'ಕಥೆಯೊಂದು ಶುರುವಾಗುವ' ಹೊತ್ತಲ್ಲೇ ಯುವರಾಜ್ ಬದಲಾವಣೆ ಆಗ್ತಾರಾ? ಏನಿದು ಸುದ್ದಿ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಒಳ್ಳೆ ಒಪನಿಂಗ್ ಪಡೆದುಕೊಂಡಿದೆ. ಜನರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಕೃತಿ ಪಾತ್ರ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬಿದೆ. ಬಡತನವಿದ್ದರು, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂಬುದನ್ನು ಆ ಪಾತ್ರ ಕಲಿಸಿಕೊಟ್ಟಿದೆ. ಹಾಗೇ ತಪ್ಪು ಇಲ್ಲದೆ ಇದ್ದಾಗ ಯಾರಿಗೂ ಹೆದರ ಬಾರದು ಎಂಬುದನ್ನು ಆ ಪಾತ್ರದಿಂದ ರೂಢಿಸಿಕೊಂಡಂತಾಗಿದೆ.
ಇದು ಹೆಣ್ಣು ಮಕ್ಕಳಿಗೆ ಕೃತಿಯ ಆಯಾಮ. ಆದ್ರೆ ಯುವರಾಜ್ ಕ್ಯಾರೆಕ್ಟರ್ ಕೂಡ ಗಮನ ಸೆಳೆಯುತ್ತಿದೆ. ಯಾವಾಗಲೂ ಸಿಡಿಮಿಡಿಗೊಳ್ಳುವ ಕ್ಯಾರೆಕ್ಟರ್ ಅದು. ಹಾಗಂತ ಪ್ರೀತಿ ಮಾಡೋಕೆ ಬರಲ್ಲ ಅಂತಲ್ಲ. ಕೃತಿನ ಬಿಟ್ಟು ಬೇರೆಯವರೆಲ್ಲರನ್ನು ಪ್ರೀತಿ ಮಾಡೋಕೆ ಬರುತ್ತೆ. ಆ ಬಹದ್ದೂರ್ ಮನೆಯಲ್ಲಿ ಯುವರಾಜ್ ಕ್ಯಾರೆಕ್ಟರ್‌ಗೆ ಇವ್ರೆ ಮ್ಯಾಚ್ ಆಗ್ತಾ ಇದ್ದದ್ದು. ಆದ್ರೆ ಈಗ ಬದಲಾವಣೆ ಆಗ್ತಾ ಇದ್ದಾರೆ ಎಂಬ ಮಾಹಿತಿ ಹರಿದಾಡ್ತಾ ಇದೆ.

ಯುವರಾಜ್ ಪಾತ್ರದಲ್ಲಿ ಸೂರಜ್ ಹೂಗಾರ್
ಸದ್ಯ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಬಹದ್ದೂರ್ ಮನೆತನದ ಯುವರಾಜನಾಗಿ ಸೂರಜ್ ಹೂಗಾರ್ ಕಾಣಿಸಿಕೊಂಡಿದ್ದಾರೆ. ಗಟ್ಟಿ ಧ್ವನಿ, ಕೋಪ ಬಂದರೆ ಆ ರಿಯಾಕ್ಷನ್ ನೋಡುವುದಕ್ಕೆ ಭಯವಾಗಬೇಕೆಂಬ ರೀತಿಯಲ್ಲಿ ಇರುತ್ತೆ. ಆದರೆ ಯುವರಾಜ್ ಪಾತ್ರದಲ್ಲೀ ಸೂರಜ್ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ನಟನೆ ಮಾಡ್ತಾರೆ ಅಂತ ಒಬ್ಬರು ಅಂದ್ರೆ, ಇಲ್ಲ ಇಲ್ಲ ಈ ಪಾತ್ರಕ್ಕೆ ಅವರು ಮ್ಯಾಚ್ ಆಗ್ತಾ ಇಲ್ಲ ಅಂತ ಇನ್ನೊಬ್ಬರ ಅಭಿಪ್ರಾಯವಾಗಿದೆ.

