Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide: ಯುವರಾಜನನ್ನು ವರಿಸಿದ ಕೃತಿಗೆ ಹುಡುಗ ಹೀಗೆ ಇರಬೇಕಂತೆ!
ಎಲ್ಲರಿಗೂ ತಮ್ಮ ಜೀವನ ಸಂಗಾತಿ ಹೇಗಿರಬೇಕೆಂಬ ನಿರೀಕ್ಷೆ ಬಯಕೆ ಇದ್ದೆ ಇರುತ್ತದೆ. ಅದು ಹುಡುಗ ಆಗಲಿ, ಹುಡುಗಿಯಾಗಲಿ. ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ನಟ-ನಟಿಯರ ಜೀವನ ಸಂಗಾತಿಯ ನಿರೀಕ್ಷೆಗಳನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ.
ನಟಿಮಣಿಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತಮ್ಮಿಷ್ಟದ ವಿಚಾರಗಳನ್ನು ಪೋಸ್ಟರ್ ಮೂಲಕ ಹಂಚಿಕೊಂಡಿರುತ್ತಾರೆ. ಹೀಗಾಗಿ ಅವರ ಸೋಶಿಯಲ್ ಮೀಡಿಯಾ ಫಾಲೋ ಮಾಡಿದರೇನೆ ಅವರಿಷ್ಟ- ಕಷ್ಟಗಳು ಅರಿವಿಗೆ ಬರುತ್ತದೆ. ಈಗ ಕೃತಿ ತಮ್ಮ ಜೀವನ ಸಂಗಾತಿಯೊಂದಿಗೆ ಹೇಗಿರಬೇಕು ಎಂಬುದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಅಂಜಲಿ'
ಧಾರಾವಾಹಿಯ
ಮುದ್ದು
ಗುಮ್ಮ
ಈಗೇನು
ಮಾಡ್ತಿದ್ದಾರೆ
ಗೊತ್ತಾ?

ಯುವರಾಜನ ವರಿಸಿದ ಕೃತಿ ಎಲ್ಲಿಯವರು..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ʻಕಥೆಯೊಂದು ಶುರುವಾಗಿದೆʼ ಧಾರಾವಾಹಿ ಬರುತ್ತಿದೆ. ಮೂರು ಜನ ಹೆಣ್ಣು ಮಕ್ಕಳನ್ನು ಹೇಗಾದರೂ ಮಾಡಿ ಒಂದೊಳ್ಳೆ ಕುಟುಂಬಕ್ಕೆ ಮದುವೆ ಮಾಡಿಕೊಡಬೇಕು ಎಂಬುದು ಅಮ್ಮನ ಆಸೆಯಾಗಿದೆ. ಬಡ ಕುಟುಂಬವೇ ಆದರೂ ಮಕ್ಕಳನ್ನು ಶ್ರೀಮಂತಿಕೆಯಿಂದಾನೇ ಬೆಳೆಸಿದ್ದಾರೆ. ಈ ಧಾರಾವಾಹಿಯಲ್ಲಿ ಎರಡನೇ ಮಗಳ ಪಾತ್ರ ಮಾಡಿರುವವರೇ ಅಕ್ಷತಾ ದೇಶಪಾಂಡೆ. ಎರಡನೇ ಮಗಳಾದರೂ ತುಂಬಾ ಹೈಲೈಟ್ ಆಗುವಂತ ಪಾತ್ರ. ಉತ್ತರ ಕರ್ನಾಟಕ ಭಾಗದ ಅಕ್ಷತಾ ಅದ್ಭುತವಾಗಿ ನಟಿಸಿದ್ದಾರೆ. ಬೆಳಗಾವಿಯಿಂದ ಬಂದಂತಹ ಪ್ರತಿಭೆ ಇವರು.

