For Quick Alerts
  ALLOW NOTIFICATIONS  
  For Daily Alerts

  Katheyondu shuruvagide: ನಂಬಿದ್ದ ಸಾಮ್ರಾಟ್ ಕೈಕೊಟ್ಟ : ಬೇಡವೆಂದರೂ ಯುವರಾಜ್ ಕೃತಿ ಕೈಹಿಡಿದ..!

  By ಎಸ್ ಸುಮಂತ್
  |

  ಯಾರನ್ನು ಕಂಡರೆ ನಿಗಿ ನಿಗಿ ಕೆಂಡವಾಗುತ್ತಿದ್ದಳೋ.. ಯಾರನ್ನು ಕಂಡರೆ ಯಾವಾಗಲೂ ಜಗಳವಾಡುತ್ತಿದ್ದಳೋ.. ಅದೇ ಹುಡುಗ ಈಗ ಕೃತಿಯ ಬಾಳಸಂಗಾತಿಯಾಗಿದ್ದಾನೆ. ಬಯಸದೆ ಬಂದ ಭಾಗ್ಯವಾದರೂ ಇಡೀ ಜೀವನ ಒಬ್ಬರಿಗೊಬ್ಬರು ನಿಂದಿಸಿಕೊಂಡು ಬದುಕಬೇಕಾದ ಪರಿಸ್ಥಿತಿ. ಆದರೆ ಮದುವೆಯಾಗಿ ಆಗಿದೆ. ಒಬ್ಬರಿಗೊಬ್ಬರು ಅರ್ಥೈಸಿಕೊಂಡು, ಇಬ್ಬರ ನಡುವೆ ಪ್ರೀತಿ ಚಿಗುರುವುದೊಂದೆ ಬಾಕಿ.

  ಅಕ್ಕ ಮಾಡಿದ ತಪ್ಪಿಗೆ ಕೃತಿ ಇವತ್ತು ಸಂಕಷ್ಟಕ್ಕೆ ಸಿಲುಕಿದ್ದರು ಸಹ, ವಿಧಿಯಾಟವೂ ಅದೇ ಆಗಿತ್ತು. ಅದಕ್ಕೆಂದೆ ಮದುವೆಯ ಎಲ್ಲಾ ಶಾಸ್ತ್ರಗಳು ಕೃತಿಗೆ ಮೊದಲಾಗಿದ್ದು. ವರ್ಣಿಕಾ ಪಾಲಿಗೆ ಬಂದ ಪಂಚಾಮೃತವನ್ನು ಬಿಟ್ಟು, ಆಕರ್ಷಣೆಗೊಳಗಾಗಿ ಹೋದಳು. ಆದರೆ ಸಿಕ್ಕಿದ್ದು ಮಾತ್ರ ಶೂನ್ಯ.

  Katheyondu shuruvagide:ಯುವರಾಜನ ಪಕ್ಕ ಮದುಮಗಳಾಗಿ ಕೂರುತ್ತಾಳಾ ಕೃತಿ..?Katheyondu shuruvagide:ಯುವರಾಜನ ಪಕ್ಕ ಮದುಮಗಳಾಗಿ ಕೂರುತ್ತಾಳಾ ಕೃತಿ..?

