Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
ಬಹದ್ದೂರ್ ಮನೆಗೆ ಬಯಸಿ ಬಯಸಿ ಸೊಸೆಯೇನು ಆಗಲಿಲ್ಲ ಕೃತಿ. ಒಡವೆ, ಹಣ, ಆಸ್ತಿಯನ್ನು ನೋಡಲಿಲ್ಲ. ಬದಲಿಗೆ ಅದೊಂದು ಅನಿವಾರ್ಯತೆಯ ಕಾರಣಕ್ಕೆ. ಆ ಕಾರಣ ಗೊತ್ತಿಲ್ಲದೆ ಯುವರಾಜ್, ಕೃತಿ ಮೇಲೆ ಕೆಂಡಕಾರುತ್ತಿದ್ದ. ಆದರೆ ಕಾರಣ ತಿಳಿದ ಮೇಲೆ ಸರಿ ಹೋಗುತ್ತಾನೆ ಎಂದುಕೊಂಡರೆ ಅದು ಕೂಡ ಸುಳ್ಳಾಗಿದೆ. ಸೌಜನ್ಯದ ನಡತೆಯೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾನೆ.
ಪುಷ್ಪಾ ಬಂದಾಗಲೂ ಅವಮಾನ ಮಾಡಿದ, ಮನೆಯಲ್ಲಿದ್ದ ಮಾತಂಗಿಯಿಂದಾನೇ ಎಲ್ಲಾ ಸಮಸ್ಯೆ ಆಗಿದ್ದು ಎಂದಾದ ಮೇಲೂ ಯುವರಾಜ್‌ನಲ್ಲಿ ಬದಲಾವಣೆಯಾಗಿಲ್ಲ. ಮನೆಯಲ್ಲಿ ಕೃತಿಯನ್ನ ಸೊಸೆ ಅಂತ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ. ಆದರೆ ಸ್ಟೇಟಸ್ ಗೆ ಮಾತ್ರ ಸೊಸೆಯಾಗಬೇಕಾಗಿದೆ. ಇದಕ್ಕೆ ಕೃತಿಯ ಮನಸ್ಸು ಒಪ್ಪುತ್ತಾ..?

ಯುವರಾಜ್ ಬದಲಾಗುವುದೇ ಇಲ್ಲವಾ..?
ಕೃತಿ ಕಂಡರೆ ಮೊದಲಿನಿಂದಲೂ ಯುವರಾಜ್ ಗೆ ಕೋಪವೇ. ಸಿಕ್ಕಲ್ಲೆಲ್ಲಾ ಜಗಳಗಳೇ ನಡೆಯುತ್ತಿವೆ. ಈಗ ಮದುವೆಯೂ ಆಗಿದೆ. ಮದುವೆಯ ಹಿಂದಿನ ಸತ್ಯವೂ ತಿಳಿದು ಹೋಗಿದೆ. ಆದರೂ ಯುವರಾಜನ ನಡವಳಿಕೆಯಲ್ಲಿ ಕಿಂಚಿತ್ತು ಬದಲಾವಣೆಯಾಗಿಲ್ಲ. ಕೃತಿಯ ಜೊತೆ ಜಗಳಕ್ಕೆ ನಿಲ್ಲುತ್ತಾನೆ.

ಕೃತಿಗಾಗಿ ಕಷ್ಟಪಡುತ್ತಿದ್ದಾನೆ ಯತಿರಾಜ್
ಮನೆಯಲ್ಲಿ ಎಲ್ಲರೂ ಕೃತಿಯನ್ನು ಸೊಸೆಯೆಂದು ಒಪ್ಪಿಕೊಂಡಾಗಿದೆ. ಏನೋ ಒಂದು ಅನಾಹುತ ನಡೆದು ಹೋಯಿತು. ಈಗ ಎಲ್ಲವೂ ಸರಿ ಇದೆ ಎಂದು ಕೊಂಡು ಎಲ್ಲರು ಒಪ್ಪಿಕೊಂಡಿದ್ದಾರೆ. ಆದರೆ ಶಾಂತಲಾ ಹಾಗೂ ಯುವರಾಜ್ ಮಾತ್ರ ಇದನ್ನು ಒಪ್ಪುವುದಕ್ಕೆ ರೆಡಿ ಇಲ್ಲ. ಮನೆಯವರಿಂದ ದೂರವಿದ್ದು, ಬಹದ್ದೂರ್ ಮನೆಯಲ್ಲೂ ಯಾರ ಸಂಪರ್ಕವೂ ಇಲ್ಲದ ಕೃತಿಗೆ ಯುವರಾಜ್ ಸಾಂತ್ವಾನದ ಮಾತುಗಳನ್ನು ಹೇಳಿದ್ದಾನೆ. ಇಲ್ಲಿ ಅಕ್ಕ ಹೇಗಿದ್ದಾಳೆ ಎಂಬುದನ್ನು ಅಲ್ಲಿ ತಂಗಿಗೆ ಅಪ್ಡೇಟ್ ಮಾಡಿದ್ದಾನೆ. ಮನೆಯವರ ಬಗ್ಗೆ ಕೃತಿ ಬಳಿ ಹೇಳಿ ಸ್ವಲ್ಪ ಸಮಾಧಾನ ನೀಡಿದ್ದಾನೆ. ಆ ಕಡೆ ಅಕ್ಕನ ರಿಸೆಪ್ಶನ್ ಎಂದು ಗೊತ್ತಾದ ಕೂಡಲೇ ಸಹನಾ, ಬಹದ್ದೂರ್ ಅರಮನೆಗೆ ಬರುವುದಕ್ಕೆ ಸಜ್ಜಾಗಿದ್ದಾಳೆ. ಅಮ್ಮ ನಡೆದದ್ದೆಲ್ಲವನ್ನು ಮುಚ್ಚಿಟ್ಟಿದ್ದಾಳೆ.