ಯುವರಾಜನ ಕೈಹಿಡಿದ ಕೃತಿ
ವರ್ಣಿಕಾ ಮಾಡಿದ ತಪ್ಪಿಗೆ ಹಸೆಮಣೆ ಮೇಲೆ ಕೃತಿ ಕೂರುವಂತೆ ಆಯಿತು. ಕಡೆಯಲ್ಲಿ ಸತ್ಯಾಂಶ ಹೇಳಿ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಬೇಕೆಂದರೂ ಅದು ಸಾಧ್ಯವಾಗಲಿಲ್ಲ. ಹಠಕ್ಕೆ ಬಿದ್ದವನಂತೆ ಯುವರಾಜ್, ಕೃತಿಯನ್ನೇ ಮದುವೆಯಾದ. "ಎಲ್ಲಾ ಪ್ಲ್ಯಾನ್ ಮಾಡಿ ಇಲ್ಲಿಗೆ ಬಂದಿದ್ದೆ ಅಲ್ವಾ. ಇನ್ನು ಮುಂದೆ ಹೇಗಿರುತ್ತೆ ಎಂದು ತೋರಿಸುತ್ತೇನೆ." ಎಂದು ಕೃತಿಗೆ ಬುದ್ದಿ ಕಲಿಸುವ ಹಠಕ್ಕೆ ಬಿದ್ದವನಂತೆ ಮದುವೆಯಾಗಿದ್ದಾನೆ. ಸಾಮ್ರಾಟ್ ಮಾಡಿದ ಮೋಸ ತಿಳಿಯದೆ ಆ ಕಡೆ ವರ್ಣಿಕಾ ಬಂಧಿಯಾಗಿದ್ದಾಳೆ. ಯುವರಾಜನನ್ನು ಮದುವೆಯಾಗಿದ್ದಂತು ಆಯಿತು. ಇನ್ಮುಂದೆ ಜಗಳ ಅಲ್ಲ ಪ್ರೀತಿ ಚಿಗುರುವಂತೆ ಮಾಡಬೇಕಾಗಿದೆ. ಯಾವಾಗಲೂ ಜಗಳ ಆಡುವವರ ನಡುವೆ ಪ್ರೀತಿ ಹೇಗೆ ಚಿಗುರುತ್ತೆ ಎಂಬ ಕುತೂಹಲ ಎಲ್ಲರದ್ದು.

ಬಾಳ ಸಂಗಾತಿಯ ಆಸೆ ವ್ಯಕ್ತಪಡಿಸಿದ ಕೃತಿ
ಕೃತಿ ಅಲಿಯಾಸ್ ಅಕ್ಷತಾ ದೇಶಪಾಂಡೆ ತೆರೆ ಮೇಲೆ ಏನೋ ಯುವರಾಜನನ್ನು ವರಿಸಿದ್ದಾಳೆ. ಆದರೆ ಯುವರಾಜ, ಕೃತಿ ಆಸೆ ಪಡಬಹುದಾದಂತ ಹುಡುಗನೇ ಆಗಿರಬಹುದು. ಆದರೆ ಅಕ್ಷತಾ ಇಷ್ಟಪಡುವಂತ ಕ್ಯಾರೆಕ್ಟರ್ ಅಂತು ಅಲ್ಲ. ಬೋರಿಂಗ್ ಎಂದುಕೊಂಡೆ ವರ್ಣಿಕಾ ಬಿಟ್ಟು ಹೋಗಿರುವುದು. ಈಗ ಅಕ್ಷತಾ ತನ್ನ ರಿಯಲ್ ಲೈಫಿನ ಹುಡುಗನ ಬಗ್ಗೆ ತನ್ನ ಕನಸನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ತನ್ನ ಬಾಳ ಸಂಗಾತಿಯೊಂದಿಗೆ ಹೇಗಿರಬೇಕೆಂದು ಹೇಳಿದ್ದಾರೆ.

ಅಕ್ಷತಾ ಪೋಸ್ಟ್ ಗೆ ನೆಟ್ಟಿಗರು ಏನಂದ್ರು..?
ಅಕ್ಷತಾ ದೇಶಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೊಸ ಹೊಸದಾಗಿ ಫೋಟೊಶೂಟ್ ಮಾಡಿಸಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಾ ತಮ್ಮ ಫಾಲೋವರ್ಸ್ ಜೊತೆಗೆ ಸಂಪರ್ಕದಲ್ಲಿದ್ದಾರೆ. ಸುಮಾರು 68 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಹುಡುಗನ ಬಗೆಗಿನ ಆಸೆ ವ್ಯಕ್ತಪಡಿಸಿರುವ ಅಕ್ಷತಾಗೆ, "ನಿಮ್ಮ ಲೈಫ್ ಪಾರ್ಟನರ್ ಯಾರು ಅಂತಾನು ರಿವಿಲ್ ಮಾಡಿಬಿಡಿ, ಆಲ್ ದಿ ಬೆಸ್ಟ್ ಅಕ್ಕ, ಒಳ್ಳೆಯದಾಗಲಿ" ಹೀಗೆ ಹಲವು ರೀತಿಯಲ್ಲಿ ಅಕ್ಷತಾಗೆ ವಿಶ್ ಮಾಡಿದ್ದಾರೆ.