Karimani: ಸಿಡಿಲಿನಂತೆ ಬಂದ ಸಾಹಿತ್ಯ; ಕರ್ಣನ ತಂದೆ ಕಂಡು ಸೈಲೆಂಟ್ ಆಗಿದ್ಯಾಕೆ?

By ಎಸ್ ಸುಮಂತ್

ಸಾಹಿತ್ಯಾಳ ಅಪ್ಪನ ಕನಸು ಮಗಳ ಮದುವೆಯೇ ಆಗಿತ್ತು. ಯಾಕಂದ್ರೆ ಸಾಹಿತ್ಯಾಳ ತಂದೆ ಸಾಕಷ್ಟು ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯವರಿಗೂ ಆ ವಿಚಾರವನ್ನು ಹೇಳಿರಲಿಲ್ಲ. ಮಗಳ ಮದುವೆಯೊಂದು ನಡೆದರೆ ಸಾಕು ಎಂಬ ಭಾವನೆಯಲ್ಲಿದ್ದರು. ಅದಕ್ಕೆ ಆರೋಗ್ಯದ ವಿಚಾರದಲ್ಲಿ ಎಷ್ಟೇ ಸಮಸ್ಯೆಯಾದರೂ ಮಗಳ ಮದುವೆ ನೋಡಿಕೊಂಡು ಸಾಯಬೇಕು ಎಂಬುದೇ ಆಸೆ ಆಗಿತ್ತು. ಆದರೆ ಕರ್ಣ ಮಾಡಿದ ಯಡವಟ್ಟಿನಿಂದ ಇಂದು ಸಾಹಿತ್ಯಾಳ ಅಪ್ಪ ಆಸ್ಪತ್ರೆ ಸೇರುವಂತೆ ಆಗಿದೆ.

ಕರ್ಣ ಯಾರ ಮನಸ್ಸನ್ನು ನೋಯಿಸುವ ಹುಡುಗನಲ್ಲ. ಆದರೆ ಸಾಹಿತ್ಯಾಳ ಮದುವೆ ಮುರಿದಿದ್ದಕ್ಕೆ ತಪ್ಪಾದ ತಿಳುವಳಿಕೆಯೇ ಕಾರಣ. ಆಸ್ಪತ್ರೆಯಲ್ಲೂ, ದೇವಸ್ಥಾನದಲ್ಲೂ ಎರಡು ಕಡೆಯೂ ಸ್ನೇಹಿತನ ಲವ್ವರ್ ನೋಡುವುದನ್ನು ಬಿಟ್ಟು ಸಾಹಿತ್ಯಾಳನ್ನು ಕಂಡು ಇವಳೇ ಮೋಸ ಮಾಡಿರುವುದು ಎಂದೇ ನಂಬಿಬಿಟ್ಟ. ಹೀಗಾಗಿಯೇ ಸ್ನೇಹಿತನ ಪ್ರೀತಿ ಉಳಿಸುವುದಕ್ಕೆ ಮದುವೆಯನ್ನೇ ನಿಲ್ಲಿಸಿಬಿಟ್ಟ. ಕರ್ಣನ ಒಂದು ತಪ್ಪಾದ ತಿಳುವಳಿಕೆ ಇಂದು ಸಾಹಿತ್ಯಾಳನ್ನು ಕರ್ಣನ ಮನೆ ಬಾಗಿಲಿಗೆ ತಂದು ನಿಲ್ಲಿಸಿದೆ.

Karimani kannada Serial Written Update on March 6th episode

ಕರ್ಣನ ಮನೆಗೆ ಬಂದ ಸಾಹಿತ್ಯಾ

ಸಾಹಿತ್ಯಾಳ ತಂದೆ ಆಸ್ಪತ್ರೆ ಪಾಲಾಗಿದ್ದಾರೆ. ಮದುವೆಯ ಮಂಟಪದಲ್ಲಿ ಬಂದು ಡಿವೋರ್ಸ್ ಪೇಪರ್ ತೋರಿಸಿ, ಮದುವೆಯನ್ನು ನಿಲ್ಲಿಸಲಾಗಿದೆ. ಈ ಶಾಕ್ ಅನ್ನು ತಡೆಯಲಾಗಿದೆ‌ ಆಸ್ಪತ್ರೆ ಪಾಲಾಗಿದ್ದಾರೆ. ಇದನ್ನು ಸಹಿಸಲಾಗದ ಸಾಹಿತ್ಯಾ, ಕರ್ಣನನ್ನು ಹುಡುಕಿಕೊಂಡು ಹೊರಟಿದ್ದಾಳೆ. ಯಾರಿಗೋಸ್ಕರ ಬಂದು ಮದುವೆ ನಿಲ್ಲಿಸಿದನೋ ಅವನ ಸಹಾಯವನ್ನೆ ಪಡೆದು ಕರ್ಣನ ಮನೆಯ ದಾರಿ ಹಿಡಿದಿದ್ದಾಳೆ.

