Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide: ಕೊನೆ ಕ್ಷಣದಲ್ಲಿ ಯುವರಾಜ್‌ಗೆ ಗೊತ್ತಾಯ್ತು ಕೃತಿಯ ಸತ್ಯ!
ಬಹದ್ದೂರ್ ವಂಶದ ಮೊದಲ ಮಗನ ಮದುವೆಯಲ್ಲಿ ಅನಾಹುತವೇ ಆಗಿ ಹೋಗಿದೆ. ಹಸೆಮಣೆ ಮೇಲೆ ಕೂತು, ಸಾವಿರ ಕನಸು ಕಾಣುತ್ತಿದ್ದ ಯುವರಾಜ್‌ಗೆ ತಾನು ವರಿಸುತ್ತಿರುವುದು ವರ್ಣಿಕಾಳನ್ನು ಅಲ್ಲ ಎಂಬ ಸತ್ಯ ಅರಿವಾಗಿಲ್ಲ. ನಾಟಕದ ಪ್ರೀತಿಯ ಬಲೆಗೆ ಬಿದ್ದು, ಮದುವೆಯನ್ನು ಸತ್ಯ ಎಂದು ನಂಬಿದ್ದ.
ವರ್ಣಿಕಾ ಕೂಡ ಸಿಕ್ಕ ನಿಜವಾದ ಪ್ರೀತಿಯನ್ನು ಬಿಟ್ಟು, ಮೋಸದ ಪ್ರೀತಿಯ ಹಿಂದೆ ನಡೆದಿದ್ದಳು. ಅದರಿಂದ ಮನೆಯವರಿಗೆಲ್ಲಾ ಅವಮಾನ ಆಯಿತೆ ವಿನಹ ಬೇರೇನೂ ಆಗಲಿಲ್ಲ. ಆದರೆ ಕಡೆ ಕ್ಷಣದಲ್ಲಿ ಸತ್ಯ ಗೊತ್ತಾದರೂ ಕೂಡ ಯುವರಾಜ್,ಇವಳನ್ನೇ ಮದುವೆಯಾಗುತ್ತೀನಿ ಎಂದು ಕೂತಿದ್ದಾನೆ.
Kavya
Ramesh:ಕಿರುತೆರೆ
ನಂತರ
ಹಿರಿತೆರೆಯಲ್ಲಿ
ಅದೃಷ್ಟ
ಪರೀಕ್ಷೆಗಿಳಿದ
ಕಾವ್ಯ
ರಮೇಶ್!

ಮತ್ತೆ ಸುಳ್ಳಲ್ಲಿ ಸಿಕ್ಕಿ ಬಿದ್ದ ಪುಷ್ಪಾ
ಸಹನಾ, ವರ್ಣಿಕಾಳನ್ನು ಹುಡುಕಿಕೊಂಡು ಬರುತ್ತೀನಿ ಅಂತ ಹೇಳಿ ಹೋದಳು. ಆದರೆ ಯಾರದ್ದೋ ಕಾರಲ್ಲಿ ವರ್ಣಿಕಾ ಎಸ್ಕೇಪ್ ಆದಳು. ಆ ಕಾರು ಫಾಲೋ ಮಾಡುವಷ್ಟರಲ್ಲಿ ಆಕ್ಸಿಡೆಂಟ್ ಕೂಡ ಆಯ್ತು. ಸೀದಾ ಮದುವೆ ಮಂಟಪಕ್ಕೆ ಬಂದಳು.ಅಲ್ಲಿ ಎಲ್ಲಾ ಕಾರ್ಯವೂ ನಡೆಯುತ್ತಿತ್ತು. ಇನ್ನೇನು ತಾಳಿ ಕಟ್ಟಬೇಕು. ಆಗ ಬೇಡ ಎಂದು ಕೃತಿ ಕಿರುಚಿದಳು. ಆಗಲೇ ಯುವರಾಜ್‌ಗೆ ಅನುಮಾನ ಮೂಡಿತ್ತು. ಅಷ್ಟರಲ್ಲಿ ಪುಷ್ಪಾ ಮತ್ತೆ ಅಲ್ಲಿಗೆ ಬಂದು ಕೃತಿಗೆ ತಾಳಿ ಕಟ್ಟಿಸಿಕೊಳ್ಳುವಂತೆ ಮನವಿ ಮಾಡಿದಳು. ಅಲ್ಲಿದ್ದವರಿಗೆಲ್ಲಾ ಮತ್ತೊಂದು ಸುಳ್ಳು ಹೇಳಿ ಸಮಾಧಾನ ಮಾಡಿದಳು.