  ಮದುವೆ ಮಂಟಪ ತೊರೆದ ವರ್ಣಿಕಾ

  ಮದುವೆ ಮಂಟಪ ತೊರೆದ ವರ್ಣಿಕಾ

  ವರ್ಣಿಕಾ ಮೊದ ಮೊದಲಿಗೆ ಯುವರಾಜನನ್ನು ಇಷ್ಟಪಟ್ಟಿದ್ದಳು. ಆದರೆ ದಿನ ಕಳೆದಂತೆ ಯುವರಾಜ್, ವರ್ಣಿಕಾಳ ನಿರೀಕ್ಷೆಯನ್ನು ಫುಲ್ ಫಿಲ್ ಮಾಡಿಲ್ಲ. ಡೈಮಂಡ್ ಬ್ಯುಸಿನೆಸ್ ಮೆನ್ ಆದರೂ ಅವಳಿಗೆ ತಂದು ಕೊಡುತ್ತಾ ಇದ್ದದ್ದು, ಹೂವಿನ ಬೊಕ್ಕೆ. ಇದು ವರ್ಣಿಕಾಳಿಗೆ ಅಷ್ಟಾಗಿ ಇಷ್ಟವಾಗುತ್ತಾ ಇರಲಿಲ್ಲ. ಹೀಗಾಗಿ ಅವಳ ಮನಸ್ಸು ದುಬಾರಿ ಗಿಫ್ಟ್ ಕೊಡುತ್ತಿದ್ದ ಸಾಮ್ರಾಟ್ ಹೆಚ್ಚು ಇಷ್ಟವಾಗಿದ್ದಾನೆ. ಹೀಗಾಗಿ ನಡೆಯಬೇಕಿದ್ದ ಮದುವೆಯನ್ನು ಲೆಕ್ಕಿಸದೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ.

  ವರ್ಣಿಕಾಗೆ ಕೈ ಕೊಟ್ಟ ಸಾಮ್ರಾಟ್

  ವರ್ಣಿಕಾಗೆ ಕೈ ಕೊಟ್ಟ ಸಾಮ್ರಾಟ್

  ಸಾಮ್ರಾಟ್‌ಗೆ ಒಂದು ರೀತಿಯ ಪ್ರತಿಷ್ಠೆಯ ವಿಚಾರ. ಯುವರಾಜ್ ಏನನ್ನೇ ಪಡೆದರು ಅದನ್ನು ಮೊದಲು ತಾನು ಪಡೆಯಬೇಕೆಂಬ ಹುಂಬತನ. ಆ ಕೆಟ್ಟ ಹಠವೇ ಇಂದು ಅಣ್ಣ ಮದುವೆಯಾಗಬೇಕಿದ್ದ ವರ್ಣಿಕಾಳ ಮನಸ್ಸನ್ನು ಹಾಳು ಮಾಡಿದ. ಅದರಂತೆ ವರ್ಣಿಕಾ ಮದುವೆ ಮನೆಯಿಂದ ಓಡಿ ಬಂದಿದ್ದು, ಸಾಮ್ರಾಟ್‌ನನ್ನು ಮದುವೆಯಾಗುವಂತೆ ಕೇಳುತ್ತಿದ್ದಾಳೆ. ಆದರೆ ಸಾಮ್ರಾಟ್ ಯಾವುದೇ ಕಾರಣಕ್ಕೂ ಮದುವೆಯಾಗುವುದಕ್ಕೆ ಆಗುವುದಿಲ್ಲ ಎಂದಿದ್ದಾನೆ. ಇದರಿಂದ ವರ್ಣಿಕಾ ಕಂಗಾಲಾಗಿದ್ದಾಳೆ.

  ಮದುವೆ ಮಂಟಪದಲ್ಲಿ ಕೂತ ಕೃತಿ

  ಮದುವೆ ಮಂಟಪದಲ್ಲಿ ಕೂತ ಕೃತಿ

  ಕೃತಿ ಮದುವೆ ಮನೆಯಲ್ಲಿ ಇಲ್ಲ ಎಂಬುದು ಗೊತ್ತಾದ ಕೂಡಲೇ ಮಾತಂಗಿ ಒಂದು ಐಡಿಯಾ ಕೊಟ್ಟಳು. ಆ ಐಡಿಯಾದಂತೆ ಪುಷ್ಪಾ, ಕೃತಿಯನ್ನು ಹೇಗಾದರೂ ಮಾಡಿ ಒಪ್ಪಿಕೋ ಎಂದು ಬಲವಂತ ಮಾಡಿದಳು. ಸಾಯುವ ನಾಟಕವಾಡಿ ಕೃತಿಯನ್ನು ಮದುವೆಗೆ ಒಪ್ಪಿಸಿದಳು. ಟೆನ್ಶನ್‌ನಲ್ಲಿ ಸಾಯುತ್ತಿದ್ದ ಯುವ ಹಸೆಮಣೆಯಿಂದ ಎದ್ದು ಬರುವಷ್ಟರಲ್ಲಿ ಮಧುಮಗಳಾಗಿ ಕೃತಿ ಬಂದಳು. ಮುಖಕ್ಕೆ ಕಾಣದಂತೆ ದುಪ್ಪಟ್ಟ ಹಾಕಲಾಗಿತ್ತು. ಬಹದ್ದೂರ್ ಮನೆಯವರು ಪ್ರಶ್ನಿಸಿದಾಗ, ಮಾತಂಗಿ ಹಾಗೂ ಪುಷ್ಪಾ ಸೇರಿಕೊಂಡು ಹೇಗೋ ಮ್ಯಾನೇಜ್ ಮಾಡಿದರು. ಕೃತಿ ನಿಂತಲ್ಲಿಯೇ ಹೆದರಿ ಹೋಗಿದ್ದಳು.

