ್ಡಿ ಮಾಡಿತು. ಆದಾಯ ತೆರಿಗೆ ಇಲಾಖೆಯವರು ಕಪಿಲ್ ಶರ್ಮಾ ನಿವಾಸದ ಮೇಲೆ ರೇಡ್ ಮಾಡಿದರು.

ಲಕ್ಷಾಂತರ ಹಣ ಕಳೆದುಕೊಂಡ ಕಪಿಲ್
ತಾನು ಮಾಡಿದ ಟ್ವೀಟ್‌ನಿಂದ ಆದ ನಷ್ಟದ ಬಗ್ಗೆ ನೆಟ್‌ಫ್ಲಿಕ್ಸ್‌ನ ಶೋ ನಲ್ಲಿ ಮಾತನಾಡಿರುವ ಕಪಿಲ್, ಆ ಟ್ವೀಟ್ ಮಾಡಿದ ಬಳಿಕ ಆದ ಟ್ರೋಲ್‌ಗಳಿಂದ ಬಚಾವಾಗಲು ನಾನು ಮಾಲ್ಡೀವ್ಸ್‌ಗೆ ಹೊರಟುಬಿಟ್ಟೆ. ಅಲ್ಲಿ ಒಂದು ಹೋಟೆಲ್‌ಗೆ ಹೋಗಿ, ನನಗೆ ಇಂಟರ್ನೆಟ್ ಇಲ್ಲದೇ ಇರುವ ರೂಂ ಕೊಡಿ ಎಂದು ಕೇಳಿದೆ. ಆತ ಸರ್ ನೀವು ಮದುವೆ ಆಗಿ ಹೆಂಡತಿಯಿಂದ ತಪ್ಪಿಸಿಕೊಂಡು ಬಂದಿದ್ದೀರ? ಎಂದು ಕೇಳಿದ ಇಲ್ಲಪ್ಪ ನಾನು ಟ್ವೀಟ್ ಮಾಡಿ ಬಂದಿದ್ದೇನೆ ಎಂದೆ. ಆ ಮಾಲ್ಡೀವ್ಸ್ ಟ್ರಿಪ್ ಹಾಗೂ ಹೋಟೆಲ್ ಬಾಡಿಗೆ ಎಲ್ಲ 9 ಲಕ್ಷ ವೆಚ್ಚವಾಯಿತು. ನನ್ನ ಶಿಕ್ಷಣಕ್ಕೆ ನಾನು ಇಷ್ಟು ಖರ್ಚು ಮಾಡಿರಲಿಲ್ಲ. ಒಂದು ಟ್ವೀಟ್‌ನಿಂದಾಗಿ ಇಷ್ಟೆಲ್ಲ ಹಣ ಖರ್ಚು ಮಾಡಬೇಕಾಗಿ ಬಂತು'' ಎಂದಿದ್ದಾರೆ ಕಪಿಲ್.

