"ನಾನು ಸಿಂಗಲ್.." ಎಂದ ಕರಿಮಣಿ ಧಾರಾವಾಹಿಯ ನಟಿ ಸ್ಪಂದನಾ: ಹುಡುಗರು ದಿಲ್ ಖುಷ್
ಸಾಮಾನ್ಯವಾಗಿ ತೆರೆ ಮೇಲೆ ಪಾತ್ರಗಳ ಮೂಲಕ ನಟಿಸುವ ನಟ ನಟಿಯರ ನಿಜ ಜೀವನದ ಬಗ್ಗೆ ಕುತೂಹಲ ಮೂಡುವುದು ಸಹಜ. ಅಂತೆಯೇ 'ಕರಿಮಣಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸ್ಪಂದನ ಸೋಮಣ್ಣ ಅವರ ನಿಜ ಜೀವನದ ಬಗ್ಗೆ ಹಲವಾರು ಕುತೂಹಲಗಳು ಎದ್ದಿವೆ.
'ಕರಿಮಣಿ' ಧಾರಾವಾಹಿಯಲ್ಲಿ ಸಾಹಿತ್ಯ ಎಂಬ ಪಾತ್ರದ ಮೂಲಕ ಜನಮನ್ನಣೆ ಪಡೆದಿರುವ ನಟಿ ಸ್ಪಂದನಾ ಸೋಮಣ್ಣ ಅವರ ಜೀವನದ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.

ನಟಿ ಸ್ಪಂದನಾ ಸೋಮಣ್ಣ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಬೆಳೆದಿದ್ದೆಲ್ಲ ಮೈಸೂರಿನಲ್ಲಿ. ಅಪ್ಪಟ ಕನ್ನಡತಿ ಎಂದೆನಿಸಿಕೊಂಡಿರುವ ಇವರು ಮನೆಯಲ್ಲೆಲ್ಲ ಮಂಡ್ಯ ಕನ್ನಡವನ್ನೇ ಮಾತನಾಡುವುದಂತೆ. ಅಷ್ಟೇ ಏಕೆ ನಟಿ ಸ್ಪಂದನ ಸೋಮಣ್ಣ ಅವರಿಗೆ ರಾಗಿ ಮುದ್ದೆ ಹಾಗೂ ಬಸ್ಸಾರು ಎಂದರೆ ಪಂಚಪ್ರಾಣವಂತೆ.
ಈ ವಿಚಾರವನ್ನು ಕೇಳುತ್ತಿದ್ದಂತೆ ಹಲವಾರು ಹುಡುಗರು ಸಿಕ್ಕರೆ ಇಂತಹ ಹುಡುಗಿ ಸಿಗಬೇಕು ಎಂದು ಕಾಮೆಂಟ್‌ಗಳ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಟಿ ಸ್ಪಂದನಾ ಸೋಮಣ್ಣ ನಟನೆ ಹಾಗೂ ಮುಗ್ಧತೆಯನ್ನು ಕಂಡು ಹಲವಾರು ಹುಡುಗರು ಇವರಿಗೆ ಮಾರು ಹೋಗಿದ್ದು, ಇವರು ನಿಜ ಜೀವನದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

'ಕರಿಮಣಿ' ಧಾರಾವಾಹಿಯಲ್ಲಿ ಇವರ ಸಾಹಿತ್ಯ ಎಂಬ ಪಾತ್ರಕ್ಕೆ ಮದುವೆಯಾಗುತ್ತದೋ ಇಲ್ಲವೋ ಎಂಬ ಅನುಮಾನವಿದ್ದಂತೆಯೇ, ನಿಜ ಜೀವನದ ಇವರ ರಿಲೇಷನ್‌ಶಿಪ್ ಸ್ಟೇಟಸ್ ಬಗ್ಗೆ ಪ್ರಶ್ನೆಗಳು ಮೂಡಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟಿ ಸ್ಪಂದನಾ ಸೋಮಣ್ಣ ಸದ್ಯಕ್ಕೆ ನಾನು ಸಿಂಗಲ್ ಇನ್ನು ಎರಡು ಮೂರು ವರ್ಷ ಮದುವೆಯ ಮಾತು ಯೋಚನೆಗಳಿಲ್ಲ ಎಂದಿದ್ದಾರೆ.
ಪ್ರಸ್ತುತ ನಟನೆಯಲ್ಲಿ ಫುಲ್ ಬ್ಯುಸಿ ಇರುವ ನಟಿ ಸ್ಪಂದನ ಸೋಮಣ್ಣ ಕನ್ನಡ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಹಿರಿತರೆಯಲ್ಲಿಯೂ ಬ್ಯುಸಿಯಾಗಿರುವ ಇವರು ಒಂದಷ್ಟು ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ನಟಿ ಸ್ಪಂದನ ಸೋಮಣ್ಣ ಅವರ 'ದಿಲ್ ಖುಷ್' ರಿಲೀಸ್ ಆಗಿದ್ದು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಆಗಾಗ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ.
ಮಾರ್ಚ್ 22 ರಂದು ರಿಲೀಸ್ ಆದ ಈ ಸಿನಿಮಾದಲ್ಲಿ ನಟಿ ಸ್ಪಂದನ ಸೋಮಣ್ಣ ಅವರ ನಾಯಕ ನಟಿಯಾಗಿ ಕಾಣಿಸಿಕೊಂಡರೆ ರಂಜಿತ್ ದೇವ್ ನಾಯಕ ನಟನಾಗಿದ್ದಾರೆ. ನಿರ್ದೇಶಕ ಪ್ರಮೋದ್ ಜಯ ಅವರು ಈ ಸಿನಿಮಾದ ಬರವಣಿಗೆ ಹಾಗೂ ನಿರ್ದೇಶನ ಮಾಡಿದ್ದಾರೆ. ಹಿರಿಯ ಕಲಾವಿದರಾದ ರಂಗಾಯಣ ರಘು, ಧರ್ಮಣ್ಣ ಕಡೂರ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಈಕೆ ಆಗಾಗ ಫೋಟೋ ಶೂಟ್‌ಗಳನ್ನು ಮಾಡಿಸುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಇವರು ಪೋಸ್ಟ್ ಮಾಡಿರುವ ಸೀರೆಯಲ್ಲಿನ ಫೋಟೋ ಒಂದು ಬಹಳ ವೈರಲ್ ಆಗಿತ್ತು.


Click it and Unblock the Notifications











