Karimani: ಮಾತಿಗೆ ತಪ್ಪದ ಕರ್ಣ ಸಾಹಿತ್ಯಾಳನ್ನ ಮದುವೆ ಆಗ್ತಾನಾ..?
ಕರ್ಣ ಎಂದರೆ ಪುರಾಣಗಳಿಂದಾನೂ ಮಾತಿಗೆ ತಪ್ಪದ ಮಗನಾಗಿದ್ದಾನೆ. ಸಹಾಯ ಮಾಡುವ ಗುಣ ಹೊಂದಿದ್ದಾನೆ. ಈಗ 'ಕರಿಮಣಿ' ಧಾರಾವಾಹಿಯಲ್ಲೂ ಕರ್ಣನ ಪಾತ್ರಧಾರಿ ಅಷ್ಟೇ ಒಳ್ಳೆಯ ಗುಣ ಹೊಂದಿರುವ ವ್ಯಕ್ತಿ. ತನ್ನಿಂದ ಯಾರಿಗೂ ಅನ್ಯಾಯವಾಗದಂತೆ ಒಳಿತನ್ನೇ ಬಯಸುವ ಹುಡುಗ. ಆದರೆ ಗೊತ್ತಿಲ್ಲದಂತೆ ಕರ್ಣನಿಂದ ದೊಡ್ಡ ಪ್ರಮಾದವೇ ನಡೆದು ಹೋಗಿದೆ.
ಮದುವೆ ನಿಂತು ಹೋಗಿದ್ದಕ್ಕೆ, ಅಕ್ಕ ಪಕ್ಕದವರು ಕೆಟ್ಟದಾಗಿ ಮಾತನಾಡುವುದಕ್ಕೆ, ತಂದೆ ಕಾಣದೇ ಹೋಗಿದ್ದಕ್ಕೆ ಸಾಹಿತ್ಯಾ ಕುಸಿದು ಹೋಗಿದ್ದಾಳೆ. ಅಷ್ಟೇ ಸಂಕಟವನ್ನು ಕರ್ಣ ಕೂಡ ಅನುಭವಿಸುತ್ತಿದ್ದಾನೆ. ಈಗ ತಾನೇ ಮಾಡಿದ ಅವಾಂತರವನ್ನು ತಾನೇ ಸರಿ ಮಾಡಲು ಮುಂದಾಗಿದ್ದಾನೆ. ಆ ಹಾದಿಯಲ್ಲಿ ಕರ್ಣನಿಗೆ ಸಿಗುತ್ತಿರುವ ಉತ್ತರ ಸುಲಭವಲ್ಲ. ಗೆಲ್ತಾನಾ..? ಸೋಲುತ್ತಾನಾ ನೋಡಬೇಕಿದೆ.

ಸಾಹಿತ್ಯಾಳ ಮುಂದೆ ಸತ್ಯ ಅನಾವರಣ
ಕರ್ಣ ತಾನೂ ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳುವುದಕ್ಕೆ ಎಲ್ಲಾ ಮಾರ್ಗಗಳಿಂದಾನೂ ಪ್ರಯತ್ನ ಮಾಡುತ್ತಿದ್ದಾನೆ. ಮಗಳ ಮದುವೆಯ ಚಿಂತೆಯಿಂದ ನೊಂದಿದ್ದ ವಿಶ್ವನಾಥರನ್ನು ಕರೆತಂದು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಆದರೆ ವಿಶ್ವನಾಥ್ ಆರೋಗ್ಯ ತೀರಾ ಹದಗೆಟ್ಟಿದೆ. ಪರೀಕ್ಷೆ ಮಾಡಿದ ವೈದ್ಯರು ಮನೆಯವರ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದಾರೆ. ಮೊದಲಿನಿಂದಲೂ ವಿಶ್ವನಾಥ್‌ಗೆ ಆರೋಗ್ಯದ ಸಮಸ್ಯೆ ಇತ್ತು. ಮಗಳ ಮದುವೆ ಆಗುವ ತನಕ ಯಾರಿಗೂ ಇದನ್ನು ಹೇಳಬೇಡಿ ಎಂದೇ ಮಾತು ತೆಗೆದುಕೊಂಡಿದ್ದರು ಎಂದು ಸಾಹಿತ್ಯಾಳ ಮುಂದೆ ಡಾಕ್ಟರ್ ಸತ್ಯ ಹೇಳಿದ್ದಾರೆ.
ತಂದೆಯ ಬಗ್ಗೆ ಆತಂಕಗೊಂಡ ಸಾಹಿತ್ಯಾ
ಸತ್ಯ ತಿಳಿದ ಸಾಹಿತ್ಯಾ ದಿಕ್ಕೆ ತೋಚದಂತೆ ಆಗಿದ್ದಾಳೆ. ಅಪ್ಪನ ಆಸೆ ಇದ್ದದ್ದು ಮದುವೆ ಆಗಬೇಕೆಂಬುದು ಎಂಬುದರ ಅರ್ಥವೂ ಆಗಿದೆ. ಆದರೆ ಇತ್ತ ತಂದೆಯನ್ನು ಇನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದನ್ನು ತಿಳಿದು ಗಾಬರಿಯಾಗಿದ್ದಾಳೆ. ಕಾಯಿಲೆಯ ಬಗ್ಗೆ ಮೊದಲೇ ಮನೆಯವರ ಬಳಿ ಹೇಳಿ ಅಂತ ಹೇಳಿದ್ದೆ. ಹೇಳಿಲ್ಲ. ಅದಕ್ಕೆ ಚಿಕಿತ್ಸೆಯನ್ನು ಸರಿಯಾಗಿ ತೆಗೆದುಕೊಂಡಿಲ್ಲ. ಈಗ ಉಳಿಸುವುದು ಎಂದರೆ ತುಂಬಾ ಕಷ್ಟ ಎಂದೇ ಡಾಕ್ಟರ್ ಹೇಳಿದ್ದಾರೆ. ಸಾಹಿತ್ಯಾಗೆ ಅಪ್ಪನನ್ನು ಉಳಿಸಿಕೊಳ್ಳುವುದೋ ಅಥವಾ ಅಪ್ಪನ ಕೊನೆಯ ಆಸೆ ಈಡೇರಿಸುವುದೋ ಒಂದು ತಿಳಿಯದಂತೆ ಆಗಿದೆ.

