Karimani: ಕರ್ಣ ಮಾಡಿದ ಒಂದು ತಪ್ಪಿನಿಂದ ಸಾಹಿತ್ಯಾಗೆ ಪದೇ ಪದೇ ನೋವು!

By ಎಸ್ ಸುಮಂತ್

ಕೆಲವೊಂದು ಸಲ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈಗ ಸಾಹಿತ್ಯಾ ಕೂಡ ಅದೇ ಸ್ಥಾನದಲ್ಲಿ ನಿಂತಿದ್ದಾಳೆ. ಅವಳದ್ದೇನು ಅಲ್ಲದ ತಪ್ಪಿನಿಂದ ಪ್ರತಿದಿನ ನರಕ ಅನುಭವಿಸುತ್ತಿದ್ದಾಳೆ. ಕಂಡ ಕಂಡವರ ಬಾಯಿಗೆ ಆಹಾರವಾಗುತ್ತಿದ್ದಾಳೆ‌. ಹೋದವರು, ಬಂದವರು, ಅಕ್ಕ ಪಕ್ಕದ ಮನೆಯವರು ಕೂಡ ಸಾಹಿತ್ಯಾ ಮನಸ್ಸಿಗೆ ಘಾಸಿಯಾಗುವಂತೆ ಮಾತನಾಡುತ್ತಿದ್ದಾರೆ.

ಕರ್ಣ ಏನೋ ತಾನೂ ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಹೊರಟಿದ್ದಾನೆ. ನಿಂತ ಮದುವೆಯನ್ನು ಮತ್ತೆ ಮಾಡಿಯೇ ಮಾಡುತ್ತೀನಿ ಎಂದು ಹೊರಟಿದ್ದಾನೆ. ಆದರೆ ಅದು ಅಷ್ಟು ಸುಲಭವಾ ಎನ್ನುವುದು ಮಾತ್ರ ಕರ್ಣನಿಗೆ ತಿಳಿದಿಲ್ಲ. ಇತ್ತ ಸಾಹಿತ್ಯಾ ಆ ಒಂದು ಘಟನೆಯಿಂದ ನೋವು ಅನುಭವಿಸುತ್ತಲೇ ಇದ್ದಾಳೆ.

Karimani kannada Serial Written Update on March 13th episode

ಸಾಹಿತ್ಯಾ ಮದುವೆ ಹಠ ತೊಟ್ಟ ಕರ್ಣ

ಸಾಹಿತ್ಯಾಳಿಗೆ ಮದುವೆ ಮಾಡಿಸುತ್ತೀನಿ ಎಂದು ಕರ್ಣ ಮಾತು ಕೊಟ್ಟಾಗಿದೆ. ಹೀಗಾಗಿಯೇ ಮತ್ತೆ ಹಳೆಯ ಬೀಗರ‌ ಮನೆ ಬಾಗಿಲಿಗೆ ಬಂದಿದ್ದಾನೆ. ಆದರೆ ಅವರು ಮತ್ತೆ ಆ ಮದುವೆ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ. ಹಾಗಂತ ಕರ್ಣ ಬಿಡುವ ಮಾತು ಇಲ್ಲ. ಒಮ್ಮೆ ಸಮಾಧಾನವಾಗಿ ಹೇಳಿದ್ದಾನೆ. ಸಾಹಿತ್ಯಾಳದ್ದು ಏನು ತಪ್ಪಿಲ್ಲ, ಅವಳಿಗೆ ಈ ಮೊದಲು ಯಾವ ಮದುವೆಯೂ ಆಗಿಲ್ಲ ಎಂದು. ಆದರೂ ಬೀಗರ ಮನೆಯವರು ಕೇಳುವುದಕ್ಕೆ ರೆಡಿ ಇಲ್ಲ. ಈಗ ಕರ್ಣ ತನ್ನ ರೋಷವನ್ನು ತೋರಿಸಿದ್ದಾನೆ.

