Katheyondu Shuruvagide: ಮಾತಂಗಿ ಕೆನ್ನೆಗೆ ಬಿತ್ತು ಏಟು.. ಯುವರಾಜನ ಅವಮಾನ ಸಹಿಸಲ್ಲ ಕೃತಿ!
ಸದಾ ಸ್ವಾಭಿಮಾನಿಯಾಗಿ ಬದುಕುತ್ತಿದ್ದ ಕೃತಿ ಇದೀಗ ಯುವರಾಜ್‌ನಿಂದ ಪ್ರತಿದಿನ ಅವಮಾನ ಎದುರಿಸುವಂತೆ ಆಗಿದೆ. ಯುವರಾಜ್ ಮನಸ್ಸಲ್ಲಿ ಕೃತಿ ಮತ್ತು ಅವರ ಮನೆಯವರೆಲ್ಲಾ ಸೇರಿ ಮೋಸ ಮಾಡಿದ್ದಾರೆ ಎಂಬುದು ಕೂತು ಬಿಟ್ಟಿದೆ. ಅದಕ್ಕಾಗಿಯೇ ಅವಳನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಲೇ ಬರುತ್ತಿದ್ದಾನೆ. ಆದರೆ ಈಗ ಕೃತಿ ಸಿಡಿದೆದ್ದಿದ್ದಾಳೆ.
ಕೃತಿ ಹಸಿವನ್ನು ಬೇಕಾದರೂ ಸಹಿಸುತ್ತಾಳೆ. ಬಡವೆ ಎಂದರೂ ಸಹಿಸುತ್ತಾಳೆ. ಆದರೆ, ತನ್ನ ಸ್ವಾಭಿಮಾನಕ್ಕೆ ಅಡ್ಡಿಯಾದರೆ ಅದು ಅದೆಷ್ಟೇ ಶ್ರೀಮಂತನಾದರೂ ಬಿಡುವುದಿಲ್ಲ. ಹೇಳಿಕೊಳ್ಳುವುದಕ್ಕಷ್ಟೇ ಬಹದ್ದೂರ್ ವಂಶ. ಆದರೆ ಮನೆಕೆಲಸದವರನ್ನೂ ನೋಡಿಕೊಳ್ಳುವುದಕ್ಕಿಂತ ಕೆಟ್ಟದಾಗಿ ನೋಡಿಕೊಳ್ಳುತ್ತಾರೆ. ಇದೀಗ ಮದುವೆ ಮನೆಯಲ್ಲಿ ಅಂದು ಏನೆಲ್ಲಾ ಆಯ್ತು..? ಅದಕ್ಕೆಲ್ಲಾ ಕಾರಣ ಯಾರು ಎಂಬುದನ್ನು ಕೃತಿ ಬಿಚ್ಚಿಟ್ಟಿದ್ದಾಳೆ.

ಅಮ್ಮನಿಗಾದ ಅವಮಾನ ಸಹಿಸದ ಕೃತಿ..!
ಯುವರಾಜ್ ಬಹಳ ರೂಡ್ ಆಗಿ ನಡೆದುಕೊಳ್ಳುತ್ತಿದ್ದಾನೆ. ಆದರೆ, ಅದಕ್ಕೆಲ್ಲಾ ಕೃತಿ ಯಾವುದೇ ರೀತಿಯ ತಲೆ ಕೆಡಿಸಿಕೊಂಡಿಲ್ಲ. ಯುವರಾಜ್ ಹೆಚ್ಚಿನ ರೀತಿಯಲ್ಲಿ ಆಡಿದಾಗ ತಿರುಗಿಸಿ, ಅಲ್ಲಿಯೇ ಉತ್ತರ ಕೊಡುತ್ತಾಳೆ ಕೃತಿ. ಆರಂಭದಲ್ಲಿ ಹೆದರಿದ್ದಳು. ಆದರೆ, ಅದ್ಯಾವಾಗ ಕೃತಿಗೆ ಬೆಲೆಯನ್ನೇ ಕೊಡದಂತೆ ಮಾತನಾಡುವುದಕ್ಕೆ ಶುರು ಮಾಡಿದನೋ ಅಂದಿನಿಂದ ಕೃತಿ ಕೂಡ ಯುವರಾಜ್‌ಗೆ ಗದರಿಸಿಯೇ ಉತ್ತರ ಕೊಡುತ್ತಾಳೆ. ಸದ್ಯ ಅಮ್ಮನಿಗಾಗಿ ಇಡೀ ಯುವರಾಜ್ ಮನೆಯವರ ಎದುರು ನಿಂತಿದ್ದಾಳೆ.

