ಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆ

ಕನ್ನಡದ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯಲ್ಲಿ ಇಷ್ಟು ದಿನ ಸಾಮಾನ್ಯ ಜನರು ಮಾತ್ರ ಭಾಗವಹಿಸುತ್ತಿದ್ದರು. ಇದೇ ಮೊದಲ ಸಲ ಸೆಲೆಬ್ರಿಟಿಗಳು ಹಾಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದರು.

'ಧೀನ ಬಂಧು ಟ್ರಸ್ಟ್' ಮಕ್ಕಳಿಗಾಗಿ ಕೋಟ್ಯಧಿಪತಿ ಆಟ ಆಡಿದ ಈ ತಾರೆಯರು ಒಳ್ಳೆಯ ಮೊತ್ತವನ್ನೇ ಗೆದ್ದುಕೊಟ್ಟರು. ಮೊದಲು ಹಾಟ್ ಸೀಟ್ ಗೆ ಆಯ್ಕೆಯಾದ ಕಿರುತೆರೆ ನಟ ಭವಾನಿ ಸಿಂಗ್ ಒಂಭತ್ತು ಪ್ರಶ್ನೆಗಳಿ ಸರಿ ಉತ್ತರ ನೀಡಿ ಹತ್ತನೇ ಪ್ರಶ್ನೆಯಿಂದ ಆಟ ಕ್ವಿಟ್ ಮಾಡಿದ್ರು. ಹೀಗಾಗಿ, 1.60 ಲಕ್ಷ ಹಣ ಗೆದ್ದರು.

ನಂತರ ಎರಡನೇಯವರಿಗೆ ಹಾಟ್ ಸೀಟ್ ಗೆ ಬಂದ ಕಾರ್ತಿಕ್ ಜಯರಾಂ ದೊಡ್ಡ ಮೊತ್ತ ಗೆಲ್ಲುವ ಭರವಸೆ ಹುಟ್ಟಿಸಿದರು. ಆದರೆ, ಆಡಿಯೆನ್ಸ್ ಮೊರೆ ಹೋದ ಜೆಕೆ ಹಿನ್ನಡೆ ಅನುಭವಿಸಿದರು. ಕೈಯಲ್ಲಿದ್ದ ದೊಡ್ಡ ಮೊತ್ತ ಕಳೆದುಕೊಳ್ಳುವಂತಾಯಿತು. ಅಷ್ಟಕ್ಕೂ, ಜೆಕೆ ಗೆದ್ದ ಹಣವೆಷ್ಟು? ಮುಂದೆ ಓದಿ....

ಒಂಭತ್ತು ಪ್ರಶ್ನೆಗೆ ಉತ್ತರಿಸಿದ್ದ ಜೆಕೆ

ಒಂಭತ್ತು ಪ್ರಶ್ನೆಗೆ ಉತ್ತರಿಸಿದ್ದ ಜೆಕೆ

ಮೊದಲ ಐದು ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟಿದ್ದ ಜೆಕೆಗೆ ಹತ್ತು ಸಾವಿರ ರೂಪಾಯಿ ಖಚಿತವಾಗಿತ್ತು. ಬಳಿಕ ಎರಡನೇ ಸೇಫ್ ಝೋನ್ ಬಳಿ ನಿಂತ ಕಾರ್ತಿಕ್, ಒಂಭತ್ತು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಹತ್ತನೇ ಪ್ರಶ್ನೆಗೆ ಬಂದು ನಿಂತರು. ಆದ್ರೆ, ಹತ್ತನೇ ಪ್ರಶ್ನೆ ಕೈಯಹಿಡಿಲಿಲ್ಲ.

ಯಾವುದು ಆ ಪ್ರಶ್ನೆ?

ಯಾವುದು ಆ ಪ್ರಶ್ನೆ?

ನವೆಂಬರ್ 1, 1956ರಲ್ಲಿ ಡಾ ರಾಜೇಂದ್ರ ಪ್ರಸಾದ್ ಮೈಸೂರು ರಾಜ್ಯವನ್ನು ಎಲ್ಲಿ ಉದ್ಘಾಟಿಸಿದರು?

A ಸೆಂಟ್ರಲ್ ಕಾಲೇಜ್

B ವಿಧಾನಸೌಧ

C ಮೈಸೂರು ಅರಮನೆ

D ಅರಮನೆ ಮೈದಾನ

ಆಡಿಯೆನ್ಸ್ ಮೊರೆ ಹೋದ ಜೆಕೆ

ಆಡಿಯೆನ್ಸ್ ಮೊರೆ ಹೋದ ಜೆಕೆ

ಎರಡು ಲೈಫ್ ಲೈನ್ ಮುಗಿಸಿದ್ದ ಜೆಕೆ ಈ ಪ್ರಶ್ನೆಗೆ ಮೂರನೇ ಲೈಫ್ ಲೈನ್ ಬಳಸಿದರು. ಆಡಿಯೆನ್ಸ್ ಪೋಲ್ ಮರೆ ಹೋದ ಜೆಕೆಗೆ B ವಿಧಾನಸೌಧ ಎಂಬ ಉತ್ತರಕ್ಕೆ ಬಹುಮತ ಸಿಕ್ಕಿತ್ತು. ಆದರೂ ಗೊಂದಲದಲ್ಲಿದ್ದ ಜೆಕೆ ಆಡಿಯೆನ್ಸ್ ನೀಡಿದ ಉತ್ತರಕ್ಕೆ ಜೈ ಎಂದರು. ದುರಾದೃಷ್ಟವಶಾತ್ ಆ ಉತ್ತರ ತಪ್ಪು ಆಗಿತ್ತು.

3.20 ಲಕ್ಷದಿಂದ 10 ಸಾವಿರಕ್ಕೆ ಕುಸಿತ

3.20 ಲಕ್ಷದಿಂದ 10 ಸಾವಿರಕ್ಕೆ ಕುಸಿತ

ಒಂದು ವೇಳೆ ಈ ಪ್ರಶ್ನೆಗೆ ಸರಿ ಉತ್ತರ ನೀಡಿದ್ದರೆ ಜೆಕೆ ಎರಡನೇ ಸೇಫ್ ಝೋನ್ ಕ್ರಾಸ್ ಮಾಡುತ್ತಿದ್ದರು. ಕೈಯಲ್ಲಿ 3.20 ಲಕ್ಷ ಹಣ ಉಳಿದುಕೊಳ್ಳುತ್ತಿತ್ತು. ಆದ್ರೆ, ಆಡಿಯೆನ್ಸ್ ಬಹುಮತ ನೀಡಿದ್ದ ಉತ್ತರದ ಜಿಂದೆ ಹೋಗಿ ಆಟ ಕೈಚೆಲ್ಲಿದರು. ಯಾಕಂದ್ರೆ, ಆಡಿಯೆನ್ಸ್ ಹೇಳಿದ್ದ ಉತ್ತರ ತಪ್ಪಾಗಿತ್ತು. ಸರಿಯಾದ ಉತ್ತರ A ಸೆಂಟ್ರಲ್ ಕಾಲೇಜ್. ಅಲ್ಲಿಗೆ ಜೆಕೆ ಕೇವಲ 10 ಸಾವಿರ ಪಡೆದು ಆಟದಿಂದ ನಿರ್ಗಮಿಸಿದರು.

More from Filmibeat

English summary
Kannadada kotyadhipathi 4: Kannada actor Karthik jayaram participated in Kannadada kotyadhipathi. he lost bigg amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X