Katheyondu Shuruvagide: ಯುವರಾಜನನ್ನು ಅರ್ಥ ಮಾಡಿಕೊಳ್ಳಲು ಕೃತಿ ಹರಸಾಹಸ..!
ಬಹದ್ದೂರ್ ಮನೆಯಲ್ಲಿ ರಿಸೆಪ್ಶನ್ ಜೋರಾಗಿ ನಡೆಯುತ್ತಿದೆ. ನೆಂಟರಿಷ್ಟರು, ಸ್ನೇಹಿತರು, ಮಾಧ್ಯಮದವರೆಲ್ಲಾ ಹೊಸದಾಗಿ ಮದುವೆಯಾಗಿರುವ ಬಹದ್ದೂರ್ ಮನೆಯ ಮಗ ಮತ್ತು ಸೊಸೆಯನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದರು. ಅದಕ್ಕೆಲ್ಲಾ ಕಣ್ಣು ಕುಕ್ಕುವಂತೆ ರೆಡಿಯಾಗಿ ಬಂದಿದ್ದಾಳೆ ಕೃತಿ.
ಇದೇ ರಿಸೆಪ್ಶನ್‌ನಲ್ಲಿ ಕೃತಿಗೆ ಗೊಂದಲ ಉಂಟು ಮಾಡುವಂತ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಯುವರಾಜ್ ಬಗ್ಗೆ ಆ ವ್ಯಕ್ತಿ ಹೇಳಿದ್ದೆಲ್ಲವನ್ನು ಕೇಳಿ ಕೃತಿ ಒಂದು ಕ್ಷಣ ಶಾಕ್ ಆಗಿದ್ದಾಳೆ. ಯುವರಾಜ್ ಯಾವ ರೀತಿಯ ವ್ಯಕ್ತಿ ಎಂಬ ಪ್ರಶ್ನೆಯನ್ನು ಹಾಕಿಕೊಂಡಿದ್ದಾಳೆ.

ಸಾಮ್ರಾಟ್ ಗೇಮ್ ಮತ್ತೆ ಫೇಲ್..!
ಬಹದ್ದೂರ್ ಮನೆಯಲ್ಲಿ 'ತಾಯಿಗೆ ತಕ್ಕ ಮಗ' ಎಂದರೆ ಅದು ಸಾಮ್ರಾಟ್ ಮಾತ್ರ. ಯಾಕಂದ್ರೆ ಮಾತಂಗಿ ಮಾಡುವ ಕಿತಾಪತಿಗಿಂತ ಹೆಚ್ಚಿನ ಮಟ್ಟಕ್ಕೆ ಕಿತಾಪತಿ ಮಾಡಿ, ಯುವನ ಜೀವನದಲ್ಲಿ ಆಟವಾಡುತ್ತಿದ್ದಾನೆ. ವರ್ಣಿಕಾಳನ್ನು ಮದುವೆಯಾಗುವುದಕ್ಕೂ ಬಿಡದೆ, ಅವಳನ್ನು ಮದುವೆ ಮನೆಯಿಂದಾನೇ ಓಡಿ ಬರುವಂತೆ ಮಾಡಿದ್ದ. ಇದೇ ಸಾಮ್ರಾಟ್ ಮಾಧ್ಯಮದಲ್ಲಿ ಅದು ಸುದ್ದಿಯಾಗುವಂತೆ ನೋಡಿಕೊಂಡಿದ್ದ. ಈಗ ರಿಸೆಪ್ಶನ್‌ನಲ್ಲೂ ಅದೇ ಗೇಮ್ ಆಡುವುದಕ್ಕೆ ಬಂದಿದ್ದಾನೆ.

ಸಹನಾ ಕಣ್ಣಿಗೆ ಸಿಲುಕುತ್ತಾಳಾ ವರ್ಣಿಕಾ..?
ಸಾಮ್ರಾಟ್‌ನನ್ನು ನಂಬಿಕೊಂಡು ಮದುವೆ ಮನೆಯಿಂದ ಎದ್ದು ಹೋದ ವರ್ಣಿಕಾಗೆ, ಸಾಮ್ರಾಟ್ ಸುಳ್ಳು ಹೇಳಿರುವುದು ಗೊತ್ತಾಗಿದೆ. ಹೀಗಾಗಿ ವೇಷ ಮರೆಸಿಕೊಂಡು ಸರ್ವೆಂಟ್ ರೀತಿಯಲ್ಲಿ ಬಹದ್ದೂರ್ ಮನೆಗೆ ಬಂದಿದ್ದಾಳೆ. ಅಕ್ಕ ತುಂಬಾ ಚೆನ್ನಾಗಿದ್ದಾಳೆ ಎಂದು ನಂಬಿಕೊಂಡು, ಸಹನಾ ಕೂಡ ಅಕ್ಕನ ರಿಸೆಪ್ಶನ್‌ಗೆ ಬಂದಿದ್ದಾಳೆ. ಅಕ್ಕ ಅಲಂಕಾರ ಮಾಡಿಕೊಂಡಿರುವುದನ್ನು ಕಂಡು ಖುಷಿಪಟ್ಟಿದ್ದಾಳೆ. ಸಹನಾಳ ಮುಂದೆಯೇ ವರ್ಣಿಕಾ ಹೋಗಿದ್ದು, ಸಿಕ್ಕಿ ಬಿದ್ದರೆ ಕಥೆ ಮುಗಿದಂತೆ. ಎಲ್ಲರ ಕಣ್ಣು ತಪ್ಪಿಸಿ ವರ್ಣಿಕಾ ಓಡಾಡುತ್ತಿದ್ದಾಳೆ. ಕೃತಿ ಮತ್ತು ಯುವರಾಜ್ ವೇದಿಕೆ ಮೇಲೆ ನಿಂತಿರುವುದನ್ನು ವರ್ಣಿಕಾಗೆ ಸಹಿಸುವುದಕ್ಕೆ ಸಾಧ್ಯವಾಗಿಲ್ಲ.

