For Quick Alerts
  ALLOW NOTIFICATIONS  
  For Daily Alerts

  'ಆಕಾಶ ದೀಪ' ನಟಿಗೆ ಪತಿಯಿಂದ ಕಿರುಕುಳ: ಸಹಾಯಕ್ಕೆ ನಿಂತ ಮಹಿಳಾ ಆಯೋಗ

  |

  ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶ ದೀಪ' ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತನಾಗಿದ್ದ ನಟಿ ದಿವ್ಯಾ ಶ್ರೀಧರ್‌ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟಿ ದಿವ್ಯಾ ಶ್ರೀಧರ್‌ ಹಾಗೂ ನಟ ಅಮ್ಜದ್‌ ಖಾನ್‌ ಸಂಬಂಧದಲ್ಲಿ ಬಿರುಕು ಮೂಡಿದ್ದು, ಪತಿ ವಿರುದ್ಧ ನಟಿ ಗಂಭೀರ ಆರೋಪ ಮಾಡಿದ್ದಾರೆ.

  ಪತಿ ಅಮ್ಜದ್‌ ಖಾನ್‌ ವಿರುದ್ಧ ಆರೋಪ ಮಾಡಿದ್ದ ನಟಿ ದಿವ್ಯಾ, ಕಳೆದ 5 ವರ್ಷಗಳಿಂದ ನಾವು ಲೀವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದೇವೆ. ಲಾಕ್‌ಡೌನ್‌ನಲ್ಲಿ ಅಮ್ಜದ್ ಖಾನ್‌ಗೆ ಯಾವುದೇ ಕೆಲಸವಿರಲಿಲ್ಲ. ನಾನೇ ಎಲ್ಲವನ್ನೂ ನಿಭಾಯಿಸುತ್ತಿದೆ. ಮನೆ ಖರಿದೀಸಿ ಅದರ ಹಣವನ್ನು ಸಹ ನಾನೇ ಕಟ್ಟುತ್ತಿದ್ದೆ. ಅಮ್ಜದ್ ಖಾನ್‌ನನ್ನು ನಾನು ಮಗುವಿನಂತೆ ನೋಡಿಕೊಂಡಿದ್ದೇನೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ನಮ್ಮ ಮದುವೆಯಾಯಿತು ಎಂದು ಇನ್ಸ್ಟಾಗ್ರಾಮ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

  ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಆರೋಪ: ನಟಿ ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು ದಾಖಲುಅಪಾರ್ಟ್‌ಮೆಂಟ್‌ಗೆ ನುಗ್ಗಿದ ಆರೋಪ: ನಟಿ ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು ದಾಖಲು

  ಅಲ್ಲದೇ ಇತ್ತೀಚಿಗೆ ಅಮ್ಜದ್ ಖಾನ್‌ ಬೇರೆ ನಟಿಯ ಜೊತೆ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಗರ್ಭಿಣಿ ಎನ್ನುವುದುದನ್ನು ನೋಡದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ ನನಗೆ ಗರ್ಭಾಪಾತವಾಗಬಹುದು ಎಂದು ವಿಡಿಯೋದಲ್ಲಿ ಕಣ್ಣೀರು ಹಾಕಿದ್ದರು. ನಟ- ನಟಿಯರ ದಾಂಪತ್ಯದ ಬಿರುಕು ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ನಟಿ ದಿವ್ಯಾ ಶ್ರೀಧರ್‌ ಅಭಿಮಾನಿಗಳು ಆರೋಪಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

  ಇದೀಗ ನಟಿ ದಿವ್ಯಾ ಶ್ರೀಧರ್‌ ಹಾಗೂ ನಟ ಅಮ್ಜದ್‌ ಖಾನ್‌ ಪ್ರಕರಣದಲ್ಲಿ ಕರ್ನಾಟಕ ಮಹಿಳಾ ಆಯೋಗ ಪ್ರವೇಶ ಮಾಡಿದ್ದಾರೆ. ದಿವ್ಯಾ ಶ್ರೀಧರ್ ಕರ್ನಾಟಕ ಮೂಲದ ನಟಿಯಾಗಿರುವುದರಿಂದ ಮಹಿಳಾ ಆಯೋಗ ನಟಿಯ ಪರ ತಮಿಳು ನಾಡು ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ದೂರವಾಣಿ ಕರೆ ಮೂಲಕ ತಮಿಳು ನಾಡು ಮಹಿಳಾ ಆಯೋಗದ ಜೊತೆ ಮಾತನಾಡಿದ್ದು, ಕರ್ನಾಟಕದ ನಟಿಗೆ ರಕ್ಷಣೆ ಕೊಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

  ನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರನ ರಂಪಾಟ: ಮತ್ತೊಂದು ದೂರು ದಾಖಲುನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರನ ರಂಪಾಟ: ಮತ್ತೊಂದು ದೂರು ದಾಖಲು

  ಇನ್ನು ಲಿಖಿತ ರೂಪದಲ್ಲಿಯೂ ಮನವಿ ಸಲ್ಲಿಸಿರುವ ಕರ್ನಾಟಕ ಮಹಿಳಾ ಆಯೋಗ ನಟಿ ದಿವ್ಯಾ ಶ್ರೀಧರ್ ಅವರಿಗೆ ತಮಿಳು ನಾಡಿನಲ್ಲಿ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು. ಪತಿಯಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದೆ ಎಂದು ವರದಿಯಾಗಿದೆ.

  ನಟಿ ದಿವ್ಯಾ ಶ್ರೀಧರ್ ಕನ್ನಡದ ಆಕಾಶ ದೀಪ ಧಾರಾವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು. ಅಲ್ಲದೇ ಅನೇಕ ಚಿತ್ರಗಳಲ್ಲೂ ನಟಿಸಿದ್ದರು. ಕನ್ನಡ ಕಿರುತೆರೆಯಲ್ಲಿ ಯಶಸ್ವಿ ನಟಿಯಾದ ಬಳಿಕ ತಮಿಳು ಕಿರುತೆರೆಯತ್ತ ಮುಖ ಮಾಡಿದರು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಜನಪ್ರಿಯತೆ ಪಡೆದಿದ್ದು, ಸದ್ಯ ಚೆನ್ನೈನಲ್ಲಿ ಪತಿ ಅಮ್ಜದ್‌ ಖಾನ್‌ ಜೊತೆ ನೆಲೆಸಿದ್ದರು. ಇದೀಗ ಮದುವೆ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರಕ್ಕೆ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎನ್ನಲಾಗಿದೆ.

  English summary
  Karnataka womens commission enters into actress Divya Sridhar harassment case.
  Saturday, October 8, 2022, 14:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X