ಸಾಹಿತ್ಯಾಳ ಪರ ಕರ್ಣ ವಕಾಲತ್ತು
ಕರ್ಣ ತಾನೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಎಂಬಂತೆ ಸಾಹಿತ್ಯಾಳ ಬದುಕನ್ನು ಸರಿ ಮಾಡುವ ದಾರಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾನೆ. ಅದರ ಪರಿಣಾಮವೇ ಈಗ ಮದುವೆ ಆಗಬೇಕಿದ್ದ ಹುಡುಗನ ಮನೆಗೆ ಹೋಗಿದ್ದಾನೆ. ಸಾಹಿತ್ಯಾ ತಪ್ಪು ಇದರಲ್ಲಿ ಏನು ಇಲ್ಲ ಎಂಬುದನ್ನು ಅರ್ಥ ಮಾಡಿಸಲು ಪ್ರಯತ್ನ ಪಟ್ಟಿದ್ದಾನೆ. ದಯವಿಟ್ಟು ಮತ್ತೆ ಮದುವೆಗೆ ಒಪ್ಪಿಕೊಳ್ಳಿ ಎಂದು ಅಂಗಲಾಚಿದ್ದಾನೆ. ಆದರೆ ಅದ್ಯಾವುದಕ್ಕೂ ಹಳೆಯ ಸಂಬಂಧ ಒಪ್ಪಿಗೆ ಕೊಟ್ಟಿಲ್ಲ.
ಮಾತುಗೆ ತಪ್ಪುವಂತಿಲ್ಲ ಕರ್ಣ
ಕರ್ಣ ಮಾತಿಗೆ ತಕ್ಕ ಹಾಗೇ ನಡೆದುಕೊಳ್ಳುವಾತ. ಮಾತನ್ನು ಮೀರುವ ಗುಣ ಅವನದ್ದಲ್ಲ. ಸುಮ್ಮನೆ ಕೊಟ್ಟ ಮಾತನ್ನೇ ಈಡೇರಿಸದೆ ಇರುವವನಲ್ಲ. ಇನ್ನು ತನ್ನಿಂದಾನೇ ಹಾಳಾದ ಹುಡುಗಿಯ ಜೀವನವನ್ನು ಸರಿ ಮಾಡುವುದಾಗಿ ಹೇಳಿ ಈಗ ಕೈಚೆಲ್ಲಿ ಕೂರಿವುದಕ್ಕೆ ಸಾಧ್ಯವಾ..? ಹಳೆ ಸಂಬಂಧ ಒಪ್ಪದೇ ಹೋದರೂ ಈಗ ಸಾಹಿತ್ಯಾಳ ಜೀವನವನ್ನು ಸರಿ ಮಾಡಬೇಕಿದೆ. ಸಾಯುತ್ತಿರುವ ಅವರ ತಂದೆಯ ಆತ್ಮಕ್ಕೆ ತೃಪ್ತಿ ನೀಡಲೇಬೇಕಿದೆ. ಹೀಗಾಗಿ ಕರ್ಣ ಮುಂದಿನ ಹೆಜ್ಜೆಯನ್ನು ಯೋಚನೆ ಮಾಡಿ ಇಡಬೇಕಿದೆ. ಕರಿಮಣಿ ಮಾಲೀಕ ಕರ್ಣನೇ ಆಗುವ ಸಾಧ್ಯತೆ ಇದೆ.


Click it and Unblock the Notifications











