Katheyondu Shuruvagide:ಕೃತಿ ಕೈಯ್ಯಿಂದ ಪ್ರಸಾದ ತಿಂದ ಯುವ..ಬದಲಾಗುತ್ತಿದ್ದಾನಾ ಬಹದ್ದೂರ್ ಕುಡಿ?

By ಎಸ್ ಸುಮಂತ್

ಕೃತಿ ಬದುಕಲ್ಲಿ ಇದ್ದಂತ ಬಿರುಗಾಳಿ ಈಗ ತಂಗಾಳಿಯಾಗಿ ಬದಲಾಗಿದೆ. ಸದಾ ಕೃತಿ ಕಂಡರೆ ಕೆಂಡಕಾರುತ್ತಿದ್ದ ಯುವ ಮೆಲ್ಲನೆ ಸರಿ ಹೋಗುತ್ತಿದ್ದಾನೆ. ಕೃತಿಯ ಮೇಲೆ ಮಮಕಾರ ತೋರುತ್ತಿದ್ದಾನೆ. ಇದು ಬಹದ್ದೂರ್ ಮನೆಯವರಿಗೆ ಶಾಕಿಂಗ್ ಎನಿಸುತ್ತಿದೆ. ಯುವನ ಮುಖದಲ್ಲಿನ ಖುಷಿ ನೋಡಿ ಮನೆಯವರಿಗೆ ಒಂದೆಡೆ ಸಂತೋಷವೂ ಆಗಿದೆ. ಯುವ ಹೀಗೆ ಖುಷಿ ಖುಯಾಗಿರಲಿ ಎಂದೇ ಬಯಸಿದ್ದಾರೆ.

ಆದರೆ ಮಾತಂಗಿ ಗ್ಯಾಂಗ್ ಇದರ ಅವಶ್ಯಕತೆ ಇಲ್ಲ. ಯುವ ಖುಷಿಯಾಗಿರುವುದನ್ನು ಸಹಿಸಿಕೊಳ್ಳದೆ, ಶಾಂತಲಾಗೆ ಮಾತಿನ ಮೂಲಕ ಚುಚ್ಚಿದ್ದಾರೆ. ಮೊದಲೇ ಕೋಪದಲ್ಲಿರುವ ಶಾಂತಲ ಮತ್ತಷ್ಟು ಕೆಂಡಾಮಂಡಲಳಾಗಿದ್ದಾಳೆ. ಆದರೆ, ಕೃತಿ‌ ಮಾತ್ರ ಎಲ್ಲವನ್ನು ಮೌನವಾಗಿ ನೋಡುತ್ತಿದ್ದಾಳೆ. ಯುವ ಬದಲಾಗಿದ್ದಕ್ಕೂ ಖುಷಿ ಪಡುತ್ತಿಲ್ಲ, ಬೈಯ್ಯದೇ ಇರುವುದಕ್ಕೂ ಖುಷಿ ಪಟ್ಟಿಲ್ಲ.

ಬದಲಾಗುತ್ತಿದ್ದಾನೆ ಬಹದ್ದೂರ್ ಕುಡಿ

ಬದಲಾಗುತ್ತಿದ್ದಾನೆ ಬಹದ್ದೂರ್ ಕುಡಿ

ಯುವರಾಜ್ ಬಹದ್ದೂರ್ ಬದಲಾಗಿದ್ದಾನೆ. ಅದಕ್ಕೆ ಅವರ ಚಿಕ್ಕಪ್ಪ ಹೊಟ್ಟೆ ಉರಿದುಕೊಳ್ಳುತ್ತಿದ್ದಾನೆ. ಯುವ ಅಮ್ಮನ ಮಗ ಆಗಿದ್ದ ಈಗ ಹೆಂಡತಿಯ ಗುಲಾಮನಾಗುತ್ತಿದ್ದಾನೆ ಎಂದು ಕೆಣಕಿದ್ದಾನೆ. ಇದು ಶಾಂತಾಲಗೂ ಕಿರಿಕಿರಿಯಾಗಿದೆ. ಆದರೆ, ಕೃತಿಯನ್ನು ಕಂಡರೆ ಕೆಂಡಾಮಂಡಲನಾಗುತ್ತಿದ್ದವಾ, ಇದೀಗ ನಗು ಮುಖದಲ್ಲಿ ಮಾತನಾಡಿಸುತ್ತಿದ್ದಾನೆ. ಪ್ರಸಾದ ಕೊಡಲು ಬಂದಾಗಲೂ ತೆಗೆದುಕೊಳ್ಳದ ಯುವ ಈಗ ಪ್ರಸಾದವನ್ನೇ ಭಕ್ತಿಯಿಂದ ತೆಗೆದುಕೊಂಡಿದ್ದಾನೆ. ಯುವ ಬದಲಾಗುತ್ತಿದ್ದಾನೆ. ಕೃತಿಯ ಪ್ರೀತಿ ಬಯಸುತ್ತಿದ್ದಾನೆ.

