For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಬರ್ತಿದೆ 'ಕಸ್ತೂರಿ ನಿವಾಸ' ಧಾರಾವಾಹಿ

  |

  ಕಸ್ತೂರಿ ನಿವಾಸ ಎಂದ ತಕ್ಷಣ ಡಾ ರಾಜ್ ಕುಮಾರ್ ಸಿನಿಮಾ ನೆನಪಿಗೆ ಬರುತ್ತಿದೆ. ಈಗ ಇದೇ ಹೆಸರಿನಲ್ಲಿ ಧಾರಾವಾಹಿ ಬರುತ್ತಿದೆ. ಒಂದು ವಿನೂತನ ವಿಚಾರದ ಕುರಿತು 'ಕಸ್ತೂರಿ ನಿವಾಸ' ಎಂಬ ಹೊಸ ಧಾರಾವಾಹಿಯನ್ನು ಉದಯ ಟಿವಿ ಇದೇ ಸೆಪ್ಟೆಂಬರ್ 9 ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಾರಂಬಿಸುತ್ತಿದೆ.

  ಈಗಾಗಲೇ ನಂದಿನಿ, ಕಾವೇರಿ, ನಾಯಕಿ, ಕ್ಷಮಾ, ನಾನು ನನ್ನ ಕನಸು ಎಂಬ ವಿಭಿನ್ನ ಕಥೆಗಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿ ಈಗ ಮತ್ತೊಂದು ವಿನೂತನ ಕಥೆಯ 'ಕಸ್ತೂರಿ ನಿವಾಸ'ಎಂಬ ಧಾರಾವಾಹಿಯನ್ನು ಪ್ರಾರಂಬಿಸುತ್ತಿದೆ. ಮನೆತನ, ಸಂಪ್ರಾದಾಯ , ಸಂಸ್ಕೃತಿ ಅಂತ ನಂಬಿರೋ ಪಾರ್ವತಿ ಒಂದ್ಕಡೆ ಆದ್ರೆ, ಕಟ್ಟು ಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕು ಅನ್ನೋ ಮೃದುಲಾ ಇನ್ನೋಂದ್ಕಡೆ. ಈ ಬೇರೆ ಬೇರೆ ಆಲೋಚನೆಗಳಿರೋ ಈ ಇಬ್ಬರನ್ನ ವಿಧಿ ಒಂದೆ ದಾರಿಯಲ್ಲಿ ನೆಡೆಯೋ ಹಾಗೆ ಮಾಡಿದರೆ ಹೇಗಿರುತ್ತದೆ ಎಂಬುದೆ ಈ ಧಾರಾವಾಹಿಯ ಕಥಾ ಹಂದರ.

  'ಬಿಗ್ ಬಾಸ್' ವಿರುದ್ಧ ತಿರುಗಿಬಿದ್ದ ನಟಿ ಮೇಲೆ ಕೇಸ್ ದಾಖಲು'ಬಿಗ್ ಬಾಸ್' ವಿರುದ್ಧ ತಿರುಗಿಬಿದ್ದ ನಟಿ ಮೇಲೆ ಕೇಸ್ ದಾಖಲು

  ಹಿಂದಿನ ಕಾಲದ ಆಲೋಚನೆಗಲಿಗೆ ಆಧುನಿಕತೆಯನ್ನು ಅಳವಡಿಸಿಕೊಂಡು ನಡೆಯುವದರಲ್ಲಿ ತಪ್ಪೇನಿದೆ ಎಂಬ ವಾದ ಧಾರಾವಾಹಿಯ ನಾಯಕಿ ಮೃದಲಾಳವಾದವಾದರೆ, ಹೆಣ್ಣು ಅಡುಗೆ ಮಾಡಬೇಕು, ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವ ಹಾಗೆ ಉಡುಗೆ ತೊಡುಗೆಗಳನ್ನ ಧರಿಸ ಬೇಕು ಎಂಬುದು ಪಾರ್ವತಿಯವಾದ. ಇವರುಗಳ ಮಧ್ಯೆ ತನ್ನ ಅಮ್ಮನ ಮಾತನ್ನು ಮೀರೋಕಾಗ್ದೆ, ಫ್ಯಾಶನ್ ಡಿಸೈನರ್ ಆಗೋ ಕನಸು ಕಾಣ್ತಿರೋ ನಾಯಕ ತನ್ನ ಮನಸ್ಸಿನ ಮಾತನ್ನು ಧಿಕ್ಕರಿಸೊಕೆ ಆಗ್ದೆ ಒದ್ದಾಡ್ತಿರೋ ಕಥೆ 'ಕಸ್ತೂರಿ ನಿವಾಸ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ ಮುಸ್ಸಂಜೆ ಮಹೇಶ್.

  ನಾಯಕಿ ಮೃದಲಾ ಪಾತ್ರವನ್ನು ನಟಿ ವರ್ಷಾ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟಿ ಆಶಾ ರಾಣಿ ಪಾರ್ವತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕ ನಟನಾಗಿ ದೀಲಿಪ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಹಾಗೆಯೇ ಅಕ್ಷತಾ ದಿವಟೆ, ರಾಜಗೋಪಾಲ ಜೋಶಿ, ರುತು, ಶಿಲಶ್ರೀ, ಸಿತಾರಾ ಹೀಗೆ ಹಲವಾರು ಪ್ರತಿಭಾವಂತ ಕಲಾವಿದರ ತಂಡು ಈ ಧಾರಾವಾಹಿಯಲ್ಲಿದೆ.

  ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'

  ದೇವಿ ಸ್ಟುಡಿಯೋಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯ ಜನಪ್ರಿಯ ನಟಿ ಜಯಶ್ರೀ ಈ ಧಾರಾವಾಹಿಯನ್ನ ಉದಯ ಟಿವಿಯ ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಮಾಣಿ ಛಾಯಾಗ್ರಹಣ ಮಾಡುತ್ತಿದ್ದಾರೆ. 'ಕಸ್ತೂರಿ ನಿವಾಸ' ಉದಯ ಟಿವಿಯಲ್ಲಿ ಇದೇ ಸೆಪ್ಟಂಬರ್ 09 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

  English summary
  'Kasturi Nivasa' new kannada serial will be telecasting in Udaya Tv from September 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X