Don't Miss!
- News
ಸಿಬಿಎಸ್ಇ ಶಾಲೆ ಎಂದು ಮೋಸ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ದೂರು ದಾಖಲಿಸಿದ ಶಿಕ್ಷಣ ಇಲಾಖೆ
- Sports
WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?
- Lifestyle
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide: ಕೃತಿಯನ್ನು ಮದುವೆಯಾದರೂ ವರ್ಣಿಕಾಳ ಹುಡುಕಾಟ ನಡೆಸುತ್ತಿರುವುದ್ಯಾಕೆ ಯುವರಾಜ..?
ವರ್ಣಿಕಾ ಮೊದ ಮೊದಲಿಗೆ ಬಹದ್ದೂರ್ ವಂಶದ ಯುವರಾಜನನ್ನು ನೋಡಿ ಪ್ರೀತಿಯಲ್ಲಿ ಬಿದ್ದಳು. ತಾನು ಶ್ರೀಮಂತರ ಮನೆಗೆ ಹೋಗಬೇಕೆಂದುಕೊಂಡು ಯುವರಾಜನ ಪ್ರೀತಿಗೆ ಒಪ್ಪಿಗೆ ನೀಡಿದಳು. ವರ್ಣಿಕಾಳ ಸೌಂದರ್ಯ, ಅವಳ ಡ್ಯಾನ್ಸ್ ಗೆ ಯುವರಾಜ ಮಾರು ಹೋಗಿದ್ದ. ಆದರೆ ಒಳಗೊಳಗೆ ಸಾಮ್ರಾಟ್ ಅಣ್ಣನ ಜೀವನ ಹಾಳು ಮಾಡುವುದಕ್ಕೆ ನಿಂತುಕೊಂಡ. ವರ್ಣಿಕಾಳಿಗೆ ಬಲೆ ಬೀಸಿದ.
ವರ್ಣಿಕಾ ಕೂಡ ಮೇಲ್ನೋಟದ ಆಸೆಗೆ ಬಿದ್ದಳು. ಯುವರಾಜನನ್ನು ಬಿಟ್ಟು ಸಾಮ್ರಾಟ್ ನನ್ನು ನಂಬಿ, ಮದುವೆ ಮನೆಯನ್ನೇ ಬಿಟ್ಟು ಓಡಿ ಹೋದಳು. ಮರ್ಯಾದೆ ಪ್ರಶ್ನೆ ಅಂತ ಕೃತಿಯನ್ನ ಹಸೆಮಣೆ ಮೇಲೆ ಕೂರಿಸಿದರೆ ಸೇಡು ತೀರಿಸಿಕೊಳ್ಳಲು ಯುವರಾಜ ಕೃತಿಯನ್ನು ಮದುವೆಯನ್ನೇ ಮಾಡಿಕೊಂಡ.
ಅಭಿನಯ
ನಟಿಸುತ್ತಿದ್ದ
ಪಾತ್ರಕ್ಕೆ
ಸಂಗೀತ
ಅನಿಲ್
ಗ್ರ್ಯಾಂಡ್
ಎಂಟ್ರಿ:
ಈಗ
ಕಥೆಯೊಂದು
ಶುರುವಾಗಿದೆ!

ಕೃತಿಯ ಪಾಡು ಹೇಗಿದೆ..?
ಅನಿವಾರ್ಯತೆಗೆ ಕಟ್ಟು ಬಿದ್ದು ಮದುವೆಯಾದ ಕೃತಿಗೆ ಗಂಡನ ಮನೆಯಲ್ಲಿ ಸಿಗಬೇಕಾದ ಗೌರವವೇನು ಸಿಗುತ್ತಿಲ್ಲ. ಬದಲಿಗೆ ಮನೆಯ ಹಾಳು ಕೂಡ ಇರುವುದಿಲ್ಲ ಅಂತಹ ಸ್ಥಳದಲ್ಲಿ ಕೃತಿಯನ್ನು ಇಡಲಾಗಿದೆ. ಅಷ್ಟು ದೊಡ್ಡ ಅರಮನೆಯಲ್ಲಿ ಕೃತಿಗೆ ಅಂತ ಕೊಟ್ಟಿರುವುದು ಸ್ಟೋರ್ ರೂಮನ್ನು. ಅಲ್ಲಿ ಎಲ್ಲವೂ ಬೇಡದ ವಸ್ತುಗಳ ನಡುವೆ ಕೃತಿ ವಾಸ ಮಾಡಬೇಕಿದೆ.

