ನಮ್ಮ ಅಕ್ಕ ಕಾವ್ಯಾ ಕೈಹಿಡಿಯೋ ಹುಡುಗನಿಗೆ ಈ 5 ಗುಣಗಳಿರಬೇಕು; ಹಂಗಾದ್ರೆ ಗಿಲ್ಲಿ ಕಥೆ?
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಫ್ರೆಂಡ್ಶಿಪ್ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಆಕೆಯ ಹಿಂದೆ ಕಾವು ಕಾವು ಎಂದು ಗಿಲ್ಲಿ ಸುತ್ತುತ್ತಿದ್ದರು. ಆಕೆ ನನ್ನ ಕ್ರಶ್, ಲವ್ ಎನ್ನುವ ರೀತಿ ಆಡುತ್ತಿದ್ದರು. ಆದರೆ ಕಾವ್ಯಾ ಮಾತ್ರ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಾ ಬಂದಿದ್ದರು. ಶೋ ಮುಗಿದರೂ ಅಭಿಮಾನಿಗಳು ಮಾತ್ರ ಇಬ್ಬರನ್ನು ಒಟ್ಟಿಗೆ ನೋಡು ಬಯಸುತ್ತಿದ್ದಾರೆ.
ಗಿಲ್ಲಿ ಹಾಗೂ ಕಾವ್ಯಾ ಈಗ ಹಿಂದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಭಾಗವಹಿಸಿದ್ದರು. ಬಿಗ್‌ಬಾಸ್ ಮನೆಗೆ ಜಂಟಿ ಸ್ಪರ್ಧಿಗಳಾಗಿ ಹೋಗಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಹೆಚ್ಚಾಗಿತ್ತು. ಕೈಗೆ ಕಟ್ಟಿದ್ದ ದಾರ ತೆಗೆದರೂ ಗಿಲ್ಲಿ ಮಾತ್ರ ಕಾವ್ಯಾ ಬೆಂಬಲಕ್ಕೆ ನಿಂತರು. ಕೊನೆಯವರೆಗೂ ಆಕೆಯನ್ನು ಬಿಟ್ಟುಕೊಡಲಿಲ್ಲ. ಇಬ್ಬರು ಟಾಮ್ ಅಂಡ್ ಜೆರ್ರಿ ತರ ಕಿತ್ತಾಡುತ್ತಾ ವೀಕ್ಷಕರನ್ನು ರಂಜಿಸಿದ್ದರು.

ಗಿಲ್ಲಿ ಹಾಗೂ ಕಾವ್ಯಾ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಬಿಗ್‌ಬಾಸ್ ಶೋ ಬಳಿಕ ಇಬ್ಬರಿಗೂ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್, ನಮ್ಮ ಸ್ನೇಹ ಹೀಗೆ ಮುಂದುವರೆಯುತ್ತದೆ ಎಂದು ಕಾವ್ಯಾ ಹೇಳುತ್ತಿದ್ದಾರೆ. ಬಿಗ್‌ಬಾಸ್ ಫಿನಾಲೆ ದಿನ ಇಬ್ಬರ ದೊಡ್ಡ ಕಟೌಟ್ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದರು. ಇದೀಗ ಕಾವ್ಯಾ ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಆಕೆಯ ಸಹೋದರ ಕಾರ್ತಿಕ್ ಮಾತನಾಡಿದ್ದ ವೀಡಿಯೋ ವೈರಲ್ ಆಗ್ತಿದೆ.
