ಕಿರುತೆರೆ ಮೇಲೆ ಅಕ್ಷತಾ 'ಕಥೆಯೊಂದು ಶುರುವಾಗಿದೆ'.. ತೆರೆ ಹಿಂದೆ ನಟಿ ಹೇಗಿರ್ತಾರೆ?

By ಅನಿತಾ ಬನಾರಿ

ನಟನ ರಂಗಕ್ಕೆ ಕಾಲಿಡಬೇಕೆನ್ನುವುದು ಹಲವಾರು ಜನರ ಕನಸು. ಬಾಲ್ಯದಿಂದಲೇ ಈ ಕನಸು ಹೊತ್ತು ಅದರಡೆಗೆ ನಡೆಯುವ ಎಷ್ಟೋ ಜನರನ್ನು ನಾವು ನೋಡಿದ್ದೇವೆ. ಹೆಚ್ಚಿನವರು ತಮ್ಮ ಕನಸು ನನಸಾಗಿಸಲು ಶ್ರಮಪಟ್ಟು ಕೊನೆಗೂ ಯಶಸ್ಸು ಕಾಣುತ್ತಾರೆ. ನಟನೆ ಎಂದರೆ ಸಿನಿಮಾವಷ್ಟೇ ಅಲ್ಲ ನಾಟಕ ರಂಗ, ಕಿರುತೆರೆ ಹೀಗೆ ನಾನಾ ರೀತಿಯ ಅವಕಾಶಗಳು ನಮ್ಮ ಮುಂದಿರುತ್ತವೆ. ಇಂತಹ ಅವಕಾಶಗಳ ಮೂಲಕ ಮುನ್ನೆಲೆಗೆ ಬಂದು ತಮ್ಮ ಕನಸನ್ನು ನನಸು ಮಾಡಿರುವ ಹಲವರಲ್ಲಿ ಅಕ್ಷತಾ ದೇಶಪಾಂಡೆ ಕೂಡ ಒಬ್ಬರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಕೃತಿ ಆಗಿ ಅಭಿನಯಿಸುತ್ತಿರುವ ಅಕ್ಷತಾ ದೇಶಪಾಂಡೆ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಚೆಲುವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಕ್ಷತಾ ದೇಶಪಾಂಡೆ ಮೊದಲ ಧಾರಾವಾಹಿಯಲ್ಲಿಯೇ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕಿರುತೆರೆಯಲ್ಲಿ ಮತ್ತೆ ಮೋಡಿ

ಕಿರುತೆರೆಯಲ್ಲಿ ಮತ್ತೆ ಮೋಡಿ

'ಅಮೃತವರ್ಷಿಣಿ' ಧಾರಾವಾಹಿಯ ನಂತರ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಅಕ್ಷತಾ ದೇಶಪಾಂಡೆ. ಒಬ್ಬ ಫ್ಯಾಷನ್ ಡಿಸೈನರ್ ಅಪರ್ಣ ಆಗಿ ಕಾಣಿಸಿಕೊಂಡಿರುವ ಅಕ್ಷತಾ ದೇಶಪಾಂಡೆ ಅತ್ಯದ್ಭುತ ನಟನೆಯ ಮೂಲಕ ಕಿರುತೆರೆ ಪ್ರಿಯರ ಮೆಚ್ಚುಗೆ ಭಾಜನರಾಗಿದ್ದರು.

ಕಿರುತೆರೆಯ 'ಕಾವ್ಯಾಂಜಲಿ'

ಕಿರುತೆರೆಯ 'ಕಾವ್ಯಾಂಜಲಿ'

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಎಂಬ ಧಾರಾವಾಹಿಯಲ್ಲಿಯೂ ಕೂಡಾ ಈಕೆ ನಾಯಕಿಯಾಗಿ ಮಿಂಚಿದ್ದರು. 'ಕಾವ್ಯಾಂಜಲಿ' ಧಾರಾವಾಹಿ ಆರಂಭವಾದಾಗ ಸುಶ್ಮಿತಾ ಭಟ್ ಅವರು ಕಾವ್ಯ ಆಗಿ ನಟಿಸಿದ್ದರು. ಮುಂದೆ ಅವರು ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಾಗ ದೀಪಾ ಜಗದೀಶ್ ಅವರು ಕಾವ್ಯ ಪಾತ್ರಕ್ಕೆ ಆಯ್ಕೆ ಆದರು. ತದ ನಂತರ ದೀಪಾ ಜಗದೀಶ್ ಅವರು ಕೂಡಾ ಅಂಜಲಿ ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗವನ್ನು ತುಂಬಿದವರೇ ಅಕ್ಷತಾ ದೇಶಪಾಂಡೆ. ಧಾರಾವಾಹಿ ಮುಕ್ತಾಯಗೊಳ್ಳುವ ತನಕ ಕಾವ್ಯ ಆಗಿ ಅಭಿನಯಿಸಿದ್ದ ಅಕ್ಷತಾ ಇದೀಗ ಕೃತಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ದ್ವಿಪಾತ್ರದಲ್ಲಿ ನಟನೆ

ದ್ವಿಪಾತ್ರದಲ್ಲಿ ನಟನೆ

ಚಿಕ್ಕಂದಿನಿಂದಲೂ ನಟನೆಗೆ ಬರಬೇಕು, ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ಆಸೆ ಹೊತ್ತುಕೊಂಡಿದ್ದ ಅಕ್ಷತಾ ಅವರಿಗೆ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಾಗ ಬಹಳ ಸಂತೋಷವಾಗಿತ್ತು. "ದ್ವಿ ಪಾತ್ರದಲ್ಲಿ ಅದರಲ್ಲೂ ಎರಡು ಬೇರೆ ಬೇರೆ ತರಹದ ವ್ಯಕ್ತಿತ್ವವನ್ನು ಬಿಂಬಿಸುವಂತಹ ಪಾತ್ರ ಸಿಕ್ಕಾಗ ಬಹಳ ಚಾಲೆಂಜಿಂಗ್ ಅನಿಸಿತ್ತು. ಮಾತ್ರವಲ್ಲ ಇದು ತಮ್ಮ ನಟನ ಕೆರಿಯರ್‌ಗೆ ಒಂದು ಹೊಸ ಮೈಲಿಗಲ್ಲು ಎಂಬುದೇ ನನ್ನ ಮನಸ್ಸಲ್ಲಿತ್ತು" ಎಂದು ಹೇಳುವ ಅಕ್ಷತಾ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ‌.

English summary
Katheyondu Shuruvaagidhe Akshata Deshpande Is Happy That Her Childhood Dream Has Come True, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X