ಯಾರು ಭರತ್ ನಿಮ್ ಹುಡ್ಗಿ ಅಂದ್ರೆ, ನಿಮ್ಗೆ ಯಾಕ್ ಬೇಕದು ಅನ್ನೋದಾ ಸಿಂಚನಾಗೆ?
'ಕರಿಮಣಿ' ಧಾರಾವಾಹಿಯಲ್ಲಿ ಕರ್ಣ ಒಂದು ರೀತಿಯಲ್ಲಿ ಆಕರ್ಷಣೆಯಾದರೆ, ಅವನ ತಮ್ಮ ಭರತ್ ಇನ್ನೊಂದು ರೀತಿಯಲ್ಲಿ ಗಮನ ಸೆಳೆಯುತ್ತಾರೆ. ರಾಮನನ್ನು ಕಾಯುವ ಲಕ್ಷ್ಮಣನಂತೆ ಕರ್ಣನ ಜೊತೆಗೆ ಕಾವಾಲಾಗಿ ಇರುತ್ತಾನೆ. ಅಣ್ಣನ ಪ್ರೀತಿಗೂ ಇವನೇ ಕಾವಲುಗಾರ. ಭರತ್ ಒಬ್ಬ ಅಣ್ಣನ ಜೊತೆಗಿದ್ದರೆ ಕರ್ಣನಿಗೆ ಬೇರೆ ಯಾವ ಫ್ರೆಂಡ್ ಅಗತ್ಯವೇ ಇಲ್ಲ. ಅಷ್ಟು ಅನ್ಯೋನ್ಯತೆ ಇಬ್ಬರ ನಡುವೆ ಇದೆ.
ಧಾರಾವಾಹಿ ನೋಡುವಾಗ ಎಲ್ಲರಿಗೂ ಇಂತಹ ತಮ್ಮ ಇರಬೇಕು ಎನಿಸದೇ ಇರಲಾರದು. ಗಂಡು ಮಕ್ಕಳಿಗೆಲ್ಲ ಇಂತೊಬ್ಬ ತಮ್ಮ ಬೇಕು ಎನಿಸಿದರೆ, ಹೆಣ್ಣು ಮಕ್ಕಳಿಗೆಲ್ಲ ಇಂಥ ಹುಡುಗ ಸಿಗಬಾರದಾ ಎಂಬ ಫೀಲ್. ಅಷ್ಟು ಕ್ಯೂಟ್ ಈ ಭರತ್. ಹಾಗಾದ್ರೆ ರಿಯಲ್ ಲೈಫ್‌ನಲ್ಲಿ ಭರತ್ ಹೇಗಿದ್ದಾರೆ..? ಎಷ್ಟು ಫನ್ನಿ ಎಂಬೆಲ್ಲಾ ಮಾಹಿತಿ ಮುಂದೆ ಇದೆ ಓದಿ.

ಚಾಕಲೇಟ್ ಹೀರೋ ಭರತ್
ಭರತ್ ನಿಜವಾದ ಹೆಸರು ರಜನೀಶ್. ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಆಗಿದ್ದಾರೆ. ಲುಕ್ ವೈಸ್ ಪಕ್ಕ ಚಾಕಲೇಟ್ ಬಾಯ್ ಥರ ಇದ್ದಾರೆ. ಸ್ಪುರದ್ರೂಪಿ, ಸುಂದರವಾದ ರಜನೀಶ್‌ಗೆ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಅವರು ಹಾಕುವ ಒಂದೊಂದು ಪೋಸ್ಟ್‌ಗೂ ಕಮೆಂಟ್ಸ್, ಲೈಕ್ಸ್ ಸಿಕ್ಕಾಪಟ್ಟೆ ಬರ್ತಾ ಇರ್ತಾವೆ. ಅಷ್ಟು ಲೇಡಿ ಫ್ಯಾನ್ಸ್ ಇದ್ದಾರೆ.
ಸಿನಿಮಾದಲ್ಲೂ ಮಿಂಚಿಂಗ್ ರಜನೀಶ್
ಭರತ್ ಅಲಿಯಾಸ್ ಈಗ 'ಕರಿಮಣಿ' ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ ಧಾರಾವಾಹಿಗೂ ಮುನ್ನ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಯೋಗರಾಜ್ ಭಟ್ಟರ 'ಪದವಿ ಪೂರ್ವ' ಸಿನಿಮಾ ಹಾಗೂ ಕಳೆದ ವರ್ಷ ರಿಲೀಸ್ ಆದಂತ 'ಜಲಪಾತ' ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೇ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೀ ಕುಟುಂಬದಲ್ಲಿ ನೀಡುವ ಬೆಸ್ಟ್ ಸಹೋದರನ ಅವಾರ್ಡ್ ಕೂಡ ಪಡೆದಿದ್ದಾರೆ. ರಜನೀಶ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಶೈನಿಂಗ್ ಆಗಿದ್ದಾರೆ.