ಕಾವ್ಯಾ ಬೆಂಬಲಕ್ಕೆ ಸಹೋದರ ಕಾರ್ತಿಕ್ ಸದಾ ನಿಲ್ಲುತ್ತಾರೆ. ಅಕ್ಕ ಬಿಗ್‌ಬಾಸ್ ಮನೆ ಒಳಗೆ ಇದ್ದಾಗ ಆಕೆಯ ಸೋಶಿಯಲ್ ಮೀಡಿಯಾ ಅಕೌಂಟ್ ನೋಡಿಕೊಂಡಿದ್ದರು. ಇನ್ನು ಫ್ಯಾಮಿಲಿ ರೌಂಡ್‌ನಲ್ಲಿ ಕಾರ್ತಿಕ್ ಹಾಗೂ ತಾಯಿ ಮನೆ ಒಳಗೆ ಹೋಗಿದ್ದರು. ಕಾವ್ಯಾ ಹೇಗೆ ಇರಬೇಕು, ಹೇಗೆ ಆಡಬೇಕು ಎಂದು ಇಬ್ಬರು ಸಲಹೆ ನೀಡುವ ಪ್ರಯತ್ನ ಮಾಡಿದ್ದರು. ಅದು ಬಹಳ ಚರ್ಚೆ ಹುಟ್ಟಾಕ್ಕಿತ್ತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಾರ್ತಿಕ್ ರೀಲ್ಸ್ ಮೂಲಕ ಗಮನ ಸೆಳೆಯುತ್ತಾರೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ವೇದಿಕೆಯಲ್ಲಿ ಒಮ್ಮೆ ಅಕ್ಕನ ಜೊತೆ ಕಾರ್ತಿಕ್ ಹೆಜ್ಜೆ ಹಾಕಿದ್ದರು. ಆಗ ಇಬ್ಬರ ಬಾಂಧವ್ಯದ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದರು. ಇದೇ ವೇಳೆ ಅನುಶ್ರೀ ಮಾತನಾಗಿ ನಿಮ್ಮ ಅಕ್ಕನ ಬಾಳಲ್ಲಿ ಬರುವ ಗಂಡು ಅರ್ಥಾತ್ ನಿಮ್ಮ ಭಾವ ಹೀಗಿರಬೇಕು ಎಂದು 5 ಗುಣಗಳನ್ನು ಹೇಳಿ ಎಂದಿದ್ದರು. ಆಗ ಗಿಲ್ಲಿ ಕೂಡ ಅಲ್ಲೇ ಇದ್ದರು. ಸದ್ಯ ಕಾರ್ತಿಕ್ ಆಡಿರುವ ಮಾತುಗಳನ್ನು ಗಿಲ್ಲಿಗೆ ಲಿಂಕ್ ಮಾಡಿ ಅಭಿಮಾನಿಗಳು ವೈರಲ್ ಮಾಡ್ತಿದ್ದಾರೆ.
ನಮ್ಮ ಅಕ್ಕನ ಕೈಹಿಡಿಯೋ ಹುಡುಗ ಸೈಲೆಂಟ್ ಆಗಿದ್ರೆ ಆಗಲ್ಲ, ನನ್ನ ವೈಬ್‌ಗೆ ಮ್ಯಾಚ್ ಆಗಬೇಕು, ನಾನು ಅವರೊಟ್ಟಿಗೆ ಫ್ರೆಂಡ್ಸಿ ಆಗಿರಬೇಕು.. ಕಾವ್ಯಾ ಯಾವುದಕ್ಕೂ ಸೋಲಲ್ಲ.. ನಮ್ಮ ಭಾವ ಸೋಲುವಂತೆ ಇರಬೇಕು.. ನನಗೆ ಶ್ರೀಕೃಷ್ಣನಂತಹ ಗಂಡ ಬೇಡ, ಶ್ರೀರಾಮನಂತಹ ಗಂಡಬೇಕು.. ಅವಳನ್ನು ಚೆನ್ನಾಗಿ ರಾಣಿ ತರ ನೋಡ್ಕೊಬೇಕು.. ನಮ್ಮ ರಾಕಿಭಾಯ್ ರಾಧಿಕಾ ಮೇಡಂನ ಯಾವ ತರ ನೋಡ್ಕೊತ್ತಾರೆ, ಹಂಗೆ ನೋಡ್ಕೊಬೇಕು ಎಂದು ಕಾರ್ತಿಕ್ ಹೇಳಿದ್ದರು. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ.
112 ದಿನಗಳ ಕಾಲ ಗಿಲ್ಲಿ ಹಾಗೂ ಕಾವ್ಯಾ ಬಿಗ್‌ಬಾಸ್ ಮನೆಯಲ್ಲಿ ಇದ್ದು ಫಿನಾಲೆ ಹಂತಕ್ಕೆ ಬಂದಿದ್ದರು. ಟಾಪ್-5 ಫೈನಲಿಸ್ಟ್‌ಗಳಲ್ಲಿ ಇಬ್ಬರೂ ಇದ್ದರು. ಕಾವ್ಯಾ 2ನೇ ರನ್ನರ್ ಅಪ್ ಏನಿಸಿಕೊಂಡರೆ ಗಿಲ್ಲಿ ಟ್ರೋಫಿ ಗೆದ್ದರು. ರಕ್ಷಿತಾ ಬದಲು ಟಾಪ್-2 ಸ್ಥಾನದಲ್ಲಿ ನಾನು ಇರಬೇಕಿತ್ತು ಎಂದು ಕಾವ್ಯಾ ಹೇಳುತ್ತಿದ್ದಾರೆ.


Click it and Unblock the Notifications











