Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide: 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಸೆಟ್‌ನಲ್ಲಿ ಖಳನಾಯಕಿ ಮಾತಂಗಿ ಖದರೇ ಬೇರೆ
ಒಂದು ಧಾರಾವಾಹಿಯಾಗಲಿ, ಸಿನಿಮಾವಾಗಲಿ ಅಲ್ಲೊಬ್ಬರು ವಿಲನ್ ಇದ್ದಾಗಲೇ ಕಥೆಗೆ ಒಂದಷ್ಟು ಟ್ವಿಸ್ಟ್ ಸಿಗೋದು, ನಾಯಕ - ನಾಯಕಿಗೆ ಪ್ರಾಮುಖ್ಯತೆ ಸಿಗೋದು. ಈ ವಿಲನ್ ಅನ್ನೋದು ಬರೀ ಕಥೆಯಲ್ಲಿ ಅಷ್ಟೇ ಅಲ್ಲ. ಎಷ್ಟೋ ಜನರ ಜೀವನದಲ್ಲೂ ವಿಲನ್‌ಗಳು ಇದ್ದೆ ಇರುತ್ತಾರೆ. ಸ್ಟಾರ್ ಸುವರ್ಣದಲ್ಲಿ ಹೊಸದಾಗಿ ಶುರುವಾಗಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲೂ ಸೂಪರ್ ವಿಲನ್ ಇದ್ದಾರೆ.
ವರ್ಣಿಕಾ ಮನೆ ಬಿಟ್ಟು ಹೋದಾಗ ಸತ್ಯಾಂಶವನ್ನು ಮನೆಯವರಿಗೆಲ್ಲಾ ತಿಳಿಸಿ, ತಪ್ಪಾಯ್ತು ಎಂದು ಬೇಡಿಕೊಳ್ಳುವ ತಯಾರಿಯಲ್ಲಿದ್ದರು ಕೃತಿ ಮನೆಯವರು. ಆದ್ರೆ ಅಷ್ಟೊಳ್ಳೆ ಕೆಲಸ ಮಾಡುವುದಕ್ಕೆ ಮಾತಂಗಿ ಬಿಡಲೇ ಇಲ್ಲ. ಬದಲಿಗೆ ಹೆದರಿಸಿ, ಹಸೆಮಣೆ ಮೇಲೆ ಕೂರುವಂತೆ ಮಾಡಿದ್ದು ಇದೇ ಮಾತಂಗಿ.
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ

ಮಾತಂಗಿ ಪಾತ್ರದಲ್ಲಿ ಭವಾನಿ ಮೋಡಿ
ಸದ್ಯ ಖಳನಾಯಕಿಯಾಗಿದ್ದರು, ಮನೆಯವರ ಮುಂದೆ ಮನೆಗೆ ಒಳಿತನ್ನೇ ಬಯಸುವ ಮಗಳಾಗಿದ್ದಾರೆ. ಆದರೆ ಒಳಗೊಳಗೆ ಮಾಡುವುದೆಲ್ಲ ಇಕ್ಕಟ್ಟಿಗೆ ಸಿಲುಕಿಸುವಂತ ಕೆಲಸ. ಮೊದಲಿನಿಂದಲೂ ಖಳನಾಯಕಿಯಾಗಿಯೃ ಅಭಿನಯಿಸುತ್ತಿರುವ ಭವಾನಿ ಪ್ರಕಾಶ್‌ಗೆ ಮಾತಂಗಿ ಪಾತ್ರ ಹೇಳಿ ಮಾಡಿಸಿದಂತೆ ಇದೆ. ಅದೆಂತಹದ್ದೇ ಪಾತ್ರವಾಗಿರಲಿ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಮಾತಂಗಿ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಭವಾನಿ ಪ್ರಕಾಶ್.