ಕೊನೆಗೂ ಎದ್ದು ನಿಂತ ಕೃತಿ
ಪುಷ್ಪಾ ಒಮ್ಮೆ ಸಮಾಧಾನ ಮಾಡಿ ಗಟ್ಟಿಮೇಳ, ಗಟ್ಟಿಮೇಳ ಅಂದಳು. ಯುವರಾಜ್ ತಾಳಿ ಕಟ್ಟಲು ಹೋದಾಗ ಕೃತಿ ಹಸೆಮಣೆಯಿಂದ ಮೇಲೆ ಎದ್ದೆ ಬಿಟ್ಟಳು. ಏನಾಗ್ತಿದೆ ಎನ್ನುವಾಗಲೇ ಯುವರಾಜ್, ಇದು ವರ್ಣಿಕಾ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ವಾದಿಸಿದಾಗ, ಕೃತಿ ಮುಖದ ಬಟ್ಟೆಯನ್ನು ಸರಿಸಿದಳು. ಯುವರಾಜ್ ಕೈಯಲ್ಲಿದ್ದ ತಾಳಿಯನ್ನೇ ಬಿಟ್ಟುಬಿಟ್ಟ. ಅದನ್ನು ಕೃತಿಯೇ ರಕ್ಷಿಸಿದಳು. ಒಂದು ಕ್ಷಣ ಸುಮ್ಮನೆ ನಿಂತು ಬಿಟ್ಟ. ಅಲ್ಲಿದ್ದವರೆಲ್ಲ ವರ್ಣಿಕಾ ಜಾಗಕ್ಕೆ ಗ್ರಂಥಿಗೆ ಅಂಗಡಿ ಹುಡುಗಿ ಹೇಗೆ ಬಂದಳು ಎಂದೇ ಚರ್ಚೆ ಮಾಡುವುದಕ್ಕೆ ಶುರು ಮಾಡಿದರು.

ಕೃತಿಯನ್ನು ಬಚಾವ್ ಮಾಡಿದ ಸಹನಾ
ಎಲ್ಲರೂ ಪ್ರಶ್ನಿಸುತ್ತಿರುವಾಗಲೇ ಯುವರಾಜ್‌ಗೆ ಕೋಪ ಮತ್ತಷ್ಟು ಹೆಚ್ಚಾಯ್ತು. "ಇವಳೇ ವರ್ಣಿಕಾಳನ್ನು ಕಿಡ್ನ್ಯಾಪ್ ಮಾಡಿದ್ದಾಳೆ. ಎಲ್ಲಿದ್ದಾಳೆ ವರ್ಣಿಕಾ" ಎಂದು ಪ್ರಶ್ನಿಸುತ್ತಿರುವಾಗಲೇ, ಸಹನಾ ಎಂಟ್ರಿಯಾದಳು. "ಅವಳನ್ನು ಯಾರು ಕಿಡ್ನ್ಯಾಪ್ ಮಾಡಿಲ್ಲ. ಅವಳ ಇಷ್ಟದಂತೆಯೇ ಮದುವೆ ಮಂಟಪ ಬಿಟ್ಟು ಹೋಗಿದ್ದಾಳೆ" ಅಂತ ಸತ್ಯ ಹೇಳುವಷ್ಟರಲ್ಲಿ ಅವರ ಅಮ್ಮ ತಡೆದಳು.

ಯುವರಾಜ್ ಮಾತಿಗೆ ಎಲ್ಲ ಶಾಕ್
ಈ ಎಲ್ಲಾ ರಾದ್ಧಾಂತ ನಡೆಯುತ್ತಿರುವಾಗಲೇ ಮಾಧ್ಯಮದವರು ಕೂಡ ಅದೇ ವಿಚಾರವನ್ನು ಬ್ರೇಕಿಂಗ್ ನ್ಯೂಸ್ ಆಗಿ ಕೊಡುತ್ತಿದ್ದರು. ಆಗ ಕೃತಿಯ ಬಳಿ ಅಭಿಪ್ರಾಯ ಕೇಳಿದಾಗ, "ನಾನೇ ಹೇಳುತ್ತಿದ್ದೀನಿ. ಈ ಮದುವೆ ನಡೆಯುವುದಿಲ್ಲ. ನಡೆಯುವುದಕ್ಕೆ ಸಾಧ್ಯವೂ ಇಲ್ಲ" ಎಂದು ಕೃತಿ ಹೇಳಿದಳು. ಅದೇ ಸಮಯಕ್ಕೆ ಯುವರಾಜ್ ಕೂಡ ಹೇಳಿದ "ನಾನು ಹೇಳುತ್ತಾ ಇದ್ದೀನಿ. ಈ ಮದುವೆ ನಡೆದೆ ನಡೆಯುತ್ತೆ" ಅಂತ ಜಿದ್ದಾಜಿದ್ದಿಗೆ ಬಿದ್ದವರಂತೆ ಮದುವೆ ಬಗ್ಗೆ ಮಾತನಾಡಲು ಶುರು ಮಾಡಿದರು. ಅಲ್ಲಿ ಸಾಮ್ರಾಟ್‌ನ ಮೋಸದ ಬಲೆಯಲ್ಲಿ ವರ್ಣಿಕಾ ಬಂಧಿಯಾಗಿದ್ರೆ, ಇಲ್ಲಿ ಕೃತಿ-ಯುವರಾಜ್ ಮದುವೆ ನಡೆಯುತ್ತಿದೆ.