ರಿಸೆಪ್ಶನ್‌ಗೆ ಒಪ್ಪುತ್ತಾಳಾ ಕೃತಿ..?
ಆ ಕಡೆ ಕೃತಿ ಮತ್ತು ಯುವರಾಜನ ರಿಸೆಪ್ಶನ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮದುವೆಗೆ ಬಾರದವರು, ಬಂದವರು, ನೆಂಟರಿಷ್ಟರ ದೊಡ್ಡ ಬಳಗ ಸೇರಿದಂತೆ ಮಾಧ್ಯಮದವರು ಅಂದು ಹಾಜರಿರುತ್ತಾರೆ. ಮನೆಯ ಒಳಗಿನ ಕಹಿ ಏನೇ ಇದ್ದರು ಎಲ್ಲರೂ ಚೆನ್ನಾಗಿಯೇ ಇದ್ದೀವಿ ಅಂತ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಕೃತಿಯನ್ನು ರೆಡಿಯಾಗುವುದಕ್ಕೆ ಮನೆಯವರೆಲ್ಲಾ ಹೇಳಿದ್ದಾರೆ. ಒಡವೆಯನ್ನು, ಸೀರೆಯನ್ನು ಕೊಟ್ಟಿದ್ದಾರೆ. ಆದರೆ ಇದು ಕೃತಿಗೆ ಇಷ್ಟವಾಗುತ್ತಿಲ್ಲ. ಸಮಾಜದ ಮುಂದೆ ಸ್ಟೇಟಸ್ ಗೋಸ್ಕರ ಬದುಕುವುದೇ ಶ್ರೀಮಂತರ ಬದುಕು ಅಲ್ವಾ ಎಂದು ಬೇಸರ ಮಾಡಿಕೊಂಡಿದ್ದಾಳೆ.

ಮತ್ತೆ ಅಟ್ಟಹಾಸ ಮೆರೆದ ಯುವರಾಜ್
ಮನೆಯ ಸೊಸೆಯಂದಿರು ಬಂದು ಕೃತಿಯನ್ನು ಸಮಾಧಾನ ಮಾಡುತ್ತಿದ್ದರು. ಎಲ್ಲರೂ ಬಂದಿರುತ್ತಾರೆ. ಅವರ ಮುಂದೆ ಮರ್ಯಾದೆ ತೆಗೀಬೇಡ. ದಯವಿಟ್ಟು ರೆಡಿಯಾಗಿ ಬಾ ಎಂದು ಮನವಿ ಮಾಡಿಕೊಳ್ಳುವಾಗಲೇ ಯುವರಾಜ್ ಅಲ್ಲಿಗೆ ಬಂದ. "ಇದನ್ನ ನಾನು ಕೊಡ್ತಾ ಇದ್ದೀನಿ ರೆಡಿಯಾಗಿ ಬಾ" ಎಂದಾಗ ಕೃತಿ ಒಪ್ಪಲಿಲ್ಲ. ಬಲವಂತವಾಗಿ ಸರ ಹಾಕಿದ. ಈಗ ರಿಸೆಪ್ಶನ್ ಸಮಯ ಮೀರಿದೆ. ಮಾಧ್ಯಮದವರೆಲ್ಲಾ ಬಂದಿದ್ದಾರೆ. ಯುವರಾಜ್ ಮನೆಯ ಸೊಸೆ ಯಾಕೆ ಕಾಣಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಆದರೆ ಕೃತಿ ಯಾವತ್ತಿಗೂ ಯಾರ ಘನತೆಗೂ ಧಕ್ಕೆ ಬರುವಂತೆ ನಡೆದುಕೊಂಡಿಲ್ಲ. ಈಗ ಬಹದ್ದೂರ್ ಮನೆಯ ಸೊಸೆ. ಅಲ್ಲಿಯೂ ಮರ್ಯಾದೆ ಕಾಪಾಡುತ್ತಾಳೆ.


Click it and Unblock the Notifications











