ಕಿರುತೆರೆಯಲ್ಲಿ ಕರ್ಣನ ಕಾರುಬಾರು; ಯಾರ ಮೇಲಿದೆ ಕ್ರೇಜ್?
ಚಿತ್ರರಂಗದಲ್ಲಿ ಕರ್ಣ ಎಂದಾಕ್ಷಣ ಸಹಜವಾಗಿ ನೆನಪಿಗೆ ಬರುವುದು ಡಾ. ವಿಷ್ಣುವರ್ಧನ್. ಎಲ್ಲರ ನೆಚ್ಚಿನ ಸಾಹಸಸಿಂಹ. ಆದರೆ ಆ ಕರ್ಣನಂತೆ ಇನ್ನು ಯಾರೂ ಹುಟ್ಟಿಲ್ಲ ಬಿಡಿ. ಅದು ಬೇರೆ ಪ್ರಶ್ನೆ. ವಿಷ್ಣುವರ್ಧನ್ ಅವರ ಆ ಕರ್ಣನಂತೆ ಹಾಡು ಕೇಳುತ್ತಾ ಇದ್ದರೆ ಗಟ್ಟಿ ಮನಸ್ಸಿನವರು ಅರೆಕ್ಷಣ ಕರಗಿ ಬಿಡುತ್ತಾರೆ. ಕರ್ಣನ ತ್ಯಾಗವನ್ನು ನೆನೆಯುತ್ತಾರೆ. ಇದೀಗ ಬೆಳ್ಳಿತೆರೆಯ ಕರ್ಣನನ್ನೆ ಸ್ಪೂರ್ತಿಯಾಗಿಟ್ಟುಕೊಂಡು, ಕಿರುತೆರೆಯಲ್ಲೂ ಕರ್ಣನ ಕಾರು ಬಾರು ಶುರುವಾಗಿದೆ.
ಈಗಾಗಲೇ ಮನರಂಜನೆಯ ಚಾನೆಲ್‌ಗಳಲ್ಲಿ ಹೊಸ ಹೊಸ ಧಾರಾವಾಹಿಗಳು ರಂಜಿಸುತ್ತಿವೆ. ಹಳೆ ಧಾರಾವಾಹಿಗಳು ಜನರ ಮನಸ್ಸನ್ನ ಗೆಲ್ಲುತ್ತಿವೆ. ಅದರಲ್ಲೂ ಮೂರು ಧಾರಾವಾಹಿಗಳಲ್ಲಿ ಕರ್ಣನೇ ಅಚ್ಚುಮೆಚ್ಚಾಗಿದ್ದಾರೆ. ಹಾಗಾದ್ರೆ ಯಾವೆಲ್ಲಾ ಧಾರಾವಾಹಿಗಳಲ್ಲಿ ಕರ್ಣನ ಪಾತ್ರಗಳು ಇದಾವೆ..? ಯಾರಿಗೆ ಯಾರ ಮೇಲೆ ಕ್ರೇಜ್ ನೋಡೋಣಾ.

ಸೂರ್ಯವಂಶದ ಕರ್ಣ
ಅನಿರುದ್ದ್ ಜೊತೆ ಜೊತೆಯಲಿ ಸೀರಿಯಲ್ ಆದ್ಮೇಲೆ ಸಿನಿಮಾ ಕಡೆ ಬ್ಯುಸಿಯಾಗಿದ್ದರು. ಬಳಿಕ ಸೀರಿಯಲ್‌ನಲ್ಲೂ ಬ್ಯುಸಿಯಾಗಿರೋ ಅನಿರುದ್ದ್ 'ಸೂರ್ಯವಂಶ' ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಸದ್ಯ ಕೋರ್ಟ್ ಕಟಕಟೆಯಲ್ಲಿ ಪದ್ಮನಾಭನನ್ನು ನಿಲ್ಲಿಸಿ, ಮೋಸ ಮಾಡಿದವನಿಗೆ ಕರ್ಣ ಬೆವರಿಳಿಸುತ್ತಿದ್ದಾನೆ. ಏನು ಅರ್ಥವಾಗುವುದಿಲ್ಲ, ಏನು ಮಾಡುವುದಕ್ಕೆ ಆಗಲ್ಲ ಎಂದುಕೊಂಡಿದ್ದ ಪದ್ಮನಾಭ ಈಗಲೂ ಕೋರ್ಟ್ ಕಟಕಟೆಯಲ್ಲೂ ಅಹಂಕಾರದ ಮಾತುಗಳನ್ನೇ ಆಡುತ್ತಿದ್ದಾನೆ. ಆದರೆ ಕರ್ಣ ಅದಕ್ಕೆಲ್ಲ ಬಗ್ಗಬೇಕಲ್ಲ. ಮೋಸ ಮಾಡಿದವರಿಗೆ ಹೇಗೆ ಶಿಕ್ಷಿಸಬೇಕು ಎಂಬುದು ಅವನಿಗೆ ಗೊತ್ತು. ಒಳ್ಳೆಯವರಿಗೆ ಹೇಗೆ ಸಹಾಯ ಮಾಡಬೇಕು ಎಂಬುದು ಅವನಿಗೆ ಗೊತ್ತು.
