Katheyondu Shuruvagide: ಯುವನ ಕೈಗೆ ವರ್ಣಿಕಾ..ಮಾತಂಗಿ ಕೈಗೆ ಸಹನಾ.. ಕೃತಿಗೆ ತಲೆ ನೋವು!
ಯುವರಾಜ್ ಬಹದ್ದೂರ್‌ಗೆ ಇನ್ನು ಕೂಡ ಕೃತಿ ಮೇಲೆ ಸಂಪೂರ್ಣವಾಗಿ ನಂಬಿಕೆ ಬರುತ್ತಿಲ್ಲ. ಅನಿರೀಕ್ಷಿತವಾಗಿ ಕೃತಿ ಮತ್ತು ಯುವನ ಭೇಟಿಯಾದರೂ ಕೂಡ ಕೃತಿಯೇ ಬೇಕು ಅಂತ ಪ್ಲ್ಯಾನ್ ಮಾಡಿದ್ದಾಳೆ. ನನ್ನ ಕಣ್ಣ ಮುಂದೆ ಬೇಕು ಅಂತಾನೇ ಎದುರಿಗೆ ಬರುತ್ತಿದ್ದಾಳೆ. ಏನೋ ಪ್ಲ್ಯಾನ್ ಮಾಡಿದ್ದಾಳೆ ಅಂತೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದ. ಆ ಬಳಿಕ ಮದುವೆಯ ದಿನವಂತೂ ರಂಪ ರಾದ್ದಾಂತ ಮಾಡಿಯೇ ಬಿಟ್ಟ.
ಕೃತಿಯನ್ನು ಅನಿವಾರ್ಯತೆಗಾಗಿ, ಹಠದಿಂದ ಮದುವೆಯಾದ ಯುವನಿಗೆ ಮದುವೆಯಾಗುವುದಕ್ಕಾಗಿ ಕೃತಿಯೇ ಪ್ಲ್ಯಾನ್ ಮಾಡಿದ್ದಾನೆ ಎಂಬ ಅನುಮಾನ. ನಡೆದದ್ದು ಏನು..? ಇಷ್ಟಕ್ಕೆಲ್ಲಾ ಕಾರಣ ಯಾರು ಎಂದು ತಿಳಿಸಿದರು ಕೂಡ ಯುವ ಇದನ್ನೆಲ್ಲಾ ನಂಬುವುದಕ್ಕೆ ಸಿದ್ಧವಿಲ್ಲ. ಅದಕ್ಕೆಲ್ಲಾ ಉತ್ತರ ವರ್ಣಿಕಾ ಸಿಕ್ಕ ಮೇಲೆ ಸಿಗಲಿದೆ ಎಂಬ ನಂಬಿಕೆ. ಅದಕ್ಕಾಗಿ ಈಗ ವರ್ಣಿಕಾ ಇರುವ ಜಾಗಕ್ಕೆ ಹೊರಟಿದ್ದಾನೆ.

ಮಾತಂಗಿಗೆ ತಿಳಿಯಿತು ಸತ್ಯ..!
ಯುವನ ಮೇಲಿದ್ದ ಕೋಪಕ್ಕೆ ಸಾಮ್ರಾಟ್ ಮದುವೆ ಮನೆಯಿಂದ ಹುಡುಗಯನ್ನೇನೋ ಕರೆದುಕೊಂಡು ಬಂದು ಬಿಟ್ಟ. ಯುವನ ಮೇಲಿನ ದ್ವೇಷಕ್ಕೆ ಪ್ರೀತಿಸುವ ನಾಟಕವನ್ನು ಆಡಿ ಬಿಟ್ಟ. ಆದರೆ ಅದೇ ಅವನಿಗೆ ಈಗ ಭಾರವಾಗಿ ಕಾಡುತ್ತಿದೆ. ಇತ್ತ ವರ್ಣಿಕಾಳಿಂದ ತಪ್ಪಿಸಿಕೊಂಡು ಓಡಾಡುವುದಕ್ಕೆ ಆಗುತ್ತಿಲ್ಲ. ಅತ್ತ ಮನೆಯಲ್ಲಿ ಸಂಪೂರ್ಣವಾಗಿ ಇರುವುದಕ್ಕೆ ಆಗುತ್ತಿಲ್ಲ. ಅತ್ತ ಮಾತಂಗಿಗೆ ಬೇರೆ ವಿಚಾರ ಗೊತ್ತಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಕಷ್ಟದ ಸಮಯಕ್ಕೆ ಬರುತ್ತಾನಾ ಸಾಮ್ರಾಟ್..?
ಮನೆಯಲ್ಲಿ ಈ ವಿಚಾರ ಸಂಭಾಳಿಸುವುದಕ್ಕೆ ಆಗದೆ ಸಾಮ್ರಾಟ್ ಒದ್ದಾಡುತ್ತಿದ್ದಾನೆ. ಅದರ ಜೊತೆಗೆ ವರ್ಣಿಕಾ ಹಾಗೂ ಸಾಮ್ರಾಟ್ ಉಳಿದುಕೊಂಡಿರುವ ಹೊಟೇಲ್ ಬಿಲ್ ಹನುಮಂತನ ಬಾಲ ಬೆಳೆದಂತೆ ಬೆಳೆಯುತ್ತಾ ಇದೆ. ಹೊಟೇಲ್ ಮಾಲೀಕರು ಬಂದು ಆ ಬಗ್ಗೆ ಕೇಳುತ್ತಿದ್ದಾರೆ. ಇದೇ ಸಮಯಕ್ಕೆ ಸಾಮ್ರಾಟ್ ಜೊತೆಯಲ್ಲಿ ಇಲ್ಲ. ಪೂರ್ತಿ ಅಮೌಂಟ್ ಈಗಲೇ ಬಂದು ಕಟ್ಟುತ್ತೀನಿ. ನೀವೂ ರಿಸೆಪ್ಶನ್‌ನಲ್ಲಿಯೇ ಇರಿ ಅಂತ ವರ್ಣಿಕಾ ಸಮಾಧಾನ ಮಾಡಿ ಅಂತು ಕಳುಹಿಸಿ ಬಿಟ್ಟಳು. ಆದ್ರೆ ಬಿಲ್ ಕಟ್ಟಲೇ ಬೇಕಾದಂತ ಪರಿಸ್ಥಿತಿಯಲ್ಲಿ ಸಾಮ್ರಾಟ್ ಬಿಟ್ಟು ಹೋಗಿದ್ದಾನೆ. ಈಗ ವರ್ಣಿಕಾಳಿಗೆ ದಾರಿ ಕಾಣದಂತೆ ಆಗಿದೆ.