ಯುವರಾಜ್ ಮುಖದಲ್ಲೂ ನಗು ಮೂಡಿದಾಗ..!
ಕೃತಿ ಇಷ್ಟು ದಿನ ಕಂಡಿದ್ದು, ಕೇವಲ ಯುವರಾಜ್ ಮುಖದಲ್ಲಿ ಕೋಪ ಮಾತ್ರ. ಯಾಕಂದ್ರೆ ಕೃತಿ ಸಿಕ್ಕಾಗೆಲ್ಲಾ ಬರೀ ದ್ವೇಷದ ಕಣ್ಣುಗಳಿಂದಾನೇ ನೋಡಿದ್ದಾನೆ ಯುವರಾಜ್. ಮದುಯಾದ ಮೇಲಂತು ಇನ್ನು ರೌದ್ರವತಾರ ತೋರಿಸಿದ್ದ. ಆದ್ರೆ ಇಂದು ಎಲ್ಲರ ಎದುರು ಕೃತಿಯನ್ನು ನಗು ನಗುತ್ತಲೇ ಪರಿಚಯ ಮಾಡಿಕೊಟ್ಟಿದ್ದಾನೆ.

ಯುವನ ಬಗ್ಗೆ ಹೊಗಳಿದ ಸ್ವಾಮಿ
ಯುವರಾಜ್ ಹಾಗೂ ಕೃತಿಯ ರಿಸೆಪ್ಶನ್‌ಗೆ ನಡುಕೋಟೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಕುಕ್ಕಿ ಅಂಡ್ ಗ್ಯಾಂಗ್ ಬಂದು ಡ್ಯಾನ್ಸ್ ಮಾಡಿ, ಕುಣಿದು, ಕುಪ್ಪಳಿಸಿ ನಗಿಸಿದ್ದಾರೆ. ಇದೆ ರಿಸೆಪ್ಶನ್‌ಗೆ ಸ್ವಾಮಿ ಎಂಬ ಹಿರಿಯರು ಬಂದಿದ್ದಾರೆ. ಅವರನ್ನು ಯುವರಾಜ್, ಕೃತಿಗೆ ಪರಿಚಯ ಮಾಡಿಸಿಕೊಟ್ಟು ಒಳಗೆ ಹೋಗಿದ್ದಾನೆ. ಆಗ ಸ್ವಾಮಿ ಎಂಬುವವರು ಯುವರಾಜ್ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಆತ ಇಲ್ಲದೆ ಹೋಗಿದ್ದರೆ ನಾನು ಇರುತ್ತಾ ಇರಲಿಲ್ಲ ಎಂದು ಹೊಗಳಿದ್ದಾರೆ.

ಕೃತಿಗೆ ಗೊಂದಲ ಶುರು
ಇಷ್ಟೆಲ್ಲಾ ಕೇಳಿದ ಮೇಲೆ ಕೃತಿಯ ಮನಸ್ಸು ಗೊಂದಲಕ್ಕೆ ತಿರುಗಿದೆ. ಯೋಚನೆ ಮಾಡುವುದಕ್ಕೆ ಶುರು ಮಾಡಿದೆ. "ಯುವರಾಜ್ ಇಷ್ಟು ಒಳ್ಳೆಯವರ. ಮತ್ತೆ ನನಗೆ ಮಾತ್ರ ಯಾಕೆ ಕೋಪದ ದೃಷ್ಟಿಯಿಂದಾನೆ ಕಾಣುತ್ತಾನೆ. ಇವರು ಹೇಳುವಷ್ಟು ಒಳ್ಳೆಯವರ ಯುವರಾಜ್. ಈ ನಗು, ಈ ಒಳ್ಳೆಯತನ ಎಲ್ಲವೂ ನಿಜವಾದದ್ದಾ..? ಅಥವಾ ಅದು ತೋರಿಕೆಯ..? ಯುವರಾಜ್ ನನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ..?" ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡಿದ್ದಾಳೆ.


Click it and Unblock the Notifications