ಕರಿಮಣಿಯ ಕರ್ಣ
ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಸೀರಿಯಲ್‌ನಲ್ಲೂ ಕರ್ಣನೇ ಇರುವುದು. ಸಾಹಿತ್ಯ ಹಾಗೂ ಕರ್ಣನ ಜೋಡಿ ಎಂದರೆ ವೀಕ್ಷಕರಿಗೆ ಬಲು ಇಷ್ಟ. ಈ ಜರ್ಣನು ಅಷ್ಟೇ ತನ್ನಿಂದ ಗೊತ್ತಿಲ್ಲದೆ ತಪ್ಪಾದರೆ ಅದಕ್ಕೆ ಕ್ಷಮೆಯನ್ನು ಕೇಳುತ್ತಾನೆ. ಆದರೆ ಗೊತ್ತಿದ್ದು ತಪ್ಪು ಮಾಡಲು ಬಂದವರಿಗೆ ಸರಿಯಾಗಿಯೇ ಪಾಠ ಕಲಿಸುತ್ತಾನೆ. ಸಿಕ್ಕಾಪಟ್ಟೆ ಪ್ರೀತಿ ಮಾಡುವುದು ಸಾಹಿತ್ಯಾಳನ್ನ ಮಾತ್ರ. ಇಷ್ಟಪಟ್ಟ ಹುಡುಗಿಯನ್ನೇ ಮದುವೆಯೇನೋ ಆಗಿದ್ದಾನೆ. ಆದರೆ ಈಗ ಹೊಸದೊಂದು ಸಮಸ್ಯೆ ಅವನ ಬಾಳಲ್ಲಿ ಶುರುವಾಗಿದೆ. ದ್ವೇಷ ಮಾಡ್ತಾಳೆ ವಿನಃ ಪ್ರೀತಿ ಮಾಡಲ್ಲ ಎಂಬ ರೇಂಜಿಗೆ ಮುನಿಸಿಕೊಂಡಿದ್ದಾಳೆ ಸಾಹಿತ್ಯಾ.
ಡಾ.ಕರ್ಣ ಯಾರು..?
ಕಿರಣ್ ರಾಜ್ ಯಾರಿಗೆ ಗೊತ್ತಿಲ್ಲ ಹೇಳಿ. ಕಿರುತೆರೆಯ ನೆಚ್ಚಿನ ನಟ ಎಂದರೆ ತಪ್ಪಾಗುವುದಿಲ್ಲ. 'ಕನ್ನಡತಿ' ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಮಗ. ಕನ್ನಡಿತಿಯರ ಪಾಲಿನ ಹೀರೋ ಈತ. ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಆಗಲಿ ಎಂದು ಕಾದವರು ಸಾಕಷ್ಟು ಜನ. ಈಗ ಆ ಸಮಯ ಬಂದಿದೆ. ಕರ್ಣ ಎಂಬ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಬಿಂದಾಸ್ ಆಗಿ. ಮೊದಲ ಪ್ರೋಮೋದಲ್ಲಿಯೇ ಕಿಚ್ಚು ಹಚ್ಚಿದ್ದಾರೆ. ಕರ್ಣನಿಗೆ ಹೀರೋಯಿನ್ ಯಾರಾಗ್ತಾರೆ ಎಂಬ ಕುತೂಹಲವೂ ಎಲ್ಲರನ್ನ ಕಾಡುತ್ತಿದೆ. ನಿರ್ದೇಶಕರು ಹೇಳುವ ಮೊದಲೇ ವೀಕ್ಷಕರೇ ಇವರೇ ಇರಬಹುದಾ ಎಂಬ ನಿರ್ಧಾರಕ್ಕರ ಬಂದಿದ್ದಾರೆ.
ಯಾವ ಕರ್ಣನಿಗೆ ವೋಟ್..?
ಇನ್ನು ಕರ್ಣ ಎಂದರೆ ದಾದಾ ಎಂಬುದನ್ನ ಆರಂಭದಲ್ಲಿಯೇ ಹೇಳಿದ್ದೀವಿ. ಆ ಕರ್ಣ ಎಲ್ಲೆ ಪಾಲಿನ ಆರಾಧ್ಯ ದೈವ. ಆದರೆ ಕಿರುತೆರೆಯಲ್ಲಿನ ಕರ್ಣಂದಿರಲ್ಲಿ ಯಾರು ಬಲು ಇಷ್ಟ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಅದಕ್ಕೆ ಉತ್ತರವೇ ಕಮೆಂಟ್ ಬಾಕ್ಸ್‌ನಲ್ಲಿದೆ. ಟ್ರೋಲ್ ಪೇಜಸ್‌ಗಳು ಕರ್ಣಂದಿರ ಬಗ್ಗೆ ಕೇಳಿದಾಗ ಹೆಚ್ಚು ಕ್ರೇಜ್ ಇರುವುದು, ಹೆಚ್ಚು ಕಮೆಂಟ್ ಮೂಲಕ ಉತ್ತರ ಪಡೆದಿರುವುದು 'ಕರಿಮಣಿ' ಸೀರಿಯಲ್ ಹೀರೋ ಕರ್ಣ. ಇನ್ನು ಹೊಸದಾಗಿ ಬರುತ್ತಿರುವ ಕಿರಣ್ ರಾಜ್ 'ಕರ್ಣ' ಧಾರಾವಾಹಿಯ ಪ್ರೋಮೋ ಟ್ರೆಂಡಿಂಗ್ ಅನ್ನೇ ಸೃಷ್ಟಿಮಾಡಿತ್ತು.


Click it and Unblock the Notifications