ಶೀಘ್ರದಲ್ಲಿಯೇ ಬದಲಾವಣೆ
ಧಾರಾವಾಹಿಗಳಲ್ಲಿ ಪಾತ್ರ ಬದಲಾವಣೆಯಾಗುವುದು ಹೊಸದೇನು ಅಲ್ಲ. ಟಿಆರ್‌ಪಿಯಲ್ಲಿ ನಂಬರ್ ಒನ್ ಇರುವಂತ ಧಾರಾವಾಹಿಗಳಲ್ಲೂ ಪಾತ್ರಗಳ ಬದಲಾವಣೆಯಾಗುತ್ತೆ. ಮೊದಲಿಗೆ ಇದ್ದವರನ್ನೇ ಆ ಪಾತ್ರ ಆವರಿಸಿಕೊಂಡು ಬಿಟ್ಟಿರುತ್ತೆ. ಆದ್ರೆ ನಂತರ ಆ ಪಾತ್ರಕ್ಕೆ ಬರುವವರನ್ನು ಪ್ರೇಕ್ಷಕರು ಸ್ವೀಕರಿಸುವುದಕ್ಕೆ ಸಿದ್ದವಾಗಿರುವುದಿಲ್ಲ. ಸಾಕಷ್ಟು ಸಲ ಪಾತ್ರ ಬದಲಾದಾಗ ಧಾರಾವಾಹಿಯೂ ಸೋಲುತ್ತದೆ. ಸದ್ಯಕ್ಕೆ ಯುವರಾಜ್ ಪಾತ್ರ ಬದಲಾಗುತ್ತೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸ್ಟಾರ್ ಸುವರ್ಣ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ.

ಸೂರಜ್ ಪರ ನಿಂತ ಹೆಣ್ಣು ಮಕ್ಕಳು..!
ಇನ್ನು 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ನಟ ಯುವರಾಜ್ ಸದ್ಯದಲ್ಲಿಯೇ ಬದಲಾಗಲಿದ್ದಾರೆ ಎಂಬ ಪೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಾ ಇದೆ. ಸಾಕಷ್ಟು ಜನ ಇದಕ್ಕೆ ಕಮೆಂಟ್ ಮಾಡಿದ್ದಾರೆ. "ಒಳ್ಳೆಯ ಸುದ್ದಿ ಇದು. ಆ ಪಾತ್ರಕ್ಕೆ ಅವರು ಮ್ಯಾಚ್ ಆಗುತ್ತಾ ಇರಲಿಲ್ಲ" ಅಂತ ಕೆಲವರು ಮೆಸೇಜ್ ಮಾಡಿದ್ದಾರೆ. ಇನ್ನು ಕೆಲವರು ಯುವರಾಜ್ ಪಾತ್ರಕ್ಕೆ ಪವನ್ ರವೀಂದ್ರ ಹಾಗೂ ಅಜಯ್ ಸತ್ಯನಾರಾಯಣ್ ಅವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದರ ನಡುವೆ ಸೂರಜ್ ಹೂಗಾರ್ ಪರ ಹೆಣ್ಣು ಮಕ್ಕಳು ಧ್ವನಿ ಎತ್ತಿದ್ದಾರೆ.

ಬೆಳಗಾವಿಯ ಪ್ರತಿಭೆ ಈ ಜೋಡಿ..!
'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ವಿಧಿಯಾಟದಂತೆ ಕೃತಿ ಮತ್ತು ಯುವರಾಜ್ ಮದುವೆಯಾಗಿದೆ. ಸದ್ಯ ಹಾವು ಮುಂಗುಸಿಯಂತಿರುವ ಈ ಜೋಡಿ ಸದಾ ಕಿತ್ತಾಡಿಕೊಳ್ಳುತ್ತಾರೆ. ಆದ್ರೆ ವಾಹಿನಿಗೋಸ್ಕರ ಪ್ರೇಮಿಗಳ ದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಯುವರಾಜ್ ಹಾಗೂ ಕೃತಿ ಖುಷಿ ಖುಷಿಯಾಗಿ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಇಬ್ಬರು ಕಲಾವಿದರು ಒಂದೇ ಜಿಲ್ಲೆಯವರು. ಬೆಳಗಾವಿಯಿಂದ ಬೆಂಗಳೂರಿಗೆ ಬಂದಿದ್ದು, ಈ ಜೋಡಿಗೆ ಒಂದಷ್ಟು ಮಂದಿ ಫಿದಾ ಆಗಿದ್ದಾರೆ.


Click it and Unblock the Notifications