ಸಾಹಿತ್ಯಾಳ ಮದುವೆ ಮಾಡಲು ಹಠ

ವಿಶ್ವನಾಥರ ಬೀಗರು ಒಪ್ಪದೇ ಇದ್ದಾಗ 'ನಾನು ವಿಶ್ವನಾಥ್ ಅವರಿಗೆ ಮಾತು ಕೊಟ್ಟಿದ್ದೀನಿ. ಅವರ ಮಗಳಿಗೆ ನಿಮ್ಮ ಮಗನ ಜೊತೆಗೆ ಮದುವೆ ಮಾಡಬೇಕೆಂಬ ಆಸೆ ಅವರದ್ದಾಗಿತ್ತು‌. ಈ ಕರ್ಣ ಮಾತು ಕೊಟ್ಟ ಮೇಲೆ ಮುಗಿತು. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಮದುವೆ ಮಾಡಿಸಿಯೇ ಮಾಡಿಸುತ್ತೀನಿ' ಎಂದು ತನ್ನದೇ ಆದ ಸ್ಟೈಲ್‌ನಲ್ಲಿ ಅವಾಜ್ ಹಾಕಿದ್ದಾನೆ. ಮದುವೆಗೆ ಒಪ್ಪದೇ ಹೋದರೆ ಪರಿಣಾಮ ನೆಟ್ಟಗಿರಲ್ಲ ಎಂದು ಹೆದರಿಸಿದ್ದಾನೆ.

Karimani kannada Serial Written Update on March 13th episode

ಆಸ್ಪತ್ರೆಯಲ್ಲಿ ಸಾಹಿತ್ಯಾಗೆ ಅವಮಾನ

ಸಾಹಿತ್ಯಾಗೆ ತನ್ನ ತಂದೆಯದ್ದೇ ಚಿಂತೆ. ಅವರ ಸ್ಥಿತಿ ಗಂಭೀರವಾಗಿದೆ. ಡಾಕ್ಟರ್ ಬೇರೆ ಉಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಪ್ರಯತ್ನ ಮಾಡುತ್ತೀವಿ, ದೇವರಿಗೆ ಬಿಟ್ಟಿದ್ದು ಎಂದಿದ್ದಾರೆ. ಇದರ ಚಿಂತೆಯಲ್ಲಿ ಕುಳಿತಿದ್ದ ಸಾಹುತ್ಯಾಳ ಬಳಿಗೆ ಮತ್ತೆ ಮೀಡಿಯಾದವರು ಬಂದಿದ್ದಾರೆ. ನಿಮ್ಮ ಮೊದಲ ಗಂಡನಿಗೆ ಮೊದಲು ಡಿವೋರ್ಸ್ ಕೊಡಬೇಕು ಅಲ್ವಾ. ಡಿವೋರ್ಸ್ ಕೊಡದೆ ಈ ರೀತಿ ಮತ್ತೊಂದು ಮದುವೆ ಆಗುವುದಕ್ಕೆ ಹೋದರೆ ಸಮಾಜಕ್ಕೆ ಕೆಟ್ಟ ಸಂದೇಶ ಕೊಟ್ಟಂತೆ ಅಲ್ವಾ. ನೀವೂ ಮಾಡಿದ್ದು ಸರಿ ಅಂತ ನಿಮಗೆ ಅನ್ನಿಸುತ್ತಾ ಇದೆಯಾ ಎಂಬೆಲ್ಲಾ ಪ್ರಶ್ನೆಗಳು ಕೇಳಿದ್ದಾರೆ.

ಸಾಹಿತ್ಯಾಗೆ ತಪ್ಪುತ್ತಿಲ್ಲ ಆ ನೋವು

ಸಾಹಿತ್ಯಾಳ ಸುತ್ತಾ ಮಾಧ್ಯಮದವರು ತುಂಬಿಕೊಂಡಿರುವುದನ್ನು ಕಂಡು ಅವರ ಮನೆಯವರು ಬಂದು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ. ಸಾಹಿತ್ಯಾಳನ್ನು ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಸಾಹಿತ್ಯಾಗೆ ಕರ್ಣ ಮಾಡಿದ ಆ ಒಂದು ಯಡವಟ್ಟು ಎಷ್ಟೆಲ್ಲಾ ಅನಾಹುತಗಳಿಗೆ ದಾರಿ ಮಾಡಿಕೊಟ್ಟಿತು ಎಂಬ ಚಿಂತೆ. ಅಂದು ಮದುವೆ ಮನೆಯಲ್ಲೂ ಏನೆಲ್ಲಾ ಆಯಿತು, ತಂದೆ ಹೀಗೆ ಕೋಮಾಗೆ ಹೋಗುವುದಕ್ಕೆ ಕಾರಣವಾದ ಆ ಘಟನೆಯನ್ನು ನೆನೆದು ಮತ್ತೆ ಕರ್ಣನಿಗೆ ಮನಸ್ಸಲ್ಲೇ ಶಾಪ ಹಾಕಿದ್ದಾಳೆ.

More from Filmibeat

English summary
Karimani kannada Serial today episode. Here is the details about Sahitya is repeatedly humiliated;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X