ಹುಟ್ಟುಹಬ್ಬ ಕಂಡು ನಿಂತು ಬಿಟ್ಟ ಸಾಹಿತ್ಯ

ಕರ್ಣನ ಮನೆಗೆ ಕೋಪದಲ್ಲಿಯೇ ಬಂದಳು ಸಾಹಿತ್ಯಾ. ಆದರೆ ಕರ್ಣನ ಮನೆಯಲ್ಲಿ ಹುಟ್ಟು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕರ್ಣನನ್ನು ಹುಡುಕಿ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಹೋದಳು. ಇನ್ನು ಮಧುಮಗಳ ಗೆಟಪ್‌ನಲ್ಲಿಯೇ ಇದ್ದಳು ಸಾಹಿತ್ಯಾ. ಇನ್ನೇನು ಕರ್ಣನ ಮೇಲೆ ಜೋರು ಮಾಡಬೇಕು ಎನ್ನುವಷ್ಟರಲ್ಲಿ ಏನೋ ಸಂಭ್ರಮ ಕಾಣಿಸಿತು. ಒಂದು ಕ್ಷಣ ಅದೆಲ್ಲವನ್ನು ಕಂಡು ಏನು ತೋಚದವಳಂತೆ ನಿಂತು ಬಿಟ್ಟಳು.

ಸಾಹಿತ್ಯಾಳನ್ನು ಕಂಡು ಕರ್ಣ ಶಾಕ್

ಕರ್ಣನ ತಂದೆಯನ್ನು ಪಾಪಮ್ಮ ಹೊಗಳುತ್ತಿದ್ದಳು. ಆಗ ತಾನೇ ಕೇಕ್ ಕಟ್ ಮಾಡುತ್ತಿದ್ದ. ಪಾಪಮ್ಮ ಕರ್ಣನ ತಾಯಿಯನ್ನು ಹೊಗಳುತ್ತಿದ್ದರು. ಇತ್ತ ಕರ್ಣ, ಸಾಹಿತ್ಯಾಳನ್ನು ಕಂಡು ಕಲ್ಲಿನಂತೆ ಅವನು ನಿಂತು ಬಿಟ್ಟಿದ್ದ. ಕೇಕ್ ಕಟಿಂಗ್ ಆಯ್ತು, ಎಲ್ಲರಿಗೂ ತಿನ್ನಿಸುತ್ತಿದ್ದರು. ಕರ್ಣನ ಕಡೆಗೆ ನೋಡಿದ ಆಕೆಯ ತಾಯಿಗೂ ಸಾಹಿತ್ಯಾ ಮಧುಮಗಳ ವೇಷದಲ್ಲಿ ಬಂದಿರುವುದು ಕಂಡಿತು. ಮಗ ಮದುವೆ ನಿಲ್ಲಿಸಿದ್ದು ಇದೇ ಹುಡುಗಿಯದ್ದು ಇರಬೇಕು ಎಂದು ಎಲ್ಲರ ಅರಿವಿಗೂ ಬಂತು. ಅಷ್ಟರಲ್ಲಿ ತಂದೆ ಕೇಕ್ ತಿನ್ನಿಸಲು ಬಂದಾಗ ಅವರು ಆಕೆಯನ್ನು ಕಂಡು ಏನು ಹೇಳಬೇಕೆಂದು ತೋಚದೆ ನಿಂತು ಬಿಟ್ಟರು.

ನ್ಯಾಯ ಕೇಳಿದ ಸಾಹಿತ್ಯಾ

ಸಾಹಿತ್ಯಾಗೆ ನ್ಯಾಯ ಬೇಕಿದೆ, ಉತ್ತರ ಬೇಕಿದೆ. ಹಾಗಂತ ಮನೆಯವರ ಸಂಭ್ರಮ ಹಾಳು ಮಾಡುವಷ್ಟು ಕೆಟ್ಟವಳು ಸಾಹಿತ್ಯಾ ಅಲ್ಲ. ಮೊದಲು ಎಲ್ಲವನ್ನು ನೋಡುತ್ತಾ, ಅಳು ತಡೆಯಲಾಗದೆ ಕಣ್ಣೀರು ಹಾಕುತ್ತಾ ನಿಂತು ಬಿಟ್ಟಳು. ಎಲ್ಲವೂ ತಣ್ಣಗಾದ ಮೇಲೆ ಮನೆಯವರ ಮುಂದೆ ನ್ಯಾಯ ಕೇಳಿದ್ದಾಳೆ. 'ನಾನಾಗಲೀ, ನನ್ನ ಮನೆಯವರಾಗಲೀ ನಿಮಗೆ ಏನಾದರೂ ಅನ್ಯಾಯ ಮಾಡಿದ್ದೀವಾ' ಎಂದು ಕೇಳಿದಾಗ ಕರ್ಣನ ಬಳಿ ಉತ್ತರವಿಲ್ಲ. ಅತ್ತ ಮನೆಯವರೂ ನೊಂದುಕೊಂಡಿದ್ದಾರೆ. ಇಷ್ಟು ಒಳ್ಳೆಯ ಮನಸ್ಸಿರುವ ಹುಡುಗಿಗೆ ಮೋಸ ಮಾಡಿದರೆ ನಾವೂ ನರಕಕ್ಕೆ ಹೋಗುತ್ತೀವಿ ಎಂದು ಬೇಸರ ಮಾಡಿಕೊಂಡಿದ್ದಾರೆ.

More from Filmibeat

English summary
Karimani kannada Serial today episode. Here is the details about Sahitya reached the house of karna;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X