Katheyondu Shuruvagide: ಮಾತಂಗಿಯ ಸತ್ಯ ಮನೆಯವರ ಮುಂದೆ ಬಯಲು.. ಹೊಸ ಕಥೆ ಶುರುವಾಗಿದೆ!
ಹೊರಗಿನ ಶತ್ರುಗಳನ್ನು ಬಹಳ ಸುಲಭವಾಗಿ ಕಂಡು ಹಿಡಿಯಬಹುದು. ಆದರೆ ಒಳಗಿನ ಶತ್ರುಗಳನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಬಹದ್ದೂರ್ ಮನೆಯಲ್ಲಿ ಮನೆಯವರಂತೆ ಇದ್ದರೂ ಮಾತಂಗಿ ಮನೆಯವರ ಬಗ್ಗೆ ಕೆಂಡಕಾರಿದ್ದೆ ಹೆಚ್ಚು. ಮನೆಯವರ ಮುಂದೆಲ್ಲಾ ನಿಮ್ಮ ಸುಖ ಸಂತೋಷವೇ ಮುಖ್ಯ ಎಂದು ಹೇಳುವ ಮಾತಂಗಿ ಒಳಗೊಳಗೆ ಕತ್ತಿ ಮಸೆಯುತ್ತಾ ಇರುತ್ತಾಳೆ.
ಈಗ ಸತ್ಯವೆಲ್ಲವೂ ಬಯಲಾಗಿದೆ. ಬಹದ್ದೂರ್ ಮನೆಗೆ ಕೇಡು ಬಯಸಿದವರು ಯಾರು ಎಂಬುದು ತಿಳಿದಾಗಿದೆ. ಇನ್ನು ಶಾಂತಲಾ ಕೋಪವನ್ನು ತಡೆಯುವುದಕ್ಕೆ ಯಾರಿಂದಾನೂ ಸಾಧ್ಯವಿಲ್ಲ. ಈಗ ಮನೆಯವರೆಲ್ಲರ ಎದುರು ಮುಚ್ಚಿಟ್ಟಿದ್ದ ಮಾತಂಗಿಯ ಸತ್ಯವೂ ಬಯಲಾಗಿದೆ.

ಮಾತಂಗಿಯ ಕೆಲಸಕ್ಕೆ ಕೆಂಡಾಮಂಡಲ
ಕೃತಿ ಮನೆಯವರು ದೊಡ್ಡ ಮೋಸ ಮಾಡಿದ್ದಾರೆ ಎಂದೇ ಬಹದ್ದೂರು ಮನೆಯವರು ನಂಬಿದ್ದರು. ಅದರಿಂದಾನೇ ಕೃತಿಗೆ ಯುವರಾಜ್ ಹಾಗೂ ಶಾಂತಲ ಇಬ್ಬರು ಹಿಂಸೆ ಕೊಡುತ್ತಿದ್ದರು. ಊಟವನ್ನೇ ಕಿತ್ತುಕೊಂಡರೂ, ತಾಯಿಗೆ ಅವಮಾನ ಮಾಡಿದರು. ಇದೆಲ್ಲವನ್ನು ನೋಡಿ ಸಾಕಾದ ಕೃತಿ ಕಡೆಗೆ ತಿರುಗಿ ಬಿದ್ದಳು. ಈ ತಪ್ಪಿಗೆಲ್ಲಾ ಕಾರಣ ಮಾತಂಗಿಯೇ ಎಂದು ಹೇಳಿದಳು. ಇದು ಮನೆಯವರಿಗೆಲ್ಲಾ ಶಾಕ್ ಆಯಿತು. ಆದರೆ ಶಾಂತಲಾಗೆ ಪಕ್ಕಾ ಕನ್ಫರ್ಮ್ ಆಗಿತ್ತು.

ಮಾತಂಗಿಗೆ ಕಪಾಳ ಮೋಕ್ಷಾ..!
ಈ ಸತ್ಯವೆಲ್ಲಾ ತಿಲಿದ ಮೇಲೆ ಶಾಂತಲಾ ಕೆಂಡಾಮಂಡಲಳಾಗಿದ್ದಾಳೆ. ಏನೇ ಹೇಳಿದರೂ ನಂಬುವ ಸ್ಥಿತಿಯಲ್ಲಿ ಶಾಂತಲಾ ಇಲ್ಲ. ಮಾತಂಗಿಯನ್ನು ಇಷ್ಟು ಮೋಸ ಮಾಡಿಬಿಟ್ಟೆಯಲ್ಲಾ ಅಂತ ಬೈಯ್ಯುತ್ತಿರುವಾಗಲೂ, ಮಾತಂಗಿ ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾಳೆ. ಈ ತಪ್ಪು ನಾನು ಮಾಡಿಲ್ಲ, ಇದೆಲ್ಲಾ ಸುಳ್ಳು ಎಂದೇ ವಾದಿಸುತ್ತಿದ್ದಾಳೆ. ಆದರೆ ಶಾಂತಲಾ ಅದನ್ನು ಕೇಳುವುದಕ್ಕೆ ಸಿದ್ಧವಿಲ್ಲ. ಯಾಕಂದ್ರೆ ಮಾತಂಗಿ ಏನು ಎಂಬುದು ಮೊದಲಿನಿಂದಾನು ಗೊತ್ತಿದೆ. ಹೀಗಾಗಿ ಆಕೆ ಏನೇ ಹೇಳಿದರೂ ನಂಬಿಕೆ ಬರುತ್ತಿಲ್ಲ. ಮತ್ತೆ ಮತ್ತೆ ಸುಳ್ಳು ಹೇಳಲು ಯತ್ನಿಸಿದಾಗ ಕಪಾಳಕ್ಕೆ ಹೊಡೆದಿದ್ದಾಳೆ. ಈ ಮನೆಯಲ್ಲಿ ಇರುವುದಕ್ಕೆ ನೀನು ಅರ್ಹಳಲ್ಲ ಎಂದು ಮನೆಯಿಂದ ಹೊರ ಹಾಕುವುದಕ್ಕೆ ಹೊರಟಿದ್ದಾಳೆ.

