Katheyondu Shuruvagide:ಹಸೆಮಣೆಯಲ್ಲಿ ಕೂತು ಯುವ ಕನಸು: ಕಾರಲ್ಲಿ ಕೂತ ಸಾಮ್ರಾಟ್‌ಗೆ ಖುಷಿ !

By ಎಸ್ ಸುಮಂತ್

ಸಾಮ್ರಾಟ್ ಬಹಳ ಚಾಲಾಕಿ ಆಟ ಆಡುತ್ತಿದ್ದಾನೆ. ತನಗೇನೋ ವರ್ಣಿಕಾ ಮೇಲೆ ಬಹಳ ಪ್ರೀತಿ ಇದೆ ಎಂಬಂತೆ ಅವಳ ಮುಂದೆ ಶೋ ಮಾಡಿ, ಮಾಡಿನೇ ಅವಳನ್ನು ಮದುವೆ ಮನೆಯಿಂದ ಓಡಿಸಿಕೊಂಡು ಬಂದಿದ್ದಾನೆ. ಈಗ ಮದುವೆಯಾಗುವ ವಿಚಾರಕ್ಕೂ ಅವಳನ್ನು ಯಾಮಾರಿಸುತ್ತಾ ಇದ್ದಾನೆ.

ಮದುವೆ ಮನೆಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಎಲ್ಲರಿಗೂ ಏನೋ ಒಂಥರ ಗಾಬರಿ. ಆ ಕಡೆ ಅಕ್ಕನನ್ನು ಹಸೆಮಣೆ ಮೇಲೆ ಕೂರಿಸಿ, ಮುಹೂರ್ತ ಮೀರುವುದರ ಒಳಗೆ ವರ್ಣಿಕಾಳನ್ನು ಕರೆ ತರುತ್ತೀನಿ ಅಂತ ಸಹನಾ, ಹುಡುಕಾಟ ನಡೆಸುತ್ತಿದ್ದಾಳೆ. ಆದರೆ ಆ ಪ್ರಯತ್ನ ವ್ಯರ್ಥವಾಗಿದೆ. ಯುವರಾಜ್, ಕೃತಿಗೆ ತಾಳಿ ಕಟ್ಟಿ ಆಗಿದೆ.

ಕೃತಿ ತಂದೆಗೆ ಸತ್ಯ ತಿಳಿದೇ ಬಿಡ್ತು

ಕೃತಿ ತಂದೆಗೆ ಸತ್ಯ ತಿಳಿದೇ ಬಿಡ್ತು

ಪುಷ್ಪ ಸಂಪ್ರದಾಯ, ಅದು ಇದು ಅಂತ ಹೇಳಿ ಮದುಮಗಳ ಮುಖ ಕಾಣದಂತೆ ಮಾಡಿ, ಹಸೆ‌ಮಣೆ ಮೇಲೆ ಕೂರಿಸಿದಾಗಲೇ, ಮನೆಯವರಿಗೆಲ್ಲಾ ಅನುಮಾನ ಮೂಡಿದೆ. ಕಡೆಗೂ ಪುಷ್ಪಾಳನ್ನು ಕೃತಿಯ ತಂದೆ ಪ್ರಶ್ನೆ ಮಾಡಿದ್ದಾರೆ. ಮುಚ್ಚಿಟ್ಟ ಸತ್ಯ ಏನು ಅಂತ ಹೇಳು ಎಂದು ದಬಾಯಿಸಿದಾಗ, ಪುಷ್ಪಾ ತನ್ನ ಗಂಡನ ಬಳಿ ಎಲ್ಲಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಗ ಕೃತಿಯ ಜೀವನವನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಸತ್ಯ ಹೇಳಲು ಹೊರಟ ಗಂಡನನ್ನು ಪುಷ್ಪಾ ತಡೆದಿದ್ದಾಳೆ. "ಈಗ ಸತ್ಯ ಹೇಳಿದರೆ ಕಷ್ಟವಾಗುತ್ತೆ. ಈ ತೀರ್ಮಾನ ಮಾಡದೆ ಹೋಗಿದ್ದರೆ ಮರ್ಯಾದೆ ಹೋಗುತ್ತಾ ಇತ್ತು" ಎಂದು ಸಮಾಧಾನ ಮಾಡಿದ್ದಾಳೆ.

ಯುವರಾಜ್‌ಗೆ ಕನಸು.. ಕೃತಿಗೆ ಹಿಂಸೆ..!

ಯುವರಾಜ್‌ಗೆ ಕನಸು.. ಕೃತಿಗೆ ಹಿಂಸೆ..!

ಕೃತಿಯನ್ನು ಅಪ್ಪ ಅಮ್ಮ ಕನ್ಯಾದಾನ ಮಾಡಿಕೊಟ್ಟಾಯ್ತು. ಮುಂದಿನ ಶಾಸ್ತ್ರ ತಾಳಿ ಕಟ್ಟುವುದು. ಈ ಸುಸಂದರ್ಭಕ್ಕಾಗಿ ಯುವರಾಜ್ ತುಂಬಾನೇ ಕಾಯುತ್ತಾ ಇದ್ದ. ಆದರೆ ಪಕ್ಕದಲ್ಲಿರುವುದು ವರ್ಣಿಕಾ ಎಂದೇ ನಂಬಿದ್ದಾನೆ. ಹೀಗಾಗಿ ತನ್ನೆಲ್ಲಾ ಕನಸುಗಳನ್ನು ಹಸೆಮಣೆ ಮೇಲೆ ಕೂತು ಹೇಳುತ್ತಿದ್ದಾನೆ. "ನಾನು ಅವತ್ತು ಹೇಳಿದ್ದೆ, ನಿನ್ನ ಜೊತೆಗೆ ಹೀಗೆ ಕುಳಿತುಕೊಳ್ಳುತ್ತೇನೆ. ನಿನ್ನನ್ನು ಮದುವೆಯಾಗುತ್ತೇನೆ ಎಂದು" ಅಂತ ಸಂತಸ ವ್ಯಕ್ತಪಡಿಸಿದ್ದಾನೆ.