''ಕುಡಿದು ಮಾಡಿದ ಟ್ವೀಟ್ ಎಂದು ಹಾಕಿದ್ದರೆ ಸಾಕಿತ್ತು''
ಮುಂದುವರೆದ ಮಾತನಾಡಿರುವ ಕಪಿಲ್, ''ನಾನು ಟ್ವಿಟ್ಟರ್ ಅವರ ಮೇಲೆ ದೂರು ನೀಡೋಣ ಎಂದಿದ್ದೇನೆ. ರಾಜಕಾರಣಿಗಳು ಟ್ವೀಟ್ ಮಾಡಿದಾಗ ಅದರ ಕೆಳಗೆ 'ಮ್ಯಾನುಪಿಲೇಟೆಡ್ ಟ್ವೀಟ್' ಎಂದು ಹಾಕುತ್ತಾರೆ. ಹಾಗೆಯೇ ಅಂದು ನಾನು ಟ್ವೀಟ್ ಮಾಡಿದಾಗ 'ಕುಡಿದು ಮಾಡಲಾದ ಟ್ವೀಟ್' ಎಂದು ಹಾಕಬಹುದಿತ್ತಲ್ಲ. ಅದರಿಂದ ನೋಡಿ ನನಗೆ ಎಷ್ಟೆಲ್ಲ ನಷ್ಟವಾಯಿತು ಎಂದಿದ್ದಾರೆ ಕಪಿಲ್. ''ನಾನು ಯಾವುದೋ ಒಂದು ವಿಷಯವನ್ನು ರಾತ್ರಿ ಮಾತನಾಡಿದ್ದೇನೆಂದರೆ ನೀವು ಸಹ ನನ್ನೊಂದಿಗೆ ರಾತ್ರಿಯೇ ಮಾತನಾಡಿ ವಿಷಯ ಅಲ್ಲಿಗೆ ಮುಗಿಸಿ, ಯಾಕೆಂದರೆ ಬೆಳಿಗ್ಗೆ ಎದ್ದ ಮೇಲೆ ನನ್ನ ಆದರ್ಶಗಳು, ನಿಯಮಗಳು ಎಲ್ಲ ಬದಲಾಗಿಬಿಡುತ್ತವೆ'' ಎಂದು ತಮ್ಮ ಬಗ್ಗೆಯೇ ತಮಾಷೆ ಮಾಡಿಕೊಂಡಿದ್ದಾರೆ ಕಪಿಲ್.

ನಾನು ಮಾಡಿದ ಟ್ವೀಟ್ ಅಲ್ಲ ಎಂದ ಕಪಿಲ್!
ಮುಂದುವರೆದು ಮಾತನಾಡಿರುವ ಕಪಿಲ್ ಶರ್ಮಾ, ''ವಿವಾದ ಹುಟ್ಟುಹಾಕಿದ ಆ ಟ್ವೀಟ್‌ಗಳೆಲ್ಲವನ್ನೂ ನಾನು ಮಾಡಿರಲಿಲ್ಲ. ಕೆಲವನ್ನು 'ಜಾಕ್ ಡ್ಯಾನಿಯಲ್' ಮಾಡಿದ್ದ, ಕೆಲವನ್ನು 'ಜಾನಿ ವಾಕರ್' ಮಾಡಿದ್ದ. ಆದರೆ ಕೆಲವು ಟ್ವೀಟ್‌ಗಳು 'ಆಬ್ಸಲ್ಯೂಟ್' ಆಗಿ ನನ್ನವೇ ಆಗಿದ್ದವು. ಆದರೂ ಇಂಥಹಾ ಸಣ್ಣ ಪುಟ್ಟ ವಿಷಯಗಳಿಗೆ ಯಾವುದೇ ಕಲಾವಿದನನ್ನು ನೀವು 'ಬ್ಲಾಕ್ ಲೇಬಲ್' ಕ್ಷಮಿಸಿ ಬ್ಲಾಕ್ ಲಿಸ್ಟ್ ಮಾಡುವುದು ಸರಿಯಲ್ಲ'' ಎಂದಿದ್ದಾರೆ ಕಪಿಲ್. ಆದರೆ ಕಪಿಲ್ ಹೆಸರಿಸಿರುವ 'ಜಾಕ್ ಡ್ಯಾನಿಯಲ್', 'ಜಾನಿ ವಾಕರ್', 'ಆಬ್ಸಲ್ಯೂಟ್', ಬ್ಲಾಕ್ ಲೇಬಲ್'ಗಳು ಮದ್ಯದ ಬ್ರ್ಯಾಂಡ್‌ನ ಹೆಸರುಗಳು. ತಾವೇ ಮದ್ಯ ಕುಡಿದು ಆ ಟ್ವೀಟ್‌ಗಳನ್ನು ಮಾಡಿದ್ದಾಗಿ ತಮಾಷೆಯ ಧಾಟಿಯಲ್ಲಿ ಕಪಿಲ್ ಹೇಳಿಕೊಂಡರು.