ಅಮ್ಮನ ಕಷ್ಟ ನೆನೆದ ಕೃತಿ
ಬಹದ್ದೂರ್ ಮನೆಯಲ್ಲಿ ಎಲ್ಲರೂ ಕೃತಿಗೆ ಸಪೋರ್ಟ್ ಆಗಿಯೇ ನಿಂತಿದ್ದಾರೆ. ಆದರೆ, ಯುವರಾಜ್ ಹಾಗೂ ಅವರ ಅಮ್ಮ ಮಾತ್ರ ಕೃತಿಗೆ ವಿರುದ್ಧವಾಗಿದ್ದಾರೆ. ಅದೇ ಕಾರಣಕ್ಕೆ ಮಗಳನ್ನು ನೋಡುವುದಕ್ಕೆ ಬಂದಿದ್ದ ಕೃತಿಯನ್ನು ಅವಮಾನ ಮಾಡಿದ್ದಾರೆ. ಅವರು ಪ್ರೀತಿಯಿಂದ ತಂದಿದ್ದ ಪದಾರ್ಥಗಳನ್ನು ಬಿಸಾಡಿದ್ದಾರೆ. ಅದಕ್ಕೆ ರೊಚ್ಚಿಗೆದ್ದ ಕೃತಿ ಎಲ್ಲರೂ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳುವಂತೆ ಮಾತನಾಡಿದ್ದಾಳೆ. ತನ್ನ ತಾಯಿ ನಾವೂ ಚಿಕ್ಕವರಿದ್ದಾಗ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿದಳು ಎಂಬುದನ್ನು ಎಲ್ಲರ ಮುಂದೆ ಹೇಳಿದ್ದಾಳೆ. ಆದರೆ ಈ ಸತ್ಯ, ಈ ಕಷ್ಟದ ದಾರಿ ಯಾರಿಗೂ ಬೇಕಾಗಿರಲಿಲ್ಲ. ಮತ್ತೆ ಅವಮಾನವನ್ನೇ ಮಾಡುತ್ತಿದ್ದರು.

ಮಾತಂಗಿಯ ವಿಚಾರ ಹೇಳಿಯೇ ಬಿಟ್ಲು ಕೃತಿ
ಮದುವೆ ಮನೆಯಿಂದ ವರ್ಣಿಕಾ ಓಡಿ ಹೋಗಿದ್ದಳು. ಆಗ ಸತ್ಯವನ್ನು ಹೇಳುವುದಕ್ಕೆ ಪುಷ್ಪ ಸಿದ್ದವಾಗಿದ್ದರು. ಮರ್ಯಾದೆ ಹೋಯ್ತು ಅಂತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೂಡ ಹೋಗಿದ್ದರು. ಆದರೆ, ಅಲ್ಲಿಗೆ ಬಂದಂತ ಮಾತಂಗಿ, ನಾನು ನಿಮ್ಮ ಪರ ಎಂಬುದಾಗಿ ಮನಸ್ಸನ್ನು ಮರಳು ಮಾಡಿ, ಹಸೆಮಣೆ ಮೇಲೆ ಕೃತಿಯನ್ನು ಕೂರುವಂತೆ ಮಾಡಿದಳು. ಈಗ ಮನೆಯಲ್ಲಿ ಏನು ಗೊತ್ತಿಲ್ಲದವಳಂತೆ ನಾಟಕ ಮಾಡುತ್ತಿದ್ದಾಳೆ. ಇದಕ್ಕೆ ಕೋಪಗೊಂಡ ಕೃತಿ, ಇದಕ್ಕೆಲ್ಲಾ ಕಾರಣ ಮಾತಂಗಿಯೇ ಎಂದು ಸತ್ಯ ಹೇಳಿ ಬಿಟ್ಟಿದ್ದಾಳೆ.

ಮಾತಂಗಿಯ ಕೋಪಕ್ಕೆ ಗುರಿಯಾದ ಕೃತಿ
ಮಾತಂಗಿ ಹೀಗೆ ಮಾಡಿದ್ದಕ್ಕೆ ಇಡೀ ಮನೆಯವರು ಮಾತಂಗಿಗೆ ಬೈದಿದ್ದಾರೆ. ಮ್ಯಾನೇಜರ್ ಮಗಳು ಎಂಬುದನ್ನು ತೋರಿಸಿಬಿಟ್ಟೆ ಎಂದು ಶಾಂತಲಾ ಕಪಾಳ ಮೋಕ್ಷ ಮಾಡಿದ್ದಾಳೆ. ಈಗ ಮಾತಂಗಿಯ ಎಲ್ಲಾ ಕೋಪ ಕೃತಿ ಮೇಲೆ ತಿರುಗಿದೆ. ಈಗ ಕೃತಿಯ ಮೇಲೆ ಕತ್ತಿ ಮಸೆಯುವುದಕ್ಕೆ ಶುರು ಮಾಡಿದ್ದಾಳೆ. ಈಗ ಯುವರಾಜ್ ಜೊತೆಗೆ ಮಾತಂಗಿ ಕೂ ಸೇರಿಕೊಂಡಿದ್ದಾಳೆ. ಕೃತಿ ಒಂದೇ ಮನೆಯಲ್ಲಿ ಇಬ್ಬರನ್ನು ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.


Click it and Unblock the Notifications











