Don't Miss!
- Automobiles
ಟೊಯೊಟಾ ಫಾರ್ಚುನರ್ ಮಾಲೀಕನಿಗೆ ರೂ. 28,500 ದಂಡ: ಶೋಕಿ ಮಾಡುವ ಮುನ್ನ ಇವು ತಿಳಿದಿರಲಿ...
- News
ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಹೆಣಗಾಟ
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Technology
ಹೆಚ್ಪಿಯಿಂದ ಹೊಸ ಲ್ಯಾಪ್ಟಾಪ್ ಅನಾವರಣ! 10 ಗಂಟೆಗಳ ಬ್ಯಾಟರಿ ಅವಧಿ!
- Sports
ಬಾರ್ಡರ್- ಗವಾಸ್ಕರ್ ಟ್ರೋಫಿ: ಭಾರತದ ಬ್ಯಾಟರ್ಗಳಿಗೆ ಕಂಟಕವಾಗಬಲ್ಲ ಸ್ಪಿನ್ನರ್ಗಳನ್ನು ಹೆಸರಿಸಿದ ಲೆಹ್ಮನ್
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu shuruvagide: ವರ್ಣಿಕಾನೇ ಬೇಕು ಅಂತ ಹಠ ಹಿಡಿದ ಯುವರಾಜ್ ತಾಯಿ.. ಕೃತಿಯನ್ನು ಸ್ವೀಕರಿಸುತ್ತಾರಾ?
'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಈಗ ಹೊಸದಾಗಿ ಕಥೆ ಟರ್ನಿಂಗ್ ಪಡೆದುಕೊಳ್ಳುತ್ತಿದೆ. ಬಹದ್ದೂರ್ ವಂಶದ ಮೊದಲ ಕುಡಿ, ಯುವರಾಜನ ಮದುವೆಯಲ್ಲಿಯೇ ನಡೆಯಿತು ಅದ್ಭುತವಾದ ಟರ್ನಿಂಗ್ ಸಿಕ್ಕಿತ್ತು. ವರ್ಣಿಕಾಳನ್ನು ಪ್ರೀತಿಸಿದ ಯುವರಾಜ್, ಮದುವೆಯಾಗುವ ಆಸೆಯಿಂದಾನೇ ಹಸೆಮಣೆ ಏರಿದ್ದ. ಆದರೆ ಬರುವ ಸಮಯಕ್ಕೆ ವಧು ಬಾರದೆ, ಸಂಭ್ರಮ ಸಡಗರವೇ ಬೇರೆಯ ತಿರುವು ಪಡೆದುಕೊಂಡಿತ್ತು.
ಮನೆಯ ಗೌರವ ಕಾಪಾಡಲು ಹಸೆಮಣೆ ಮೇಲೆ ಕೂತ ಕೃತಿಯನ್ನೇ, ಯುವರಾಜ ಹಠದಿಂದ ಮದುವೆಯಾಗಿದ್ದಾನೆ. ಮಂಟಪದಲ್ಲಿ ಶಾಸ್ತ್ರವೆಲ್ಲಾ ಮುಗಿದ ಮೇಲೆ ಮನೆಗೆ ಬಂದಾಗಿದೆ. ಆದರೆ ಮನೆಯಲ್ಲಿ ಯುವರಾಜನ ತಾಯಿಗೆ ಶಾಕ್ ಆಗಿದೆ. ಇವಳು ನಾನು ಮೆಚ್ಚಿದ ಸೊಸೆಯಲ್ಲ ಎಂದು ಕಿರುಚಾಡಿದ್ದಾಳೆ. ಈಗ ಯುವನಿಗೆ ಅಮ್ಮನನ್ನು ಸಮಾಧಾನ ಮಾಡಬೇಕಾದ ಕೆಲಸ ಶುರುವಾಗಿದೆ.
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ

ಮನೆಗೆ ಬಂದ ನವ ವಧು-ವರ
ಸಾಕಷ್ಟು ಅಡೆ ತಡೆಗಳನ್ನು ನಿಭಾಯಿಸಿ, ಕಡೆಗೆ ಮದುವೆಯೂ ಆಗಿ ಹೋಯಿತು. ವಿಧಿ ಬರೆದಂತೆ, ಶಾಸ್ತ್ರಗಳನ್ನು ಮಾಡಿಕೊಂಡ ಕೃತಿಯೇ ಬಹದ್ದೂರ್ ಮನೆಯ ಸೊಸೆಯಾದಳು. ಮಂಟಪದಲ್ಲಿ ಎಲ್ಲಾ ಶಾಸ್ತ್ರಗಳನ್ನು ಮುಗಿಸಿ, ಈಗ ಬಹದ್ದೂರ್ ಮನೆಗೆ ಬಂದಿದ್ದಾಳೆ. ಮನೆಯವರೆಲ್ಲ ಸೊಸೆಯನ್ನು ಕರೆದುಕೊಂಡು ಬಂದಿದ್ದಾರೆ.