ಕೃತಿಯ ಜೀವನ ಬದಲಾಗುತ್ತಾ..?
ವಧುವಿನ ಅಲಂಕಾರದಲ್ಲಿಯೇ ಸ್ಟೋರ್ ರೂಮಿಗೆ ಬಂದಿರುವ ಕೃತಿ, ಅಲ್ಲಿನ ಪರಿಸ್ಥಿತಿ ನೋಡಿ ಬೇಸರ ಕೂಡ ಮಾಡಿಕೊಂಡಿದ್ದಾಳೆ. ಬಳಿಕ ಮತ್ತೆ ಗಟ್ಟಿ ಮನಸ್ಸು ಮಾಡಿ ತಾನೇ ಎಲ್ಲದನ್ನು ಸ್ವಚ್ಛ ಮಾಡುತ್ತಿದ್ದಾಳೆ. ಮನೆಯ ಕೆಲಸದವರು ಬಂದು ಕೇಳಿದರು ಒಪ್ಪಿಲ್ಲ. "ಇದೆಲ್ಲಾ ಮಾಡಿ ನನಗೆ ಅನುಭವವಿದೆ. ನೀವೂ ನನ್ನ ಬಗ್ಗೆ ಚಿಂತೆ ಮಾಡುವುದು ಬೇಡ. ನೆಮ್ಮದಿಯಾಗಿ ನೀವಿರಿ. ಇದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ" ಎಂದು ಕಳುಹಿಸಿದ್ದಾಳೆ. ಅದೇ ಸಮಯಕ್ಕೆ ಸ್ಟೋರ್ ರೂಮಿನಿಂದ ಧೂಳಿನ ಹೊಗೆ ಬರ್ತಾ ಇತ್ತು. ಸ್ಟೋರ್ ರೂಮಿನ ಬಾಗಿಲು ತೆಗೆದದ್ದು ಯಾರು ಎಂದು ಯುವರಾಜ ಬಂದಾಗ ಕೃತಿ ಎದುರಾಗಿದ್ದಾಳೆ..

ಯುವರಾಜನಿಗೆ ಸಿಗುತ್ತಾಳಾ ವರ್ಣಿಕಾ..?
ಮದುವೆ ಮನೆಯಿಂದ ವರ್ಣಿಕಾ ಓಡಿ ಹೋಗಿದ್ದು ಆಗಿದೆ. ಕೃತಿಯನ್ನು ಕೈ ಹಿಡಿದು ಮದುವೆ ಮಾಡಿಕೊಂಡು ಬಂದಿದ್ದು ಆಗಿದೆ. ಆದರೆ ವರ್ಣಿಕಾಳನ್ನು ಅದ್ಯಾಕೋ ಸುಮ್ಮನೆ ಬಿಡುವ ಮಾತೆ ಇಲ್ಲ. ಅದಕ್ಕೆಂದೇ ಈಗ ಹುಡುಕಾಟ ಶುರು ಮಾಡಿದ್ದಾನೆ. ಅದಕ್ಕೆಂದೇ ಇಬ್ಬರಿಗೆ ಹೇಳಿ ಇಟ್ಟಿದ್ದಾನೆ. ಆದರೆ ಅವನಿಗೆ ಇನ್ನು ವರ್ಣಿಕಾಳ ಸುಳಿವು ಸಿಕ್ಕಿಲ್ಲ. ಇದು ಯುವರಾಜನಿಗೆ ಕೋಪ ತರಿಸಿದೆ. ಆದಷ್ಟು ಬೇಗ ಹುಡುಕಬೇಕು ಎಂದು ವಾರ್ನಿಂಗ್ ಮಾಡಿದ್ದಾನೆ.

ವರ್ಣಿಕಾ ವಾಪಸ್ ಬರುತ್ತಾಳಾ..?
ವರ್ಣಿಕಾ ಮೇಲ್ನೋಟದ ಆಕರ್ಷಣೆಗೆ ಒಳಗಾಗಿದ್ದಾಳೆ. ಸಾಮ್ರಾಟ್ ಅವಳನ್ನು ಇನ್ನು ಚೆನ್ನಾಗಿಯೇ ಆಡಿಸುತ್ತಿದ್ದಾನೆ. ಹೊಸ ಹೊಸ ಕಥೆಗಳನ್ನು ಹೇಳಿ ಯಾಮಾರಿಸುತ್ತಿದ್ದಾನೆ. ಅದನ್ನೇ ನಿಜವಾದ ಪ್ರೀತಿ ಎಂದು ನಂಬಿದ್ದಾಳೆ. ಜೊತೆಗೆ ಅವಳು ಆಡುತ್ತಿರುವ ಶ್ರೀಮಂತಿಕೆಯ ನಾಟಕಕ್ಕೆ ತಕ್ಕನಾಗಿ ಆಡಿಸುತ್ತಿದ್ದಾನೆ. ಒಂದು ವೇಳೆ ಹುಡುಕುತ್ತಿರುವ ಯುವರಾಜನ ಕೈಗೆ ವರ್ಣಿಕಾ ಏನಾದ್ರೂ ಸಾಮ್ರಾಟ್ ಜೊತೆಯಲ್ಲಿ ತಗಲಾಕಿಕೊಂಡರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಯುವರಾಜನಲ್ಲಿ ಇಲ್ಲ. ಈ ಸನ್ನಿವೇಶವನ್ನು ಊಹೆ ಕೂಡ ಮಾಡಿಕೊಂಡಿಲ್ಲ. ಹೀಗಾಗಿ ಅದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಸಾಮ್ರಾಟ್ ಸಿಕ್ಕಾಪಟ್ಟೆ ಬುದ್ಧಿವಂತ ಆಗಿರುವ ಕಾರಣ, ಅಷ್ಟು ಸುಲಭದಲ್ಲಿ ಮನೆಯವರ ಮುಂದೆ ತಗಲಾಕಿಕೊಳ್ಳುವುದಿಲ್ಲ. ಹೀಗಾಗಿ ಅದನ್ನು ಸೀಕ್ರೇಟ್ ಆಗಿಯೇ ಮೆಂಟೈನ್ ಮಾಡುತ್ತಾನೆ. ವರ್ಣಿಕಾ ಕೂಡ ಸಿಗದಂತೆ ನೋಡಿಕೊಳ್ಳುತ್ತಾನೆ.