twitter
    For Quick Alerts
    ALLOW NOTIFICATIONS  
    For Daily Alerts

    ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

    |

    ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕ ಹಾಗೂ ದೇಶದಾದ್ಯಂತ ಚಿತ್ರೀಕರಣ ಯೋಜನೆಗಳು ಪುನರಾರಂಭಗೊಂಡ ಬಳಿಕ ಯಾವ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ಭಾರತೀಯ ನಿರ್ಮಾಪಕರ ಒಕ್ಕೂಟ ತಿಳಿಸಿದೆ.

    Recommended Video

    ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ , ಆದರೂ ಸಂಕಷ್ಟ ತಪ್ಪಿದ್ದಲ್ಲ | Serial | Television

    ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಈ ಹಿಂದೆ ಮಾಡುತ್ತಿದ್ದಂತೆಯೇ ಚಿತ್ರೀಕರಣ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೂಕ್ತ ರೀತಿಯ ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ. ಅದಕ್ಕಾಗಿ ನಿಯಮಾವಳಿಯ ರೂಪು ರೇಷೆ ಸಿದ್ಧಪಡಿಸಲಾಗುವುದು ಎಂದು ಅದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

    ಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತ

    ರಾಜ್ಯದಲ್ಲಿ ಮೇ 25ರಿಂದ ಚಿತ್ರೀಕರಣ ಆರಂಭಿಸಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಉದ್ದೇಶಿಸಿದೆ. ಹಾಗೆಯೇ ಕರ್ನಾಟಕ ಸರ್ಕಾರವು ಧಾರಾವಾಹಿಗಳ ಚಿತ್ರೀಕರಣಕ್ಕೆ ಮಾರ್ಗಸೂಚಿಗಳನ್ನು ನೀಡಿದೆ. ಅದನ್ನು ಟೆಲಿವಿಷನ್ ಅಸೋಸಿಯೇಷನ್ ಎಲ್ಲ ಮನರಂಜನಾ ವಾಹಿನಿಗಳಿಗೆ ಅದನ್ನು ರವಾನಿಸಿದೆ. ಅದರಲ್ಲಿನ ಕೆಲವು ಪ್ರಮುಖ ನಿಯಮಗಳು ಇಲ್ಲಿವೆ...

    ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ

    ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ

    ಯಾವುದೇ ಧಾರಾವಾಹಿ ಚಿತ್ರೀಕರಣವು ಅತ್ಯಂತ ಸಣ್ಣ ತಂಡದೊಂದಿಗೆ ನಡೆಯಬೇಕು. ಅಂತಹ ತಂಡದಲ್ಲಿ 18ಕ್ಕಿಂತ ಹೆಚ್ಚು ಜನ ಇರಬಾರದು. ಒಳಾಂಗಣ ಚಿತ್ರೀಕರಣ ಮಾತ್ರ ನಡೆಸಬೇಕು. ಹೊರಾಂಗಣ ಚಿತ್ರೀಕರಣ ನಡೆಸುವಂತಿಲ್ಲ.

    ಚಿತ್ರೀಕರಣಕ್ಕೆ ಹಾಜರಾಗುವ ಪ್ರತಿಯೊಬ್ಬರ ದೇಹದ ಉಷ್ಣತೆಯನ್ನು ಪ್ರವೇಶಕ್ಕೂ ಮೊದಲೇ ಪ್ರವೇಶಿಸಬೇಕು. ಉಷ್ಣತೆಯಲ್ಲಿ ವ್ಯತ್ಯಾಸವಿದ್ದವರನ್ನು ಚಿತ್ರೀಕರಣ ಸ್ಥಳದೊಳಗೆ ಸೇರಿಸಬಾರದು. ಇದಕ್ಕೆ ಬೇಕಾದ ಥರ್ಮಲ್ ಟೆಸ್ಟಿಂಗ್ ಉಪಕರಣಗಳನ್ನು ನಿರ್ಮಾಪಕರೇ ಒದಗಿಸಬೇಕು. ಚಿತ್ರೀಕರಣದಲ್ಲಿ ಭಾಗಿಯಾದವರ ಹೆಸರು, ವಿವರಗಳನ್ನು ಲಿಖಿತವಾಗಿ ಕಾಪಾಡಿಕೊಳ್ಳಬೇಕು. ಸರ್ಕಾರದ ಅಧಿಕಾರಿಗಳು ಕೇಳಿದಾಗ ಒದಗಿಸಬೇಕು.