ಮೀಡಿಯಾದವರನ್ನು ಕರೆಸಿದ್ದು ಸಾಮ್ರಾಟ್

ಮೀಡಿಯಾದವರನ್ನು ಕರೆಸಿದ್ದು ಸಾಮ್ರಾಟ್

ಸಾಮ್ರಾಟ್ ಕೇವಲ ಅಣ್ಣನಿಗೆ ಸಿಗುವ ಎಲ್ಲಾ ವಸ್ತು, ವ್ಯಕ್ತಿ ತನಗೆ ಮೊದಲು ಸಿಗಬೇಕೆಂದು ಬಯಸುತ್ತಾನೆ. ಅದಕ್ಕಾಗಿಯೇ ವರ್ಷಿಕಾಳನ್ನು ಪ್ರೀತಿ ಮಾಡಿ, ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದಾನೆ ಎಂದುಕೊಂಡೆವು. ಆದರೆ ಮದುವೆ ಮನೆಯಲ್ಲಿ ನಡೆಯುವ ಅವಾಂತರವನ್ನೆಲ್ಲಾ ಟೆಲಿಕಾಸ್ಟ್ ಮಾಡಲು ಮೀಡಿಯಾದವರನ್ನು ಇದೇ ಸಾಮ್ರಾಟ್ ಕಳುಹಿಸಿದ್ದಾನೆ. ಮದುವೆಯ ಹೆಣ್ಣು ಹಸೆಮಣೆ ಮೇಲೆ ಇರುವುದಿಲ್ಲ ಎಂದು ಸುದ್ದಿಕೊಟ್ಟಿದ್ದ ಸಾಮ್ರಾಟ್. ಆದ್ರೆ ಅದೆಲ್ಲವೂ ಉಲ್ಟಾ ಆಗಿದೆ. ಇದನ್ನ ಸಾಮ್ರಾಟ್‌ಗೆ ತಿಳಿಸಲು ಕಾಲ್ ಮಾಡಿದ್ರೆ ಕರೆಗೆ ನೋ ರೆಸ್ಪಾನ್ಸ್.

ಸಾಮ್ರಾಟ್ ಪ್ಲ್ಯಾನ್ ಆದರೂ ಏನು..?

ಸಾಮ್ರಾಟ್ ಪ್ಲ್ಯಾನ್ ಆದರೂ ಏನು..?

ವರ್ಣಿಕಾ, ಸಾಮ್ರಾಟ್ ನನ್ನು ಸಂಪೂರ್ಣವಾಗಿ ನಂಬಿ ಬಂದಿದ್ದಾಳೆ. ಅವನಿಗಾಗಿ ಫ್ಯೂಚರ್ ಪ್ಲ್ಯಾನ್ ಅಂತ ಒಡವೆ, ಸೀರೆಯನ್ನೆಲ್ಲಾ ಒತ್ತುಕೊಂಡು ಬಂದಿದ್ದಾಳೆ. ಅದನ್ನು ಸಾಮ್ರಾಟ್‌ಗೆ ಕೂಡ ಹೇಳಿದ್ದಾಳೆ. ಆಗ ಸಾಮ್ರಾಟ್ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದ್ದಾನೆ. ತಾನು ಒಡವೆಯ‌ನ್ನೆಲ್ಲಾ ಎತ್ತಿಕೊಂಡು ಹೋಗಬೇಕು ಎಂಬ ಪ್ಲ್ಯಾನ್ ಮಾಡಿದ್ದಾನೆ. ವರ್ಣಿಕಾ ಮದುವೆ ಬಗ್ಗೆ ಕೇಳಿದಾಗ, "ನನ್ನ ಡ್ರೀಮ್ ದೊಡ್ಡದು. ನಿನ್ನನ್ನು ಗ್ರ್ಯಾಂಡ್ ಆಗಿ ಎಲ್ಲರಿಗೂ ಪರಿಚಯ ಮಾಡಿಕೊಡಬೇಕು. ಮೊದಲು ಎಲ್ಲಾ ತಣ್ಣಗಾಗಲಿ. ಬಳಿಕ ಬಂದು ಎಲ್ಲರೊಟ್ಟಿಗೆ ಸತ್ಯ ಹೇಳೋಣಾ. ಆಗ ಎಲ್ಲ ಒಪ್ಪಿಕೊಳ್ಳುತ್ತಾರೆ ಅಂತ" ಸುಳ್ಳು ಹೇಳಿ ಯಾಮಾರಿಸಿದ್ದಾನೆ.

More from Filmibeat

English summary
Star suvarna serial Katheyondu shuruvagide Written Update on January 11th episode. Here is the details about Samrat new plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X