ರೊಮ್ಯಾಂಟಿಕ್ ಹಾಡಿಗೆ ರೀಲ್ಸ್
ಧಾರಾವಾಹಿಯಲ್ಲಿ ಗ್ಯಾಪ್ ಸಿಕ್ಕಾಗ ರೀಲ್ಸ್ ಮಾಡುವ ಭರತ್, ಇದೀಗ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಮ್ಮೆಮ್ಮೆ ಯೋಚಿಸಿದೆ ಯಾತಕ್ಕೆ ನಾನಾದೆ ಹಾಡಿದೆ ರೀಲ್ಸ್ ಮಾಡಿದ್ದಾರೆ. ಸೋನು ನಿಗಮ್ ಹಾಡಿರುವ ಹಾಡು. ಧಾರಾವಾಹಿಯಲ್ಲಿ ಕರ್ಣನ ಮದುವೆ ನಡೆಯುತ್ತಿದೆ. ಆ ಮದುವೆಗೆಂದೆ ಭರತ್ ಕೂಡ ರೆಡಿಯಾಗಿದ್ದಾರೆ. ಕರ್ಣನಿಗಾಗಲೀ, ಭರತ್ ಗಾಗಲೀ ಈಗ ನಡೆಯುತ್ತಿರುವ ಮದುವೆ ಇಷ್ಟವಿಲ್ಲ. ಆದರೆ ಅಮ್ಮನ ಮಾತಿಗೆ ಕಟ್ಟು ಬಿದ್ದು ಸಿಂಚನಾಳನ್ನ ಮದುವೆಯಾಗುತ್ತಿದ್ದಾನೆ.
ನಿಂಗ್ಯಾಕೆ ಅಂದುಬಿಟ್ರಾ ಭರತ್?
ಸಿಂಚನಾ ಹಾಗೂ ಭರತ್ ಒಂದೇ ಮನೆಯಲ್ಲಿ ಇರುವುದು. ಇದು ಧಾರಾವಾಹಿಯಲ್ಲಿ. ಈಗ ಸೋಷಿಯಲ್ ಮೀಡಿಯಾದಲ್ಲೂ ಒಬ್ಬರಿಗೊಬ್ಬರು ಫಾಲೋ ಮಾಡುತ್ತಾರೆ, ಹಾಗೇ ಒಬ್ಬರಿಗೊಬ್ಬರು ಕಾಲನ್ನು ಎಳೆಯುತ್ತಾರೆ. ಇದೀಗ ರಜನೀಶ್ ಹಂಚಿಕೊಂಡಿರುವ ವಿಡಿಯೋಗೆ ಸಿಂಚನಾ ಕಮೆಂಟ್ ಹಾಕಿದ್ದಾರೆ. ಯಾರಪ್ಪ ಆ ಹುಡುಗಿ ಅಂತ ಕೇಳಿದ್ರೆ, ಭರತ್ ನಿಮ್ಗೆ ಯಾಕ್ ಬೇಕು ಅಂತ ಕೇಳೋದಾ. ಭರತ್ ಕಮೆಂಟ್ ಸಾಕಷ್ಟು ಕಮೆಂಟ್ ಗಳು ಬಂದಿವೆ. ಎಲ್ಲರೂ ಭರತ್ ಕಡೆಗೆ ಸಪೋರ್ಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಿನ್ ಲವ್ ಸಿಂಚನಾಳ ಬಳಿ ಮಾತ್ರ ಹೇಳ್ಬೇಡ ಭರತ್ ಅಂತ ಸಲಹೆ ನೀಡಿದ್ದಾರೆ. ಕರ್ಣನ ಲವ್ ಸ್ಟೋರಿ ಗೊತ್ತಾದ ಮೇಲೆ ಸಿಂಚನಾ ಕಿತಾಪತಿ ಮಾಡಿ, ಅವರಿಬ್ಬರು ದೂರಾಗುವಂತೆ ಮಾಡಿರೋದು. ಅದಕ್ಕೆ ವೀಕ್ಷಕರೆಲ್ಲ ಸಲಹೆ ನೀಡುತ್ತಿದ್ದಾರೆ.


Click it and Unblock the Notifications











