ಆತ್ಮೀಯ ಸ್ನೇಹಿತ ಜೆಕೆಗೆ ಸೂಪರ್ ಅಧಿಕಾರ ಕೊಟ್ಟ ತೇಜಸ್ವಿನಿ.!
'ದೊಡ್ಮನೆ'ಯಿಂದ ಹೊರಬರುವ ಮುನ್ನ ಎಂದಿನಂತೆ, ಎಲಿಮಿನೇಟ್ ಆದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸುವುದು ವಾಡಿಕೆ. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಈ ವಾರ ಎಲಿಮಿನೇಟ್ ಆದ ತೇಜಸ್ವಿನಿ, ಜೆಕೆ (ಜಯರಾಂ ಕಾರ್ತಿಕ್)ಗೆ ನೀಡಿದರು.
ಹಾಗ್ನೋಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಜೆಕೆ ಗುರುತಿಸಿಕೊಂಡಿದ್ದರೂ... ವಾದ, ವಿವಾದ, ವಾಕ್ಸಮರಗಳಿಗೆ ಜೆಕೆ ಅಷ್ಟಾಗಿ ಸೊಪ್ಪು ಹಾಕುವುದಿಲ್ಲ.

ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುವ ಜೆಕೆಗೆ, ನಟಿ ತೇಜಸ್ವಿನಿ 'ಸೂಪರ್ ಅಧಿಕಾರ' ನೀಡಿದ್ದಾರೆ. ಈ ಅಧಿಕಾರವನ್ನ ಜೆಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಸಸ್ಪೆನ್ಸ್.
ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಕೆಲ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಜೆಕೆ ಗರಂ ಆಗಿದ್ದರು. ಈ ವಾರ ಹೇಗಿದ್ದರೂ, ಜೆಕೆ ಕೈಯಲ್ಲಿ ಅಧಿಕಾರ ಇದೆ. ಅದನ್ನ ಸದುಪಯೋಗ ಪಡಿಸಿಕೊಂಡು ಕೆಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಾರಾ ಎನ್ನುವ ಕುತೂಹಲ ಸಹಜವಾಗಿ ಕಾಡುತ್ತಿದೆ.
More from Filmibeat
English summary
Bigg Boss Kannada 5 Contestant Karthik Jayaram gets Super Power from Tejaswini.
bigg boss kannada 5 bigg boss kannada news bigg boss tv colors channel tejaswini karthik jayaram ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್ ಟಿವಿ ಕಲರ್ಸ್ ವಾಹಿನಿ ಕಾರ್ತಿಕ್ ಜಯರಾಂ ತೇಜಸ್ವಿನಿ


Click it and Unblock the Notifications