ಮಾತಂಗಿ ಯಾರ ಮಗಳು..?
ಮಾತಂಗಿ ಇಷ್ಟು ದಿನ ಬಹದ್ದೂರ್ ಮನೆಯಲ್ಲಿ ಸ್ವಂತ ಮಗಳಂತೆಯೇ ಬದುಕಿದ್ದಳು. ಆದರೆ ಮಾತಂಗಿ, ಬಹದ್ದೂರ್ ಮನೆಯ ಸ್ವಂತ ಮಗಳಲ್ಲ. ಈ ಸತ್ಯ ಶಾಂತಲಾಗೆ, ಅಜ್ಜಿಗೆ ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಈಗ ಸಮಯ ಬಂದಿದೆ. ಶಾಂತಲಾ ಕೋಪ ತಡೆಯುವುದಕ್ಕೆ ಆಗದೆ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಅಜ್ಜಿ ತಡೆಯುವುದಕ್ಕೆ ಪ್ರಯತ್ನ ಪಟ್ಟರು ಶಾಂತಲಾ ನಿಲ್ಲಲಿಲ್ಲ. "ನಿನ್ನನ್ನು ಈ ಮನೆಯ ಮಗಳು ಎಂದುಕೊಂಡಿದ್ದೆ. ಆದರೆ ನೀನು ಒಬ್ಬ ಮ್ಯಾನೇಜರ್ ಮಗಳು ಎಂಬುದನ್ನು ಪ್ರೂವ್ ಮಾಡಿಬಿಟ್ಟೆ" ಎಂದು ಕೋಪಗೊಂಡಿದ್ದಾಳೆ. ಇದನ್ನು ಕೇಳಿದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಅದರಲ್ಲೂ ಯುವರಾಜ್‌ಗೆ ಈ ವಿಚಾರ ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ.

ಸಾಮ್ರಾಟ್ ಸಿಕ್ಕಿ ಬೀಳುತ್ತಾನಾ..?
ಮನೆಯವರ ಮುಂದೆಲ್ಲಾ ಸತ್ಯ ಬಯಲು ಮಾಡಿ ಮಾತಂಗಿಯನ್ನು ದೂಷಿಸುತ್ತಿದ್ದಾರೆ. ಆದರೆ ಮಾತಂಗಿಯ ಮಗನೇ ಈ ಕೆಲಸ ಮಾಡಿದ್ದು ಎಂದು ಗೊತ್ತಾದರೆ ಬಹದ್ದೂರ್ ಮನೆಯಲ್ಲಿ ಇನ್ನು ಏನೆಲ್ಲಾ ಸಮಸ್ಯೆ ಆಗಬಹುದು. ಯಾಕಂದ್ರೆ ಮಾತಂಗಿಯಂತೆಯೇ ಸಾಮ್ರಾಟ್ ಕೂಡ ಬೆಳೆದಿದ್ದಾನೆ. ತನ್ನ ತಾಯಿಯ ಬುದ್ದಿಯೇ ಅವನಲ್ಲಿಯೂ ಬಂದಿದೆ. ಯುವರಾಜ್ ಗೆ ಯಾವಾಗಲೂ ಸ್ಪರ್ಧೆಯಾಗಿಯೇ ನಿಲ್ಲುತ್ತಾನೆ. ಅವನಿಗೆ ಸಿಗುವ ವಸ್ತು ಯಾವುದು ಸಿಗಬಾರದು. ಮೊದಲು ನನಗೆ ಸಿಗಬೇಕು ಎಂಬ ಅಭಿಪ್ರಾಯದಿಂದ ವರ್ಣೀಕಾಳನ್ನು ಮದುವೆ ಮಂಟಪದಿಂದ ಓಡಿಸಿಕೊಂಡು ಹೋಗಿದ್ದಾನೆ. ಒಂದು ವೇಳೆ ಸಾಮ್ರಾಟ್ ಸತ್ಯ ಗೊತ್ತಾದರೆ ಗೇಟ್ ಪಾಸ್ ಗ್ಯಾರಂಟಿ.


Click it and Unblock the Notifications











