ಬೆಳಗಾವಿ ಹುಡುಗ ಸೂರಜ್ ಹೂಗಾರ್ ಆಕ್ಟಿಂಗ್ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕಥೆಯೊಂದು ಶುರುವಾಗಿದೆ'ಯಲ್ಲಿ ನಾಯಕ ಯುವರಾಜ್ ಬಹದ್ದೂರ್ ಆಗಿ ಅಭಿನಯಿಸುತ್ತಿದ್ದ ಸೂರಜ್ ಹೂಗಾರ್ ಇದೀಗ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದಾರೆ.'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡ ಧಾರಾವಾಹಿ ನಾಯಕನಟ ಸೂರಜ್ ಹೂಗಾರ್ ನಟಿಸಿದ್ದು ಎರಡು ಮೂರು ಧಾರಾವಾಹಿಗಳಲ್ಲಾದರೂ ಮನೋಜ್ಞ ನಟನೆಯ ಮೂಲಕ ಮನೆ ಮಾತಾದ ನಟ.

ಬೆಳಗಾವಿಯ ಈ ಹುಡುಗ ಒಂದು ಕಲಾವಿದ ಕುಟುಂಬದಿಂದ ಬಂದಿದ್ದು ಇವರ ಅಜ್ಜನ ಕಾಲದಿಂದಲೂ ಎಲ್ಲರೂ ನಟರು. ಹೌದು, ಸೂರಜ್ ಅವರ ಅಜ್ಜ ರಂಗ ಕಲಾವಿದರಾಗಿದ್ದರು. ಅಷ್ಟೇ ಅಲ್ಲದೆ ಅವರ ಕುಟುಂಬದಲ್ಲಿ ಅನೇಕರು ಬೇರೆ ಬೇರೆ ಕಲಾ ಅಭಿರುಚಿಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಸೂರಜ್ ಹೂಗಾರ್ ಅವರು ನಟನೆಯನ್ನು ತಮ್ಮ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದು ನಟನೆಯಲ್ಲಿ ಮುಂದುವರೆಯುತ್ತಿದ್ದಾರೆ.

'ಮಂಗಳ ಗೌರಿ' ಮದುವೆ ಧಾರಾವಾಹಿ ಮೂಲಕ ನಟನೆ

'ಮಂಗಳ ಗೌರಿ' ಮದುವೆ ಧಾರಾವಾಹಿ ಮೂಲಕ ನಟನೆ

ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ "ಲಗ್ನಪತ್ರಿಕೆ" ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಿ ಸೈ ಎನಿಸಿಕೊಂಡಿರುವ ಸೂರಜ್ ಅವರು ತಮ್ಮ ನಟನ ಜರ್ನಿಯನ್ನು ಶುರುಮಾಡಿದ್ದು 'ಮಂಗಳ ಗೌರಿ' ಮದುವೆ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ಶಾರ್ಪ್ ಶೂಟರ್ ರಾಣ ಆಗಿ ಕಾಣಿಸಿಕೊಂಡ ಇವರು ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಎರಡನೇ ಧಾರಾವಾಹಿಯಲ್ಲಿಯೇ ನಾಯಕ ನಟನಾಗಿ ನಟಿಸುವ ಅವಕಾಶ ಪಡೆದ ಇವರು ತಮ್ಮ ಅಭಿನಯದ ಮೂಲಕವೇ ನಟನೆ ತಮಗೆ ರಕ್ತಗತವಾಗಿ ಬಂದಿದೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.

'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಿಂದ ಹೊರಕ್ಕೆ

'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಿಂದ ಹೊರಕ್ಕೆ

ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ನಟನಾ ಕ್ಷೇತ್ರ ಇವರನ್ನು ಕೈ ಬೀಸಿ ಕರೆಯಿತು. ಅದರ ಸಲುವಾಗಿ ಮುಂಬೈಗೆ ಹೋಗಿ ನಟನಾ ತರಬೇತಿಗಳನ್ನು ಪಡೆದು ವಾಪಸಾದರು. ತಕ್ಷಣ 'ಮಂಗಳ ಗೌರಿ ಮದುವೆ' ಧಾರಾವಾಹಿ ಇವರ ಪಾಲಿಗೆ ದೊರಕಿತು. ಅಲ್ಲಿ ಅದ್ಭುತವಾಗಿ ನಟಿಸಿ ತಮ್ಮ ನಟನೆಯನ್ನು ಸಾಬೀತು ಮಾಡಿದ ಸೂರಜ್ ಎರಡನೇ ಧಾರಾವಾಹಿ 'ಲಗ್ನಪತ್ರಿಕೆ'ಯಲ್ಲಿ ನಾಯಕನಾಗಿ ಮಿಂಚಿದರು. ಮುಂದೆ 'ಕಥೆಯೊಂದು ಶುರುವಾಗಿದೆ'ಯಲ್ಲಿ ನಟಿಸಿ ಆರಂಭದಲ್ಲೇ ಹೊರಬಂದಿದ್ದಾರೆ.

ಯಾವ ಪಾತ್ರದಲ್ಲೂ ನಟಿಸಲು ರೆಡಿ

ಯಾವ ಪಾತ್ರದಲ್ಲೂ ನಟಿಸಲು ರೆಡಿ

ಪಾತ್ರ ಯಾವುದೇ ಇದ್ದರೂ ಆ ಪಾತ್ರಕ್ಕೆ ನಾವೆಷ್ಟು ಜೀವಂತಿಕೆಯನ್ನು ಕೊಡುತ್ತೇವೆ ಎಂಬುದು ನಿಜವಾದ ನಟನ ಸಾಮರ್ಥ್ಯದ ಮೇಲಿರುತ್ತದೆ ಎಂದು ನಂಬುತ್ತಾರೆ ಸೂರಜ್. ನಾಯಕನ ಪಾತ್ರವೇ ಕೊಡಲಿ ವಿಲನ್ ಪಾತ್ರವೇ ಆಗಲಿ ಅಥವಾ ಇನ್ಯಾವುದೇ ಪಾತ್ರವಾದರೂ ಸರಿ ನಾವು ನಟನೆಯ ಮೂಲಕ ಅದಕ್ಕೆ ಎಷ್ಟು ಜೀವ ತುಂಬುತ್ತೇವೆ ಎಂಬುದೇ ನಮ್ಮ ನಿಜವಾದ ತಾಕತ್ತು ಎಂದು ನಂಬಿ ಅದನ್ನೇ ಪಾಲಿಸುತ್ತಿರುವ ನಟ ಸೂರಜ್ ಹೂಗಾರ್ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.

More from Filmibeat

English summary
Katheyondu Shuruvaagide serial Ex Yuvaraj Bahaddhur fame Sooraj Hoogar acting journey, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X