ಎಸ್ಕೇಪ್ ಆಗುವುದಕ್ಕೆ ದಾರಿ ಇದೆಯಾ..?
ಎಲ್ಲಾ ಮೋಸಕ್ಕೂ ಉತ್ತರ ಸಿಗಬೇಕು ಅಂದ್ರೆ ಮೊದಲು ವರ್ಣಿಕಾ ಸಿಗಬೇಕು ಅಂತ ಬಯಸುತ್ತಿದ್ದ ಯುವರಾಜನಿಗೆ ವರ್ಣಿಕಾ ಇರುವ ಜಾಗದ ಮಾಹಿತಿ ಸಿಕ್ಕಿದೆ. ಮನೆಯಿಂದ ಹೋಗುವಾಗಲೂ ಅದೇ ಖುಷಿಯಲ್ಲಿ ಹೋಗಿದ್ದಾನೆ. ಕೃತಿಗೂ ಹೇಳಿ ಹೋಗಿದ್ದಾನೆ. ಅಂತು ಇಂತು ವರ್ಣಿಕಾ ಇರುವ ಹೊಟೇಲ್ ಬಳಿ ತಲುಪಿರುವ ಯುವರಾಜ್, ಪೊಲೀಸಿನವರಿಗೂ ಮಾಹಿತಿ ಕೊಡಿಸಿದ್ದಾನೆ. ಆ ಕಡೆ ಸಾಮ್ರಾಟ್, ಯುವನನ್ನು ನೋಡಿ ಕಂಗಾಲಾಗಿದ್ದಾನೆ. ವರ್ಣಿಕಾ ಏನಾದರೂ ಆಗಲಿ, ನನ್ನ ಜೀವ ಉಳಿಯಲಿ ಅಂತ ಓಡಿ ಹೋಗಿದ್ದಾನೆ.

ಮಾತಂಗಿ ಕೈಗೆ ಸಿಕ್ಕಿ ಬಿದ್ದಳು ಸಹನಾ..!
ಕೃತಿಯನ್ನು ಮನೆ ತುಂಬಿಸಿಕೊಳ್ಳುವಾಗಲೇ ಶಾಂತಲಾ ಒಂದು ಕಂಡೀಷನ್ ಹಾಕಿದ್ದಾಳೆ. ಅದುವೇ ನಿಮ್ಮ ಮನೆಯವರ ಜೊತೆಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ ಎಂಬುದಾಗಿ. ಅದಕ್ಕೆ ಕೃತಿ ಕೂಡ ಒಪ್ಪಿಗೆ ನೀಡಿದ್ದಾಳೆ. ಆದ್ರೆ ಈಗ ಸಹನಾ ವೇಷ ಮರೆಸಿಕೊಂಡು ಬಹದ್ದೂರ್ ಮನೆಗೆ ಬಂದಿದ್ದಾಳೆ. ಇದು ಯತಿಗೆ ಮಾತ್ರ ಗೊತ್ತಿದೆ. ಕೃತಿಗೂ ಕೂಡ ಗೊತ್ತಿಲ್ಲ. ಎಲ್ಲರೂ ಊಟಕ್ಕೆ ಕೂತಾಗ, ಸಹನಾ ಹಾಕಿದ್ದ ಮೀಸೆ ಉದುರಿದೆ. ಯತಿ ಅದನ್ನು ಹೇಳಿವಷ್ಟರಲ್ಲಿ ಮಾತಂಗಿ ನೋಡಿಯೇ ಬಿಟ್ಟಿದ್ದಾಳೆ. ಈಗ ಮನೆಯವರ ಮುಂದೆ ಎಲ್ಲಾ ವಿಚಾರವನ್ನು ಬಯಲು ಮಾಡುವುದರಲ್ಲಿ ಅನುಮಾನವೇ ಇಲ್ಲ.


Click it and Unblock the Notifications