ಶೂಟಿಂಗ್ ಸೆಟ್‌ನಲ್ಲಿ ಏನು ಮಾಡ್ತಾರೆ?
ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಬರೀ ಶೂಟಿಂಗ್ ಅಷ್ಟೇ ನಡೆಯೋದಿಲ್ಲ. ಅದರ ಹೊರತಾಗಿಯೂ ಹೆಚ್ಚಿನ ಫನ್ ನಡೆಯುತ್ತೆ. ಕಲಾವಿದರ ಟ್ಯಾಲೆಂಟ್ ಹೊರಗೆ ಬರುತ್ತೆ. ಇತ್ತೀಚೆಗೆ ರೀಲ್ಸ್‌ಗೆ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಲಾವಿದರು, ಸೈಕಲ್ ಗ್ಯಾಪ್ ಸಿಕ್ಕಿದರು ರೀಲ್ಸ್‌ನಲ್ಲಿ ಮುಳುಗಿ ಹೋಗುತ್ತಾರೆ. ಇದೀಗ ಭವಾನಿ ಪ್ರಕಾಶ್ ಅವರ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರೂ ಅದೇ ಕಾಣುತ್ತದೆ. ಹೆಚ್ಚಿನದ್ದು ರೀಲ್ಸ್ ಕಾಣಬಹುದು. ಜೊತೆಗೆ ಕಥೆಯೊಂದು ಶುರುವಾಗಿದೆ ಕಲಾವಿದರ ಜೊತೆಗೆ ಶೂಟಿಂಗ್ ಗ್ಯಾಪ್‌ನಲ್ಲಿ ಕುಣಿದು ಕುಪ್ಪಳಿಸುತ್ತಾರೆ.

ಯಾವ ಪಾತ್ರಗಳ ಆಯ್ಕೆ ಹೆಚ್ಚು ?
ಭವಾನಿ ಪ್ರಕಾಶ್ ಎಂದಾಕ್ಷಣಾ ಎಲ್ಲರಿಗೂ ಹೆಚ್ಚು ನೆನಪಾಗುವುದು 'ದೊರೆಸಾನಿ' ಧಾರಾವಾಹಿಯ ಸತ್ಯವತಿ ಪಾತ್ರ. ಆ ಪಾತ್ರಕ್ಕೆ ಅದೆಷ್ಟು ಒತ್ತು ನೀಡಿದ್ದರು ಎಂಬುದು ಅವರು ಮಾಡಿದ ಪಾತ್ರದಲ್ಲಿಯೇ ತಿಳಿಯುತ್ತಿತ್ತು. ಅಂಥಹ ಪಾತ್ರವನ್ನು ಹೆಚ್ಚಾಗಿ ಯಾರು ಒಪ್ಪುಕೊಳ್ಳುವುದಿಲ್ಲ. ಯಾಕಂದ್ರೆ ತಮ್ಮ ಹಾವಭಾವದಿಂದಾನೇ ಆ ಪಾತ್ರ ಕೂಡಿತ್ತು. ಅಂತಹ ಪಾತ್ರವನ್ನು ಭವಾನಿ ಪ್ರಕಾಶ್ ಮಾಡಿ ಗೆದ್ದಿದ್ದರು. ಹೀಗಾಗಿ ಅವರನ್ನು ಸತ್ಯವತಿ ಎಂದೇ ಗುರುತಿಸುತ್ತಾರೆ. ಭವಾನಿ ಪ್ರಕಾಶ್ ಕೂಡ ಇಂಥದ್ದೆ ಪಾತ್ರ ಬೇಕು ಎನ್ನುವವರು ಅಲ್ಲ. ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಗುಣ ಅವರದ್ದು.

ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್
ಭವಾನಿ ಪ್ರಕಾಶ್ ಒಂದೊಂದು ಧಾರಾವಾಹಿಯಲ್ಲಿ ಒಂದೊಂದು ರೀತಿಯ ಪಾತ್ರವನ್ನು ಮಾಡುತ್ತಾರೆ. ಅವರು ತೆರೆಯ ಮೇಲೆ ಹೇಗೆ ಇದ್ದರು, ರಿಯಲ್ ಆಗಿ ತುಂಬಾ ಹಂಬಲ್ ಪರ್ಸನ್ ಎನ್ನುವವರೇ ಜಾಸ್ತಿ. ತನ್ನ ಸುತ್ತಮುತ್ತ ಇರುವವರನ್ನು ಯಾವಾಗಲೂ ನಗಿಸುತ್ತಾ ಇಟ್ಟುಕೊಳ್ಳಬೇಕೆಂಬ ಸ್ವಭಾವದವರು. ಜೊತೆಗೆ ತುಂಬಾ ಕಾಳಜಿ ತೋರುವಂತ ಗುಣ ಇದೆ ಭವಾನಿ ಪ್ರಕಾಶ್ ಅವರಿಗೆ. ಹೀಗಾಗಿ ಧಾರಾವಾಹಿಯಲ್ಲಿ ದುಷ್ಮನ್ ಆದವರು ಕೂಡ ರಿಯಲ್ ಲೈಫ್‌ನಲ್ಲಿ ಅವರಿಗೆ ಫ್ರೆಂಡ್ ಆಗದೆ ಇರುವುದಿಲ್ಲ.