  ಯುವರಾಜ್ ವೆಡ್ಸ್ ಕೃತಿ

  ಯುವರಾಜ್ ವೆಡ್ಸ್ ಕೃತಿ

  ಕಡೆಗೂ ಕಂಡ ಕಂಡಲ್ಲಿ ಕಿತ್ತಾಡುತ್ತಿದ್ದವರು ಮದುವೆಯಾಗಿ ಜೋಡಿಯಾಗಿದ್ದಾರೆ. ಮದುವೆಗೂ ಮುಂಚೆ ವರ್ಣಿಕಾ ವಾಪಾಸ್ಸು ಬರುತ್ತಾಳೆ ಎಂಬ ಧೈರ್ಯದಲ್ಲಿ ಕೃತಿ ಹಸೆಮಣೆ ಏರಿ ಕುಳಿತಿದ್ದಳು. ಎಲ್ಲಾ ಶಾಸ್ತ್ರಗಳು ನಡೆದಿತ್ತು. ಹಾರ ಬದಲಾಯಿಸುವಾಗಲೂ ಕೃತಿ ಕೈನಡುಗುತ್ತಿತ್ತು. ಒಲ್ಲದ ಮನಸ್ಸಿನಲ್ಲಿ ಹಾರ ಬದಲಾಯಿಸಿದಳು. ಆದರೆ ತಾಳಿ ಕಟ್ಟುವ ಸಮಯ ಬಂದರೂ ವರ್ಣಿಕಾ ಬರಲೇ ಇಲ್ಲ. ಈ ಕಡೆ ಕೃತಿಗೂ ಏನೂ ರಿಯಾಕ್ಟ್ ಮಾಡುವುದಕ್ಕೆ ಆಗುತ್ತಿರಲಿಲ್ಲ. ಯುವರಾಜ ತಾಳಿಯನ್ನು ಕಟ್ಟಿಯೇ ಬಿಟ್ಟ. ಮನಸ್ಸಿನಲ್ಲಿ ಗೊಂದಲವಿದ್ದರೂ, ಬೇಸರವಿದ್ದರೂ ಅದನ್ನು ಎಕ್ಸ್ ಪ್ರೆಸ್ ಮಾಡುವುದಕ್ಕೆ ಆಗದೆ ಕೃತಿ ಸುಮ್ಮನೆ ಕೊರಳೊಡ್ಡಿದ್ದಳು. ಮುಂದಿನ ಜೀವನ ಇದೆಯಲ್ಲ ಅದು ಕೃತಿಗೆ ಚಾಲೆಂಜಿಂಗ್ ಆಗಿ ಇರಲಿದೆ. ಇನ್ಮುಂದೆ ಜಗಳಕ್ಕಿಂತ ಹೊಂದಾಣಿಕೆ ಹೇಗೆ ಮಾಡಿಕೊಳ್ಳುತ್ತಾರೆ ಯುವರಾಜ ಅಂಡ ಕೃತಿ ಅನ್ನೋದೆ ಬಹಳ ಮುಖ್ಯವಾಗಿದೆ.

  English summary
  Katheyondu shuruvagide Serial Written Update on January 10th Episode. Here is the details about Kruthi marriage.
  Tuesday, January 10, 2023, 21:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X