    ಮಾಸ್ಕ್, ಗ್ಲೌಸ್ ಬಳಕೆ ಕಡ್ಡಾಯ

    ಮಾಸ್ಕ್, ಗ್ಲೌಸ್ ಬಳಕೆ ಕಡ್ಡಾಯ

    ಚಿತ್ರೀಕರಣ ಸ್ಥಳದಲ್ಲಿ ದೈಹಿಕ/ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚಿತ್ರೀಕರಣದ ಸ್ಥಳದಲ್ಲಿ ಸ್ಯಾನಿಟೈಸರ್, ಲಿಕ್ವಿಡ್ ಸೋಪ್, ಶುಚಿತ್ವ ಕಾಪಾಡಿಕೊಳ್ಳುವ ಸಾಮಗ್ರಿಗಳನ್ನು ನಿರ್ಮಾಪಕರೇ ಒದಗಿಸಬೇಕು. ಕ್ಯಾಮೆರಾ ಎದುರು ನಟಿಸುವ ಕಲಾವಿದರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮಾಸ್ಕ್, ಗ್ಲೌಸ್‌ಗಳನ್ನು ಎಲ್ಲ ಸಮಯದಲ್ಲಿಯೂ ಹಾಕಿಕೊಂಡಿರಬೇಕು.

    ಚಿತ್ರೀಕರಣದಲ್ಲಿ ಮೇಕಪ್ ಕಲಾವಿದರು ಮೊದಲು ಹೈಜೀನ್ ಕಾಪಾಡಿಕೊಳ್ಳಬೇಕು. ಒಬ್ಬರ ನಂತರ ಮತ್ತೊಬ್ಬರಿಗೆ ಮೇಕಪ್ ಮಾಡುವ ಮೂಲಕ ಪುನಃ ಶುಚಿತ್ವದ ಪ್ರಕ್ರಿಯೆ ನಡೆಸಬೇಕು. ಒದ್ದೆ ಬಟ್ಟೆಯ ಬದಲು ವೆಟ್ ಟಿಶ್ಯೂಗಳನ್ನು ಬಳಸಿ, ಬಳಿಕ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು.

    ಜಾಗ, ಉಪಕರಣ ಸ್ವಚ್ಛತೆ ಕಾಪಾಡಿಕೊಳ್ಳಬೇಕು

    ಜಾಗ, ಉಪಕರಣ ಸ್ವಚ್ಛತೆ ಕಾಪಾಡಿಕೊಳ್ಳಬೇಕು

    ಹಿಡನ್ ಮೈಕ್ ಬಳಸುವಾಗಲೂ ಹೈಜೀನ್ ಕಾಪಾಡಿಕೊಳ್ಳಬೇಕು. ಧ್ವನಿಗ್ರಹಣಕಾರರು ಗ್ಲೌಸ್ ಮತ್ತು ಮಾಸ್ಕ್ ಬಳಸಿಯೇ ಮೈಕ್ ಒದಗಿಸಬೇಕು. ಈ ಮೈಕ್‌ಗಳನ್ನು ಪ್ರತಿ ಬಳಕೆಯ ಬಳಿಕ ಡೆಟಾಲ್ ಮತ್ತು ಪಿನಾಯಿಲ್ ಹಾಕಿದ ಟಿಶ್ಯೂಪೇಪರ್‌ಗಳಿಂದ ಒರೆಸಿ ಬಳಸಬೇಕು. ಡಿಸ್ಪೋಸಬಲ್ ಗ್ಲೌಸ್ ಬಳಸಬೇಕು.

    ಚಿತ್ರೀಕರಣದ ಸ್ಥಳದಲ್ಲಿ ಮುಂಚಿತವಾಗಿ, ನಂತರದ ವಿರಾಮಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಬೇಕು. ಚಿತ್ರೀಕರಣ ಜಾಗದ ನೆಲ, ಬಾಗಿಲು, ಕಿಟಕಿ ಮುಂತಾದ ಪರಿಕರಗಳನ್ನು ಡೆಟಾಲ್ ಮತ್ತು ಪಿನಾಯಿಲ್‌ನಿಂದ ಸ್ವಚ್ಛಗೊಳಿಸಬೇಕು.

     'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ 'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ

    ವಾಹನ ವ್ಯವಸ್ಥೆ ನಿರ್ಮಾಪಕರದ್ದೇ

    ವಾಹನ ವ್ಯವಸ್ಥೆ ನಿರ್ಮಾಪಕರದ್ದೇ

    ಚಿತ್ರೀಕರಣಕ್ಕೆ ಬರುವ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ಪ್ರಯಾಣದ ಜವಾಬ್ದಾರಿ ನಿರ್ಮಾಪಕರದ್ದು. ವಾಹನಗಳಲ್ಲಿ ಬರುವವರು ಸರ್ಕಾರದ ನಿಯಮ ಪಾಲಿಸಬೇಕು. ವಾಹನದಲ್ಲಿ ಹೆಚ್ಚು ಜನರು ಪ್ರಯಾಣಿಸಿದರೆ ಅದಕ್ಕೆ ನಿರ್ಮಾಪಕರೇ ಹೊಣೆಗಾರರು. ಎಲ್ಲ ವಾಹನಗಳಿಗೂ ಸೋಂಕು ನಿವಾರಕ ಸಿಂಪಡಿಸಬೇಕು.

    ಕಲಾವಿದರ ಬಟ್ಟೆಗಳಿಗೆ ಇಸ್ತ್ರಿ ಮಾಡುವ ಪ್ರಕ್ರಿಯೆ ಸಂಪೂರ್ಣ ನಿಲ್ಲಿಸಬೇಕು. ಕಲಾವಿದರೇ ತಮ್ಮ ವಸ್ತ್ರಗಳನ್ನು ಸಿದ್ಧ ಸ್ಥಿತಿಯಲ್ಲಿ ತರಬೇಕು. ಚಿತ್ರೀಕರಣಕ್ಕೆ ಬರುವವರು ಬೇರೆ ಊರುಗಳಿಂದ ಬಂದವರಾದರೆ ಸರ್ಕಾರ ವಿಧಿಸಿರುವ ಸರ್ಕಾರ ವಿಧಿಸಿರುವ ಕ್ವಾರೆಂಟೀನ್ ಅವಧಿ ಮುಗಿಸಿದ ನಂತರವೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕು.

    ಉಲ್ಲಂಘನೆಯಾದರೆ ಚಿತ್ರೀಕರಣ ಸ್ಥಗಿತ

    ಉಲ್ಲಂಘನೆಯಾದರೆ ಚಿತ್ರೀಕರಣ ಸ್ಥಗಿತ

    ಊಟ ಉಪಚಾರದ ವ್ಯವಸ್ಥೆಯನ್ನು ಪ್ಯಾಕ್ಡ್ ಫುಡ್‌ಅನ್ನು ಸೀಲ್ ಮಾಡಿದ ಅಲ್ಯೂಮಿನಿಯಂ ಫಾಯಿಲ್ ಕಂಟೇನರ್ ಮೂಲಕವೇ ಪೂರೈಸಬೇಕು. ಯಾವುದೇ ಆಹಾರವನ್ನು ಯಾವುದೇ ವ್ಯಕ್ತಿ ನೇರವಾಗಿ ಕೈಯಲ್ಲಿ ಮುಟ್ಟುವುದನ್ನು ತಪ್ಪಿಸಬೇಕು. ಕಾಫಿ, ಟೀ ಇತ್ಯಾದಿಗಳನ್ನು ಪೇಪರ್ ಕಪ್ ಮೂಲಕ ಸೇವಿಸಬೇಕು. ಈ ಎಲ್ಲ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವುಗಳನ್ನು ಪಾಲಿಸುವುದು ನಿರ್ಮಾಪಕರ ಜವಾಬ್ದಾರಿ. ಯಾವುದೇ ಷರತ್ತಿನ ಉಲ್ಲಂಘನೆಯಾದರೂ ಅಂತಹ ಧಾರಾವಾಹಿಯ ಚಿತ್ರೀಕರಣ ನಿಲ್ಲಿಸಲು ಅಧಿಕಾರಿಗಳು ಸೂಚಿಸಬಹುದು

    English summary
    Karnataka Government has issued 16 conditions for Tv serial shooting, Karnataka Television Association statement.
    Wednesday, May 6, 2020, 18:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X