ಕೃತಿಯನ್ನು ಸ್ವೀಕರಿಸುತ್ತಾರಾ ಮಹಾರಾಣಿ..?
ಯುವರಾಜನ ಅಮ್ಮನಿಗೆ ಸತ್ಯವನ್ನು ತಿಳಿಸದೆ, ಮನೆಯವರೆಲ್ಲಾ ಕೃತಿಯನ್ನು ಕರೆದುಕೊಂಡು ಬಂದಿದ್ದಾರೆ. ಸೊಸೆಯನ್ನು ಮನೆ ತುಂಬಿಸಿಕೊಳ್ಳಬೇಕಾದಂತಹ ಸಮಯವದು. ಯುವರಾಜನ ತಾಯಿಯೇ ಆರತಿ ತಟ್ಟೆ ಎತ್ತಿಕೊಂಡು ಬಂದಿದ್ದಾಳೆ. ಆದರೆ ಸೊಸೆಯ ಜಾಗದಲ್ಲಿ ವರ್ಣಿಕಾ ಬದಲಿಗೆ ಕೃತಿಯನ್ನು ಕಂಡು ದಂಗಾಗಿದ್ದಾಳೆ. ಈ ಹುಡುಗಿ ಬೇಡ, ವರ್ಣಿಕಾನೇ ಬೇಕು ಅಂತ ಹಠ ಮಾಡಿದ್ದಾಳೆ. ಮನೆಯವರೆಲ್ಲರ ಬಳಿಯೂ ಇವಳು ಯಾರು..? ಯಾಕೆ ಬಂದಿದ್ದು..? ವರ್ಣಿಕಾ ಎಲ್ಲಿ ಅಂತ ಪದೇ ಪದೆ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಮನೆಯವರು ಯಾರೂ ವರ್ಣಿಕಾ ಬಗ್ಗೆ ಮಾತನಾಡುವುದಕ್ಕೆ ಸಿದ್ಧರಿಲ್ಲ.

ಮಂಟಪದಲ್ಲಿ ನಡೆದ ಕಥೆ ಬಿಚ್ಚಿಟ್ಟ ಯುವ
ಎಲ್ಲರನ್ನು ಕೇಳುತ್ತಿದ್ದರು ಯಾರು ಸತ್ಯವನ್ನು ಹೇಳುವುದಕ್ಕೆ ಸಿದ್ಧರಿಲ್ಲ. ಆಗ ಯುವರಾಜ್ ನಡೆದ ಕಹಿ ಘಟನೆಯನ್ನು ತಿಳಿಸಿದ್ದಾನೆ. "ವರ್ಣಿಕಾ ಮತ್ತು ಕುಟುಂಬಸ್ಥರು ನಮಗೆ ಮೋಸ ಮಾಡಿದ್ದಾರೆ. ಅವರ ಫ್ಯಾಮಿಲಿ, ಅವರ ಬ್ಯುಸಿನೆಸ್ ಎಲ್ಲವೂ ಅವರೇ ಸೃಷ್ಟಿಸಿದ ಲೋಕ. ವರ್ಣಿಕಾ ಮದುವೆ ಮಂಟಪದಿಂದಾನೇ ಓಡಿ ಹೋದಳು. ಇವಳು ವರ್ಣಿಕಾಳ ತಂಗಿ" ಎಂದು ನಡೆದದ್ದೆಲ್ಲವನ್ನು ತಾಯಿ ಬಳಿ ಹೇಳಿದ್ದಾನೆ. ಆಗಲೂ ಅವನ ತಾಯಿ ಸಮಾಧಾನಗೊಂಡಿಲ್ಲ. ಸಮಸ್ಯೆಯಾದ ಬಳಿಕ ಹಸೆಮಣೆ ಮೇಲೆ ಇವಳು ಹೇಗೆ ಬಂದಳು ಎಂದು ಪ್ರಶ್ನಿಸಿದ್ದಾಳೆ. ಕೃತಿಯನ್ನು ಕಂಡರೆ ಆಗದಂತ ತಾಯಿ ಕೃತಿಯನ್ನು ಸೊಸೆಯಾಗಿ ಸ್ವೀಕರಿಸುತ್ತಾಳಾ..?.

ಅಭಿನಯ ಪಾತ್ರ ಬದಲಾವಣೆ
ಯುವರಾಜನ ತಾಯಿ ಪಾತ್ರದಲ್ಲಿ ನಟಿ ಅಭಿನಯ ನಟಿಸುತ್ತಿದ್ದರು. ವರದಕ್ಷಿಣೆ ಆರೋಪದಲ್ಲಿ ಅವರ ಅತ್ತಿಗೆ ಹಿಂಸೆ ಕೊಟ್ಟ ಪ್ರಕರಣದಲ್ಲಿ ಅವರಿಗೆ ಎರಡು ವರ್ಣ ಜೈಲು ಶಿಕ್ಷೆಯಾಗಿದೆ. ಹೀಗಾಗಿ ಅವರ ಪಾತ್ರದಲ್ಲಿ ಬದಲಾವಣೆಯಾಗಿದೆ. ಅಭಿನಯ ನಿರ್ವಹಿಸುತ್ತಿದ್ದ ಬಹದ್ದೂರ್ ಫ್ಯಾಮಿಲಿಯ ಮಹಾರಾಣಿಯಾಗಿ ಸಂಗೀತ ಬಂದಿದ್ದಾರೆ. ಯುವರಾಜನ ತಾಯಿಯಾಗಿ ಸಂಗೀತ ಕಾಣಿಸಿಕೊಂಡಿದ್ದಾರೆ. ಮಗನ ಮದುವೆಯ ಪಾತ್ರ ಬದಲಾವಣೆಯನ್ನು ತೋರಿಸಿದ್ದಾರೆ. ಸಂಗೀತಾ ಕೂಡ ಅದ್ಭುತವಾಗಿ ಕಾಣಿಸುತ್ತಿದ್ದಾರೆ. 'ಇಂತಿ ನಿಮ್ಮ ಆಶಾ' ಆದ ಮೇಲೆ ಮತ್ತೆ ಸ್ಟಾರ್ ಸುವರ್ಣದಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಕಾಣಿಸುತ್ತಿದ್ದಾರೆ.