ಯುವರಾಜ್ ಮನೆಯಲ್ಲಿ ಸಹನಾ

ಯುವರಾಜ್ ಮನೆಯಲ್ಲಿ ಸಹನಾ

ಕೃತಿ ಮನೆಯವರು ಯಾರೂ ಬಹದ್ದೂರ್ ಮನೆಗೆ ಬರಬಾರದು ಎಂಬ ಕಂಡೀಷನ್ ಹಾಕಿದ್ದಾಳೆ ಶಾಂತಾಲ. ಆ ಷರತ್ತಿಗೆಲ್ಲಾ ಕೃತಿ ಕೂಡ ಒಪ್ಪಿಗೆ ನೀಡಿದ್ದಾಳೆ. ಹಾಗಾಗಿ ಮನೆಯವರು ಯಾರೇ ಬಂದರೂ ಕೃತಿ ಅವರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾಳೆ. ಕಳೆದ ಬಾರಿ ಅವರ ಅಮ್ಮ ಬಂದಾಗಲೂ ಗಲಾಟೆಯೇ ನಡೆದಿತ್ತು. ಈಗ ಕೃತಿ ಬಂದಿದ್ದಾಳೆ. ಅದು ವೇಷ ಮರೆಸಿಕೊಂಡು. ಅನಾಥಶ್ರಮದ ಮಕ್ಕಳನ್ನೆಲ್ಲಾ ಮನೆಗೆ ಊಟಕ್ಕೆ ಕರೆಯಲಾಗಿತ್ತು. ಮಕ್ಕಳಿಗೆಲ್ಲಾ ಕೃತಿ ಪ್ರೀತಿಯಿಂದ ಆತಿಥ್ಯ ಮಾಡಿದಳು. ಹೊಟ್ಟೆ ತುಂಬಾ ಊಟ ಬಡಿಸಿದಳು. ಮಕ್ಕಳೆಲ್ಲಾ ಸಂತೋಷದಿಂದ ಊಟ ಮಾಡಿ, ಮನತುಂಬಿ ಹಾರೈಸಿದರು. ಇದು ಇಡೀ ಮನೆಯವರು ಖುಷಿ ಪಟ್ಟರು. ಮಕ್ಕಳ ಜೊತೆ ಮೇಷ್ಟ್ರ ಅವತಾರದಲ್ಲಿ ಬಂದಿದ್ದಿದ್ದೆ ಈ ಸಹನಾ.

ಮಾತಂಗಿಯಿಂದ ತಪ್ಪಿಸಿದ ಯತಿ

ಮಾತಂಗಿಯಿಂದ ತಪ್ಪಿಸಿದ ಯತಿ

ಮಾತಂಗಿಗೆ ಸಹನಾ ಊಟ ಮಾಡುವಾಗಲೇ ಅನುಮಾನ ಬಂದಿತ್ತು. ಮೀಸೆ ಕೆಳಗೆ ಬೀಳುತ್ತಾ ಇದ್ದಿದ್ದನ್ನು ಗಮನಿಸಿದ್ದಳು. ಆಗಲೇ ಅನುಮಾಮಗೊಂಡಿದ್ದ ಮಾತಂಗಿ ಸಮಯಕ್ಕಾಗಿ ಕಾಯುತ್ತಿದ್ದಳು. ಮಕ್ಕಳೆಲ್ಲಾ ಖುಷಿಯಿಂದ ಯುವರಾಜನಿಗೆ ನಮಸ್ಕಾರ ಮಾಡಿ, ಮನೆಯಿಂದ ಹೊರಟರು. ಅವರ ಹಿಂದೆಯೇ ಹೋಗಲು ರೆಡಿಯಾದ ಸಹನಾಳನ್ನು ಮಾತಂಗಿ ತಡೆಹಿಡಿದಳು. "ಮೇಷ್ಟ್ರೇ ನಿಮ್ಮನ್ನು ನೋಡ್ತಾ ಇದ್ರೆ ಅದ್ಯಾಕೋ ನಮ್ಮ ಕೃತಿ ತಂಗಿ ಸಹನಾಳನ್ನು ನೋಡಿದ ಹಾಗೇ ಆಗುತ್ತೆ. ಸ್ವಲ್ಪ ಈ ಕಡೆ ತಿರುಗುತ್ತೀರಾ" ಎಂದು ಕೇಳಿದಳು. ಅಷ್ಟಕ್ಕೆ ಸಹನಾ ಮಡ್ ಕೃತಿ ಇಬ್ಬರು ಗಾಬರಿಯಾದರು.

ಯತಿಯಿಂದ ಸಹನಾ ಬಚಾವ್

ಯತಿಯಿಂದ ಸಹನಾ ಬಚಾವ್

ಮಾತಂಗಿ ಪ್ರಶ್ನೆ ಮಾಡುತ್ತಿದ್ದಂತೆ ಸಹನಾ ಕೂಡ ಗಾಬರಿಯಾದಳು. ಅದೇ ಸಮಯಕ್ಕೆ ಯತಿ ಬಂದು ಕಾಪಾಡಿದ. "ಸಹನಾ ರೀತಿಯೇ ಡ್ರೆಸ್ ಮಾಡಿಕೊಂಡಿದ್ದಕ್ಕೆ ನಿಮ್ಗೆ ಆ ರೀತಿ ಕಾಣ್ತಾ ಇದೆ ಅತ್ತೆ. ಸಹನಾಗೂ ಇವರಿಗೂ ಹೋಲಿಕೆಯೇ ಇಲ್ಲ. ನೀವೂ ಹೊರಡಿ ಮೇಷ್ಟ್ರೇ" ಎಂದು ಪರಿಸ್ಥಿತಿಯನ್ನು ತಿಳಿಗೊಳಿಸುವಾಗಲೇ ಶಾಂತಲಾ ಬಂದರು. "ನಿಲ್ಲು ನನಗೂ ಈ ಬಗ್ಗೆ ಅನುಮಾನವಿದೆ. ಈ ಕಡೆ ತಿರುಗು" ಅಂತ ಜೋರು ಮಾಡಿದಾಗಲೇ ಯತಿ ಅಲ್ಲಿಯೂ ಕಾಪಾಡಿದ್ದಾನೆ.

More from Filmibeat

English summary
Katheyondu Shuruvagide Serial Written Update on February 17th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X